Evening Digest: 10 ವಿದ್ಯಾರ್ಥಿಗಳಿಗೆ ಕೊರೋನ ಬಂದ್ರೆ ಶಾಲೆ ಬಂದ್; ನಾಳೆ ದ್ವಿತೀಯ PUC ರಿಸಲ್ಟ್, ಇಂದಿನ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
10 ವಿದ್ಯಾರ್ಥಿಗೆ ಕೊರೋನ ಬಂದ್ರೆ 2-3 ದಿನ ಶಾಲೆ ಬಂದ್

ಬೆಂಗಳೂರು (ಜೂ 6): ರಾಜ್ಯದಲ್ಲಿ ಕೊರೊನಾ ಪ್ರಕರಣ (Corona Case) ಹೆಚ್ಚುತ್ತಲಿದೆ. ಹೀಗಾಗಿ ಮತ್ತೆ ನಾಲ್ಕನೇ ಅಲೆ ಭೀತಿ ಶುರುವಾಗಲಿದೆ. ಶಾಲೆಯಲ್ಲಿ 10 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಲ್ಲಿ (Student) ಕೋವಿಡ್ -19 ಪಾಸಿಟಿವ್ (Positive) ಬಂದ್ರೆ 2-3 ದಿನಗಳ ಕಾಲ ಶಾಲೆಗೆ (School) ರಜೆ ಘೋಷಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಕರ್ನಾಟಕದ (Karnataka) ಶಾಲೆಗಳಿಗೆ ತಿಳಿಸಿದೆ. ಬೆಂಗಳೂರಿನ ಎರಡು ಶಾಲೆಗಳಲ್ಲಿ ಇತ್ತೀಚಿನ ಕೋವಿಡ್ -19 ಸ್ಫೋಟವಾಗಿತ್ತು, ಮಕ್ಕಳಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ನಿನ್ನೆ 833 ಹೊಸ  ಕೊರೊನಾ ಪ್ರಕರಣಗಳು (New Corona Case) ವರದಿ ಆಗಿದೆ. ಅದರಲ್ಲಿ 791 ಕೇಸ್​ಗಳು ಬೆಂಗಳೂರಿನಲ್ಲೆ ದಾಖಲಾಗಿವೆ. ಇದು ಹಿಂದಿನ ದಿನಕ್ಕಿಂತ 28% ಹೆಚ್ಚಾಗಿದೆ.

ಊಟದ ಬಾಕ್ಸ್​ನಲ್ಲಿ ಮಗನಿಗೆ ಡ್ರಗ್ಸ್ ಸಪ್ಲೈ! 

ಬೆಂಗಳೂರು (ಜೂ.17): ಮಕ್ಕಳು ಮಾದಕ ವ್ಯಸನಿಗಳಾದ್ರೆ ಪೋಷಕರಿಗೆ ದೊಡ್ಡ ಆಘಾತವಾಗಿರುತ್ತೆ. ಮಕ್ಕಳು ಡ್ರಗ್ಸ್​​ (Drugs) ನಂತಹ ಚಟಗಳಿಗೆ ದಾಸರಾದ್ರೆ ಮುಗಿತು ಅವರ ಜೀವನವೇ ಹಾಳಾಗಿ ಹೋಯ್ತು ಎಂದು ಪೋಷಕರು (Parents) ಕೊರಗುತ್ತಾರೆ. ಆದ್ರೆ ಇಲ್ಲೊಬ್ಬ ಮಹಾತಾಯಿ ಏನು ಮಾಡಿದ್ದಾಳೆ ಗೊತ್ತಾ. ಜೈಲಿನಲ್ಲಿದ್ದ ಮಗನಿಗೆ ಡ್ರಗ್ಸ್​ ನೀಡಲು ಹೋಗಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ನಡೆದಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail), ಶಿಕಾರಿ ಪಾಳ್ಯದ (Shikaripalya) ನಿವಾಸಿ ಪರ್ವೀನ್​ ತಾಜ್​ (Parveen Taj) ಎಂಬಾಕೆ ಮಗ ಮೊಹಮ್ಮದ್ ಬಿಲಾಲ್ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು (Prison) ಸೇರಿದ್ದಾನೆ. ಮಗನಿಗೆ ಊಟ ಕೊಡಲು ನೆಪದಲ್ಲಿ ಬಂದಿದ್ದ ತಾಯಿ ಪರ್ವೀನ್, ​ ಬಾಕ್ಸ್​ನಲ್ಲಿ (Box) ಡ್ರಗ್ಸ್​ ತಂದಿದ್ದಾಳೆ.

'ಅಗ್ನಿ'ಗೆ ಆಹುತಿಯಾದ ರೈಲು

ತೆಲಂಗಾಣ: ಭಾರತೀಯ ಸೇನೆಯಲ್ಲಿ (Indian Military) ಅಮೂಲಾಗ್ರ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ‘ಅಗ್ನಿ ಪಥ್’ (Agnipath) ಎಂಬ ಯೋಜನೆ (Project) ತರಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ. ಇನ್ನು ಮುಂದೆ ಸೇನೆಯ ಮೂರೂ ವಿಭಾಗಗಳಲ್ಲಿ ಸೇವೆ ಸಲ್ಲಿಸುವ ನವ ಯುವಕ–ಯುವತಿಯರಿಗೆ ಅವಕಾಶವನ್ನು ನೀಡುವ ಹಾಗೂ ಮಿಲಿಟರಿಯ ಹೊಸ ನೇಮಕಾತಿ ಮಾದರಿ ‘ಅಗ್ನಿಪಥ್’ ಯೋಜನೆ ಜಾರಿಯಾಗಿದೆ. ಆದರೆ ಯೋಜನೆಗೆ ಆರಂಭದಲ್ಲಿಯೇ ಭಾರೀ ವಿರೋಧ ಎದುರಾಗಿದೆ. ಅಗ್ನಿಪಥ್ ಯೋಜನೆ ವಿರೋಧಿಸಿ ಬಿಹಾರ (Bihar), ರಾಜಸ್ಥಾನ (Rajasthan), ಜಾರ್ಖಂಡ್ (Jharkhand) ಸೇರಿದಂತೆ ದೇಶದ ಹಲವೆಡೆ  ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಪ್ರತಿಭಟನೆಯು ಉಗ್ರ ರೂಪ ತಳೆಯುತ್ತಿದೆ. ಇಂದು ಹಲವೆಡೆ ರೈಲಿಗೆ ಬೆಂಕಿ ಹಚ್ಚಲಾಗಿದೆ. ಇನ್ನು ತೆಲಂಗಾಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾಗಿ ವರದಿಯಾಗಿದೆ
ನಾಳೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ


ಬೆಂಗಳೂರು (ಜೂ 17):  ನಾಳೆಯೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.  ನಾಳೆ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶ (PUC Result) ಪ್ರಕಟ ಮಾಡಲಿರೋದಾಗಿ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಟ್ವೀಟ್​ ಮಾಡಿದ್ದಾರೆ.  ಬೆಳಗ್ಗೆ 11 ಗಂಟೆಗೆ ಪಿಯುಸಿ ಬೋರ್ಡ್​ನಲ್ಲಿ ಸುದ್ದಿಗೋಷ್ಠಿ ನಡೆಸಲಿರೋ ಸಚಿವ ನಾಗೇಶ್​ ಅವರು, ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ವೆಬ್ ಸೈಟ್​ನಲ್ಲಿ  ಫಲಿತಾಂಶ  ಪ್ರಕಟವಾಗಲಿದ್ದು, ನೋಂದಣಿಗೊಂಡ ವಿದ್ಯಾರ್ಥಿಗಳ  ಮೊಬೈಲ್​ಗೆ ಫಲಿತಾಂಶದ ಸಂದೇಶ ರವಾನೆಯಾಗಲಿದೆ ಎಂದು ಸಚಿವ ನಾಗೇಶ್ ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿಸದೆ ಎಂದು ಸಚಿವ ಬಿ.ಸಿ ನಾಗೇಶ್ ಅವರು ಟ್ವೀಟ್​ ಮಾಡೋ ಮೂಲಕ ತಿಳಿಸಿದ್ದಾರೆ.  ವಿದ್ಯಾರ್ಥಿಗಳಿಗೆ ಶುಭಾಷಯಗಳು ನಾಳೆ ದ್ವಿತೀಯ ಪಿಯುಸಿ ರಿಸಲ್ಟ್​ ಎಂದು ಬರೆದುಕೊಂಡಿದ್ದಾರೆ.

ಕೋವಿಡ್‌ ಬೆನ್ನಲ್ಲೇ ಸೋನಿಯಾ ಗಾಂಧಿಗೆ ಫಂಗಲ್‌ ಸೋಂಕು!

ನವದೆಹಲಿ: ಕೋವಿಡ್ ಸೋಂಕಿನಿಂದ (Covid Infection) ಬಳಲುತ್ತಿರುವ ಎಐಸಿಸಿ ಅಧ್ಯಕ್ಷೆ (AICC President) ಸೋನಿಯಾ ಗಾಂಧಿ (Sonia Gandhi) ಇದೀಗ ಕೊಂಚ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಅವರಿಗೆ ಫಂಗಲ್ ಸೋಂಕು (Fungal Infection) ಕಾಣಿಸಿಕೊಂಡಿದೆ ಅಂತ ಹೇಳಲಾಗ್ತಿದೆ. ಸದ್ಯ ಗಂಗಾರಾಮ್ ಆಸ್ಪತ್ರೆಯಲ್ಲಿ (Gangaram Hospital) ಸೋನಿಯಾ ಗಾಂಧಿ ಅವರಿಗೆ ಚಿಕಿತ್ಸೆ (Treatment) ಮುಂದುವರೆದಿದೆ. ಸೋನಿಯಾ ಗಾಂಧಿ ಅವರ ಶ್ವಾಸಕೋಶಕ್ಕೆ ಫಂಗಲ್‌ ಸೋಂಕು ತಗುಲಿದೆ ಅಂತ ವೈದ್ಯರು ತಿಳಿಸಿದ್ದಾರೆ.
Published by:Pavana HS
First published: