Evening Digest: ಹಿಜಾಬ್ ಬಗ್ಗೆ ಸರ್ಕಾರದ ನಿಲುವೇನು? ಕಾಂಗ್ರೆಸ್ಸಿಗರಿಗೆ ಹೈಕಮಾಂಡ್​ನಿಂದ ಬಂದ ಸಂದೇಶವೇನು? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಹಿಜಾಬ್ ಬಗ್ಗೆ ಸರ್ಕಾರದ ನಿಲುವೇನು?: ಹಿಜಾಬ್ ಪ್ರಕರಣ (Hijab Row) ಸಂಬಂಧ ಸತತ 6ನೇ ದಿನ ಹೈಕೋರ್ಟ್ನ (High Court) ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಫೆ.21 ಸೋಮವಾರಕ್ಕೆ ಮುಂದೂಡಿತು. ಸರ್ಕಾರದ ಫೆ.5 ರ ಆದೇಶದಲ್ಲಿ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ, ಹಿಜಾಬ್ ಕಡ್ಡಾಯವಲ್ಲವೆಂದು ಏಕೆ ಹೇಳಿದ್ದೀರಿ ಎಂದು ಸಿಜೆ ಪ್ರಶ್ನಿಸಿದರು. ಸರ್ಕಾರದ ಆದೇಶದಲ್ಲಿ ಇದನ್ನು ಹೇಳುವ ಅಗತ್ಯವೇನಿತ್ತು . ಯಾವುದಾದ್ರೂ ಕಾಲೇಜಿನ ಕಮಿಟಿ ಹಿಜಾಬ್ ಗೆ ಅನುಮತಿ ನೀಡಿದ್ರೆ ನಿಮ್ಮ ಅಭಿಪ್ರಾಯವೇನು. ಸಾವಿರಾರು ಅರ್ಜಿಗಳು ದಾಖಲಾಗಬೇಕೆಂದು ಬಯಸುತ್ತೀರಾ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ ಪ್ರಶ್ನಿಸಿದರು. ಹಿಜಾಬ್ ಬಗ್ಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಸರ್ಕಾರಿ ಆದೇಶದಲ್ಲಿ ನೇರವಾಗಿ ಹೇಳಿಲ್ಲ ಎಂದು ನ್ಯಾಯಮೂರ್ತಿ ಕೇಳಿದರು.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Hijab High Court Hearing: ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ: ಹೈಕೋರ್ಟ್​ನಲ್ಲಿ ಎಜಿ ವಾದ

ಕಾಂಗ್ರೆಸ್ಸಿಗರಿಗೆ ಹೈಕಮಾಂಡ್​ನಿಂದ ಬಂದ ಸಂದೇಶವೇನು?
ಒಂದಲ್ಲ ಒಂದು ದಿನ ಕೆಂಪು ಕೋಟೆಯ(Red Fort) ಮೇಲೆ ಭಾಗವಾಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್ ಈಶ್ವರಪ್ಪ (Minister KS Eshwarappa) ಹೇಳಿಕೆಯನ್ನು ಖಂಡಿಸಿ, ಸಚಿವ ಸ್ಥಾನಕ್ಕೆ ಅವರು ರಾಜೀನಾಮೆ ನೀಡಬೇಕೆಂದು ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಅಹೋರಾತ್ರಿ ಧರಣಿ (Congress overnight Protest in Karnataka Assembly) ನಡೆಸಿದೆ. ಈ ವಿಚಾರಕ್ಕೆ ಈಗ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯೋದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ ನೀಡಿದೆ. ಸದನದ ಒಳಗೂ ಹೊರಗೂ ಹೋರಾಟ ಮಾಡಿ. ರಾಷ್ಟ್ರಮಟ್ಟದಲ್ಲಿ ಈ ವಿಚಾರ ಮುನ್ನೆಲೆಗೆ ಬರಬೇಕು. ದೇಶಾದ್ಯಂತ ಬಿಜೆಪಿ ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಗೊತ್ತಾಗಲಿ. ಪಕ್ಷದ ವತಿಯಿಂದಲೂ ರಾಜ್ಯಾದ್ಯಂತ ಹೋರಾಟ ಮಾಡಿ ಎಂದು ಸೂಚಿಸಿದೆ. ಜೊತೆಗೆ ಅಹೋರಾತ್ರಿ ಧರಣಿ ಕೈ ಬಿಡಬೇಡಿ ಎನ್ನುವ ಮೂಲಕ ಇದನ್ನು ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕರೆ ಮಾಡಿ ರಾಜ್ಯ ನಾಯಕರಿಗೆ ಈ ಬಗ್ಗೆ ವಿವರಿಸಿದ್ದಾರೆ.

KIMS ವೈದ್ಯರ ನಿರ್ಲಕ್ಷ್ಯಕ್ಕೆ ಬಲಿ ಆಯ್ತಾ 2 ವರ್ಷದ ಕಂದಮ್ಮ?
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ತನ್ನ ಎಡವಟ್ಟು ಮತ್ತು ಅವ್ಯವಸ್ಥೆಗಳಿಂದಲೇ ರಾಜ್ಯದಲ್ಲಿ ಸದ್ದು ಮಾಡುತ್ತಿರುತ್ತದೆ. ಈಗಾಗಲೇ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಲವರು ಪ್ರಾಣ ಕಳೆದುಕೊಂಡಿರುವ ಆರೋಪಗಳು ಕಿಮ್ಸ್ ಹೆಗಲ ಮೇಲಿದೆ. ಇದೀಗ 2 ವರ್ಷದ ರಕ್ಷಾ ಚೌದರಿ ಸಾವನ್ನಪ್ಪಿದ್ದು, ಕಂದಮ್ಮನ (Two Year Old baby) ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ಆದ್ರೆ ಕಿಮ್ಸ್ ಪೋಷಕರ (Parents) ಆರೋಪ(Allegation)ವನ್ನು ತಳ್ಳಿ ಹಾಕಿದೆ. ಸಂಜಯ್ ಹಾಗೂ ಕೀರ್ತಿ ದಂಪತಿಯ ಮಗಳು ರಕ್ಷಾಳನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಬಾಯಿಯೊಳಗೆ ಗಡ್ಡೆ ಆಗಿದ್ದರಿಂದ ವೈದ್ಯರು ಶಸ್ತ್ರಚಿಕಿತ್ಸೆ (Surgery) ನಡೆಸಿದ್ದರು. ಸರ್ಜರಿ ಬಳಿ ತೀವ್ರ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದೆ. ವೈದ್ಯರು ಪೋಷಕರ ಅನುಮತಿ ಪಡೆಯದೇ ಆಪರೇಷನ್ ಮಾಡಿದ್ದಾರೆ ಎಂಬ ಆರೋಪಗಳಿ ಕೇಳಿ ಬಂದಿವೆ. ಪೋಷಕರು ಲಿಖಿತವಾಗಿ ಅನುಮತಿ ನೀಡಿರುವ ದಾಖಲೆಗಳು ನಮ್ಮ ಬಳಿಯಲ್ಲಿವೆ ಎಂದು ಕಿಮ್ಸ್ ವೈದ್ಯರು (KIMS Doctors) ಸ್ಪಷ್ಟನೆ ನೀಡಿದ್ದಾರೆ.

ಹೆಂಡತಿ- ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ
ಮುದ್ದಿನ ಮಗಳು ಅಂತರ್ಜಾತಿ ಮದುವೆಯಾದಳು (Inter-caste Marriage) ಎಂಬ ಏಕೈಕ ಕಾರಣಕ್ಕೆ ತಂದೆ ಹೆಂಡತಿ ಮತ್ತಿಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ (Tamilnadu) ನಾಗಪಟ್ಟಿನಂನಲ್ಲಿ ನಡೆದಿದೆ. ಪರಿಶಿಷ್ಟ ಜಾತಿ (Schedule Caste) ಯುವಕನನ್ನು ಮಗಳು ಮದುವೆಯಾಗುವುದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದರೂ ಆದರೂ ಮಗಳು ತನ್ನ ಇಚ್ಛೆಯಂತೆ ಪ್ರೀತಿಸಿದ (Love) ಹುಡುಗನ ಮದುವೆಯಾದಳು. ಮಗಳ ಈ ಕಾರ್ಯದಿಂದ ತಂದೆ ಸಾಕಷ್ಟು ನೊಂದು ಈ ಕೃತ್ಯ ಎಸಗಿದ್ದಾರೆ. ಜೊತೆಗೆ ಉಳಿದ ಇಬ್ಬರು ಹೆಣ್ಣು ಮಕ್ಕಳನ್ನು ಕೂಡ ಹತ್ಯೆ ಮಾಡಿದ್ದಾರೆ. ಅದರಲ್ಲಿ ಒಬ್ಬ ಮಗಳು ಇನ್ನು ಅಪ್ರಾಪ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Honor Killing : ಅಂತರ್ಜಾತಿ ಮದುವೆಯಾದ ಮಗಳು; ಹೆಂಡತಿ- ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

 ಎಲ್ಲೆಲ್ಲೂ ಕಚ್ಚಾ ಬಾದಾಮ್ ಹವಾ

ಸಾಮಾಜಿಕ ಮಾಧ್ಯಮದಲ್ಲಿ (Social media) ಈಗ , ಬದಾಮ್. .. ಬದಾಮ್ . . .ಎ ದಾದಾ ಕಚ್ಚಾ ಬದಾಮ್. . (Kacha Badam ) ಅಮರ್ ಕಚೆ ನೆಯ್ಕೋ ಬುಬು ವಜಾ ಬದಾಮ್. ಹಾಡಿನದ್ದೇ ಹವಾ. ಸಾಮಾನ್ಯ ಜನರಿಂದ ಹಿಡಿದು ಹಲವಾರು ಸೆಲೆಬ್ರಿಟಿಗಳವರೆಗೆ ಎಲ್ಲರೂ ಸಾಮಾಜಿಕ ಮಾಧ್ಯಮದಲ್ಲಿ ಈ ಹಾಡಿಗೆ ಹೆಜ್ಜೆ (Dance) ಹಾಕುತ್ತಿರುವ ರೀಲ್ಗಳನ್ನು ಮಾಡಿ ಖುಷಿ ಪಡುತ್ತಿದ್ದಾರೆ. ನಮ್ಮ ದೇಶ ಮಾತ್ರವಲ್ಲ, ಅನ್ಯ ದೇಶಗಳಲ್ಲೂ ಈ ಹಾಡು ಜನಪ್ರಿಯವಾಗಿದೆ. ಈ ಮಟ್ಟಕ್ಕೆ ವೈರಲ್ (Viral) ಆಗಿರುವ ಈ ಕಚ್ಚಾ ಬದಾಮ್ ಹಾಡಿನ ಸೃಷ್ಟಿಕರ್ತ ಭುಬನ್ ಬಡ್ಯಾಕರ್. “ಭುಬನ್ ಅವರೊಂದಿಗೆ ನಾವು 3 ಲಕ್ಷ ರೂ.ಗಳ ಒಪ್ಪಂದ ಮಾಡಿಕೊಂಡಿದ್ದೇವೆ ಮತ್ತು ಅವರಿಗೆ ಇಂದು 1.5 ಲಕ್ಷ ರೂ.ಗಳ ಚೆಕ್ ನೀಡಲಾಗಿದೆ. ಉಳಿದ ಹಣವನ್ನು ಅವರಿಗೆ ಮುಂದಿನ ವಾರ ನೀಡಲಾಗುವುದು. ಇದು ಅವರಿಗೆ ದೀರ್ಘ ಕಾಲದಿಂದ ಬಾಕಿ ಇತ್ತು” ಎಂದು ಗೋಧೋಳಿಬೆಳ ಮ್ಯೂಸಿಕ್ ಸಂಸ್ಥೆಯ ಗೋಪಾಲ್ ಘೋಷ್ ಹೇಳಿದ್ದಾರೆ.
Published by:Kavya V
First published: