Evening Digest: ಓಮೈಕ್ರಾನ್​ ಪ್ರಕರಣ ಏರಿಕೆ; ಪಾಕ್​ ವಿರುದ್ಧ ಭಾರತದ ಹಾಕಿ ತಂಡಕ್ಕೆ ಗೆಲುವು; ಇಂದು ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಕ್ಷಮೆಯಾಚಿಸಿದ ರಮೇಶ್​ ಕುಮಾರ್​

  ವಿಧಾನಸಭೆಯಲ್ಲಿ ತಾವು ಆಡಿದ ವಿವಾದಾತ್ಮಕ ಮಾತಿನಿಂದ ದೇಶಾದ್ಯಂತ ರಮೇಶ್​ ಕುಮಾರ್​ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸ್​​ ಕೂಡ ಪಕ್ಷದ ಹಿರಿಯ ನಾಯಕನ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದೆ. ತಮ್ಮ ಮಾತಿನಿಂದ ಆದ ತಪ್ಪಿಗೆ ಅವರು ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಅತ್ಯಾಚಾರ ಕುರಿತು ವಿಧಾನಸಭೆಯಲ್ಲಿ ನಾನು ಆಡಿದ ಅಸಡ್ಡೆ ಮತ್ತು ನಿರ್ಲಕ್ಷ್ಯದ ಮಾತುಗಳಿಗೆ ಪ್ರಾಮಾಣಿಕ ಕ್ಷಮೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಇದು ಉದ್ದೇಶಪೂರ್ವಕವಾದ ಹೇಳಿಕೆ ಆಗಿರಲಿಲ್ಲ. ಅಲ್ಲದೇ ಘೋರ ಅಪರಾಧವನ್ನು ಅಲಕ್ಷಿಸದಿರುವುದು ಆಗಿರಲಿಲ್ಲ. ಮುಂದೆ ಈ ರೀತಿ ಪದ ಬಳಸದಂತೆ ಎಚ್ಚರಿಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  ಈ ದೇಶದ ಪ್ರಜೆಗಳಿಗೆ ಇಲ್ಲ ಬೆಂಗಳೂರಿಗೆ ಎಂಟ್ರಿ
  ಸಿಲಿಕಾನ್ ಸಿಟಿ ಯಲ್ಲಿ ಸಹ ಓಮೈಕ್ರಾನ್ ಸೋಂಕಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ವೈರಸ್ ತಡೆಗಟ್ಟಲು ಪಾಲಿಕೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಈಗಾಗಲೇ ಹೈರಿಸ್ಕ್ ದೇಶಗಳಿಂದ ಬಂದ ಪ್ರಯಾಣಿಕರಿಂದ ವೈರಸ್ ಹೆಚ್ಚಳವಾಗುತ್ತಿರುವ ಕಾರಣ ಬೆಂಗಳೂರಿಗೆ ಎಂಟ್ರಿ ನೀಡದಿರಲು ಬಿಬಿಎಂಪಿ ) ನಿರ್ಧರಿಸಿದೆ. ಹೈರಿಸ್ಕ್ ದೇಶದ ಪ್ರಯಾಣಿಕರನ್ನು ಅಂದರೆ ಬ್ರಿಟನ್, ದಕ್ಷಿಣ ಆಫ್ರಿಕಾ, ಅಮೆರಿಕದ ಪ್ರಯಾಣಿಕರಿಗೆ ಬೆಂಗಳೂರಿನ ಒಳಗೆ ಬರಲು ಯಾವುದೇ ಅವಕಾಶವಿಲ್ಲ.

  ಡಿಕೆ ಶಿವಕುಮಾರ್​ ಅಜ್ಜಿ ನಿಧನ
  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ . ಸಂಸದ ಡಿ.ಕೆ. ಸುರೇಶ್  ಅವರ ಅಜ್ಜಿ ನಿಂಗಮ್ಮ ಅವರು ಕನಕಪುರದ ಹಾರೋಹಳ್ಳಿಯ ದಯಾನಂದಸಾಗರ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ನಿಂಗಮ್ಮ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿಂಗಮ್ಮ ಅವರಿಗೆ (106) ವರ್ಷಗಳಾಗಿದ್ದವು. ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಶುಕ್ರವಾರ ಸಂಜೆ 4.30 ಕ್ಕೆ ನಡೆಯಲಿದೆ

  ದೆಹಲಿಯಲ್ಲಿ ಓಮೈಕ್ರಾನ್​ ಪ್ರಕರಣ ಏರಿಕೆ
  ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಂದೇ ದಿನ 10 ಓಮೈಕ್ರಾನ್ (Omicron)​ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿದೆ. ನಿನ್ನೆಯಷ್ಟೇ ದೆಹಲಿಯಲ್ಲಿ 4 ಓಮೈಕ್ರಾನ್​ ಪ್ರಕರಣ ದಾಖಲಾಗಿತ್ತು. ಸತತ ಎರಡನೇ ದಿನವೂ ದೆಹಲಿಯಲ್ಲಿ ಓಮೈಕ್ರಾನ್​ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ. ಈಗಾಗಲೇ ಸೋಂಕಿತ 20ರಲ್ಲಿ 10 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

  ಮೋದಿಗೆ ಭೂತಾನಿನ ಅತ್ಯುನ್ನತ ನಾಗರಿಕ ಪ್ರಶಸ್ತಿ
  ಭಾರತ ಮತ್ತು ಭೂತಾನ್ ನೆರೆಹೊರೆ ರಾಷ್ಟ್ರಗಳು. ಕೋವಿಡ್ ಸಮಯದಲ್ಲಿ ಭಾರತವು ಭೂತಾನ್‍ಗೆ ವ್ಯಾಕ್ಸಿನ್‌ನಿಂದ ಹಿಡಿದು ಆರೊಗ್ಯ ಉಪಕರಣಗಳು ಸೇರಿದಂತೆ ಸಾಕಷ್ಟು ಸಹಾಯ ಹಸ್ತ ನೀಡಿದೆ. ಈ ಹಿನ್ನೆಲೆ ಭೂತಾನ್ ದೇಶವು ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೆ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಡಾಗ್ ಪೆಲ್ ಗಿ ಖೋರ್ಲೋವನ್ನು( ಪ್ರದಾನ ಮಾಡಿದೆ

  ಬಾಂಗ್ಲಾದೇಶದಲ್ಲಿ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿಗಳು
  50 ವರ್ಷಗಳ ಹಿಂದೆ ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ಸೇನೆ ಧ್ವಂಸ ಮಾಡಿದ್ದ ನವೀಕರಿಸಿದ ಕಾಳಿ ಮಂದಿರವನ್ನು ಇಂದು ರಾಷ್ಟ್ರಪತಿ ರಾಮನಾಥ್​​ ಕೋವಿಂದ್​ ಉದ್ಘಾಟಿಸಿದರು. ಇಲ್ಲಿನ ಕಾಳಿ ಮಂದಿರವನ್ನು 1971ರಲ್ಲಿ ಪಾಕ್ ಸೇನೆ ಧ್ವಂಸ ಮಾಡಿತ್ತು. ಈ ದೇವಸ್ಥಾನವನ್ನು ಇದೀಗ ಮರು ನವೀಕರಿಸಲಾಗಿದೆ. ಈ ದೇವಾಲಯ ಉದ್ಘಾಟಿಸಿದ ಮಾತನಾಡಿದ ರಾಷ್ಟ್ರಪತಿಗಳು ಭಾರತ ಮತ್ತು ಬಾಂಗ್ಲಾದೇಶದ ಜನರ ನಡುವಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬಾಂಧವ್ಯದ ಸಂಕೇತವಾಗಿದೆ ಎಂದರು.

  ಪಾಕ್​ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ
  ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತದ ಹಾಕಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಆರಂಭದ ಎರಡು ಪಂದ್ಯಗಳಲ್ಲಿ ಏಳು ಬೀಳು ಕಂಡಿರುವ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿತು. ರೌಂಡ್ ರಾಬಿನ್ ಮೂರನೇ ಪಂದ್ಯದಲ್ಲಿ ಪಾಕ್​ ವಿರುದ್ಧ ಗೆದ್ದು ಹಾಲಿ ಚಾಂಪಿಯನ್​ ಭಾರತ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮ ಮಾಡಿಕೊಂಡಿದೆ.
  Published by:Seema R
  First published: