Evening Digest: ಕೈ ಶಾಸಕರ ವಿರುದ್ಧ ಸಿಡಿದೆದ್ದ ಡಿಕೆಶಿ, ಮೋದಿ ಹುಟ್ಟಿದ ದಿನವೇ ಹುಟ್ಟಿದ್ರೆ ಗೋಲ್ಡ್​ ರಿಂಗ್​ ಗಿಫ್ಟ್​; ಇಂದಿನ ಟಾಪ್‌-5 ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ವೇದಿಕೆ ಮೇಲೆ ಶಾಸಕರ ವಿರುದ್ಧ ಸಿಡಿದೆದ್ದ ಡಿಕೆಶಿ

ಬೆಂಗಳೂರು: ಕರ್ನಾಟಕದಲ್ಲಿ 21 ದಿನ ಭಾರತ್ ಜೋಡೋ ಯಾತ್ರೆ ಹಿನ್ನಲೆ ಕಾಂಗ್ರೆಸ್​ ಸಕಲ ಸಿದ್ಧತೆ ಮಾಡಿಕೊಳ್ತಿದೆ. ಅಂಬೇಡ್ಕರ್ ಭವನದಲ್ಲಿಕೆಪಿಸಿಸಿ ಪದಾಧಿಕಾರಿಗಳು ಹಾಗೂ ಕೆಪಿಸಿಸಿ ಸಂಯೋಜಕರ ಸಭೆ ನಡೆಸಲಾಯ್ತು. ಕಾಂಗ್ರೆಸ್ ‌ಪಕ್ಷದ‌ ಶಾಸಕರ ವಿರುದ್ಧ ಡಿಕೆಶಿ ವೇದಿಕೆಯಲ್ಲೇ ಗರಂ ಆದ್ರು. ನಮ್ಮಲ್ಲಿ ಕೆಲ ಶಾಸಕರು ಇದ್ದಾರೆ. ಒಂದು ದಿನ ಬಂದು ಕೆಲಸ ಮಾಡೋಕೆ ಆಗಲ್ಲ. ನಾನು ದೇಶಪಾಂಡೆ ಅವರಿಗೆ ಒಂದು ದಿನ ಜನರನ್ನ ಕಳಿಸೋಕೆ  ಕೇಳಿದೆ. ಅವರು ಆಗಲ್ಲ ಅಂದ್ರು , 5 ವರ್ಷದಲ್ಲಿ ಒಂದು ದಿನ ಅದ್ರೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡೋಕೆ ಆಗಲ್ಲ ಅಂದ್ರೆ‌ ಏನ್ಮಾಡೋದು? ಯಾವ ಎಂಎಲ್‌ಎಗೂ  ಮಾಫಿ ಮಾಡೋಕೆ ಆಗಲ್ಲ ಎಂದಿದ್ದಾರೆ.

ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಮಂಡ್ಯ (ಸೆ.16) : ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರೋ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಂಬರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ತಿಂದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ವಾಂತಿ, ಭೇದಿಯಿಂದ ಮಕ್ಕಳು ನರಳುತ್ತಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರು ಅಸ್ವಸ್ಥಗೊಂಡ ಮಕ್ಕಳಿಗೆ ಚಿಕಿತ್ಸೆ ನೀಡ್ತಿದ್ದು, ಮೇಲ್ನೋಟಕ್ಕೆ ಫುಡ್ ಪಾಯಿಸನ್  ಆಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Midday Meals: ಮಂಡ್ಯದಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ತಿರುಪತಿ ದೇವಸ್ಥಾನಕ್ಕೆ ಮುಖೇಶ್‌ ಅಂಬಾನಿ ಭೇಟಿ

ಆಂಧ್ರಪ್ರದೇಶದಲ್ಲಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ಭೇಟಿ ನೀಡಿದ್ದರು. ಅವರ ಜೊತೆಗೆ ಕಿರಿಯ ಪುತ್ರ ಅನಂತ್‌ ಅಂಬಾನಿಯವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಕೂಡಾ ಇದ್ದರು. ಆಂಧ್ರಪ್ರದೇಶದಲ್ಲಿನ ತಿರುಮಲ ತಿರುಪತಿ ದೇವಸ್ಥಾನಕ್ಕೆ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ಭೇಟಿ ನೀಡಿದ್ದರು. ಅವರ ಜೊತೆಗೆ ಕಿರಿಯ ಪುತ್ರ ಅನಂತ್‌ ಅಂಬಾನಿಯವರ ಭಾವಿ ಪತ್ನಿ ರಾಧಿಕಾ ಮರ್ಚಂಟ್ ಕೂಡಾ ಇದ್ದರು. ಶುಕ್ರವಾರ ಬೆಳಗ್ಗೆ ಅಭಿಷೇಕ ಹಾಗೂ ನಿಜಪಾದ ದರ್ಶನ ಸೇವೆಯನ್ನು ಅಂಬಾನಿ ಮಾಡಿದರು.

ಮೋದಿ ಹುಟ್ಟಿದ ದಿನವೇ ಹುಟ್ಟಿದರೆ ಚಿನ್ನದ ಉಂಗುರ ಗಿಫ್ಟ್!

ಪ್ರಧಾನಿ ಮೋದಿಯವರ 72ನೇ ಹುಟ್ಟುಹಬ್ಬಕ್ಕೆ 720 ಕೆಜಿ ಮೀನನ್ನು ಸಹ ಉಡುಗೊರೆ ನೀಡಲಾಗುವುದು ಎಂದು ಸಚಿವ ಮುರುಗನ್ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿಯವರ 72ನೇ ಹುಟ್ಟುಹಬ್ಬವಾಗಿದ್ದು ಎಂದಿಗಿಂತ ವಿಭಿನ್ನವಾಗಿ ಆಚರಿಸಲು ಭಾರತೀಯ ಜನತಾ ಪಾರ್ಟಿ ನಿರ್ಧರಿಸಿದೆ. ಸೆಪ್ಟೆಂಬರ್ 17ರಂದು ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯನ್ನಾಗಿ ನೀಡಲು ತಮಿಳುನಾಡು ಬಿಜೆಪಿ ಘಟಕ ನಿರ್ಧರಿಸಿದೆ.

ಇದನ್ನೂ ಓದಿ: Photos: ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಮುಖೇಶ್‌ ಅಂಬಾನಿ

ಬಿಗ್​ಬಾಸ್ ಒಟಿಟಿ ಫಿನಾಲೆಯಲ್ಲಿ ಕಿಚ್ಚನ ಲುಕ್!

ಬಿಗ್ ಬಾಸ್ ಕನ್ನಡ OTT 6 ವಾರಗಳ ಮನರಂಜನೆ, ಹೈಡ್ರಾಮಾ ಮತ್ತು ಸಾಕಷ್ಟು ಫನ್​ ಒಳಗೊಂಡಿದೆ. ಇದೀಗ ಗ್ರ್ಯಾಂಡ್ ಫಿನಾಲೆಯ ಸಮಯ ಸಮೀಪಿಸಿದ್ದು ಸ್ಪರ್ಧಿಗಳು ಬಿಗ್ ಡೇಗೆ ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಅವರು ಮೆರೂನ್ ಹಾಗೂ ಡಾರ್ಕ್ ಆರೆಂಜ್ ಕಲರ್ ಡ್ರೆಸ್​​ನಲ್ಲಿ ಕಾಣಿಸಿಕೊಂಡಿದ್ದು, ಸ್ಕ್ವೇರ್ ಫ್ರೇಮ್ ಗಾಗಲ್ಸ್ ಧರಿಸಿದ್ದಾರೆ. ಫಿನಾಲೆಯ ಗ್ರ್ಯಾಂಡ್ ಸ್ಟೇಜ್ ಕೂಡಾ ಪ್ರೇಕ್ಷಕರ ಮನಸು ಗೆಲ್ಲುತ್ತಿದೆ. ಅದ್ಭುತವಾಗಿ ಲೈಟಿಂಗ್ಸ್ ಸೆಟ್ ಮಾಡಲಾಗಿರುವ ಸ್ಟೇಜ್​ನಲ್ಲಿ ಕಿಚ್ಚ ಮಿಂಚಲಿದ್ದಾರೆ.
Published by:ಪಾವನ ಎಚ್ ಎಸ್
First published: