• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: ಅಪ್ಪು ಮನೆ ತೊರೆದ ಬಾಡಿಗಾರ್ಡ್, ಸಿದ್ದು ವಿರುದ್ಧ ಸಿಟಿ ರವಿ ವಾಗ್ದಾಳಿ! ಅತ್ತ ATMನಲ್ಲಿ ಬಂತು ಡಬಲ್ ದುಡ್ಡು!

Evening Digest: ಅಪ್ಪು ಮನೆ ತೊರೆದ ಬಾಡಿಗಾರ್ಡ್, ಸಿದ್ದು ವಿರುದ್ಧ ಸಿಟಿ ರವಿ ವಾಗ್ದಾಳಿ! ಅತ್ತ ATMನಲ್ಲಿ ಬಂತು ಡಬಲ್ ದುಡ್ಡು!

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

  • Share this:

ಅಪ್ಪು ಇಲ್ಲದ ಅರಮನೆ ತೊರೆದ ಪವರ್ ಸ್ಟಾರ್ ಸೈನಿಕ ಚಲಪತಿ


ಸರಳತೆಯ ಸಾಮ್ರಾಟ ಪವರ್ ಸ್ಟಾರ್​ನ (Power Star Puneeth Rajkumar) ಕಳೆದಕೊಂಡ ನೋವಲ್ಲಿ ಅದೇಷ್ಟೋ ಹೃದಯಗಳು ಇಂದಿಗೂ ಮಿಡಿಯುತ್ತಿವೆ. ಅಂತ ಹೃದಯಗಳಲ್ಲಿ ಚಲಪತಿ (Chalapati) ಅನ್ನೋ ಹೃದಯ ಒಂದು. ಚಲಪತಿ ಈ ಹೆಸರು ಅಪ್ಪು (Appu) ಅಭಿಮಾನಿಗಳಿಗೆ ಹೊಸದೇನಲ್ಲ. ಯಾಕಂದ್ರೆ ಅಪ್ಪುಎಂಬ ಅಭಿಮಾನಿಗಳ (Fans) ದೇವರನ್ನು  ಹನುಮಂತನ ರೀತಿ ಕಾಯ್ತಿದ್ದದ್ದೆ ಈ ಚಲಪತಿ. ಅಪ್ಪುಗೆ  ಬಹಳಷ್ಟು ವರ್ಷಗಳು ಗನ್ ಮ್ಯಾನ್ ಆಗಿ ಕಾಯಕ ಮಾಡಿದ್ದ ಚಲಪತಿ ಈಗ ರಾಜಕುಮಾರನಿಲ್ಲದ ಅರಮನೆಯನ್ನು ಭಾರದ ಮನ್ಸಸ್ಸಿ ನಿಂದಲೇ ಬಿಟ್ಟು ಹೋಗಿದ್ದಾರೆ. ಅಲ್ಲದೆ ಇನ್ಮುಂದೆ ಚಿತ್ರರಂಗದಲ್ಲಿ ಕಾಯಕ ಮಾಡೊದಿಲ್ಲ ಅಂತ ಶಪಥ ಮಾಡಿದ್ದಾರೆ.


ನಾಳಿನ ವಿಚಾರಣೆಯಿಂದ ವಿನಾಯಿತಿ ನೀಡಿ ಅಂತ ರಾಹುಲ್ ಗಾಂಧಿ ಮನವಿ


ನವದೆಹಲಿ, ಜೂ. 16: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹಾಗೂ ಅವರ ಪುತ್ರ, ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಫೆಡರಲ್ ಏಜೆನ್ಸಿ ಮುಂದೆ ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು.‌ ಕೊವಿಡ್ ಪಾಸಿಟಿವ್ (Covid Positive) ಆದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಅವರು ವಿಚಾರಣೆಯಿಂದ ವಿನಾಯಿತಿ ಪಡೆದಿದ್ದಾರೆ. ಆದರೆ ರಾಹುಲ್ ಗಾಂಧಿ ಅವರು ಜೂನ್ 13ರಿಂದ ನಿರಂತರವಾಗಿ 3 ದಿನ ಇಡಿ ಅಧಿಕಾರಿಗಳ ವಿಚಾರಣೆ ಎದುರಿಸಿದ್ದಾರೆ. 3 ದಿನದ ಬಳಿಕ ಇಂದು ಒಂದು ದಿನದ ವಿನಾಯಿತಿ ಸಿಕ್ಕಿದ್ದು ನಾಳೆ ಅಂದರೆ, ಜೂನ್ 17ರಂದು ಮತ್ತೆ ವಿಚಾರಣೆಗೆ ಬರುವಂತೆ ಅವರಿಗೆ ಸೂಚನೆ ನೀಡಲಾಗಿದೆ‌. ಆದರೆ ರಾಹುಲ್ ಗಾಂಧಿ ಅವರು ನಾಳೆಯ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: National Herald Case: ನಾಳಿನ ವಿಚಾರಣೆಯಿಂದ ವಿನಾಯಿತಿ ನೀಡಿ ಅಂತ ರಾಹುಲ್ ಗಾಂಧಿ ಮನವಿ, ಅಸ್ತು ಎಂದ್ರಾ ಇಡಿ ಅಧಿಕಾರಿಗಳು?


ಸಿದ್ಧರಾಮಯ್ಯ ಎಡಬಿಡಂಗಿ - ಸಿಟಿ ರವಿ ವಾಗ್ದಾಳಿ


ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಎಡಬಿಡಂಗಿ. ದೇವನೊಬ್ಬ ನಾಮ ಹಲವು ಅನ್ನೋದು ನಮ್ಮ ತತ್ವ. ದೇವರನ್ನು ಯಾವ ರೀತಿಯಲ್ಲಾದ್ರೂ ಪೂಜಿಸಬಹುದು ಎಂಬುದು ಸನಾತನ ಧರ್ಮದ ಮೂಲ ತಿರುಳು. ನಾನು ಸಿದ್ದರಾಮಯ್ಯ (Siddaramaiah) ಹೇಳಿಕೆ ಗಮನಿಸಿದೆ. ರಾಮ, ಶಿವ, ಕೃಷ್ಣ ಎಲ್ಲರೂ ಶೂದ್ರ ದೇವತೆಗಳು, ಅವರೆಲ್ಲಾ ಇಂದ್ರನ ವಿರುದ್ಧ ಬಂಡಾಯ ಎದ್ದವರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅವರು ಯಾವ ಪುಸ್ತಕ ಓದಿ ಹೀಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ. ಸಿದ್ದರಾಮಯ್ಯ ರಾಮಾಯಣ, ಮಹಾಭಾರತದ ಓದುವ ಬದಲು ಲೆನಿನ್, ಮಾರ್ಕ್ಸ್ ಓದಿದ್ದಾರೆ. ಹೀಗಾಗಿ ಈಗ ಎಡಬಿಡಂಗಿ ಆಗಿದ್ದಾರೆ ಎಂದು ಬಿಜಿಪಿ ನಾಯಕ ಸಿ.ಟಿ.ರವಿ (CT Ravi) ಟೀಕಿಸಿದ್ದಾರೆ.


ATMನಲ್ಲಿ ಒಂದು ಬಾರಿ ಕಾರ್ಡ್ ಹಾಕಿದ್ರೆ 5 ಬಾರಿ ಹಣ ಬರುತ್ತಂತೆ! 


ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಎಟಿಎಂನಿಂದ 500 ರೂಪಾಯಿ ಡ್ರಾ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬರು 500 ರೂಪಾಯಿ ಮುಖಬೆಲೆಯ ಐದು ಕರೆನ್ಸಿ ನೋಟುಗಳನ್ನು ಪಡೆದುಕೊಂಡಿದ್ದಾರೆ. ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಹೀಗೆ ಒಂದರ ಬದಲು 5 ಬಾರಿ ಹಣ ಬಂದಿದ್ಯಂತೆ. ಈ ಸುದ್ದಿ ಕೇಳಿದ್ದೇ ತಡ, ಜನರೆಲ್ಲ ತಮ್ಮ ತಮ್ಮ ಕೆಲಸ ಬಿಟ್ಟು, ಕೈಯಲ್ಲಿ ಎಟಿಎಂ ಕಾರ್ಡ್ ಹಿಡಿದು, ಎಟಿಎಂ ಮುಂದೆ ಜಮಾಯಿಸಿದ್ದಾರೆ.


ಇದನ್ನೂ ಓದಿ: ATMನಲ್ಲಿ ಒಂದು ಬಾರಿ ಕಾರ್ಡ್ ಹಾಕಿದ್ರೆ 5 ಬಾರಿ ಹಣ ಬರುತ್ತಂತೆ! ಕೆಲಸ ಬಿಟ್ಟು ಹಣಕ್ಕಾಗಿ ಕ್ಯೂ ನಿಂತ ಜನರು


ಪಬ್ಲಿಕ್​ನಲ್ಲೇ ಪೊಲೀಸ್ ಕಾಲರ್ ಹಿಡಿದೆಳೆದ ಕಾಂಗ್ರೆಸ್ ನಾಯಕಿ!


ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಇಡಿ ಸಮನ್ಸ್‌ನ ವಿರುದ್ಧ ಕಾಂಗ್ರೆಸ್ ಪಕ್ಷ ಪ್ರತಿಭಟಿಸುತ್ತಿದೆ. ಈ ಸಂದರ್ಭ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ (Renuka Chaudhary) ಸಾರ್ವಜನಿಕವಾಗಿ ಉದ್ಧಟತನ ತೋರಿಸಿದ್ದಾರೆ. ಅವರು ಗುರುವಾರ ಹೈದರಾಬಾದ್‌ನಲ್ಲಿ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಇತರ ಕಾರ್ಯಕರ್ತರನ್ನು ಪೊಲೀಸ್ ಸಿಬ್ಬಂದಿ ಕರೆದುಕೊಂಡು ಹೋಗುತ್ತಿದ್ದಾಗ ಪೊಲೀಸ್ ಒಬ್ಬರನ್ನು ಸಾರ್ವಜನಿಕವಾಗಿ ಕಾಲರ್‌ನಿಂದ ಹಿಡಿದುಕೊಂಡರು.

top videos
    First published: