Evening Digest: ರೇವಣ್ಣ-HDK-ಜಮೀರ್ ಮಧ್ಯೆ ವಾಕ್ಸಮರ; ಮನೆಯವರನ್ನೆಲ್ಲಾ ಬಲಿ ಪಡೆದ ಮಗಳು: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ರೇವಣ್ಣ DCM ಆಗೋದನ್ನು ಕುಮಾರಸ್ವಾಮಿ ಸಹಿಸಲಿಲ್ಲ : ರಾಜ್ಯದಲ್ಲಿ ಸಿಂಧಗಿ, ಹಾನಗಲ್​​ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ (by election) ಜೆಡಿಎಸ್​(JDS) ಮುಸ್ಲಿಂ ಅಭ್ಯರ್ಥಿಯನ್ನು ಹಾಕಿರುವ ಸಂಬಂಧ ಕಾಂಗ್ರೆಸ್​​(Congress) ಹಾಗೂ ಜೆಡಿಎಸ್​ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ. ವಾಗ್ದಾಳಿ ಅಖಾಡಕ್ಕೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​ ಖಾನ್​ (Zameer Ahmed Khan)ಎಂಟ್ರಿ ಕೊಟ್ಟಿದ್ದು ಇಂದು ಸುದ್ದಿಗೋಷ್ಠಿ ನಡೆಸಿದರು. ಸಿದ್ದರಾಮಯ್ಯರನ್ನು (siddaramaiah)  ಸಮರ್ಥಿಸಿಕೊಂಡ ಜಮೀರ್​ ಅವರು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜೆಡಿಎಸ್​-ಬಿಜೆಪಿ ಸಮ್ಮಿಶ್ರ ಸರ್ಕಾರ ನಡೆಸಿದ ವೇಳೆ 20 ತಿಂಗಳುಗಳ ಬಳಿಕ ಕುಮಾರಸ್ವಾಮಿ ಅವರು ಬಿ.ಎಸ್​.ಯಡಿಯೂರಪ್ಪ ಅವರಿಗೆ ಅಧಿಕಾರ ನೀಡದಿರಲು ಹೊಟ್ಟೆಕಿಚ್ಚು ಕಾರಣ. ಬಿಎಸ್​ವೈಗೆ ಅಧಿಕಾರ ಕೊಟ್ಟರೆ ರೇವಣ್ಣ ಡಿಸಿಎಂ ಆಗುತ್ತಾರೆ ಎಂಬುದನ್ನು ಸಹಿಸದೇ ಕುಮಾರಸ್ವಾಮಿ ಅಧಿಕಾರ ಹಸ್ತಾಂತರಿಸಲಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಅವರಿಗೆ ನಮ್ಮ‌ ಸುದ್ದಿ ಬೇಡ 

ಈ ಆರೋಪಕ್ಕೆ ಕೂಡಲೇ ಹಾಸನದಲ್ಲಿ ಎಚ್​.ಡಿ.ರೇವಣ್ಣ ತಿರುಗೇಟು ನೀಡಿದರು. ರೇವಣ್ಣ ಉಪಮುಖ್ಯಮಂತ್ರಿ ಆಗೋದನ್ನ ಹೆಚ್‌ಡಿಕೆ ಸಹಿಸಲಿಲ್ಲ‌ ಎಂದು ಜಮೀರ್​ ಹೇಳಿದ್ದಾರೆ. ಅವರಿಗೆ ಒಂದು ಮಾತು ಹೇಳ್ತೀನಿ, ಅವರಿಗೆ ನಮ್ಮ‌ ಸುದ್ದಿ ಬೇಡ. ಕುಮಾರಸ್ವಾಮಿ-ರೇವಣ್ಣ ಹೊಡೆದಾಡುತ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ಅವರು ಕನಸಲ್ಲಿ ಕಂಡರೂ ಆಗಲ್ಲ. ಉಪ ಮುಖ್ಯಮಂತ್ರಿ ಆಗಬೇಕು ಅಂದ್ರೆ ನಾನು, ಕುಮಾರಸ್ವಾಮಿ ಕುಳಿತು ಮಾತನಾಡುತ್ತೇವೆ. ಕುಮಾರಣ್ಣಂದು ಏನು, ರೇವಣ್ಣಂದು ಏನು ಗೊತ್ತಿದೆ. ಕಾಲ ಬಂದಾಗ ಕುಮಾರಣ್ಣ ಮಾಡುತ್ತಾನೆ, ಆದರೆ ನನ್ನನ್ನು ಮಾಡೋಕೆ ಬಿಡಲಿಲ್ಲ ಎನ್ನೋದು ಏಕೆ ಎಂದು ಕಿಡಿಕಾರಿದರು.

ಮನೆಯವರನ್ನೆಲ್ಲಾ ಬಲಿ ಪಡೆದ ಮಗಳು

ಕಳೆದ ಮೂರು ತಿಂಗಳ ಹಿಂದೆ ಚಿತ್ರದುರ್ಗ(Chitradurga) ಜಿಲ್ಲೆಯಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು(Four family members) ಮೃತಪಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಾಲ್ವರು ಊಟ ಮಾಡಿದ್ದ ಆಹಾರವನ್ನ ಪರೀಕ್ಷೆ ಮಾಡಿದ ಎಫ್​ಎಸ್​ಎಲ್​ (FSL), ಆಹಾರದಲ್ಲಿ ವಿಷ ಬೆರೆತಿರುವ ಕುರಿತು ವರದಿ ನೀಡಿದೆ. ತಂದೆ, ತಾಯಿ, ತಂಗಿ, ಅಜ್ಜಿ ಸಾವಿನ ಹಿಂದೆ ಅಪ್ರಾಪ್ತ ಪುತ್ರಿಯ ಕೈವಾಡ ಇರೋದು ಪೋಲೀಸರ ತನಿಖೆ(Police Investigation)ಯಲ್ಲಿ ಬಯಲಾಗಿದೆ. ತಂದೆ ತಾಯಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು, ಬೈಯುತ್ತಿದ್ದರು ಅನ್ನೋ ಕಾರಣಕ್ಕೆ ತಿನ್ನುವ ಅನ್ನಕ್ಕೆ ವಿಷ(Poison) ಹಾಕಿದ್ದನ್ನ ಆರೋಪಿ ಒಪ್ಪಿಕೊಂಡಿದ್ದಾಳೆ.

ಬೆಳಗಾವಿಯಲ್ಲಿ ಆಪರೇಷನ್ ಕಾಂಗ್ರೆಸ್

2023ರ ವಿಧಾನಸಭೆ (Karnataka Assembly Poll 2023)ಚುನಾವಣೆಗೆ ಈಗಿನಿಂದಲೇ ಬೆಳಗಾವಿ ಜಿಲ್ಲೆಯಲ್ಲಿ(Belagavi Politics) ರಾಜಕೀಯ ಧೃವೀಕರಣ ಆರಂಭವಾಗಿದೆ. ಜೆಡಿಎಸ್ ಮುಖಂಡ ಅಶೋಕ ಪೂಜಾರಿ(JDS Leader Ashok Poojari) ಕಾಂಗ್ರೆಸ್​​ನತ್ತ ಮುಖ ಮಾಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ(Opposition Leader Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ(KPCC President DK Shivakumar) ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.  ರಮೇಶ್ ಜಾರಕಿಹೊಳಿ(Ramesh Jarkiholi) ವಿರುದ್ಧ ಕಾಂಗ್ರೆಸ್(Congress)​​ ನಿಂದ ಸ್ಪರ್ಧೆ ಮಾಡಲು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ‌ಜೆಡಿಎಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚಿದೆ. ಇದೀಗ ಪಕ್ಷಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ರಾಜಕೀಯ ಧೃವೀಕರಣ ಆರಂಭವಾಗಿದೆ.

ಉತ್ತರ ಪ್ರದೇಶದ ಸಮಸ್ಯೆ ಮರೆಮಾಚಲು ಪ್ರಯತ್ನಿಸುತ್ತಿದೆ

ಆಡಳಿತಾರೂಢ BJP ಬಿಜೆಪಿ ಉಪಸಭಾಪತಿ ಸ್ಥಾನಕ್ಕೆ ಅನವಶ್ಯಕ ಚುನಾವಣೆಗೆ ಹೋಗುವ ಮೂಲಕ ಉತ್ತರ ಪ್ರದೇಶವನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಸರ್ಕಾರ ಏನನ್ನೂ ಉತ್ತರ ನೀಡದೆ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ Congress ಸೋಮವಾರ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿತು. ಅಕ್ಟೋಬರ್ 3 ರಂದು ಲಖಿಂಪುರ್ ಖೇರಿ Lakhimpur Kheri ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ವಿಧಾನಸೌಧದ ಮುಂಭಾಗದಲ್ಲಿ ಕುಳಿತು ಧರಣಿ ನಡೆಸಿದರು.
Published by:Kavya V
First published: