Evening Digest: 4 ವರ್ಷದ ಮಗನ ಕೊಂದ ತಾಯಿ, ಸೊಳ್ಳೆ ಬತ್ತಿಯಲ್ಲಿ ಮೈಮುಚ್ಚಿಕೊಂಡ ಉರ್ಫಿ! ಚಳಿ ಸಂಜೆಗೆ ಬಿಸಿ ಬಿಸಿ ನ್ಯೂಸ್ ಇಲ್ಲಿದೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
4 ವರ್ಷದ ಮಗನ ಕೊಂದ ತಾಯಿ, 10 ವರ್ಷದ ಹಿಂದೆ ಮಗಳನ್ನೂ ಕೊಂದಿದ್ದಳು!

ಚಂಡೀಘಡ್(ಜು.16): ಆಘಾತಕಾರಿ ಘಟನೆಯೊಂದರಲ್ಲಿ ತಾಯಿಯೇ (Mother) ತನ್ನ 4 ವರ್ಷದ ಮಗನನ್ನು (Son) ಕೊಂದಿರುವ ಘಟನೆ ಚಂಡೀಘಡ್​ನಲ್ಲಿ ಬೆಳಕಿಗೆ ಬಂದಿದೆ. ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ (Murder) ಮಾಡಿದ ಆರೋಪದ ಮೇಲೆ ಬಂಧಿತಳಾದ ಮಹಿಳೆ, 10 ವರ್ಷಗಳ ಹಿಂದೆ ತನ್ನ ಮಗಳನ್ನು (Daughter) ಕೊಂದಿರುವುದಾಗಿ ಪೊಲೀಸರ (Police) ಮುಂದೆ ಒಪ್ಪಿಕೊಂಡಿದ್ದಾಳೆ. ನಾಲ್ಕು ವರ್ಷದ ಮಗು ಮುಲ್ಲನ್‌ಪುರ ದಖಾದ ಭನೋಹರ್ ಗ್ರಾಮದಲ್ಲಿ ನಾಪತ್ತೆಯಾಗಿತ್ತು. ಮಗುವಿನ ತಾಯಿ, ಉತ್ತರ ಪ್ರದೇಶದ (Uttar Pradesh) ಬಬಿತಾ, 45, ಬಾಲಕ ಕೊನೆಯದಾಗಿ ತಮ್ಮ ಮನೆಯ ಹೊರಗೆ ಆಟವಾಡುತ್ತಿರುವುದು ಕಂಡುಬಂದಿದೆ ಎಂದು ಹೇಳಿಕೊಂಡರು.

ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುತ್ತಿದೆ ಬ್ಲಾಕ್ ಫೀವರ್!

ಪಶ್ಚಿಮ ಬಂಗಾಳ: ಒಂದೆಡೆ ಕೊರೋನಾ (Corona) ಅಬ್ಬರಿಸುತ್ತಾ ಇದೆ. ದಿನದಿಂದ ದಿನಕ್ಕೆ ಸೋಂಕು (Infection) ಜಾಸ್ತಿಯಾಗುತ್ತಲೇ ಇದೆ. ಇದರೊಂದಿಗೆ ವಿದೇಶದಲ್ಲಿ ಅಬ್ಬರಿಸುತ್ತಿದ್ದ ಮಂಕಿಪಾಕ್ಸ್ ರೋಗ (Monkeypox disease) ಸಹ ಭಾರತಕ್ಕೆ ಕಾಲಿಟ್ಟಿದೆ. ಕೇರಳದಲ್ಲಿ (Kerala) ಈಗಾಗಲೇ ಸೋಂಕು ಪತ್ತೆಯಾಗಿದ್ದು, ಆರೋಗ್ಯ ಇಲಾಖೆಗೆ (Health Department) ಹೊಸ ತಲೆನೋವು ಶುರುವಾಗಿದೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳದಲ್ಲಿ(West Bengal)  ಹೊಸದೊಂದು ಜ್ವರ (Fever) ಪತ್ತೆಯಾಗಿದೆ. ಅದೇ ಬ್ಲಾಕ್ ಫೀವರ್ (Black Fever), ಮಳೆಗಾಲದಲ್ಲಿ (Rainy Season) ಸುಮಾರು 60 ಮಂದಿಯಲ್ಲಿ ಬ್ಲಾಕ್ ಫೀವರ್ ಇರೋದು ಪತ್ತೆಯಾಗಿದೆ. ಈ ರೋಗ ವೇಗವಾಗಿ ಹಬ್ಬುತ್ತಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Black Fever: ಮಳೆಗಾಲದಲ್ಲಿ ಮನೆ ಬಾಗಿಲಿಗೆ ಬರುತ್ತಿದೆ ಬ್ಲಾಕ್ ಫೀವರ್! ಹಿಂಡಿ ಹಿಪ್ಪೆ ಮಾಡುತ್ತಿದೆ ಈ ಜ್ವರ

ಎಡಿಜಿಪಿ ಅಮೃತ್ ಪೌಲ್​ ಆಸ್ತಿ ಎಲ್ಲೆಲ್ಲಿದೆ? ಯಾರ ಹೆಸರಿನಲ್ಲಿದೆ?

PSI ನೇಮಕಾತಿಯಲ್ಲಿ ಅಕ್ರಮ (PSI Recruitment Scam) ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್ (ADGP Amrit Paul)  ಮಾಡಿದ್ದ ಆಸ್ತಿಯ ಮಾಹಿತಿ ಬಹಿರಂಗಗೊಂಡಿದೆ. ಅಕ್ರಮವಾಗಿ ಹಣ ಮಾಡಿದ್ದ ಪೌಲ್ ಜಮೀನು ಖರೀದಿಯಲ್ಲೇ (Land Purchase) ಬ್ಯುಸಿಯಾಗಿದ್ದರು ಎಂದು ತಿಳಿದು ಬಂದಿದೆ. ಪೌಲ್ ತಮ್ಮ ಹೆಸರಿಗೆ ಪ್ರಾಪರ್ಟಿ ನೋಂದಣಿ ಮಾಡಿಸದೇ ತಂದೆ ಹೆಸರಲ್ಲಿ ಎಕರೆಗಟ್ಟಲೆ ಜಮೀನು ಖರೀದಿಸಲಾಗಿದೆ. ತಂದೆ ನೇತಾರಾಮ್ ಬನ್ಸಾಲ್ (Father Netaram Bansal) ಹೆಸರಲ್ಲೇ ಎಲ್ಲಾ ಆಸ್ತಿಯನ್ನ ಮಾಡಿರುವ ವಿಚಾರ ತಿಳಿದು ಬಂದಿದೆ. ಕೇಂದ್ರ ವಿಭಾಗದ ಐಜಿಪಿ ಆಗಿದ್ದಾಗ ಕೋಟಿ ಕೋಟಿ ಅಕ್ರಮ ಆಸ್ತಿ ಮಾಡಿರುವ ಆರೋಪಗಳು ಅಮೃತ್ ಪೌಲ್ ವಿರುದ್ಧ ಕೇಳಿ ಬಂದಿವೆ.

Digital Media ಗಳಿಗೂ ಬೀಳುತ್ತೆ ಇನ್ಮುಂದೆ ಮೂಗುದಾರ!

ಡಿಜಿಟಲ್ ಮಾಧ್ಯಮ (Digital Media) ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿದೆ. ಈಗಂತೂ ಇತರೇ ಮಾಧ್ಯಮಗಳಿಗಿಂತ ಡಿಜಿಟಲ್ ಮಾಧ್ಯಮಗಳದ್ದೇ ಪಾರುಪತ್ಯ ಇದೆ. ಯೂಟ್ಯೂಬ್ ಚಾನೆಲ್‌ (YouTube Channel) ಇತ್ಯಾದಿಗಳನ್ನು ಮಾಡಿಕೊಳ್ಳುವ ಕೆಲ ಜನರು ತಮ್ಮ ವ್ಯೂವರ್ಸ್ (Viewers) ಸಂಖ್ಯೆ ಹೆಚ್ಚಿಸಿಕೊಳ್ಳಲು ಬಾಯಿಗೆ ಬಂದಂತೆ ಸುದ್ದಿ (News) ಮಾಡುತ್ತಾರೆ. ಆಧಾರವಿಲ್ಲದೇ ಮತ್ತೊಬ್ಬರ ತೇಜೋವಧೆ ಮಾಡುತ್ತಾರೆ. ಇದೀಗ ಇವು ಎಲ್ಲದಕ್ಕೂ ಕಡಿವಾಣ (Control) ಬೀಳುವ ಕಾಲ ಹತ್ತಿರ ಬಂದಂತೆ ಕಾಣುತ್ತಿದೆ. ಡಿಜಿಟಲ್ ಮೀಡಿಯಾಗಳಿಗೆ ಕಾನೂನಿನ (Law) ಮೂಲಕ ಮೂಗುದಾರ ಹಾಕಲು ಕೇಂದ್ರ ಸರ್ಕಾರ (Central Government) ಚಿಂತನೆ ನಡೆಸಿದೆ.

ಇದನ್ನೂ ಓದಿ: Digital Media ಗಳಿಗೂ ಬೀಳುತ್ತೆ ಇನ್ಮುಂದೆ ಮೂಗುದಾರ, ಹೊಸ ಕಾನೂನು ತರಲು ಸಜ್ಜಾದ ಕೇಂದ್ರ ಸರ್ಕಾರ!

ಸೊಳ್ಳೆ ಬತ್ತಿಯಲ್ಲಿ ಮೈ ಮುಚ್ಚಿಕೊಂಡು ಬಂದ ಉರ್ಫಿ!

ಬಿಗ್ ಬಾಸ್ ಒಟಿಟಿ (Bigg Boss Ott) ಖ್ಯಾತಿಯ ಉರ್ಫಿ ಜಾವೇದ್ (Urfi Javed) ಸಾಮಾಜಿಕ ಮಾಧ್ಯಮದಲ್ಲಿ ಈಗ ಹೊಸ ಸೆನ್ಸೇಷನ್ (Sensation) ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಪಿ ಜಾವೇದ್, ಆಗಾಗೊಮ್ಮೆ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಹಂಚಿಕೊಳ್ಳುವ ಪೋಸ್ಟ್ ಗಳ ಮೂಲಕ ನಿರಂತವಾಗಿ ಸುದ್ದಿಯಲ್ಲಿ ಇರುತ್ತಾರೆ.  ಈ ಬಾರಿ ಉರ್ಫಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಚಕ್ಕುಲಿ ರೀತಿಯ ವಸ್ತುವಿನಿಂದ ತನ್ನ ಮೈ ಮುಚ್ಚಿಕೊಂಡು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.
Published by:Annappa Achari
First published: