Evening Digest: ನಾಳೆ ಕರ್ನಾಟಕ ಬಂದ್ ಆಗುತ್ತಾ? ಏಪ್ರಿಲ್ ನಲ್ಲಿ ಕೊರೊನಾ 4ನೇ ಅಲೆ ಬರುತ್ತಾ?: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ನಾಳೆ ಕರ್ನಾಟಕ ಬಂದ್​ ಆಗುತ್ತಾ? ಹಿಜಾಬ್ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಶಾಲಾ-ಕಾಲೇಜುಗಳಲ್ಲಿ ಧರ್ಮವಸ್ತ್ರ ಕಡ್ಡಾಯ ಅಲ್ಲ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ (Karnataka High court) ಮಹತ್ವದ ತೀರ್ಪನ್ನು ನೀಡಿದೆ. ಕರ್ನಾಟಕ ಉಚ್ಛ ನ್ಯಾಯಾಲಯ ಹಿಜಾಬ್‌ ಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಬಗ್ಗೆ ವಿಷಾದ ವ್ಯಕ್ತಪಡಿಸಿ ಅಮೀರ್-ಇ-ಶರಿಯತ್ ನಾಳೆ 17ನೇ ಮಾರ್ಚ್ 2022 ಗುರುವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಈ ನಿಷೇಧವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿನಂತಿಸಿಕೊಂಡಿದೆ. ತ್ರಿ ಸದಸ್ಯ ನ್ಯಾಯಪೀಠ, ಫೆಬ್ರವರಿ 5ರಂದು ಸರ್ಕಾರದ (Government Order) ಏಕರೂಪ ಸಮವಸ್ತ್ರ (Uniform) ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿದ್ದು, ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯ ಒಟ್ಟು 129 ಪುಟಗಳ ತೀರ್ಪು ಪ್ರಕಟಿಸಿದೆ.

ಏಪ್ರಿಲ್ ನಲ್ಲಿ ಕೊರೊನಾ 4ನೇ ಅಲೆ ಬರುತ್ತಾ?

ಇಂದಿನಿಂದ 12 ರಿಂದ 14 ವರ್ಷದ ಮಕ್ಕಳಿಗೆ ಹೈದರಾಬಾದ್ ಬಯೋಲಾಜಿಕಲ್ ಸಂಸ್ಥೆ ಅಭಿವೃದ್ದಿ ಪಡಿಸಿರುವ ‘ಕೊರ್ಬೆವ್ಯಾಕ್ಸ್’ ಲಸಿಕೆ (Corbevax vaccine) ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಇಂದು ಬೆಳಗ್ಗೆ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿ ವ್ಯಾಕ್ಸಿನೇಷನ್ ಅಭಿಯಾನಕ್ಕೆ (Vaccination Campaign) ಅಧಿಕೃತವಾಗಿ ಚಾಲನೆ ನೀಡಲಾಯ್ತು. ರಾಜ್ಯಾದ್ಯಂತ ಸುಮಾರು 20 ಲಕ್ಷಕ್ಕೂ ಹೆಚ್ಚು ಚಿಣ್ಣರಿಗೆ ‘ಕೊರ್ಬಿವ್ಯಾಕ್ಸ್’ ಲಸಿಕೆ ನೀಡಲಾಗುತ್ತದೆ. ರಾಜಧಾನಿಯಲ್ಲಿ 6-7 ಲಕ್ಷ ಮಕ್ಕಳಿಗೆ (Children) ಕೊರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತದೆ. 2008, 2009, 2010 ರಲ್ಲಿ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.  ಎಲ್ಲಾ ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಕೇಂದ್ರ ಆರಂಭಿಸಲಾಗಿದೆ.

ಗ್ಯಾಂಗ್ ರೇಪ್ ಆರೋಪಿಯ ಎನ್​ಕೌಂಟರ್

ಎಷ್ಟೇ ಕಠಿಣ ಕಾನೂನೂಗಳು ಬಂದರೂ ಅತ್ಯಾಚಾರ (Rape) ಘಟನೆಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಬಹಳಷ್ಟು ಘಟನೆಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಕೇರಳದಲ್ಲಿ (Kerala) ಪುಟ್ಟ ಬಾಲಕಿ ತಂದೆಯಿಂದಲೇ ಗರ್ಭಿಣಿಯಾದ (Pregnant) ಘಟನೆಯಂತೂ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಮನೆಯ ಹೊರಗೆಯೋ ಒಳಗೆಯೋ ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ (Assault) ಒಳಗಾಗುವ ಘಟನೆ ನಡೆಯುತ್ತಲೇ ಇದೆ. ಇದೀಗ ಅಸ್ಸಾಂನಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದವನು ಪೊಲೀಸರು ಗುಂಡೇಟಿಗೆ ಬಲಿಯಾಗಿದ್ದಾನೆ. ಮಂಗಳವಾರ ರಾತ್ರಿ ಗುವಾಹಟಿಯ ಹೊರವಲಯದಲ್ಲಿ ಅತ್ಯಾಚಾರ ಆರೋಪಿಯೊಬ್ಬ ಹತ್ಯೆಗೀಡಾಗಿದ್ದು, ಅಪರಾಧ ಸ್ಥಳದ ಮರುನಿರ್ಮಾಣಕ್ಕಾಗಿ ತನ್ನೊಂದಿಗೆ ಬಂದಿದ್ದ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿ ಕಸ್ಟಡಿಯಿಂದ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹತ್ಯೆ ಮಾಡಲಾಗಿದೆ ಎಂದು ವಿಷಯ ತಿಳಿದ ಜನರು ತಿಳಿಸಿದ್ದಾರೆ.

Social Media ವಿರುದ್ಧ ಸಿಡಿದೆದ್ದ ಸೋನಿಯಾ!

ಇತ್ತೀಚಿಗಿನ ಪಂಚರಾಜ್ಯ ಚುನಾವಣೆಯಲ್ಲಿ (Election Results) ಕಾಂಗ್ರೆಸ್​​​ (Congress) ಹೀನಾಯ ಸೋಲನ್ನು ಕಂಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಸಾಮಾಜಿಕ ಜಾಲಗಳನ್ನು (Social Media) ಸದನದಲ್ಲಿ ದೂರಿದ್ದಾರೆ. ದೇಶದ ಚುನಾವಣಾ ರಾಜಕೀಯದ ಮೇಲೆ ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳು ವ್ಯವಸ್ಥಿತ ಹಸ್ತಕ್ಷೇಪವನ್ನು ಮಾಡುತ್ತಿವೆ, ಅದನ್ನು ಕೊನೆಗೊಳಿಸಬೇಕು ಎಂದು ಸೋನಿಯಾ ಗಾಂಧಿ ಬುಧವಾರ ಕೇಂದ್ರ ಸರ್ಕಾರವ(Central government)ನ್ನು ಒತ್ತಾಯಿಸಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಸೋನಿಯಾ, ಭಾರತೀಯ ಜನತಾ ಪಕ್ಷದ ಹೆಸರನ್ನು ಹೇಳದೆ, ಆಡಳಿತ ಮಂಡಳಿಯ ಕುತಂತ್ರ ಮಾಡುತ್ತಿದೆ ಎಂದು ಆಪಾದಿಸಿದರು. ಫೇಸ್‌ಬುಕ್‌ನಿಂದ ಸಾಮಾಜಿಕ ಸಾಮರಸ್ಯ ಕದಡುತ್ತಿದೆ ಎಂದು ಆರೋಪಿಸಿದರು. ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ (BJP) ಚುನಾವಣಾ ಜಾಹೀರಾತುಗಳಿಗೆ ಫೇಸ್‌ಬುಕ್ ಅಗ್ಗದ ಕೊಡುಗೆಗಳನ್ನು ನೀಡಿದೆ ಎಂದು ಅಲ್ ಜಜೀರಾ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್‌ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ ಸೋನಿಯಾ, "ಯಾರೇ ಅಧಿಕಾರದಲ್ಲಿದ್ದರೂ ನಾವು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ರಕ್ಷಿಸಬೇಕಾಗಿದೆ" ಎಂದರು.

`ಜೇಮ್ಸ್​​ ಸ್ಪೆಷಲ್​ ಶೋಗಳು ಕ್ಯಾನ್ಸಲ್​.. ಅಪ್ಪು ಅಭಿಮಾನಿಗಳಿಗೆ ತೀವ್ರ ಬೇಸರ!

ಜೇಮ್ಸ್’(James) ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ಅಭಿಮಾನಿಗಳು ನಿದ್ದೆ ಬಿಟ್ಟು ಕಾಯುತ್ತಿರುವ ಸಿನಿಮಾ. ಬೆಳ್ಳಿ ತೆರೆ ಮೇಲೆ ‘ಜೇಮ್ಸ್’ ಅಬ್ಬರಿಸೋಕೆ ಕೆಲವೇ ಗಂಟೆಗಳು ಬಾಕಿ ಇದ್ದು, ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ಹೌಸ್ ಪುಲ್ ಬೋರ್ಡ್(Houseful Board) ರಾರಾಜಿಸುವದಂತೂ ಪಕ್ಕಾ ಆಗಿದೆ. ಆದರೆ, ಇದೀಗ ಅಪ್ಪು ಅಭಿಮಾನಿಗಳಿಗೆ ಒಂದು ವಿಚಾರ ಬೇಸರ ಮೂಡಿಸಿದೆ. ನಾಳೆ ಕರ್ನಾಟಕ ಬಂದ್(Karnataka Bundh)​ಗೆ ಹಲವು ಸಂಘಟನೆಗಳು ಕರೆಕೊಟ್ಟಿವೆ. ಇದರಿಂದ ರಾಜ್ಯದಲ್ಲಿ 144 ಸೆಕ್ಷೆನ್​ ಮೊದಲಿನಿಂದಲೂ ಇದೆ. ಇದೀಗ ಏಕಾಏಕಿ 144 ಸೆಕ್ಷನ್ ಹಿನ್ನೆಲೆ ಜೇಮ್ಸ್(James)  ಚಿತ್ರದ ಮಧ್ಯರಾತ್ರಿ ಶೋಗಳು ಕ್ಯಾನ್ಸಲ್​(Mid Night Show Cancel) ಆಗಿದೆ. ಜಾಲಹಳ್ಳಿ ರಸ್ತೆಯ ರಾಕ್ ಲೈನ್ ಮಾಲ್(Rockline Mall)​ನಲ್ಲಿ ತಡರಾತ್ರಿ 9 ಶೋ ಗಳ ಟಿಕೆಟ್ ಬುಕ್ ಆಗಿದ್ದವು. ಈಗ ಮಧ್ಯರಾತ್ರಿ1:30ಕ್ಕೆ ಆರಂಭವಾಗ ಬೇಕಿದ್ದ ಶೋ ಗಳು ಕ್ಯಾನ್ಸಲ್ ಆಗಿದೆ. ರಾಜ್ಯಾದ್ಯಂತ ಬೆಳಗ್ಗೆ 6 ಗಂಟೆಗೆ ಜೇಮ್ಸ್ ಮೊದಲ ಪ್ರದರ್ಶನ ಆರಂಭವಾಗಲಿದೆ. ರಾಜ್ಯದಲ್ಲಿ ನಾಳೆ ಬಂದ್​ ಮಾಡುವಂತೆ ಹಲವು ಮುಸ್ಲಿಂ ಸಮುದಾಯದವರು ಕರೆ ಕೊಟ್ಟಿದ್ದಾರೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಮಧ್ಯರಾತ್ರಿ ಶೋಗಳನ್ನು ಕ್ಯಾನ್ಸಲ್​ ಮಾಡಲಾಗಿದೆ. ನಾಳೆ ಬೆಳಗ್ಗೆ  6 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಆದರೆ, ರಾಜ್ಯಾದ್ಯಂತ ಈಗಾಗಲೇ ತಡರಾತ್ರಿ ಶೋಗಳು ಬುಕ್​ ಆಗಿದ್ದು, ಅಭಿಮಾನಿಗಳು ಜೇಮ್ಸ್​ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.
Published by:Kavya V
First published: