Evening Digest: ರಣ ಮಳೆಗೆ 19 ಮಂದಿ ಬಲಿ: ಸಿದ್ದರಾಮಯ್ಯ ಬಗ್ಗೆ ಸಿಎಂ ಬೊಮ್ಮಾಯಿ ಲೇವಡಿ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ರಣಮಳೆಗೆ ಕೇರಳ ತಲ್ಲಣ: ಕೇರಳದಲ್ಲಿ ಸುರಿಯುತ್ತಿರುವ ರಣ ಮಳೆ (Kerala Rain) ಮನೆ ಆಸ್ತಿ, ಜೀವಗಳನ್ನು ಆಪೋಷಣೆ ಪಡೆದುಕೊಳ್ಳುತ್ತಿದೆ. ಕೇರಳದಲ್ಲಿ ಪ್ರವಾಹದಿಂದಾಗಿ ಹಲವೆಡೆ ಭೂಕುಸಿತ ಉಂಟಾಗಿದ್ದು, ಸುಮಾರು 19 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸದ್ಯದ ವರದಿ ಪ್ರಕಾರ 8 ಜನ ಕಾಣೆಯಾಗಿದ್ದಾರೆ. ಇಡುಕ್ಕಿ ಜಿಲ್ಲೆಯ (Idukki Dsitrict) ಕೊಕ್ಕರೈನಲ್ಲಿ ಮೂರು ಶವಗಳು ಒಂದೊಕ್ಕೊಂದು ತಬ್ಬಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಶವಗಳ ವಯಸ್ಸು ಸುಮಾರು 4, 7 ಮತ್ತು 8 ಅಂತ ಅದಾಜಿಸಲಾಗಿದೆ. ಕೊಟ್ಟಾಯಂ, ಇಡುಕ್ಕಿ ಮತ್ತು ಪಟ್ಟಣಂತಿಟ್ಟ (Pathanamthitta) ಪರ್ವತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಭೂಕುಸಿತ ಉಂಟಾಗಿದೆ. ಇಡುಕ್ಕಿಯ ಥೊಡುಪುಜಾ ಮತ್ತು ಕೊಕ್ಕರೈನ ಕೂಟಿಕ್ಕಲ್ ನಲ್ಲಿ ಜನರು ಸಾವನ್ನಪ್ಪುತ್ತಿರುವ ವರದಿಗಳು ಪ್ರಕಟವಾಗುತ್ತಿವೆ.

 RSSನವರೇ ಬೊಮ್ಮಾಯಿನ ಮುಖ್ಯಮಂತ್ರಿ ಮಾಡಿರೋದು

ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹಾನಗಲ್​​ನ ಮಾಸಣಕಟ್ಟಿ ಗ್ರಾಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ (BJP) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಿಂದಿನ ಸಿಎಂ ಬಿ.ಎಸ್​.ಯಡಿಯೂರಪ್ಪರನ್ನ(bs yediyurappa)  ಬಲಾತ್ಕಾರವಾಗಿ ಹೆದರಿಸಿ. ಮನೆಗೆ ಕಳಿಸಿದ್ರು. ರಾಜೀನಾಮೆ ಕೊಡದಿದ್ರೆ ನಿನ್ನ ಮತ್ತು ನಿನ್ನ ಮಗನನ್ನು ಜೈಲಿಗೆ ಕಳಿಸ್ತೀನಿ ಅಂತ ಹೆದರಿಸಿದ್ರು. ಯಡಿಯೂರಪ್ಪ ಅಳುತ್ತಾ ರಾಜೀನಾಮೆ ಕೊಟ್ಟು  ಮನೆಗೆ ಹೋದ. ಈ ವೇಳೆ ತಾನು ಮುಖ್ಯಮಂತ್ರಿ ಆಗಬೇಕು ಅಂತ ಬೊಮ್ಮಾಯಿ ಕಯ್ತಾ ಇದ್ರು. RSSನವರೇ ಬೊಮ್ಮಾಯಿನ ಮುಖ್ಯಮಂತ್ರಿ ಮಾಡಿದರು. ಬೊಮ್ಮಾಯಿಯವರ ರಿಮೋರ್ಟ್​​ RSSನವರ ಬಳಿ ಇದೆ. ಇಷ್ಟಕ್ಕೆ ಎಲ್ಲಾ ಮುಗಿಯಿತು ಎಂದು ಬೊಮ್ಮಾಯಿ ಭಾವಿಸಬಾರದು ಎಂದು ಸಿದ್ದರಾಮುಯ್ಯ ಎಚ್ಚರಿಸಿದರು.

ಸಿದ್ದರಾಮಯ್ಯ ಬಗ್ಗೆ ಸಿಎಂ ಬೊಮ್ಮಾಯಿ ಲೇವಡಿ

ಹಾನಗಲ್ ಉಪಚುನಾವಣೆ(hangal by election)ಯ ಬಿಜೆಪಿ(BJP) ಬಹಿರಂಗ ಪ್ರಚಾರ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ(siddaramaiah) ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಹಿರೇಕೌಂಸಿ, ಬಾಳಬೀಡ ನೀರಾವರಿ ಯೋಜನೆ ಮಾಡಿದ್ದು ಬಿಜೆಪಿ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿದ್ದ ವೇಳೆ ಎನೂ ಕೆಲಸ ಮಾಡಿದ್ರು ಎಂದು ಪ್ರಶ್ನಿಸಿದರು. ಕೆರೆ ತುಂಬಿಸುವ ಯೋಜನೆ ಬಗ್ಗೆ ಸಿದ್ದರಾಮಯ್ಯ ನವರಿಗೆ ದಾಖಲೆ ಕಳುಹಿಸಿಕೊಡುವೆ. ಬಾರಪ್ಪ ಬಾ. ಸಿದ್ದರಾಮಣ್ಣ ಬಾ.. ಬಂದು ನೋಡಪ್ಪ ಎಂದು ಸಿಎಂ ಲೇವಡಿ ಮಾಡಿದರು. ಬೊಮ್ಮಾಯಿ ಎನು ಅಭಿವೃದ್ಧಿ ಮಾಡಿದ್ದಾರೆ ಅಂತಾ ನೋಡು ಬಾರಪ್ಪ. ನಾವೂ ಜನರ ಜೊತೆ ಇರುವವರು, ನಾವೂ ಭೂಮಿಯಲ್ಲಿ ಆಳವಾಗಿ ಬೇರು ಉರಿರುವವರು. ನಾವೂ ನಿಮ್ಮ ಹಾಗೆ ಕುಂಡಲಿಯಲ್ಲಿ ಇರುವ ಗಿಡಗಳಲ್ಲ ಎಂದು ವಾಗ್ದಾಳಿ ನಡೆಸಿದರು.

ಸೋನಿಯಾ ಗಾಂಧಿಗೆ ಪತ್ರ ಬರೆದ ನವಜೋತ್ ಸಿಂಗ್ ಸಿಧು

ಕಾಂಗ್ರೆಸ್‌ನ ಪಂಜಾಬ್ ಘಟಕದ ಅಧ್ಯಕ್ಷರಾಗಿ ಮತ್ತೆ ಅಧಿಕಾರವಹಿಸಿಕೊಂಡ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ಸೋನಿಯಾ ಗಾಂಧಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ, "ಪಂಜಾಬ್ ಸರ್ಕಾರವು ನೀಡಬೇಕಾದ ಆದ್ಯತೆಯ ವಿಷಯಗಳು ಯಾವುದು ಹಾಗೂ "ರಾಜ್ಯದ ಪುನರುತ್ಥಾನ ಮತ್ತು ವಿಮೋಚನೆಗೆ ಕೊನೆಯ ಅವಕಾಶ" ಎಂದು ಕರೆದಿದ್ದಾರೆ. ಪಂಜಾಬಿನಾದ್ಯಂತದ ಪಕ್ಷದ ಕಾರ್ಯಕರ್ತರೊಂದಿಗೆ ಅನೇಕ ಚರ್ಚೆಗಳು ಮತ್ತು ಸಮಾಲೋಚನೆಗಳ ನಂತರ ಮತ್ತು 17 ವರ್ಷಗಳ ಸಾರ್ವಜನಿಕ ಜೀವನದ ಭಾವನೆಯ ಆಳವಾದ ತಿಳುವಳಿಕೆಯೊಂದಿಗೆ, ಇದು ಪಂಜಾಬಿನ ಪುನರುತ್ಥಾನಜೀವನದಲ್ಲಿ ಮತ್ತು ವಿಮೋಚನೆಯ ಕೊನೆಯ ಅವಕಾಶ ಎಂದು ಹೇಳಲು ಇಷ್ಟ ಪಡುತ್ತೇನೆ. ನನ್ನ ಹೃದಯದಿಂದ ಬಹಳ ನೋವನ್ನು ವ್ಯಕ್ತಪಡಿಸುತ್ತೇನೆ. ನನ್ನ ಹೃದಯದಲ್ಲಿರುವ ಸಮಸ್ಯೆಗಳನ್ನು ನೀವು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ ಮತ್ತು ಕಳೆದ ಮುಖ್ಯಮಂತ್ರಿಗೆ ನೀಡಲಾದ 18-ಪಾಯಿಂಟ್ ಅಜೆಂಡಾದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಪಂಜಾಬ್‌ನ ಹಕ್ಕುಗಳ ಪಾಲಕನಾಗಿ ಕಾರ್ಯನಿರ್ವಹಿಸಲು ಸಂಘಟನೆಯ ನನ್ನ ಜವಾಬ್ದಾರಿ ಅರಿತುಕೊಂಡು ಆ ಮೂಲಕ ಅಜೆಂಡಾದ ಪ್ರತಿಯೊಂದು ಅಂಶಕ್ಕೂ ನಾನು ಬದ್ದನಾಗಿದ್ದೇನೆ "ಎಂದು ಅವರು ಬರೆದಿದ್ದಾರೆ.

ಪತಿಯ ಕನಸು ನನಸು ಮಾಡಲು ಹೊರಟ ಮೇಘನಾ ರಾಜ್

ನಟ, ಪತಿ ಚಿರಂಜೀವಿ ಸರ್ಜಾ(chiranjeevi sarja) ಹುಟ್ಟುಹಬ್ಬದ ದಿನವೇ ಮೇಘನಾ ರಾಜ್ (Meghana Raj) ಹೊಸ ಸಿನಿಮಾ ಘೋಷಣೆಯಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಚಿರುಗೆ ಗೆಳೆಯರ ಜೊತೆ ಸೇರಿ ನಿರ್ಮಾಣ ಸಂಸ್ಥೆ ಆರಂಭಿಸುವ ಕನಸು ಇತ್ತು. ಆದರೆ ಆ ಕನಸು ನನಸಾಗುವ ಮೊದಲೇ ಚಿರು ವಿಧಿವಶರಾದರು. ಆ ಕನಸನ್ನು ಗೆಳೆಯರ ಜೊತೆ ಸೇರಿ ನನಸು ಮಾಡುತ್ತಿದ್ದೇವೆ. ಒಂದು ಪ್ರಕಾರ ಅವರೇ ಈ ಕೆಲಸ ಮಾಡಿಸುತ್ತಿದ್ದಾರೆ ಅನ್ನೋದು ನಮ್ಮ ನಂಬಿಕೆ. ಚಿರುಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ಕನಸು ಇತ್ತು. ಮುಂದಿನ ದಿನಗಳಲ್ಲಿ ಸಮಯ ಕೂಡಿ ಬಂದರೆ ನಿರ್ದೇಶನ ಮಾಡುವೆ. ಚಿರು ಹುಟ್ಟುಹಬ್ಬ ಆಗಿರೋದರಿಂದ ಇವತ್ತು ನಮಗೆ ವಿಶೇಷವಾದ ದಿನ. ಆದ್ದರಿಂದ ಇವತ್ತು ಹೊಸ ಸಿನಿಮಾ ಲಾಂಚ್ ಮಾಡುತ್ತಿದ್ದೇವೆ ಎಂದು ಮೇಘನಾ ರಾಜ್ ಸರ್ಜಾ ಹೇಳಿದ್ದಾರೆ.
Published by:Kavya V
First published: