• Home
 • »
 • News
 • »
 • state
 • »
 • Evening Digest: ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್, ಬಡ್ಡಿದರ ಇಳಿಸಿದ ಎಸ್​ಬಿಐ: ಈ ದಿನದ ಸುದ್ದಿಸಾರಾಂಶ

Evening Digest: ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್, ಬಡ್ಡಿದರ ಇಳಿಸಿದ ಎಸ್​ಬಿಐ: ಈ ದಿನದ ಸುದ್ದಿಸಾರಾಂಶ

evening digest

evening digest

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳು

 • Share this:

  ಗೆಳೆಯನ ಅಗಲಿಕೆಗೆ ಸಿಎಂ ಕಣ್ಣೀರು
  ಸಿಎಂ ಬಸವರಾಜ್​ ಬೊಮ್ಮಾಯಿ ಅವರ ಸ್ನೆಹಿತರಾದ ರಾಜು (ಯಲ್ಲಪ್ಪಗೌಡ) ಬಿ. ಪಾಟೀಲ (ಬುಧವಾರ ಹೃದಯಾಘಾತದಿಂದ ನಿಧನರಾದರು. ಮೃತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುಟುಂಬ ವರ್ಗದ ಸ್ನೇಹಿತರಾಗಿದ್ದರು. ಸ್ನೇಹಿತ ರಾಜು ಪಾಟೀಲ ಅಂತಿಮ ದರ್ಶನದ ವೇಳೆ ಸಿಎಂ ಬೊಮ್ಮಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.ರಾಜು ಪಾಟೀಲ ಪಾರ್ಥಿವ ಶರೀರ ಕಂಡು ಸಿಎಂ ಕಣ್ಣೀರು ಹಾಕಿದ್ದಾರೆ. ಸಿಎಂ ಜೊತೆ ಅವರ ಕುಟುಂಬ ಸದಸ್ಯರು ಸಹ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಕಂಬಿನಿ ಮಿಡಿದಿದ್ದಾರೆ.


  ಅರಮನೆಗೆ ಆಗಮಿಸಿದ ದಸರಾ ಗಜಪಡೆ
  ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಸಂಭ್ರಮದಲ್ಲಿ ಭಾಗಿಯಾಗಲಿರುವ ಅಭಿಮನ್ಯು ಸಾರಾಥ್ಯದ ಗಜಪಡೆಗಳು ಇಂದು ಮೈಸೂರು ಅರಮನೆಗೆ ಆಗಮಿಸಿದವು. ಅಭಿಮನ್ಯು ತಂಡಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್​ ಟಿ ಸೋಮಶೇಖರ್​ ಅವರು ಬರಮಾಡಿಕೊಂಡರು. ಅರಮನೆಗೆ ಆಗಮನಕ್ಕೂ ಮುನ್ನ ದಸರಾ ಗಜಪಡೆಗಳು ಸಾಂಸ್ಕೃತಿಕ ನಗರದ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದವು.


  5 ಸಾವಿರಕ್ಕೆ ಗಂಡು ಮಗು ಮಾರಾಟ
  ಎರಡನೇ ಮಗುವನ್ನು ಸಾಕಲು ಸಾಧ್ಯವಾಗದೇ ಹೆತ್ತ ತಾಯಿಯೊಬ್ಬಳು ನವಜಾತ ಗಂಡು ಮಗುವನ್ನು ಮಾರಾಟ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 8 ದಿನದ ಗಂಡು ಮಗುವನ್ನು ಕೇವಲ ಐದು ಸಾವಿರಕ್ಕೆ ಹೆತ್ತ ತಾಯಿ ನರ್ಸ್​ ಮೂಲಕ ಮಾರಾಟ ಮಾಡಿದ್ದಾಳೆ. ಇದಾದ ಎರಡು ದಿನಗಳ ಬಳಿಕ ಮಗು ತಮಗೆ ಬೇಕು ಎಂದು ಬಂದಿದ್ದು ಆಸ್ಪತ್ರೆಗೆ ಬಂದಿದ್ದಾಳೆ. ಈ ವೇಳೆ ಮಗು ಸಿಗದಿದ್ದಾಗ ಸಹಾಯವಾಣಿ ಮೊರೆ ಹೋಗಿದ್ದು, ಪರಿಣಾಮ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


  ಪ್ಯಾಕೇಜ್​ ನೀಡಿ
  ಸರ್ಕಾರ ಜನರ ಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ಬಡವರ ಮೇಲೆ ಹೆಚ್ಚಿನ ಭಾರ ಹಾಕಬಾರದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೊರೊನಾ ವೇಳೆ ಸಾಕಷ್ಟು ಸಮಸ್ಯೆಯನ್ನು ಜನರು ಅನುಭವಿಸಿದ್ದಾರೆ. ಈಗ ಇಂಧನ ದರ ಏರಿಕೆ ಬರೆ. ಇದು ಜನರಿಗೆ ಕಷ್ಟವನ್ನುಂಟು ಮಾಡಿದೆ. ನಾನು ಸರ್ಕಾರಕ್ಕೆ ಎರಡು ಮೂರು ಬಾರಿ ಮನವಿ ಮಾಡಿದ್ದೆ.ವಿಶೇಷ ಅಧಿವೇಶನ ಕರೆಯಲು ಮನವಿ ಮಾಡಿದ್ದೆ ಎಂದರು. ಇವತ್ತು ಬೆಲೆ ಏರಿಕೆ ಬಗ್ಗೆ ಒಂದು ಪಕ್ಷದ ಅಡಿ ಚರ್ಚೆ ಮಾಡಬಾರದು ನಮ್ಮ ರಾಜಕೀಯ ಲಾಭ ನೋಡಬಾರದು ಪಕ್ಷಾತೀತವಾಗಿ ಜನರ ಕಷ್ಟ ನೋಡಬೇಕು ಪಕ್ಷದ ಹೊರತಾಗಿ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು


  ಬಡ್ಡಿದರ ಇಳಿಸಿದ ಎಸ್​ಬಿಐ
  ಬಡ್ಡಿಯನ್ನು 6.7% ಕ್ಕೆ ಇಳಿಸಿದ್ದು ಯಾವುದೇ ಲೋನ್ ಮೊತ್ತಕ್ಕೆ ಈ ಬಡ್ಡಿ ಅನ್ವಯವಾಗಲಿದೆ. ಬ್ಯಾಂಕ್, ಗೃಹ ಸಾಲವನ್ನು ಏಕರೂಪ ದರದಲ್ಲಿ ಇದೇ ಮೊದಲ ಬಾರಿಗೆ ನೀಡುತ್ತಿರುವುದಾಗಿ ಬ್ಯಾಂಕ್ ತಿಳಿಸಿದ್ದು ಹಬ್ಬದ ಸೀಸನ್‌ಗೂ ಮುಂಚಿತವಾಗಿ ಮನೆ ಖರೀದಿಸುವವರಿಗೆ ಪ್ರೋತ್ಸಾಹಿಸುವ ಗುರಿಯನ್ನು ದೇಶದ ಅತಿದೊಡ್ಡ ಬ್ಯಾಂಕ್ ಹೊಂದಿದೆ.


  ಗುಜರಾತ್​ ನೂತನ ಸರ್ಕಾರದ ಸಚಿವರ ಪ್ರಮಾಣವಚನ
  ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸರ್ಕಾರದಲ್ಲಿ 24 ಸಚಿವರು ಇಂದು ಪ್ರಮಾಣವಚನ ಸ್ವೀಕರಿಸುವ ಮೂಲಕ ಸಚಿವ ಸಂಪುಟ ಸೇರ್ಪಡೆಯಾದರು. ಇಂದು ಬೆಳಗ್ಗೆ ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಜೇಂದ್ರ ತ್ರಿವೇದಿ ಹಾಗೂ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಜಿತು ವಾಘನಿ ಅವರು ಸಹ ಸಚಿವರಾಗಿ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು.


  ಅತ್ಯಾಚಾರ ಆರೋಪಿ ಶವವಾಗಿ ಪತ್ತೆ
  ಸೆಪ್ಟೆಂಬರ್‌ 9 ರ ಗುರುವಾರದಂದು ಹೈದರಾಬಾದ್‌ನ ಸೈದಾಬಾದ್‌ನಲ್ಲಿ 6 ವರ್ಷದ ಬಾಲಕಿಯನ್ನು ನೆರೆಮನೆಯ ವ್ಯಕ್ತಿಯೊಬ್ಬ ಅತ್ಯಾಚಾರ ) ಮಾಡಿ ಕೊಂದು ಪರಾರಿಯಾಗಿದ್ದ ಘಟನೆ ದೇಶದಾದ್ಯಂತ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಆತನನ್ನು ಎನ್​ಕೌಂಟರ್​ (Encounter) ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಈ ನಡುವೆ ಆತನ ಸುಳಿವು ನೀಡುವವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಆದರೆ, ಅತ್ಯಾಚಾರ ಆರೋಪಿ ಇಂದು ತೆಲಂಗಾಣದ (Telangana) ಸ್ಟೇಷನ್ ಘನಪುರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.


  ಟಿ20 ನಾಯಕತ್ವದಿಂದ ಕೆಳಗಿಳಿದ ವಿರಾಟ್
  ಭಾರತ ಕ್ರಿಕೆಟ್ ತಂಡದಲ್ಲಿ ಸ್ಪ್ಲಿಟ್ ಕ್ಯಾಪ್ಟನ್ನಿ ಪ್ರಯೋಗ ಆಗಲಿದೆ ಎಂದು ದಟ್ಟವಾಗಿ ಹರಡಿದ್ದ ಸುದ್ದಿ ಈಗ ನಿಜವಾಗಿದೆ. ಎಲ್ಲಾ ಮೂರು ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡಗಳ ನಾಯಕರಾಗಿರುವ ವಿರಾಟ್ ಕೊಹ್ಲಿ ಇದೀಗ ಎರಡು ಮಾದರಿ ಕ್ರಿಕೆಟ್ ತಂಡಗಳಿಗೆ ಮಾತ್ರ ನಾಯಕರಾಗಿ ಮುಂದುವರಿಯಲಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಬಳಿಕ ಅವರು ಭಾರತ ಟಿ20 ತಂಡದ ನಾಯಕಸ್ಥಾನದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರವನ್ನು ಅವರು ಟ್ವಿಟ್ಟರ್ ಮೂಲಕ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರು ಭಾರತ ಟಿ20 ತಂಡದ ಬ್ಯಾಟ್ಸ್​ಮನ್ ಆಗಿ ಮುಂದುವರಿಯಲಿದ್ದಾರೆ. ಇದೇ ವೇಳೆ ಅವರು ಏಕದಿನ ಕ್ರಿಕೆಟ್ ಹಾಗೂ ಟೆಸ್ಟ್ ಕ್ರಿಕೆಟ್ ತಂಡಗಳ ನಾಯಕತ್ವದ ಜವಾಬ್ದಾರಿ ಹೊರುವುದು ಮುಂದುವರಿಯಲಿದೆ.

  Published by:Seema R
  First published: