ಜ.25ರ ವೇಳೆ ಕೊರೊನಾ 3ನೇ ಅಲೆ ತೀವ್ರ: ರಾಜ್ಯದಲ್ಲಿ ಕೊರೊನಾ (Corona) ಪರಿಸ್ಥಿತಿ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ವರ್ಚುವಲ್ ಸಭೆ (Corona Review Meeting) ನಡೆಯಿತು. ತಜ್ಞರ ಸಲಹೆ ಮೇರೆಗೆ ಸದ್ಯ ಈಗ ಜಾರಿಯಲ್ಲಿರುವ ನಿಯಮಗಳನ್ನೇ ಮುಂದುವರೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ. ಸಿಎಂ ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ಆರ್.ಅಶೋಕ್, ಜನವರಿ 25ರ ವೇಳೆಗೆ ಕರ್ನಾಟಕದಲ್ಲಿ ಕೊರೊನಾ 3ನೇ ಅಲೆ ತೀವ್ರಗೊಳ್ಳಲಿದೆ. ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಕೋವಿಡ್ ನಿಯಮಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಶುಕ್ರವಾರದವರೆಗೆ (ಜ.21) ಕಾದು ನೋಡುವ ತಂತ್ರ ಅನುಸರಿಸುತ್ತೇವೆ. ಅಲ್ಲಿಯವರೆಗೆ ಎಲ್ಲವೂ ಯಥಾಸ್ಥಿತಿಯಲ್ಲಿರಲಿದೆ ಎಂದು ತಿಳಿಸಿದರು.
ಪೂರ್ತಿ ಓದಿಗಾಗಿ: ಜ.25ರ ವೇಳೆಗೆ ರಾಜ್ಯದಲ್ಲಿ Corona ಸ್ಫೋಟ ಸಾಧ್ಯತೆ: ಶುಕ್ರವಾರದವರೆಗೆ ಕಾದು ನೋಡಲು ಮುಂದಾದ ಸರ್ಕಾರ
ಬೆಂಗಳೂರಲ್ಲಿ ಸೆಕ್ಷನ್ 144 ಜಾರಿ
ಬೆಂಗಳೂರು ನಗರದಲ್ಲಿ ಜನವರಿ 31ರವರೆಗೆ ನಿಷೇಧಾಜ್ಞೆಯನ್ನು ಹೇರಲಾಗಿದೆ. ಇಷ್ಟು ದಿನ ವೀಕೆಂಡ್ ಕರ್ಫ್ಯೂ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿತ್ತು.ಈಗ ಇಡೀ ದಿನ ಅಂದರೆ ಬೆಳಗಿನ ಹೊತ್ತೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಬೆಂಗಳೂರು ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿರುವುದರಿಂದ 5 ಜನ ಗುಂಪು ಗೂಡುವಂತಿಲ್ಲ. ಅನಗತ್ಯ ಓಡಾಟಕ್ಕೂ ಬ್ರೇಕ್ ಬೀಳಲಿದೆ. ಜನವರಿ 31 ರವರೆಗೆ ನಿಷೇಧಾಜ್ಞೆ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ಪಂಥ್ ರಿಂದ ಆದೇಶ ಹೊರಡಿಸಿದ್ದಾರೆ. 144 ಸೆಕ್ಷನ್ ವೇಳೆ ಯಾವುದೇ ರ್ಯಾಲಿ, ಪ್ರತಿಭಟನೆ, ಸಭೆ-ಸಮಾರಂಭಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಪೂರ್ತಿ ಓದಿಗಾಗಿ: Corona ಹೆಚ್ಚಳ ಹಿನ್ನೆಲೆ ಬೆಂಗಳೂರಲ್ಲಿ ನಿಷೇಧಾಜ್ಞೆ ಜಾರಿ: ಸೋಂಕನ್ನು ಗೆದ್ದ ಸಿಎಂ ಬಸವರಾಜ ಬೊಮ್ಮಾಯಿ
Punjab Election ದಿನಾಂಕ ಮುಂದೂಡಿಕೆ
ಈ ಹಿಂದೆ ನಿಗದಿಯಾಗಿದ್ದ ಪಂಜಾಬ್ ವಿಧಾನಸಭಾ ಚುನಾವಣಾ (Punjab Election) ದಿನಾಂಕವನ್ನು ಮುಂದೂಡಿ ಚುನಾವಣಾ ಆಯೋಗ ಹೊಸ ದಿನಾಂಕ ಪ್ರಕಟಿಸಿದೆ. ಈ ಹಿಂದೆ ನಿಗದಿಸಿದ್ದ ಫೆ 14ರ ಬದಲಿಗೆ ಫೆ 20ರಂದು (Feb 20) ಪಂಜಾಬ್ನಲ್ಲಿ ಏಕ ಹಂತದ ಮತದಾನ ನಡೆಯಲಿದೆ. ಗುರು ರವಿದಾಸ್ ಜಯಂತಿ (Guru Ravidas Jayanti) ಹಿನ್ನಲೆ ಈ ದಿನಾಂಕವನ್ನು ಬದಲಾಯಿಸುವಂತೆ ಆಡಳಿತಾರೂಢ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಸ್ಥಳೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಅದರಂತೆ ಚುನಾವಣಾ ದಿನಾಂಕವನ್ನು ಮರು ಪರಿಶೀಲಿಸಿದ ಆಯೋಗ ಮತದಾನದ ದಿನಾಂಕವನ್ನು ಫೆ 20ಕ್ಕೆ ನಿಗದಿಸಿ ಘೋಷಣೆ ಹೊರಡಿಸಿದೆ.
ಸಿಬ್ಬಂದಿ ಬೇಜವಾಬ್ದಾರಿಯಿಂದಲೇ ಮೂರು ಮಕ್ಕಳ ದಾರುಣ ಸಾವು..
ಬೆಳಗಾವಿ(Belagavi)ಯಲ್ಲಿ 3 ಮಕ್ಕಳ ನಿಗೂಢ ಸಾವು(Death) ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ವರದಿ ತನಿಖಾಧಿಕಾರಿ ಈಶ್ವರ್ ಗಡಾದ್ ಸೋಮವಾರ ಹೇಳಿಕೆ ನೀಡಿದ್ದಾರೆ. ಅದರಂತೆ, ಸಿಬ್ಬಂದಿ ಬೇಜವಾಬ್ದಾರಿಯಿಂದ ಮಕ್ಕಳು ಮೃತಪಟ್ಟಿದ್ದಾರೆ. ನರ್ಸ್(Nurse), ಫಾರ್ಮಸಿಸ್ಟ್ ಬೇಜವಾಬ್ದಾರಿಯಿಂದ ಮಕ್ಕಳ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಳಗಾವಿಯಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್(Dr. K Sudhakar) ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್ನಿಂದ ಮೃತಪಟ್ಟಿರಬಹುದು. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನೂ ಸೂಕ್ತ ರೀತಿಯಲ್ಲಿ ಆ ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರಾ? ಇಲ್ವಾ? ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಸಚಿವರು ಹೇಳಿದ್ದಾರೆ. ಎರಡು ದಿನಗಳಲ್ಲಿ ವರದಿ(Report) ನೀಡಲು ಸೂಚನೆ ಸಹ ನೀಡಲಾಗಿದೆ. ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.ANM, ಫಾರ್ಮಸಿಸ್ಟ್ ಅಮಾನತು(Suspend) ಮಾಡಲಾಗಿದೆ.
ವಿಜಯ್ ದೇವರಕೊಂಡ ಮನೆಯಲ್ಲಿ ರಶ್ಮಿಕಾ
ತೆಲುಗಿನ ‘ಗೀತಾ ಗೋವಿಂದಂ’ (Geeta Govindam) ಮತ್ತು ‘ಡಿಯರ್ ಕಾಮ್ರೇಡ್’ (Dear Comrade) ನಂತಹ ಚಲನಚಿತ್ರಗಳಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳ ಮನ ಗೆದ್ದಂತಹ ಜೋಡಿ ಎಂದರೆ ಅದು ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ನಟ ವಿಜಯ್ ದೇವರಕೊಂಡ (Vijay Devankonda) ಅವರದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವರಿಬ್ಬರ ಪರದೆಯ ಮೇಲಿನ ಒಂದು ಕೆಮಿಸ್ಟ್ರಿ ಯಾರು ತಾನೇ ಮರೆಯಲು ಸಾಧ್ಯ ಹೇಳಿ..? ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಲು ಇಬ್ಬರು ಒಟ್ಟಿಗೆ ಗೋವಾಗೆ ತೆರಳಿದ್ದರು. ಇದೀಗ ಇವರಿಬ್ಬರ ಬಗ್ಗೆ ಹೊಸ ವಿಚಾರವೊಂದು ಸಖತ್ ವೈರಲ್ ಆಗುತ್ತಿದೆ. ಅದನ್ನುನೋಡಿದ ಅಭಿಮಾನಿಗಳು ನಿಜ ಇವರಿಬ್ಬರ ನಡುವೆ ಸಂಥಿಂಗ್.. ಸಂಥಿಂಗ್ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ