Evening Digest: ಬಾಡೂಟಕ್ಕೆ ಕರೆಯಲಿಲ್ಲ ಎಂದು ಕೊಲೆ: ವೈರಲ್ ಆಯ್ತು ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಬಾಡೂಟಕ್ಕೆ ಕರೆಯಲಿಲ್ಲ ಎಂದು ಕೊಲೆ : ಬಾಡೂಟಕ್ಕೆ ಕರೆಯಲಿಲ್ಲ ಎಂಬ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅರಸೀಕೆರೆ ತಾಲ್ಲೂಕಿನ ಪುರ್ಲೆಹಳ್ಳಿ ಗ್ರಾಮದ ಶರತ್ (28) ಎಂಬಾತ ಮೃತಪಟ್ಟಿದ್ದಾನೆ. ಜ.16 ರಂದು ಪುರ್ಲೆಹಳ್ಳಿ ಗ್ರಾಮದ ಗಿರೀಶ್ ಎಂಬುವವರು ಸಕರಾಯಪಟ್ಟಣದಲ್ಲಿ ದೇವರ ಹರಕೆ ಸಂಬಂಧ ಊಟ ಏರ್ಪಡಿಸಿದ್ದರು. ಮೃತ ಶರತ್ ಮತ್ತು ಮನೆಯವರು ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಗ್ರಾಮದ ನಟರಾಜ್ ಅವರನ್ನು ಆಹ್ವಾನಿಸಿರಲಿಲ್ಲ. ಇದೇ ವಿಚಾರಕ್ಕೆ ನಮ್ಮನ್ನು ಯಾಕೆ ಊಟಕ್ಕೆ ಕರೆದಿಲ್ಲ ಎಂದು ಶರತ್ ಜೊತೆ ಜಗಳ ತೆಗೆದಿದ್ದ ನಟರಾಜ್. ಈ ವೇಳೆ ಗ್ರಾಮಸ್ಥರು ಜಗಳ ಬಿಡಿಸಿ ಕಳುಹಿಸಿದ್ದರು. ಭಾನುವಾರ ರಾತ್ರಿ ಮನೆಗೆ ನುಗ್ಗಿದ ನಟರಾಜ್ ಮತ್ತು ಸ್ನೇಹಿತರು, ಮಾರಕಾಸ್ತ್ರಗಳಿಂದ ಶರತ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ.

ಪೂರ್ತಿ ಓದಿಗಾಗಿ:  Hassan Murder: ಬಾಡೂಟಕ್ಕೆ ಕರೆಯಲಿಲ್ಲ ಎಂದು ಹೊಡೆದಾಟ; ಬಿದ್ದೇ ಬಿಡ್ತು ಯುವಕನ ಹೆಣ!

ಮಾಸ್ಕ್ ಕಡ್ಡಾಯವಲ್ಲ ಎಂದ ಸಚಿವ Umesh Katti..
ಅಥಣಿ ಪಟ್ಟಣದಲ್ಲಿ ಲಕ್ಷ್ಮಿ ಸಸ್ಯೋದ್ಯಾನ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು-ಶಾಸಕರು ಯಾರೂ ಸಹ ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ ಸಚಿವ ಉಮೇಶ್ ಕತ್ತಿ ಮಾಸ್ಕ್ ಧರಿಸುವುದು ಕಡ್ಡಾಯ ಅಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ . ಯಾವುದೇ ನಿರ್ಬಂಧ ವಿಧಿಸಲ್ಲ. ಸ್ವಂತ ಜವಾಬ್ದಾರಿ ಹೊತ್ತು ಜನ ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ ಹಾಕೋದು ಬಿಡೋದು ಅದು ಅವರವರ ಆಯ್ಕೆ. ಮಾಸ್ಕ್ ಹಾಕದೆ ಇರೋದು ನನ್ನ ವೈಯಕ್ತಿಕ ವಿಚಾರ. ನಾನು ಮಾಸ್ಕ್ ಹಾಕಲ್ಲ ನನಗೆ ಮಾಸ್ಕ್ ಹಾಕಬೇಕೆಂದು ಅನಿಸಿಲ್ಲ. ಹಾಗಾಗಿ ನಾನು ಧರಿಸಲ್ಲ ಎಂದು ಹೇಳುವ ಮೂಲಕ ಉಡಾಫೆ ಉತ್ತರ ನೀಡಿದ್ದಾರೆ.

ಅಮ್ಮ ಸತ್ರೂ ಬಾರದ ಮಗಳು..
ಮಂಡ್ಯದವರಾಗಿದ್ದ 52 ವರ್ಷದ ಭಾಗ್ಯಲಕ್ಷ್ಮೀ ಕೋವಿಡ್ನಿಂದ ಕೊನೆಯುಸಿರೆಳೆದಿದ್ದರು. ತಾಯಿ ಮೃತಪಟ್ಟಿರುವ ವಿಚಾರವನ್ನು ಅಧಿಕಾರಿಗಳು ಫೋನ್ಮಾಡಿ ಮಗಳಿಗೆ ತಿಳಿಸಿದ್ದಾರೆ. ಆದರೆ, ಮಗಳು ಮಾತ್ರ ತಾಯಿಯನ್ನು ನೋಡಲು ಬಂದಿಲ್ಲ. ಮತ್ತೆ ಕರೆ ಮಾಡಿದರೆ, ಬರುತ್ತಿದ್ದೇನೆ ಎಂದು ಕಾಲ್ ಕಟ್ ಮಾಡಿದ್ದಾರಂತೆ. ಹೀಗಾಗಿ ವಿಶ್ವ ಹಿಂದುಪರಿಷತ್ ಕಾರ್ಯಕರ್ತರು ಶವ ಸಂಸ್ಕಾರ ಮಾಡಲು ಮುಂದಾಗಿದ್ದು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಹೆಬ್ಬಾಳ ಚಿರಶಾಂತಿ ಧಾಮದಲ್ಲಿ ಭಾಗ್ಯಲಕ್ಷ್ಮೀ ಶವ ಇರಿಸಲಾಗಿದೆ. ಕೊನೆ ಸಮಯದಲ್ಲಿ ಮಗಳು ತಾಯಿಯ ಮುಖ ನೋಡಲಿ ಎಂದು ಕಾಯುತ್ತಿದ್ದಾರೆ. 9 ತಿಂಗಳು ಹೊತ್ತು, ಜೀವ ಕೊಟ್ಟ ತಾಯಿಯ ಮುಖವನ್ನು ಕೊನೆ ಬಾರಿ ನೋಡಲು ಬಾರದ ಮಗಳು ಇದ್ದರೆಷ್ಟು, ಹೋದರೆಷ್ಟು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಹುಡುಗಿಯರು ಕೂಡ ನಾಚುವಂತೆ ಡಾನ್ಸ್ ಮಾಡಿದ ರಾಧಿಕಾ ಕುಮಾರಸ್ವಾಮಿ!
ಒಂದಷ್ಟು ದಿನ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡರು. ಬಳಿಕ ದಮಯಂತಿ ಸಿನಿಮಾದ ಮೂಲಕ ಮತ್ತೆ ಸಖತ್ ಸೌಂಡ್ ಮಾಡಿದ್ದರು. ಇದಾ ಬಳಿಕ ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುತ್ತಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್ಗಳನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ರಾಧಿಕಾ ಅವರು ಬೀಚ್ ಮುಂದು ನೃತ್ಯ ಮಾಡಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಅವರ ಡಾನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಪೂರ್ತಿ ಓದಿಗಾಗಿ: Radhika Kumaraswamy: ಅಬ್ಬಬ್ಬಾ... ಹರೆಯದ ಹುಡುಗಿಯರು ಕೂಡ ನಾಚುವಂತೆ ಡಾನ್ಸ್​​ ಮಾಡಿದ ರಾಧಿಕಾ ಕುಮಾರಸ್ವಾಮಿ!

ಈ ಬಾರಿ Republic Dayಗೆ ವಿದೇಶಿ ಅತಿಥಿಗಳಿಗಿಲ್ಲ ಆಹ್ವಾನ
ಗಣರಾಜ್ಯೋತ್ಸವ (Republic Day) ಆಚರಣೆಗೆ ದಿನಗಣನೆ ಶುರುವಾಗಿದೆ. ಪ್ರತಿಬಾರಿ ಗಣರಾಜ್ಯೋತ್ಸವ ದಿನಾಚರಣೆಗೆ ಅತಿಥಿಗಳನ್ನು ಆಹ್ವಾನಿಸುವ ಸಂಪ್ರದಾಯವನ್ನು ದೇಶದಲ್ಲಿ ನಡೆಸಿಕೊಂಡು ಬರಲಾಗಿದೆ. ಆದರೆ, ಈ ಬಾರಿ ಓಮೈಕ್ರಾನ್ ರೂಪಾಂತರದ ಕಾರಣದಿಂದಾಗಿ ಕೋವಿಡ್ -19 ಸಾಂಕ್ರಾಮಿಕದ (Covid) ಮೂರನೇ ತರಂಗವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಗಣ್ಯರನ್ನು ಆಹ್ವಾನಿಸಿಲ್ಲ. ಗಣರಾಜ್ಯೋತ್ಸವದ ಪರೇಡ್ 2022 ಗೆ ಮಧ್ಯ ಏಷ್ಯಾದ ದೇಶಗಳಿಂದ ಯಾವುದೇ ಮುಖ್ಯ ಅತಿಥಿಯನ್ನು (Guest) ಆಹ್ವಾನಿಸುವ ಯೋಜನೆಯನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಿದೆ ಎಂದು ವರದಿಯಾಗಿದೆ. ಈ ವರ್ಷದ ಗಣರಾಜ್ಯೋತ್ಸವದಂದು ಮಧ್ಯ ಏಷ್ಯಾದ ದೇಶಗಳಿಂದ ಯಾವುದೇ ವಿದೇಶಿ ಮುಖ್ಯ ಅತಿಥಿ ಇರುವುದಿಲ್ಲ. ಸರ್ಕಾರವು ಈಗಾಗಲೇ ಐದು ಮಧ್ಯ ಏಷ್ಯಾ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನಗಳನ್ನು ಕಳುಹಿಸಿತ್ತು. ಆದರೆ ಈಗ ಯೋಜನೆಗಳನ್ನು ರದ್ದುಗೊಳಿಸಲಾಗಿದೆ ಎಂದು ಎಎನ್ಐ ವರದಿ ತಿಳಿಸಿದೆ.
Published by:Kavya V
First published: