Evening Digest: ರಾಜು ಶ್ರೀವಾತ್ಸವ್ ಮೆದುಳು ನಿಷ್ಕ್ರಿಯ, ಬುರ್ಖಾ ತೊಟ್ಟು ಬಂದ ಯುವಕನಿಗೆ ಏಟು! ಈ ಸಂಜೆಯ ಟಾಪ್ ನ್ಯೂಸ್‌ಗಳು ಇಲ್ಲಿವೆ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಬುರ್ಖಾ ಧರಿಸಿ ಗರ್ಲ್​ಫ್ರೆಂಡ್ ಭೇಟಿಗೆ ಬಂದ ಯುವಕ! 

ರಹಸ್ಯವಾಗಿ ಗರ್ಲ್ ಫ್ರೆಂಡ್ ಭೇಟಿಯಾಗುವ ಹಲವು ಸುದ್ದಿಗಳನ್ನು ನೀವು ಕೇಳಿರಬಹುದು. ಆದರೆ ಇದು ಅದಕ್ಕಿಂತ ಅತ್ಯಂತ ವಿಚಿತ್ರ ಸುದ್ದಿ. ಬುರ್ಖಾ ಧರಿಸಿ ಗರ್ಲ್ ಪ್ರೆಂಡ್ ಭೇಟಿಗೆ ಬಂದ ವ್ಯಕ್ತಿಯನ್ನು ಬಂಧಿಸಿದ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಶಹಜಾನ್ಪುರದಲ್ಲೇ ಈ ವಿಚಿತ್ರ ಘಟನೆ ನಡೆದಿದೆ. ಬುರ್ಖಾದ ಧರಿಸಿ ಗೆಳತಿಯ ಭೇಟಿಗೆ ಬಂದ ವ್ಯಕ್ತಿಯನ್ನು ಸೈಫ್ ಅಲಿ ಎಂದು ಗುರುತಿಸಲಾಗಿದೆ. ಆತನ ವಿರುದ್ಧ ಶಾಂತಿ ಭಂಗದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜು ಶ್ರೀವಾತ್ಸವ್‌ ಮೆದುಳು ನಿಷ್ಕ್ರಿಯ!

ದೆಹಲಿ: ಖ್ಯಾತ ಹಾಸ್ಯ ನಟ (Famous Comedian) ರಾಜು ಶ್ರೀವಾತ್ಸವ್ (Raju Srivatsava) ಆರೋಗ್ಯ ಸ್ಥಿತಿ (Health Conditions) ಮತ್ತಷ್ಟು ಗಂಭೀರವಾಗಿದೆ. ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು, ಆಪ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತ ಅಭಿಮಾನಿಗಳು (Fans) ತಮ್ಮ ನೆಚ್ಚಿನ ಹಾಸ್ಯ ನಟನ ಆರೋಗ್ಯ ಸುಧಾರಿಸಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ರಾಜು ಶ್ರೀವಾತ್ಸವ್ ಅವರ ಮೆದುಳು (Brain) ಕೆಲಸ ಮಾಡುತ್ತಿಲ್ಲ, ಅದು ನಿಷ್ಕ್ರಿಯ ಗೊಂಡಿವೆ ಅಂತ ದೆಹಲಿಯ ಏಮ್ಸ್ ಆಸ್ಪತ್ರೆ (Delhi AIMS Hospital) ಮೂಲಗಳು ತಿಳಿಸಿವೆ. ಅಲ್ಲದೇ ಅವರ ಆಪ್ತ ಸ್ನೇಹಿತ ಸುನೀಲ್ ಪಾಲ್ (Sunil Pal) ಈ ಬಗ್ಗೆ ತಿಳಿಸಿದ್ದು, ಇನ್ಸ್‌ಸ್ಟಾಗ್ರಾಮ್‌ನಲ್ಲಿ (Instagram) ಭಾವನಾತ್ಮಕ ವಿಡಿಯೋ ಶೇರ್ (Video Share) ಮಾಡಿದ್ದಾರೆ. “ರಾಜು ಶ್ರೀವಾತ್ಸವ್ ಅವರ ಆರೋಗ್ಯ ಸುಧಾರಣೆಗೆ ದೇವರಲ್ಲಿ (God) ಪ್ರಾರ್ಥಿಸುವುದು (Prayer) ಒಂದೇ ದಾರಿ” ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Raju Srivatsava: ರಾಜು ಶ್ರೀವಾತ್ಸವ್‌ ಮೆದುಳು ನಿಷ್ಕ್ರಿಯ! ಹಾಸ್ಯ ನಟನಿಗಾಗಿ ಅಭಿಮಾನಿಗಳ ಪ್ರಾರ್ಥನೆ

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ

ನೆರೆಪೀಡಿತ ಪ್ರದೇಶಗಳ ಪರಿಶೀಲನೆಗೆ ಕೊಡಗು (Kodagu) ಜಿಲ್ಲೆಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former CM Siddaramaiah) ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ತಿತಿಮತಿಯಲ್ಲಿ ನೆರೆ ವೀಕ್ಷಣೆ ಮುಗಿಸಿ ಬಳಿಕ ಮಡಿಕೇರಿ ಕಡೆಗೆ ಸಿದ್ದರಾಮಯ್ಯ ಆಗಮಿಸುತ್ತಿದ್ದರು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತಕ್ಕೆ ಆಗಮಿಸಿದಾಗ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯರ ಕಾರಿಗೆ (Car) ಮೊಟ್ಟೆ (Egg) ಎಸೆದಿದ್ದಾರೆ. ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯರು ಸಿದ್ದರಾಮಯ್ಯನವರಿಗೆ ಘೇರಾವ್ ಹಾಕಿ ಧಿಕ್ಕಾರ ಕೂಗಿದರು. ಕಪ್ಪು ಪಟ್ಟಿ (Black Belt) ಪ್ರದರ್ಶಿಸಿ (Show) ಆಕ್ರೋಶ ಹೊರಹಾಕಿದರು. ಕೊಡವ ವಿರೋಧಿ ಸಿದ್ದರಾಮಯ್ಯಗೆ ಧಿಕ್ಕಾರ ಘೋಷಣೆ ಕೂಗಿದರು.

ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಎಸ್ಕೇಪ್

ತುಮಕೂರು: ಈ ಜಗತ್ತಿನಲ್ಲಿ ಕೆಟ್ಟ ತಂದೆ (Bad Father) ಇರಬಹುದು, ಆದ್ರೆ ಕೆಟ್ಟ ತಾಯಿ (Bad Mother) ಇರಲಿಕ್ಕಿಲ್ಲ ಅಂತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ ಆಗಿದೆ. ಗಂಡ (Husband), ಮನೆ (Home), ಮೂವರು ಮಕ್ಕಳು (Children), ನನ್ನ ಸಂಸಾರ (Family) ಅಂತ ಇದ್ದ ಆ ಮಹಿಳೆ ಗಂಡ, ಮನೆ ಅಷ್ಟೇ ಅಲ್ಲ, ಮಕ್ಕಳನ್ನೂ ಬಿಟ್ಟು ಪ್ರಿಯಕರನೊಂದಿಗೆ (Lover) ಪರಾರಿಯಾಗಿದ್ದಾಳೆ. ಮಾನ ಹೋಯ್ತು ಅಂತ ತಲೆ ಮೇಲೆ ಕೈ ಹೊತ್ತು ಕುಳಿತ ಗಂಡ, ದುಡುಕಿ ಮಾಡಬಾರದ ಅನಾಹುತ ಮಾಡಿದ್ದಾನೆ. ಹೆಂಡತಿ ಓಡಿ ಹೋದ ಸಿಟ್ಟೋ, ಮರ್ಯಾದೆ ಹೋಯ್ತು ಎನ್ನುವ ನೋವಿಗೋ ಮಕ್ಕಳಿಗೆ ವಿಷ (Poison) ಕೊಟ್ಟು, ತಾನೂ ವಿಷ ಕುಡಿದಿದ್ದಾನೆ. ಇದೀಗ ಆತ ಪ್ರಾಣ ಬಿಟ್ಟಿದ್ದರೆ, ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇದನ್ನೂ ಓದಿ: Suicide: ಪ್ರಿಯಕರನೊಂದಿಗೆ ಮೂರು ಮಕ್ಕಳ ತಾಯಿ ಎಸ್ಕೇಪ್, ಮನೆಯಲ್ಲಿದ್ದ ಕಂದಮ್ಮಗಳ ಪಾಲಿಗೆ ತಂದೆಯೇ ಯಮನಾದ!

ಲ್ಯಾವೆಂಡರ್ ಬಣ್ಣದ ಬ್ಯಾಕ್​ಲೆಸ್ ಡ್ರೆಸ್​ನಲ್ಲಿ ಮಿಂಚಿದ ಉರ್ಫಿ!

ಉರ್ಫಿ ಜಾವೇದ್ (Urfi Javed) ಈಗ ಟಾಪ್ ಸೆಲೆಬ್ರಿಟಿಗಳನ್ನೂ (Celebrity) ಮೀರಿಸಿ ಫಾಲೋವರ್ಸ್​ಗಳನ್ನು ಪಡೆಯುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ (Social Media) ಅಕ್ಷರಶಃ ಉರ್ಫಿ ರಾಕಿಂಗ್. ತಮ್ಮ ಚಿತ್ರ ವಿಚಿತ್ರ ಉಡುಪುಗಳಿಂದ, ಫ್ಯಾಷನ್​ಗಳಿಂದ ನಟಿ ಟ್ರೋಲ್ (Troll) ಆಗುವುದರ ಜೊತೆ ಜೊತೆಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ. ಸಾಲದ್ದಕ್ಕೆ ಪಾಪ್ಪರಾಜಿಗಳ ಮೋಸ್ಟ್ ಫೇವರೇಟ್ ಆಗಿದ್ದಾರೆ. ಉರ್ಫಿ ಜಾವೇದ್ (Urfi Javed) ಹಾಟ್ ಲ್ಯಾವೆಂಡರ್ ಬ್ಯಾಕ್‌ಲೆಸ್ (Backless) ಮಿನಿ ಡ್ರೆಸ್‌ನಲ್ಲಿ ಉತ್ಕೃಷ್ಟತೆಯನ್ನು ವ್ಯಕ್ತಪಡಿಸಿದ್ದಾರೆ. ಉರ್ಫಿ ಜಾವೇದ್ (Urfi Javed) ಮತ್ತೊಮ್ಮೆ ತಮ್ಮ ವಿಶಿಷ್ಟ ಮತ್ತು ಪ್ರಾಯೋಗಿಕ ಫ್ಯಾಷನ್ ಸೆನ್ಸ್‌ನೊಂದಿಗೆ (Fashion Sense) ಮರಳಿದ್ದಾರೆ. ನೆಟಿಜನ್‌ಗಳು ಉತ್ಸುಕರಾಗಿದ್ದಾರೆ. ತನ್ನ ಬೋಲ್ಡ್ ವ್ಯಕ್ತಿತ್ವ ಮತ್ತು ಸೀದಾ ಸಾದಾ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಹಾಟ್ ಚೆಲುವೆ ಇತ್ತೀಚೆಗೆ ಸಿಜ್ಲಿಂಗ್ ಮಿನಿ ಡ್ರೆಸ್ (Mini Dress) ಧರಿಸಿದ್ದರು. ಉರ್ಫಿ ಅವರು ಶಟರ್‌ಬಗ್‌ಗಳಿಗೆ ಪೋಸ್ ನೀಡುವಾಗ ಲ್ಯಾವೆಂಡರ್ ಬ್ಯಾಕ್‌ಲೆಸ್ ಉಡುಪನ್ನು ಧರಿಸಿದ್ದರು.
Published by:Annappa Achari
First published: