Evening Digest: ನಂದಿನಿ ಉತ್ಪನ್ನಗಳ ಬೆಲೆ ಏರಿಕೆ: ಬಿಗ್​ಬಾಸ್​ಗೆ ಕಿಚ್ಚನ ಸಂಭಾವನೆ ಎಷ್ಟು? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ನಂದಿನಿ ಉತ್ಪನ್ನಗಳ ಬೆಲೆ ಏರಿಕೆ: ಮೊದಲೇ ಬೆಲೆ ಏರಿಕೆ(Price Hike), ಜಿಎಸ್​ಟಿ ಏರಿಕೆಯಿಂದ (GST Hike) ತತ್ತರಿಸಿರುವ ಕರ್ನಾಟಕದ ಜನತೆಗೆ ಹೊಸ ಶಾಕ್​​ ಎದುರಾಗಿದೆ. ಕೇಂದ್ರದ ನೂತನ GST ನೀತಿ ಜಾರಿ ಹಿನ್ನೆಲೆ ನಂದಿನಿ ಉತ್ಪನ್ನಗಳನ್ನು ಏರಿಕೆ ಮಾಡಲಾಗಿದ್ದು, ನಾಳೆಯಿಂದಲೇ (ಜು.18) ಹೊಸ ದರಗಳು ಜಾರಿಗೆ ಬರಲಿವೆ. ನಂದಿನಿ ಉತ್ಪನ್ನಗಳು (Nandini Products) ಜನಸಾಮಾನ್ಯರ ಜೇಬನ್ನು ಸುಡಲು ಆರಂಭಿಸಲಿದೆ. KMF ನಿಂದ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ. ಹಾಲು ಹೊರತಾಗಿ ಇತರೆ ಉತ್ಪನ್ನಗಳ ದರದಲ್ಲಿ ಹೆಚ್ಚಳ ಆಗಿದೆ. ಒಂದು ಲೀಟರ್ ಮೊಸರಿಗೆ 3 ರೂಪಾಯಿ ಹೆಚ್ಚಳ, ಮಜ್ಜಿಗೆ 200ml ಗೆ 1 ರೂಪಾಯಿ ಹೆಚ್ಚಳ ಹಾಗೂ ಲಸ್ಸಿ 200ml ಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪೂರ್ತಿ ಓದಲು ಇಲ್ಲಿ ಕ್ಲಿಕ್​ ಮಾಡಿ:Nandini Products Price Hike: ಕನ್ನಡಿಗರಿಗೆ ಬಿಗ್ ಶಾಕ್; ನಾಳೆಯಿಂದ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ

ತ್ಯಾಗಕ್ಕೆ ಮತ್ತೊಂದು ಹೆಸರು ಸೋನಿಯಾ ಗಾಂಧಿ

ವಿಚಾರಣೆಯ ನೆಪದಲ್ಲಿ ರಾಹುಲ್ ಗಾಂಧಿ (Rahul Gandhi) ಅವರನ್ನು ಕರೆಸಿ ಅವರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗ್ತಿದೆ ಎಂದು ಡಿಕೆ ಶಿವಕುಮಾರ್​ ಆರೋಪಿಸಿದರು. ಸುಳ್ಳು ಕೇಸ್ ದಾಖಲಿಸುವ ಮೂಲಕ ನಮ್ಮನ್ನು ಹೆದರಿಸಲಾಗುತ್ತಿದೆ. ಇದೇ 21ಕ್ಕೆ ಸಂಸತ್ ಅಧಿವೇಶನ ನಡೆಯುತ್ತಿದೆ. ಕಾಂಗ್ರೆಸ್ ಅಧಿನಾಯಕಿ ಆಗಿರುವ ಸೋನಿಯಾ ಗಾಂಧಿಯವರು (Sonia Gandhi) ಭಾಗವಹಿಸೋಕೆ ಸಿದ್ಧರಿದ್ದಾರೆ. ಅಧಿವೇಶನ ಇದ್ದರೂ ಅವರನ್ನು ವಿಚಾರಣೆಗೆ ಕರೆಯುವ ಮೂಲಕ ಕಿರುಕುಳ ನೀಡಲಾಗ್ತಿದೆ. ತಮಗೆ ಪ್ರಧಾನ ಮಂತ್ರಿ ಆಗುವ ಅವಕಾಶಗಳಿದ್ರೂ ಓರ್ವ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಗಳನ್ನಾಗಿ ಮಾಡಿದರು. ತ್ಯಾಗಕ್ಕೆ ನಿಜವಾದ ಹೆಸರು ಸೋನಿಯಾ ಗಾಂಧಿ. ಪಕ್ಷ ಉಳಿಸಮ್ಮ ಅಂತಾ ಕಾಲು ಕೈ ಹಿಡಿದು ಕರೆದುಕೊಂಡು ಬಂದಿದ್ದೇವೆ ಎಂದರು.

ದೇವಸ್ಥಾನದ ಆವರಣಕ್ಕೆ ಮಾಂಸವನ್ನು ಎಸೆದ ಕಿಡಿಗೇಡಿಗಳು

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ (Kannauj district of Uttar Pradesh) ಕೆಲವು ಅಪರಿಚಿತ ದುಷ್ಕರ್ಮಿಗಳು ಗ್ರಾಮದ ದೇವಸ್ಥಾನದ ಕಾಂಪೌಂಡ್‌ ಒಳಗೆ ಮಾಂಸದ ತುಂಡುಗಳನ್ನು (Meat In Temple Compound) ಎಸೆದಿದ್ದಾರೆ. ಎರಡು ಸ್ಥಳಗಳಲ್ಲಿ ವಿಗ್ರಹಗಳನ್ನು ಅಪವಿತ್ರಗೊಳಿಸಿದ ಹಿನ್ನೆಲೆಯಲ್ಲಿ ಕೋಮು ಘರ್ಷಣೆಗಳು (Communal clashes) ನಡೆದಿದ್ದು, ಇದು ಹಿಂಸಾಚಾರಕ್ಕೆ ಕಾರಣವಾಯಿತು. ಈ ಘಟನೆಯಿಂದ ಹಲವಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಲ್ ಆಫೀಸರ್ ಶಿವ ಪ್ರತಾಪ್ ಸಿಂಗ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ಹರಿ ಶ್ಯಾಮ್ ಸಿಂಗ್ ಸ್ಥಳಕ್ಕೆ ಆಗಮಿಸಿ ದೇವಸ್ಥಾನದ ಆವರಣವನ್ನು ಸಂಪೂರ್ಣ ಸ್ವಚ್ಛಗೊಳಿಸಿದರು. ಆದಾಗ್ಯೂ, ಘಟನೆಯ ಬಗ್ಗೆ ಪೊಲೀಸರು ಮೌನ ವಹಿಸಿದ್ದಾರೆ ಎಂದು ಆರೋಪಿಸಿ ರಸ್ತೆಯಲ್ಲಿ ಜಮಾಯಿಸಿದ ಗುಂಪೊಂದು ತಾಲ್ಗ್ರಾಮ್-ಇಂದ್ರಗಢ್ ರಸ್ತೆಯನ್ನು ನಡೆದು ಪ್ರತಿಭಟನೆ ನಡೆಸಿತು.

ಬಿಗ್​ಬಾಸ್​ಗೆ ಕಿಚ್ಚನ ಸಂಭಾವನೆ ಎಷ್ಟು?

ಬಿಗ್ ಬಾಸ್, (Bigg Boss) ಈ ಶೋ ಅದೆಷ್ಟೇ ವಿವಾದಕ್ಕೆ ಕಾರಣವಾದರೂ ಸಹ ಎಲ್ಲಾ ಭಾಷೆಯಲ್ಲಿ ಜನರಿಗೆ ಬಹಳ ಇಷ್ಟವಾಗಿದೆ. ಈ ಶೋ ಒಂದು ಸೀಸನ್ ಮುಗಿದರೆ ಮತ್ತೊಂದು ಸೀಸನ್​ (season) ಯಾವಾಗ ಎಂದು ಅಭಿಮಾನಿಗಳು (Fans) ಕೇಳುತ್ತಾರೆ. ಅಷ್ಟರ ಮಟ್ಟಿಗೆ ಬಿಗ್​ಬಾಸ್​ ಜನಜನಿತ. ಇದೀಗ ಕನ್ನಡದಲ್ಲಿ (Kannada) ಸಹ ಬಿಗ್​ಬಾಸ್ ಸದ್ಯದಲ್ಲಿಯೇ ಆರಂಭವಾಗಲಿರುವ ಬಗ್ಗೆ ವಾಹಿನಿ ಹಿಂಟ್​ ಕೊಟ್ಟಿದೆ. ಕಿಚ್ಚ ಸುದೀಪ್ (Kiccha Sudeep) ಸಹ ಈಗಾಗಲೇ ಪ್ರೋಮೋ ಶೂಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಮದ್ಯೆ  ಅಭಿಮಾನಿಗಳು ಬಿಗ್​ಬಾಸ್​ಗೆ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹಿಂದಿ ಬಿಗ್​ಬಾಸ್​.

ಪೂರ್ತಿ ಓದಲು ಇಲ್ಲಿ ಕ್ಲಿಕ್​ ಮಾಡಿ:Bigg Boss: ಹಿಂದಿಯಲ್ಲಿ ಸಲ್ಲು ಪಡೆಯೋದು ಸಾವಿರ ಕೋಟಿ! ಈ ಬಾರಿ ಬಿಗ್​ಬಾಸ್​ಗೆ ಕಿಚ್ಚನ ಸಂಭಾವನೆ ಎಷ್ಟಿರಬಹುದು ಹೇಳಿ?

ಬ್ರಹ್ಮಾಸ್ತ್ರ ಸಿನಿಮಾದ ಕೇಸರಿಯಾ ಸಾಂಗ್ ರಿಲೀಸ್

ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಅಭಿನಯದ ಮುಂಬರುವ ಸಿನಿಮಾ ಬ್ರಹ್ಮಾಸ್ತ್ರದ (Brahmāstra) ಮೊದಲ ಹಾಡು ಕೇಸರಿಯಾ (Kesariya) ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರತಂಡ ಇಂದು ಹಾಡನ್ನು ಬಿಡುಗಡೆ ಮಾಡಿದ್ದು, ಮ್ಯೂಸಿಕ್ ವಿಡಿಯೋದಲ್ಲಿ ವಾರಣಾಸಿಯಲ್ಲಿ ಇಶಾ ಪಾತ್ರದಲ್ಲಿ ನಟಿಸುವ ಆಲಿಯಾ ಮತ್ತು ಶಿವನ ಪಾತ್ರದಲ್ಲಿ ರಣಬೀರ್ ಕಪೂರ್ ರೋಮ್ಯಾನ್ಸ್ ಮಾಡಿದ್ದು, ಜನರಿಗೆ ಬಹಳ ಇಷ್ಟವಾಗಿದೆ.
Published by:Kavya V
First published: