Evening Digest: ಸದ್ಯದಲ್ಲೇ ಮನೆ ಬಾಗಿಲಿಗೆ ಪಡಿತರ; HDK ವಿರುದ್ಧ ಬಿಜೆಪಿ ನಾಯಕರು ಕೆಂಡಾಮಂಡಲ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಸದ್ಯದಲ್ಲೇ ಮನೆ ಬಾಗಿಲಿಗೆ ಪಡಿತರ : ರಾಜ್ಯಾದ್ಯಂತ ಜನವರಿಯಿಂದ ಮನೆ ಬಾಗಿಲಿಗೆ ಪಡಿತರ ಧಾನ್ಯ (Ration to Doorsteps ) ಲಭ್ಯವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai)  ಘೋಷಿಸಿದರು. ಜ.26 ರಂದು ರಾಜ್ಯದಲ್ಲಿ ಮನೆ ಬಾಗಿಲಿಗೆ ಪಡಿತರ ಧಾನ್ಯ ಯೋಜನೆಗೆ ಚಾಲನೆ ನೀಡುವ ವಿಶ್ವಾಸವಿದೆ. ಸಾಮಾಜಿಕ ಭದ್ರತೆ ಪ್ರತಿ ಮನೆಗೆ ಬರಬೇಕು.ಇದಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು. ಸುರಹೊನ್ನೆಯಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಅಧಿಕಾರಿಗಳು ನಗರ ಬಿಟ್ಟು ಹಳ್ಳಿಗಳ ಕಡೆಗೆ ತೆರಳಬೇಕು. ಅದಕ್ಕಾಗಿ ನವೆಂಬರ್ ನಲ್ಲಿ ಜನ ಸೇವಕ ಪ್ರಾಯೋಗಿಕ ಕಾರ್ಯಕ್ರಮ ಮಾಡಲಾಗುವುದು. ಸಿಎಂ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಗ್ರಾಮದ ಅಧಿಕಾರಿಗಳ ಬದಲಾವಣೆಯಾಗಬೇಕಿದೆ.ಎಲ್ಲ ಸೌಲಭ್ಯಗಳು ಗ್ರಾಮೀಣ ಜನರ ಮನೆ ಬಾಗಿಲಿಗೆ ಸಿಗಬೇಕು ಎಂದರು.

RSS ವಿರುದ್ಧ HDK ನಿರಂತರ ವಾಗ್ದಾಳಿ ಮರ್ಮವೇನು?

ರಾಮಮಂದಿರ ದೇಣಿಗೆ ಸಂಗ್ರಹದ ಲೆಕ್ಕ ಕೇಳಿ, RSS ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ (HD Kumaraswamy ) ವಿರುದ್ಧ ರಾಜ್ಯ ಬಿಜೆಪಿ ನಾಯಕರು ಕೆರಳಿ ಕೆಂಡವಾಗಿದ್ದಾರೆ. RSS ಬಗ್ಗೆ ಮಾತನಾಡಿರುವುದರ ವಿರುದ್ಧ ಬಿಜೆಪಿ ನಾಯಕರಾದ ನಳೀನ್​ ಕುಮಾರ್​​ ಕಟೀಲ್ (nalinkumar katil)​, ರೇಣುಕಾಚಾರ್ಯ (M. P. Renukacharya) , ಸಿಟಿ ರವಿ (CT Ravi) ಹಾಗೂ ಆರ್​.ಅಶೋಕ್​ (R.Ashok) ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನೀವು RSS ಮತ್ತು ಸಂಘ ಪರಿವಾರದ ಬಗ್ಗೆ ಮಾತನಾಡಿದ್ರೆ ಸರ್ವನಾಶಾವಾಗುತ್ತೀರಿ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದರು. RSSನವರು ದೇಶ ವಿರೋಧಿಗಳಾ, ಅವರು ದೇಶಕ್ಕಾಗಿ ಸಮರ್ಪಿಸಿಕೊಂಡವರು. ಅವರಿಗೆ ಭಯೋತ್ಪಾದಕರ ಸ್ಥಾನ ಕೊಡಬೇಕಾ? ನೀವು ಮಾನಸಿಕ ಅಸ್ವಸ್ಥರಾಗಿದ್ದೀರೀ, ಅದಕ್ಕೆ ಹುಚ್ಚುಚ್ಚಾಗಿ ಮಾತನಾಡುತ್ತೀರಿ. ಇನ್ನು ಮುಂದೆಯಾದರೂ ಮಾತನಾಡವುದನ್ನ ಬಿಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ನಮಗೆ RSS ಸಂಸ್ಕಾರ ಕಲಿಸಿದೆ ಹೀಗಾಗಿ, ನಮಗೆ ಅದೇ ಸರ್ವಸ್ವ ಎಂದರು.

ಕಾಂಗ್ರೆಸ್​ಗೆ ಬಹುಮತ ಬಂದರೆ ಡಿಕೆಶಿಗೆ ನಷ್ಟ, ಸಿದ್ದರಾಮಯ್ಯಗೆ ಲಾಭ

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಜೋಡೆತ್ತುಗಳಂತೆ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್​ನ ಹಲವು ನಾಯಕರು ಆಗಾಗ ಹೇಳಿಕೆಗಳನ್ನು ಕೊಟ್ಟರೂ, ಎಲ್ಲರಿಗೂ ತಿಳಿದಿರುವ ಸತ್ಯ ಅದು ಅಸಾಧ್ಯ ಎಂಬುದು. ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಕುರ್ಚಿಯ ಮೇಲೆ ಆಸೆ ಚೆಲ್ಲಿಲ್ಲ, ಡಿಕೆ ಶಿವಕುಮಾರ್​ ಕೂಡ ಈ ಬಾರಿ ಮುಖ್ಯಮಂತ್ರಿ ಆಗಲೇ ಬೇಕು ಎಂದು ಪಣ ತೊಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಉಗ್ರಪ್ಪ ಮತ್ತು ಸಲೀಂ ನಡುವಿನ ಮಾತುಕತೆ ಬೆಳಕಿಗೆ ಬಂದಿದೆ ಎಂದು ಕಾಂಗ್ರೆಸ್​ ಪಕ್ಷದೊಳಗೇ ಪಿಸುಮಾತಿದೆ. ಡಿಕೆ ಶಿವಕುಮಾರ್​ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ ತಮ್ಮ ಆಪ್ತರಾದ MB Patil​ ಅಥವಾ Satish Jarakiholi ಅವರನ್ನು ಕೂರಿಸಲು ಸಿದ್ದರಾಮಯ್ಯ ಸತತವಾಗಿ ಪ್ರಯತ್ನ ಪಡುತ್ತಿದ್ದಾರೆ ಎಂದೂ ಆರೋಪಗಳಿವೆ.

ಬಾಂಗ್ಲಾದೇಶದಲ್ಲಿ ಇಸ್ಕಾನ್ ದೇಗುಲದ ಮೇಲೆ ದಾಳಿ

ಬಾಂಗ್ಲಾದೇಶ (Bangladesh)ದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ನಿಲ್ಲುತ್ತಿಲ್ಲ. ಶುಕ್ರವಾರ ದಾಳಿಕೋರರ ಗುಂಪು ಇಸ್ಕಾನ್ (ISKCON) ಮಂದಿರದಲ್ಲಿ ವಿಧ್ವಂಸಕ ಕೃತ್ಯ ಎಸಗಿದೆ. ಸುಮಾರು 200 ಜನರ ಗುಂಪು ಇಸ್ಕಾನ್ ದೇಗುಲಕ್ಕೆ ನುಗ್ಗಿತ್ತು. ಇಲ್ಲಿಯ ಓರ್ವ ಸಿಬ್ಬಂದಿಯನ್ನು ಮನಸೋಇಚ್ಛೆ ಥಳಿಸಿ ಕೊಲ್ಲಲಾಯ್ತು. ನಂತರ ಶವವನ್ನು ಮಂದಿರದ ವ್ಯಾಪ್ತಿಯಲ್ಲಿನ ಕೆರೆಯಲ್ಲಿ ಎಸೆಯಲಾಯ್ತು ಎಂದು ಇಸ್ಕಾನ್ ದೇವಸ್ಥಾನದ ಸಮಿತಿ ಮಾಹಿತಿ ನೀಡಿದೆ. ಶುಕ್ರವಾರ ನಾವೋಖಾಲಿ ಜಿಲ್ಲೆಯ ಬೇಗಂಗಂಜ್ ಇಲಾಖೆಯಲ್ಲಿ ಈ ದಾಳಿ ನಡೆದಿದ್ದು, ಮೃತನನ್ನು ಸಾಹಾ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ ಸುಮಾರು 17 ಜನರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಅಡುಗೆ ಎಣ್ಣೆ ಬೆಲೆ ಮತ್ತಷ್ಟು ಅಗ್ಗ

ಕೇಂದ್ರ ಸರ್ಕಾರವು(Central Government) ಅಕ್ಟೋಬರ್ 14 ರಿಂದ ಮಾರ್ಚ್ 31, 2022 ರವರೆಗೆ ಕಚ್ಚಾ(Crud) ಮತ್ತು ಸಂಸ್ಕರಿಸಿದ(Refined) ಪಾಮ್ ಎಣ್ಣೆ(Palm Oil), ಸೋಯಾಬೀನ್ ಎಣ್ಣೆ(Soybean oil) ಹಾಗೂ ಸೂರ್ಯಕಾಂತಿ ಎಣ್ಣೆ(Sunflower oil)ಯ ಆಮದು ಸುಂಕವನ್ನು 16.5 ಶೇಕಡದಿಂದ 19.25 ಪ್ರತಿಶತಕ್ಕೆ ಇಳಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು(Consumers) ಕೊಂಚ ನೆಮ್ಮದಿಯನ್ನು ಅನುಭವಿಸುವಂತಾಗಿದೆ. ಕಳೆದ ಒಂದು ವರ್ಷದಿಂದ ಬೆಲೆ ಏರಿಕೆ ಬಿಸಿಯಿಂದ ಬಳಲಿದ್ದ ಗ್ರಾಹಕನಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಾಲು ಹಬ್ಬಗಳ ಸಂಭ್ರಮದ ನಡುವೆ ಸರ್ಕಾರವು ಅಡುಗೆ ಎಣ್ಣೆ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಿದೆ. ಹೆಚ್ಚಿದ ಬೇಡಿಕೆಯಿಂದಲೇ ಸೆಪ್ಟೆಂಬರ್ ತಿಂಗಳೊಂದರಲ್ಲೇ ಪಾಮ್ ಆಯಿಲ್ ಆಮದು 25 ವರ್ಷಗಳ ಗರಿಷ್ಠ ಮಿತಿಯನ್ನು ತಲುಪಿದೆ.
Published by:Kavya V
First published: