Top-5 News: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, ತೆಲಂಗಾಣದಲ್ಲಿ ಬೊಮ್ಮಾಯಿಗೆ ಅಪಮಾನ! ಇಂದಿನ ಟಾಪ್‌ ನ್ಯೂಸ್ ಇಲ್ಲಿವೆ ಓದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪ್ರಧಾನಿ ಮೋದಿ ಬರ್ತ್​ ಡೇ; ರಾಜ್ಯದ ಬಿಜೆಪಿ ನಾಯಕರಿಂದ ಶುಭಾಶಯ

PM Narendra Modi Birthday: ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರ ಹುಟ್ಟುಹಬ್ಬ (Birthday). ದೇಶ, ವಿದೇಶ ಗಣ್ಯರು ಪ್ರಧಾನಿಗಳಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ರಾಜ್ಯದಲ್ಲಿಯೂ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಬಹುತೇಕ ಎಲ್ಲಾ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಧಾನಿಗಳಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ.

ಹುಟ್ಟುಹಬ್ಬದಂದು ಮೋದಿ ತಮ್ಮ ತಾಯಿಯನ್ನು ಯಾಕೆ ಭೇಟಿಯಾಗಿಲ್ಲ? 

ಪ್ರಧಾನಿ ನರೇಂದ್ರ ಮೋದಿ ಪ್ರತಿವರ್ಷ ತಮ್ಮ ಹುಟ್ಟುಹಬ್ಬದಂದು ತಾಯಿ ಹೀರಾಬೆನ್ ಅವರನ್ನು ಭೇಟಿಯಾಗಿ, ಅವರ ಆಶೀರ್ವಾದ ಪಡೆಯುತ್ತಿದ್ದರು. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ತಮ್ಮ ತಾಯಿಯವರನ್ನು ಭೇಟಿಯಾಗಿಲ್ಲ. ಈ ಬಗ್ಗೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಆದರೆ ಇದಕ್ಕೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರಿಸಿದ್ದಾರೆ.

ಇದನ್ನೂ ಓದಿ: PM Modi Birthday: ಹುಟ್ಟುಹಬ್ಬದಂದು ಮೋದಿ ತಮ್ಮ ತಾಯಿಯನ್ನು ಯಾಕೆ ಭೇಟಿಯಾಗಿಲ್ಲ? ಇದರ ಹಿಂದಿನ ಕಾರಣ ಇಲ್ಲಿದೆ

ಟಿಕೆಟ್​ ಕೊಡುವ ವಿಚಾರ ಒಬ್ಬರ ತೀರ್ಮಾನ ಅಲ್ಲ; ಡಿಕೆಶಿಗೆ ದಿನೇಶ್​ ಗುಂಡೂರಾವ್​ ತಿರುಗೇಟು

ಕಾಂಗ್ರೆಸ್​ ಸಭೆಯಲ್ಲಿ ಕೈ​ ಶಾಸಕರ (Congress MLA) ವಿರುದ್ಧ ಗರಂ ಆಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ (D.K Shivakumar) ಇದೀಗ ಕಾಂಗ್ರೆಸ್​ ನಾಯಕರೇ (Congress Leaders) ತಿರುಗೇಟು ನೀಡಿದ್ದಾರೆ. ಶಾಸಕರು  ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದಿದ್ರು. ಅಲ್ಲದೇ ಮುಂದಿನ ಎಲೆಕ್ಷನ್​ನಲ್ಲಿ (Election) ಪಕ್ಷ ಹಾಗೂ ಜನರಿಗಾಗಿ ಕೆಲಸ ಮಾಡಿದವರಿಗೆ ಟಿಕೆಟ್ (Ticket) ನೀಡೋದಾಗಿ ಘೋಷಿಸಿದ್ರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್​ 18 ಕನ್ನಡಕ್ಕೆ ಎಕ್ಸ್​ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.​ ಕಾಂಗ್ರೆಸ್ ನಲ್ಲಿ ಟಿಕೆಟ್ ಕೊಡುವುದು ಒಬ್ಬರೇ ಅಲ್ಲ, ಎಲ್ಲ ನಾಯಕರು ಸೇರಿಯೇ ತೀರ್ಮಾನ ಮಾಡುತ್ತಾರೆ ಎಂದ್ರು. ಒಬ್ಬರ ಕೈಯಲ್ಲಿ ಏನೂ ಇಲ್ಲ ಎಂದು ಡಿಕೆ ಶಿವಕುಮಾರ್​ಗೆ ದಿನೇಶ್​ ಗುಂಡೂರಾವ್ (Dinesh Gundurao)​ ತಿರುಗೇಟು ನೀಡಿದ್ದಾರೆ. ಒತ್ತಡದ ಮೇಲೆ ಕಾರ್ಯಕ್ರಮ ಮಾಡಬೇಕು ಎಂಬ ಒತ್ತಡ ಹಾಕೋದು ಸರಿ ಅಲ್ಲ ಎಂದು ಕಿವಿಮಾತು ಹೇಳಿದ್ರು.

ಹೈದ್ರಾಬಾದ್‌ನಲ್ಲಿ ಬಸವರಾಜ ಬೊಮ್ಮಾಯಿಗೆ ಅಪಮಾನ

ಹೈದ್ರಾಬಾದ್: ಕರ್ನಾಟಕದಲ್ಲಿ (Karnataka) ಆಳ್ವಿಕೆ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದ ಬಿಜೆಪಿ ಸರ್ಕಾರವನ್ನು (BJP Government) 40% ಸರ್ಕಾರ (40% Government) ಅಂತ ಕಾಂಗ್ರೆಸ್ (Congress) ಸೇರಿದಂತೆ ವಿಪಕ್ಷಗಳು ಕರೆಯುತ್ತಿವೆ. ಗುತ್ತಿಗೆದಾರರ ಸಂಘ (Contractors Association) ಕೂಡ ರಾಜ್ಯ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಮಾಡಿದ್ದವು. ಇದೀಗ 40% ಆರೋಪದ ಬಗ್ಗೆ ಮತ್ತೆ ಸುದ್ದಿಯಾಗಿದೆ. ತೆಲಂಗಾಣದ (Telangana) ಹೈದ್ರಾಬಾದ್‌ನಲ್ಲಿ (Hyderabad) ಇದೇ ವಿಚಾರಕ್ಕೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಪಮಾನ ಮಾಡಲಾಗಿದೆ. ಹೈದ್ರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (BJP National Executive Meet) ನಡೆಯುತ್ತಿದ್ದು, ಅಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಅಪಮಾನಿಸುವ ಬೋರ್ಡ್‌ಗಳನ್ನು ಆಡಳಿತಾರೂಢ ಟಿಆರ್‌ಎಸ್‌ ಪಕ್ಷ (TRS Party) ಅಳವಡಿಸಿದೆ. 40 ಪರ್ಸೆಂಟ್‌ ಸಿಎಂಗೆ ಸ್ವಾಗತ ಅಂತ ಬ್ಯಾನರ್‌ಗಳನ್ನು ಹಾಕಲಾಗಿದೆ.

ಇದನ್ನೂ ಓದಿ: Basavaraj Bommai: ಹೈದ್ರಾಬಾದ್‌ನಲ್ಲಿ ಬಸವರಾಜ ಬೊಮ್ಮಾಯಿಗೆ ಅಪಮಾನ, 40% ಸಿಎಂಗೆ ಸ್ವಾಗತ ಅಂತ ಫ್ಲೆಕ್ಸ್ ಹಾಕಿದ ಟಿಆರ್‌ಎಸ್!

ಪತ್ನಿ ನಿವೇದಿತಾ ಜೊತೆ ಚಂದನ್ ಶೆಟ್ಟಿ ಕೊಕ್ಕರೆ ಡ್ಯಾನ್ಸ್! 

ಬಿಗ್​ಬಾಸ್ ಮೂಲಕ ಪ್ರೀತಿಯಲ್ಲಿ ಬಿದ್ದು ವಿವಾಹವಾಗಿ ರ್ಯಾಪರ್ ಚಂದನ್ ಶೆಟ್ಟಿ  (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸೆಲೆಬ್ರಿಟಿ ಜೋಡಿಗಳು. ಚಂದನ್ ಶೆಟ್ಟಿ ಸೂಪರ್ ಹಾಡುಗಳನ್ನು (Song) ತಯಾರಿಸಿದ್ರೆ ನಿವೇದಿತಾ ಅವರು ರಿಯಾಲಿಟಿ ಶೋ, ಇನ್​ಸ್ಟಾಗ್ರಾಮ್ ರೀಲ್ಸ್ (Instagram Reels), ಯೂಟ್ಯೂಬ್ ಚಾನೆಲ್ ಎಂದು ಫುಲ್ ಬ್ಯುಸಿಯಾಗಿದ್ದಾರೆ. ಈಗ ಚಂದನ್ ಶೆಟ್ಟಿ ಅವರು ವಿಡಿಯೋ ಒಂದನ್ನು ಅಪ್​​ಲೋಡ್ ಮಾಡಿದ್ದಾರೆ. ಎರಡು ಗಂಟೆಗಳಲ್ಲಿ ಈ ವಿಡಿಯೋ (Video) 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡು ವೈರಲ್ ಆಗುತ್ತಿದೆ. ವಿಶೇಷ ಏನಪ್ಪಾ ಎಂದರೆ ಇದು ಐಜಿಗೋಸ್ಕರ ಮಾಡಿದ ಮೊದಲ ಮಿನಿ ಮ್ಯೂಸಿಕ್ (Mini Music) ಅಂತೆ. ಏನೇ ಅಂದರೆ ಈ ಸಾಂಗ್ ಮಾತ್ರ ಫನ್ನಿಯಾಗಿದೆ. ಡ್ಯಾನ್ಸ್ ಅಂತೂ ಸೂಪರ್ ಆಗಿದೆ. ಚಂದನ್ ಹಾಗೂ ನಿವೇದಿತಾ ಜೋಡಿಯಾಗಿ ಈ ಹಾಡಿಗೆ ಡ್ಯಾನ್ಸ್  (Dance) ಮಾಡಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನಷ್ಟು ಜನರು ಈ ಹಾಡಿಗೆ ರೀಲ್ಸ್ ಮಾಡುವ ಸಾಧ್ಯತೆ ಇದೆ.
Published by:Annappa Achari
First published: