Evening Digest: ಮತ್ತೆ ಸೆಂಚೂರಿ ಬಾರಿಸಲಿದೆ ಟೊಮೆಟೊ ರೇಟ್; ಉತ್ತರ ಪ್ರದೇಶದಲ್ಲಿ ಹೆಚ್ಚಿದ ಡೆಂಗ್ಯೂ ಕೇಸ್​​: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಮತ್ತೆ ಸೆಂಚೂರಿ ಬಾರಿಸಲಿದೆ ಟೊಮೆಟೊ ರೇಟ್

  ಮಳೆಯಾದ್ರೆ ಟೊಮೆಟೊ ರೇಟ್​​ ಗಗನಕ್ಕೇರುತ್ತೆ. ಕಳೆದ ಬಾರಿ,  100ರ ಗಡಿ ದಾಟಿದ್ದ ಟೊಮೆಟೋ ಈ ಬಾರಿಯೂ ಕೂಡ ಸೆಂಚೂರಿ  ಬಾರಿಸಲು ಸಿದ್ಧವಾಗ್ತಿದೆ.  ರಾಜ್ಯದ ಹಲವೆಡೆ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೊ ಬೆಳೆ ಬಹುತೇಕ ಹಾಳಾಗಿದ್ದು, ಮಾರುಕಟ್ಟೆಗೆ ಪೂರೈಕೆ ಇಲ್ಲದೆ ಕಳೆದೊಂದು ವಾರದಿಂದ ದರ ದಿನೇ ದಿನೆ ಏರುತ್ತಿದೆ. ಕೆಲವೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಬಿಸಿಲ ಬೇಗೆ ಹಿನ್ನೆಲೆಯಲ್ಲಿ ಟೊಮ್ಯಾಟೊ ಫಸಲು ಕುಸಿತಗೊಂಡಿದೆ. ಜತೆಗೆ ಬೀನ್ಸ್ನ ಹೂ ಮತ್ತು ಕಾಯಿ ಉದುರಿದ್ದು ತೀವ ನಷ್ಟವಾಗಿದೆ. ಪರಿಣಾಮ ದಿಢೀರ್ ಬೆಲೆ ಏರಿಕೆಯಾಗಿದೆ.

  ಉತ್ತರ ಪ್ರದೇಶದಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ! ಹೈ ಅಲರ್ಟ್

  ಕೇರಳದಲ್ಲಿ ಟೊಮೆಟೋ ಜ್ವರ ಕಾಣಿಸಿಕೊಂಡ ನಂತರ ಇದೀಗ ಉತ್ತರ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಮಳೆಗಾಲದ ಮುನ್ನ ಡೆಂಗ್ಯೂ  ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಉತ್ತರ ಪ್ರದೇಶದ ಆರೋಗ್ಯ ಅಧಿಕಾರಿಗಳನ್ನು ಅಲರ್ಟ್ ಮಾಡಿದೆ. ಉತ್ತರ ಪ್ರದೇಶವು ಡೆಂಗ್ಯೂ ಹರಡುವಿಕೆಯನ್ನು ಎದುರಿಸಲು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯವನ್ನು ಹೊಂದಿದೆ ಆದರೆ ತಡೆಗಟ್ಟುವ ಕೀಲಿಯು ಜನರ ಕೈಯಲ್ಲಿದೆ ಎಂದು ರಾಜ್ಯದ ಆರೋಗ್ಯ ಮಹಾನಿರ್ದೇಶಕ ವೇದವ್ರತ ಸಿಂಗ್ ಹೇಳಿದರು. ರಾಜ್ಯದಲ್ಲಿ ಸದ್ಯಕ್ಕೆ 70 ಲ್ಯಾಬ್‌ಗಳಲ್ಲಿ ಡೆಂಗ್ಯೂ ಪರೀಕ್ಷೆ ಸೌಲಭ್ಯವಿದ್ದು, ಇನ್ನೂ 88 ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬ್ಲಾಕ್ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರಚಿಸಲಾಗಿದ್ದು, ಅವರು ತಕ್ಷಣ ಕ್ರಮ ಕೈಗೊಳ್ಳುತ್ತಾರೆ.

  2 ಸಾಲಿನಲ್ಲಿ ಮುಗಿದು ಹೋಗುತ್ತೆ ಟಿಪ್ಪು ಪಾಠ

  ರಾಜ್ಯ ರಾಜಕೀಯದಲ್ಲಿ ಕೆಸರೆರೆಚಾಟಕ್ಕೆ ಹಾಗೂ ಭಾರೀ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಪಠ್ಯ ಪುಸ್ತಕದಲ್ಲಿನ ಗೊಂದಲಕ್ಕೆ ಸರ್ಕಾರ ಇದೀಗ ತೆರೆ ಎಳೆದಿದೆ. ಶಾಲಾ ಪುಸ್ತಕದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್​ ಬಿದ್ದಿದ್ದು, 2ನೇ ಎರಡೇ ಎರಡು ಸಾಲಿನಲ್ಲಿ ಟಿಪ್ಪು ಕುರಿತ ಪಾಠ ಮುಕ್ತಾಯವಾಗುತ್ತದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂಬ ಬಿರುದನ್ನು ಕೂಡ ಕಡಿತ ಮಾಡಲಾಗುತ್ತದೆ. ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಬಳಸಿಲ್ಲ, ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು. ಆದ್ರೆ ಈ ಬಾರಿ ಮೈಸೂರು ವಿಭಾಗದಲ್ಲಿ ಪಠ್ಯದಲ್ಲಿದ್ದ ಟಿಪ್ಪು ವೈಭವೀಕರಣಕ್ಕೆ ಕತ್ತರಿ ಬಿದ್ದಿದೆ.

  'ಪಕ್ಷಪುಸ್ತಕ'ಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರ

  ಬೆಂಗಳೂರು (ಮೇ 17): ಈ ಬಾರಿ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯ  ಪುಸ್ತಕದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೆಲವು ಪಠ್ಯ ಹಾಗೂ ವಿಚಾರಗಳನ್ನು ಕೈ ಬಿಡಲಾಗಿದ್ದು,  ಕೆಲವು ಪ್ರಮುಖ ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆ. ಇನ್ನು ಭಾರೀ ವಿವಾದ ಸೃಷ್ಟಿಸಿದ್ದ ಟಿಪ್ಪು ಸುಲ್ತಾನ್ ವೈಭವೀಕರಣವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕಲಾಗಿದೆ. ಟಿಪ್ಪು ಪಾಠವನ್ನು 2 ಸಾಲಿನಲ್ಲಿ ಹೇಳಿ ಮುಗಿಸಿದ್ದಾರೆ. ಪಠ್ಯ ಪುಸ್ತಕದಲ್ಲಿ ಟಿಪ್ಪು ಪಾಠ ಕಡಿತಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ.  ಮಾಜಿ ಸಿಎಂ ಕುಮಾರಸ್ವಾಮಿ ಅವರು ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ಸರಣಿ ಟ್ವೀಟ್​ ಮಾಡುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

   ಅಸ್ಸಾಂನಲ್ಲಿ ಪ್ರವಾಹ, ಜನಜೀವನ ಅಸ್ತವ್ಯಸ್ತ

  ದೇಶಾದ್ಯಂತ ಒಂದಷ್ಟು ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿದ್ದರೆ ಇನ್ನೊಂದಷ್ಟು ಪ್ರದೇಶಗಳಲ್ಲಿ ವಿಪರೀತ ಬಿಸಿಲು ಅನುಭವಕ್ಕೆ ಬರುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಸಿಲು ಹೆಚ್ಚಾಗಿದ್ದರೆ ಇತ್ತ ಬೆಂಗಳೂರಿನಲ್ಲಿ ಮಳೆ ಶುರುವಾಗಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿಯೂ ಈಗಾಗಲೇ ಮಳೆ ಆರಂಭವಾಗಿದ್ದು ಅಸ್ಸಾಂ ಮಾತ್ರ ಹೆಚ್ಚಿನ ಮಳೆಯಿಂದ ತತ್ತರಿಸುತ್ತಿದೆ. ಅಸ್ಸಾಂನಲ್ಲಿ ಸಾವಿರಕ್ಕೂ ಹೆಚ್ಚು ಜನರು ತೊಂದರೆಗೊಳಗಾಗಿದ್ದು ಈಗಾಗಲೇ ಏರ್​ಫೋರ್ಸ್​ನ ಚಾಪರ್​ಗಳು ರಕ್ಷಣಾ ಕಾರ್ಯಾಚರಣೆಗೆ ಆಗಮಿಸಿವೆ.
  Published by:Pavana HS
  First published: