Evening Digest: ಪಿಯು ಫೇಲ್ ಆದ 4 ವಿದ್ಯಾರ್ಥಿಗಳ ಆತ್ಮಹತ್ಯೆ; ಹೆಲಿಕಾಪ್ಟರ್ ಮೂಲಕ ಅಮರನಾಥ ಯಾತ್ರೆ ಮಾಡಬಹುದು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪಿಯು ಫೇಲ್​​ ಆದ 4 ವಿದ್ಯಾರ್ಥಿಗಳ ಆತ್ಮಹತ್ಯೆ : ಇಂದು ದ್ವಿತೀಯ ಪಿಯುಸಿ (2nd PUC) ಫಲಿತಾಂಶ (Result) ಪ್ರಕಟವಾಗಿದೆ. 5,99,794 ಮಕ್ಕಳಲ್ಲಿ 4,02,697 ಮಕ್ಕಳು ಪಾಸ್ ಆಗಿದ್ದು, ಶೇ.61ರಷ್ಟು ಫಲಿತಾಂಶ ಬಂದಿದೆ. ಫೇಲ್ ಆಗಿದ್ದಕ್ಕೆ ಹಾಗೂ ಕಡಿಮೆ ಅಂಕ ಪಡೆದ ನಾಲ್ವರು ವಿದ್ಯಾರ್ಥಿಗಳು ದೃತಿಗೆಟ್ಟು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಕೊಡಗಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವನ ಹಳ್ಳಿ ನಿವಾಸಿ ಸಂಧ್ಯಾ (18) ಮೃತ ದುರ್ದೈವಿ, ಕುಶಾಲನಗರ ವಿವೇಕಾನಂದ ಕಾಲೇಜಿನಲ್ಲಿ PUC ಓದುತ್ತಿದ್ದ ವಿದ್ಯಾರ್ಥಿನಿ ಸಂಧ್ಯಾ, ಹೆರೂರು ನಿವಾಸಿ ನಿವೃತ ಯೋಧ  ಸುಭಾಷ್ ಪುತ್ರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Student Suicide: ದ್ವಿತೀಯ PUC ಪರೀಕ್ಷೆಯಲ್ಲಿ ಫೇಲ್​ ಆದವರು ಪ್ರಾಣವನ್ನೇ ಕಳೆದುಕೊಂಡ್ರು; ರಾಜ್ಯಾದ್ಯಂತ ನಾಲ್ವರ ಸೂಸೈಡ್

ಬೆಳಗಾವಿ ಬಂದ್​ ಗೆ ಕರೆ

ಸೇನಾ (Indian Army) ನೇಮಕಾತಿಯ ಹೊಸ ನಿಯಮ ಅಗ್ನಿಪಥ್ ಯೋಜನೆ (Agnipath project) ಜಾರಿಗೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ  ವಿರೋಧ ವ್ಯಕ್ತವಾಗಿದ್ದು,  ಜೂನ್ 20ರಂದು ಬೆಳಗಾವಿ ಬಂದ್‌ಗೆ (Belagavi Bandh) ಕರೆ ನೀಡಲಾಗಿದೆ. ಸೇನೆ ಸೇರಲು ಬಯಸುವ ಆಕಾಂಕ್ಷಿಗಳು ಬಂದ್‌ಗೆ ಕರೆ ನೀಡಿದ್ದಾರೆ. ಜೂನ್ 20ರ ಬೆಳಗ್ಗೆ ಬೆಳಗಾವಿಯ ಕೋಟೆ ಬಳಿ ಜಮಾವಣೆಗೊಳ್ಳುವಂತೆ ವಾಟ್ಸಪ್ ಮೂಲಕ ನೂರಾರು ಯುವಕರಿಂದ ಅನಾಮಧೇಯ ಸಂದೇಶ ಕಳುಹಿಸಲಾಗಿದೆ. ಬೆಳಗಾವಿ, ಬಾಗಲಕೋಟ, ಧಾರವಾಡ ಜಿಲ್ಲೆಯ ಯುವಕರು ಜಮಾವಣೆ ಸಾಧ್ಯತೆ ಇದೆ. ಬೆಳಗಾವಿ ಚಲೋ ಮಹಾ ಆಂದೋಲನಕ್ಕೆ ಸೇನೆ ಸೇರಲು ಬಯಸುವ ಯುವಕರು ಕರೆ ನೀಡಿದ್ದು ಸೇನಾ ನೇಮಕಾತಿ ವಿಳಂಬ, ಅಗ್ನಿಪಥ್ ಯೋಜನೆ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಜೂನ್ 20ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.

ಕಾಬೂಲ್‌ನ ಗುರುದ್ವಾರದಲ್ಲಿ ಐಸಿಸ್ ಉಗ್ರರ ಅಟ್ಟಹಾಸ

ಕಾಬೂಲ್, ಅಫ್ಘಾನಿಸ್ತಾನ್: ಐಸಿಸ್ ಉಗ್ರರು (ISIS Terrorist) ಮತ್ತೆ ಅಟ್ಟಹಾಸ ಗೈದಿದ್ದಾರೆ. ತಾಲೀಬಾನ್ ಸರ್ಕಾರ (Taliban government) ಆಳುತ್ತಿರುವ ಅಫ್ಘಾನಿಸ್ತಾನದಲ್ಲಿ (Afghanistan) ಮತ್ತೆ ತಮ್ಮ ರಾಕ್ಷಸೀಕೃತ್ಯ ಮುಂದುವರೆಸಿದ್ದಾರೆ. ಕಾಬೂಲ್‌ನ (Kabul) ಕರ್ತೆ-ಇ-ಪರ್ವಾನ್ (Kart-e-Parwan) ಎಂಬಲ್ಲಿನ ಸಿಖ್ ಗುರುದ್ವಾರದ (Sikh Gurudwara) ಮೇಲೆ ಗುಂಡಿನ (Firing) ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು (Death), ಹಲವರು ಗಾಯಗೊಂಡಿದ್ದಾರೆ (Injured). ಈ ಪೈಕಿ ಅನೇಕರ ಸ್ಥಿತಿ ಚಿಂತಾಜನಕವಾಗಿದ್ದು (Serious), ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ದಾಳಿಯ (Attack) ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇತ್ತ ಗುರುದ್ವಾರದ ಮೇಲಿನ ದಾಳಿಗೆ ಭಾರತ (India) ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಅಮರನಾಥ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಬುಕ್ಕಿಂಗ್ ಸೇವೆ ಆರಂಭ

ಮೊದಲ ಬಾರಿಗೆ, ಭಕ್ತರು ಶ್ರೀನಗರದಿಂದ ಪಂಚತರ್ಣಿಗೆ ಸುಲಭವಾಗಿ ಪ್ರಯಾಣಿಸಬಹುದು. ಒಂದೇ ದಿನದಲ್ಲಿ ತೀರ್ಥಯಾತ್ರೆಯನ್ನು ಪೂರ್ಣಗೊಳಿಸಬಹುದು ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಅಮರನಾಥ ಯಾತ್ರೆ 2022 ಗಾಗಿ ಆನ್‌ಲೈನ್ ಹೆಲಿಕಾಪ್ಟರ್ ಬುಕಿಂಗ್ ಸೇವಾ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಪ್ರವಾಸಕ್ಕಾಗಿ ಹೆಲಿಕಾಪ್ಟರ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಭಕ್ತರು ಶ್ರೈನ್ ಬೋರ್ಡ್ ವೆಬ್‌ಸೈಟ್‌ಗೆ ಸುಲಭವಾಗಿ ಲಾಗ್ ಇನ್ ಮಾಡಬಹುದು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Amarnath Yatra: ಅಮರನಾಥ ಪ್ರಯಾಣಿಕರಿಗೆ ಹೆಲಿಕಾಪ್ಟರ್ ಬುಕ್ಕಿಂಗ್ ಸೇವೆ ಆರಂಭ; ಇಷ್ಟು ರೂಪಾಯಿ ಖರ್ಚಾಗುತ್ತೆ

ಸ್ಯಾಂಡಲ್​ವುಡ್​ ಯುವ ನಟನ ಬರ್ಬರ ಹತ್ಯೆ

ನಟ ಸತೀಶ್ ವಜ್ರ (Sathish Vajra) ಕೊಲೆಯಾದ ದುರ್ದೈವಿಯಾಗಿದ್ದು, ದುಷ್ಕರ್ಮಿಗಳು ಸತೀಶ್​ ಮನೆಯಲ್ಲೇ ಅತನಿಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಸತೀಶ್ ವಜ್ರ, ಕನ್ನಡದ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ರು. ಕೊಲೆಯಾದ ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಎನ್ನಲಾಗಿದ್ದು, ಇಂದು ಸತೀಶ್‌ರನ್ನು ಇರಿದು ಕೊಲೆ ಮಾಡಲಾಗಿದೆ. ಪತ್ನಿ ಆತ್ಮಹತ್ಯೆಗೆ ಸತೀಶ್‌ ಕಾರಣ ಎಂದು ಬಾಮೈದುನನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
Published by:Kavya V
First published: