Evening Digest: ಮಂಗಳೂರಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ: ಶೀಘ್ರವೇ ನಂದಿನಿ ಹಾಲು ದುಬಾರಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮಂಗಳೂರಲ್ಲಿ ಮಗನಿಂದಲೇ ತಾಯಿ ಮೇಲೆ ಅತ್ಯಾಚಾರ : ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ದಕ್ಷಿಣ ಕನ್ನಡದಲ್ಲಿ ವರದಿಯಾಗಿದೆ. ಮಗ ತನ್ನ ತಾಯಿಯನ್ನೇ ಅತ್ಯಾಚಾರಗೈದಿರುವ ಆರೋಪ ಎದುರಿಸುತ್ತಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮಗನೇ ಹೆತ್ತ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ನಸುಕಿನಲ್ಲಿ ಘಟನೆ ನಡೆದಿದ್ದು, ನಂತರ ಬೆಳಕಿಗೆ ಬಂದಿದೆ. 36 ವರ್ಷದ ಮಗ ಗುರುವಾರ ನಸುಕಿನ ಜಾವ ತಾಯಿ ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ. ಕಿರುಚಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಬಿಡದೇ ತಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.

ಪೂರ್ತಿ ಓದಿಗಾಗಿ: Rape Case: ಮಂಗಳೂರಲ್ಲಿ ನಾಚಿಕೆಗೇಡಿನ ಘಟನೆ.. ತಾಯಿಯ ಮೇಲೆ ಮಗನಿಂದಲೇ ಅತ್ಯಾಚಾರ!

ಶೀಘ್ರವೇ ನಂದಿನಿ ಹಾಲು ದುಬಾರಿ
ನಿತ್ಯೋಪಯೋಗಿ ಸಾಮಾಗ್ರಿಗಳ ಬೆಲೆ ಏರಿಕೆ (Hike In Price) ಜೊತೆಗೆ ಹಾಲಿನ ದರವೂ ಹೆಚ್ಚಾದ್ರೆ ಗಾಯದ ಮೇಲೆ ಬರೆ ಬಿದ್ದಂತಾಗುತ್ತೆ. ಇದೀಗ ಹಾಲಿನ ಬೆಲೆ ಏರಿಕೆ ಬಗ್ಗೆ ಕೆಎಂಎಫ್ (KMF) ಅಧ್ಯಕ್ಷ ಜಾರಳಿಹೊಳಿಯೇ ಸುಳಿವು ನೀಡಿದ್ದಾರೆ. ನಂದಿನ ಹಾಲಿನ ದರ (Nandini Milk Price) ಹೆಚ್ಚಾದ್ರೆ ಮತ್ತೆ ರಾಜ್ಯದ ಜನರ ಜೇಬಿಗೆ ಕತ್ತರಿ ಬೀಳೋದು ಗ್ಯಾರೆಂಟಿ. ನಂದಿನಿ ಹಾಲಿನ ದರ ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು (President of District Milk Unions) ಮನವಿ ಮಾಡಿದ್ದಾರೆ. 1 ಲೀಟರ್ ನಂದಿನಿ ಹಾಲಿನ ಪ್ರಸ್ತುತ ಬೆಲೆ 37 ರೂ ಇದೆ. ಜಿಲ್ಲಾ ಹಾಲು ಒಕ್ಕೂಟಗಳ ಬೇಡಿಕೆಗೆ ಸರ್ಕಾರ ಮಣಿದರೆ 1 ಲೀಟರ್ ನಂದಿನಿ ಹಾಲಿನ ಬೆಲೆ 40 ರೂ ಆಗಲಿದೆ. ಅಂದ್ರೆ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಲಿದೆ. ಜೊತೆಗೆ ಮೊಸರು (Curds) ಹಾಗೂ ಹಾಲಿನಿಂದ ತಯಾರಾಗೋ ಉತ್ಪನ್ನಗಳ ಬೆಲೆಯು ಹೆಚ್ಚಾಗೋ ಸಾಧ್ಯತೆ ಇದೆ.

ಮೂವರು ಮಕ್ಕಳ ನಿಗೂಢ ಸಾವು
ವ್ಯಾಕ್ಸಿನ್ (Vaccine)ಪಡೆದ ಬಳಿಕ ಮೂವರು ಮಕ್ಕಳು (Three Children) ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೃತ ಮೂವರೂ ಮಕ್ಕಳಿಗೆ ರುಬೆಲ್ಲಾ ಚುಚ್ಚುಮದ್ದು (Rubella Vaccination) ನೀಡಲಾಗಿತ್ತು. ರುಬೆಲ್ಲಾ ವ್ಯಾಕ್ಸಿನ್ ಪಡೆದ ಬಳಿಕ ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು. ಮೊನ್ನೆ ಒಂದು ಮಗು, ಇಂದು ಇಬ್ಬರು ಮಕ್ಕಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳು ಪವಿತ್ರಾ ಹುಲಗೂರ್, 14 ತಿಂಗಳ ಮಧು ಉಮೇಶ್ ಕುರಗುಂದಿ ಹಾಗೂ ಮಲ್ಲಾಪುರ ಗ್ರಾಮದ ಒಂದೂವರೆ ವರ್ಷದ ಚೇತನ ಎಂಬ ಮಗ ಮೃತಪಟ್ಟಿದೆ. ಕಡಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪೂರ್ತಿ ಓದಿಗಾಗಿ: Vaccination ಬಳಿಕ ಮೂವರು ಮಕ್ಕಳ ನಿಗೂಢ ಸಾವು: ಬೆಳಗಾವಿ ಪ್ರಕರಣದಿಂದ ಹೆಚ್ಚಿದ ಆತಂಕ!

ಬಸ್ನಲ್ಲಿ ಡ್ರೈವರ್ಗೆ ಹೃದಯಾಘಾತ, ತಾನೇ ಬಸ್ ಚಲಾಯಿಸಿಕೊಂಡು ಬಂದ ಪ್ರಯಾಣಿಕ ಮಹಿಳೆ
ಬಸ್ ಚಾಲನೆ(Bus Driving) ಮಾಡುವಾಗ ಚಾಲಕನಿಗೆ ಹೃದಯಾಘಾತವಾಯಿತು(Heart attack) ಎಂಬ ಅನೇಕ ಸುದ್ದಿಗಳನ್ನು(News) ನಾವು ಕೇಳಿದ್ದೇವೆ ನೋಡಿದ್ದೇವೆ.. ಈ ರೀತಿ ಹೃದಯಾಘಾತವಾದಾಗ ಅನೇಕ ಬಾರಿ ಅಪಘಾತಗಳು(Accident) ಸಂಭವಿಸಿದ್ರೆ,ಕೆಲವೊಂದು ಬಾರಿ ಚಾಲಕ ಸಮಯಪ್ರಜ್ಞೆ ಬಸ್ಸಿನಲ್ಲಿ ಇದ್ದ ಪ್ರಯಾಣಿಕರನ್ನು ಕಾಪಾಡಿ ಮಾನವೀಯತೆ(Humanity) ಬರೆದಿರುವ ಹಲವಾರು ಘಟನೆಗಳು ಉದಾಹರಣೆಗಳಾಗಿ ನಮ್ಮ ಕಣ್ಣ ಮುಂದೆಯೇ ಇದೆ.ಯಾವ ಪ್ರಯಾಣಿಕರಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಬಸ್ ನಿಲ್ಲಿಸಿ ತಮ್ಮ ಪ್ರಾಣವನ್ನು ಬಿಟ್ಟಿರುವ ಅನೇಕ ಬಸ್ ಚಾಲಕರ ಉದಾಹರಣೆಗಳು ನಮ್ಮ ಮುಂದಿವೆ.. ಇಲ್ಲಿ ನಡೆದಿರುವ ಘಟನೆ ಸ್ವಲ್ಪ ವಿಭಿನ್ನವಾಗಿದೆ.. ಬಸ್ ಚಾಲಕನಿಗೆ ಹೃದಯಾಘಾತವಾಗಿದೆ ಎಂದು ತಿಳಿದ ಕೂಡಲೇ ಮಹಿಳೆಯೊಬ್ಬಳು ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ಚಲಾಯಿಸಿಕೊಂಡು ಬಂದ ಘಟನೆ ನಡೆದಿದೆ.

ದುಬೈನಲ್ಲಿ ಟಗರು ಬಂತು ಟಗರು ಎಂದ ಕಾರುಣ್ಯ ರಾಮ್..
ತಂದೆ ತಾಯಿ ಮತ್ತು ತಂಗಿಯ ಜೊತೆಗೆ ದುಬೈ ಹಾರಿರುವ ಕಾರುಣ್ಯ, ಶಿವರಾಜ್ಕುಮಾರ್ ಅಭಿನಯದ ಬ್ಲಾಕ್ಬಸ್ಟರ್ ಹಿಟ್ ಚಿತ್ರದ ಟಗರು ಬಂತು ಟಗರು ಹಾಡಿಗೆ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ದುಬೈ ಪ್ರವಾಸಿಗರ ಸಮ್ಮುಖದಲ್ಲೆ ಕಾರುಣ್ಯ ಮತ್ತು ಸಹೋದರಿ ಸ್ಟೆಪ್ಸ್ ಹಾಕಿದ್ದು, ಎಲ್ಲೆ ಹೋದರೂ ಕನ್ನಡದ್ದೇ ಹವಾ ಎಂದು ಡೈಲಾಗ್ ಕೂಡ ಹೊಡೆದಿದ್ದಾರೆ. ಇನ್ನೂ ಕಾರುಣ್ಯ ಹಾಗೂ ಅವರ ತಂಗಿ ಡ್ಯಾನ್ಸ್ಗೆ ಅಲ್ಲಿ ನೆರೆದಿದ್ದವರೆಲ್ಲ ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಕೂಡ ಸಖತ್ ವೈರಲ್ ಆಗುತ್ತಿದೆ.
Published by:Kavya V
First published: