• Home
  • »
  • News
  • »
  • state
  • »
  • Evening Digest: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ: ಜೀನ್ಸ್​​ಗಾಗಿ ಗಂಡನನ್ನು ಕೊಂದ ಹೆಂಡತಿ: ಇಂದಿನ ಪ್ರಮುಖ ಸುದ್ದಿಗಳು

Evening Digest: ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ: ಜೀನ್ಸ್​​ಗಾಗಿ ಗಂಡನನ್ನು ಕೊಂದ ಹೆಂಡತಿ: ಇಂದಿನ ಪ್ರಮುಖ ಸುದ್ದಿಗಳು

ಸಂಜೆ ಸುದ್ದಿ

ಸಂಜೆ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

  • Share this:

ಭಾರೀ ಇಳಿಕೆಯಾದ ಅಡುಗೆ ಎಣ್ಣೆ ಬೆಲೆ : ಅದಾನಿ ಗ್ರೂಪ್ ಮೂಲದ ಎಫ್‌ಎಂಸಿಜಿ ಸಂಸ್ಥೆ ಅದಾನಿ ವಿಲ್ಮಾರ್ ಸೋಮವಾರ ಜಾಗತಿಕ ಬೆಲೆ ಕುಸಿತದ ಮಧ್ಯೆ ಅಡುಗೆ ಎಣ್ಣೆಯ ಮೇಲೆ ಲೀಟರ್‌ಗೆ ₹ 30 ಕಡಿತವನ್ನು ಘೋಷಿಸಿದೆ. ಎಡಿಬಲ್ ಆಯಿಲ್ ಕಂಪನಿಯು ಸೋಯಾಬೀನ್ ಎಣ್ಣೆಯಲ್ಲಿ ಅತಿದೊಡ್ಡ ಕಡಿತವನ್ನು ಮಾಡಿದೆ. ಅದಾನಿ ಗ್ರೂಪ್ ಮೂಲದ ಎಫ್‌ಎಂಸಿಜಿ ಸಂಸ್ಥೆ ಅದಾನಿ ವಿಲ್ಮಾರ್ ಸೋಮವಾರ ಜಾಗತಿಕ ಬೆಲೆ ಕುಸಿತದ ಮಧ್ಯೆ ಅಡುಗೆ ಎಣ್ಣೆಯ ಮೇಲೆ ಲೀಟರ್‌ಗೆ ₹ 30 ಕಡಿತವನ್ನು ಘೋಷಿಸಿದೆ. ಎಡಿಬಲ್ ಆಯಿಲ್ ಕಂಪನಿಯು ಸೋಯಾಬೀನ್ ಎಣ್ಣೆಯಲ್ಲಿ ಅತಿದೊಡ್ಡ ಕಡಿತವನ್ನು ಮಾಡಿದೆ. ಹೊಸ ಬೆಲೆಯ ಷೇರುಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಬರಲಿವೆ.


ವ್ಹೀಲ್​ಚೇರ್​ನಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡ


ರಾಷ್ಟ್ರಪತಿ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ (HD Deve Gowda) ವ್ಹೀಲ್ ಚೇರ್​ನಲ್ಲಿ ಬಂದು ಮತದಾನ ಮಾಡಿದ್ದಾರೆ. ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ವ್ಹೀಲ್ ಚೇರ್​ನಲ್ಲಿ (HD Deve Gowda On WheelChair) ಕಾಣಿಸಿಕೊಂಡಿದ್ದಾರೆ. ತಮ್ಮ ಮಗ ಹೆಚ್.ಡಿ.ರೇವಣ್ಣ ಅವರ ಜೊತೆ ವ್ಹೀಲ್ ಚೇರ್​ನಲ್ಲಿ ಆಗಮಿಸಿದ ಮಾಜಿ ಪ್ರಧಾನಿ ಹೆಚ್ .ಡಿ.ದೇವೇಗೌಡ ರಾಷ್ಟ್ರಪತಿ ಚುನಾವಣೆಯಲ್ಲಿ (Presidensial Election 2022) ಮತದಾನ ಮಾಡಿದ್ದಾರೆ. ಅವರ ಸೊಸೆ ಅನಿತಾ ಕುಮಾರಸ್ವಾಮಿ ಹೆಚ್.ಡಿ.ದೇವೇಗೌಡ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಂಡಿದ್ದಾರೆ.


ಜೀನ್ಸ್ ಪ್ಯಾಂಟ್​​ಗಾಗಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ


ಮದುವೆಯಾದ (Marriage) ಬಳಿಕ ಗಂಡ-ಹೆಂಡತಿ (Husband and Wife) ಒಟ್ಟಿಗೆ ಜೀವನ ನಡೆಸುವಾಗ ಕೆಲವೊಂದಷ್ಟು ಅಡ್ಜೆಸ್ಟ್​ಮೆಂಡ್​ಗಳನ್ನ ಮಾಡಿಕೊಳ್ಳೋದು ಅನಿವಾರ್ಯ. ಭಾರತೀಯ ಮದುವೆಗಳಲ್ಲಿ ಹೆಣ್ಣು ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸಿಸಬೇಕು. ಅಲ್ಲಿನ ರೀತಿರಿವಾಜುಗಳನ್ನು ಪಾಲಿಸಬೇಕು ಎಂದು ಬಹುತೇಕರು ಬಯಸುತ್ತಾರೆ. ಇನ್ನು ಗಂಡನಾದವನೂ ಸಹ ಹೆಂಡತಿ ಹೀಗೆಯೇ ಇರಬೇಕು ಎಂದು ನಿರ್ಬಂಧಗಳನ್ನು ಹೇರುತ್ತಾನೆ. ಮದುವೆಯಾದ ಬಳಿಕ ಕೆಲವೊಂದು ಬಟ್ಟೆಗಳನ್ನು ಧರಿಸಬಾರದು ಎಂದು ಕಂಡಿಷನ್​ ಹಾಕುವ ಗಂಡಂದಿರೂ ಇದ್ದಾರೆ. ಈ ಪ್ರಕರಣದಲ್ಲೂ ಆದೇ ಆಗಿದೆ. ಹೆಂಡತಿ ಜೀನ್ಸ್​ (Jeans) ಧರಿಸುವುದಕ್ಕೆ ಗಂಡ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಹೆಂಡತಿ ಚಾಕುವಿನಿಂದ ಇರಿದು ಗಂಡನನ್ನು ಕೊಲೆ ಮಾಡಿಬಿಟ್ಟಿದ್ದಾಳೆ.


ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ: Husband Murder: ಜೀನ್ಸ್ ಪ್ಯಾಂಟ್​​ಗಾಗಿ ಗಂಡನನ್ನೇ ಕೊಲೆ ಮಾಡಿದ ಹೆಂಡತಿ; ಹಿಂಗ್ಯಾಕೆ ಆಯ್ತು?


ಭಾರತದಲ್ಲಿ ಮಂಕಿಪಾಕ್ಸ್ 2ನೇ ಪ್ರಕರಣ


ಕೇರಳದಲ್ಲಿ 2ನೇ ಮಂಕಿಪಾಕ್ಸ್ (Kerala 2nd Monkeypox Case) ಪ್ರಕರಣ ದೃಢಪಟ್ಟಿದೆ. ಈ ಮೂಲಕ ಭಾರತದ 2ನೇ ಮಂಕಿಪಾಕ್ಸ್ (Monkeypox 2nd Case) ಪ್ರಕರಣ ಖಚಿತಪಟ್ಟಂತಾಗಿದೆ.   ಕೇರಳ ರಾಜ್ಯದ ಕಣ್ಣೂರು (Kannur) ಜಿಲ್ಲೆಯಲ್ಲಿ ದೇಶದ ಮಂಕಿಪಾಕ್ಸ್​ನ 2ನೇ ಪ್ರಕರಣ ದಾಖಲಾಗಿದೆ. ಈ ಮುನ್ನವೂ ಕೇರಳದಲ್ಲಿಯೇ ಮೊದಲ ಪ್ರಕರಣ ಪತ್ತೆಯಾಗಿತ್ತು.  ಇಂದು ಬೆಳಗ್ಗೆಯಷ್ಟೇ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು. ಸೌದಿ ಅರೇಬಿಯಾದಿಂದ ಪೋಷಕರೊಂದಿಗೆ ವಿಜಯವಾಡಕ್ಕೆ ವಾಪಸ್ಸಾಗಿದ್ದ ಬಾಲಕನಲ್ಲಿ  ಮಂಕಿಪಾಕ್ಸ್‌ನ ರೋಗ ಲಕ್ಷಣ ಕಂಡುಬಂದಿತ್ತು. ವಿಜಯವಾಡದಲ್ಲಿ ಭಾರತದ 2ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗುವ ಆತಂಕ ಹೆಚ್ಚಿತ್ತು, ಆದರೆ ಅದಕ್ಕೂ ಮುನ್ನವೇ ಕೇರಳದ ಕಣ್ಣೂರಿನಲ್ಲಿಯೇ 2ನೇ ಕೊವಿಡ್ ಪ್ರಕರಣ ಖಚಿತಗೊಂಡಿದೆ.


ಪುನೀತ್ ರಾಜ್​ಕುಮಾರ್ ಖಾತೆಗೆ ಮರಳಿದ ನೀಲಿ ಟಿಕ್


ರಾಜರತ್ನ ಪುನೀತ್ ರಾಜ್​ಕುಮಾರ್ (Puneeth Rajkumar) ನಮ್ಮನ್ನಗಲಿ ಸುಮಾರು 9 ತಿಂಗಳು ಕಳೆದಿದೆ. ಆದರೆ ಅಭಿಮಾನಿಗಳು (Fans) ಮಾತ್ರ ಎಂದಿಗೂ ಅವರನ್ನು ಮರೆತಿಲ್ಲ. ಅವರ ಹೆಸರಿನಲ್ಲಿ ದಿನಕ್ಕೊಂದು ಸಾಮಾಜಿಕ ಕಾರ್ಯಗಳು ನಡೆಯುತ್ತದೆ. ಕನ್ನಡಿಗರು, ಅದರಲ್ಲೂ ಅವರ ಅಭಿಮಾನಿಗಳು (Fans) ಒಂದೇ ಒಂದು ಕ್ಷಣ ಅವರನ್ನು ಮರೆತಿಲ್ಲ, ಮರೆಯುವುದೂ ಇಲ್ಲ. ಕನ್ನಡಿಗರ ಎದೆಯಲ್ಲಿ ಅಪ್ಪು (Appu) ಎಂದಿಗೂ ಜೀವಂತ. ದೊಡ್ಮನೆ ರಾಜಕುಮಾರ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನಪುಗಳ (memories) ಜೊತೆ ಫ್ಯಾನ್ಸ್ ಹೇಗೋ ಜೀವನ ಮಾಡ್ತಿದ್ದಾರೆ. ಅವರು ನಮ್ಮೊಡನಿಲ್ಲ ಅಂತ ಅಭಿಮಾನಿಗಳು ಅಂದುಕೊಂಡೇ ಇಲ್ಲ. ಈ ನಡುವೆ ಕಳೆದ ಕೆಲ ದಿನಗಳ ಹಿಂದೆ ಟ್ವಿಟರ್​ ಒಂಡು ಎಡವಟ್ಟು ಮಾಡಿತ್ತು. ಟ್ವಿಟರ್​​ ಕಂಪನಿ ಮಾಡಿದ ಆ ಒಂದು ಕೆಲಸ ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ ಇದೀಗ ಆ ತಪ್ಪನ್ನು ಕಂಪನಿ ಸರಿ ಮಾಡಿದೆ.

Published by:Kavya V
First published: