Evening Digest: ಕಾಂಗ್ರೆಸ್​ ಪ್ರತಿಭಟನೆ; ಮಹಿಳೆಯರ ಮದುವೆ ವಯಸ್ಸು ಏರಿಕೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಕಾಂಗ್ರೆಸ್​​ ಪ್ರತಿಭಟನೆ

  ಬೆಳಗಾವಿಯಲ್ಲಿ ನಡೆಯುತ್ತಿರೋ ಚಳಿಗಾಲದ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸೋಕೆ ಕಾಂಗ್ರೆಸ್ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ವಾಕ್ಸಮರಕ್ಕೆ ಕಾರಣವಾಗಿದೆ. ಟ್ರ್ಯಾಕ್ಟರ್ ಸುವರ್ಣ ಸೌಧ ಒಳಕ್ಕೆ ಬಿಡದೆ ಇದ್ದುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟು ಹಿಡಿದು ಸುವರ್ಣ ಸೌಧ ವಿಐಪಿ ಗೇಟ್ ವರೆಗೂ ಟ್ರ್ಯಾಕ್ಟರ್ ನಲ್ಲಿ ಬಂದಿದ್ದಾರೆ.

  ಪೈಲೆಟ್​ ವರುಣ್​ ಸಿಂಗ್​ಗೆ ಶ್ರದ್ದಾಂಜಲಿ
  ಕುನೂರು ಹೆಲಿಕ್ಯಾಪ್ಟರ್​ ದುರಂತದಲ್ಲಿ ಬದುಕುಳಿದು ನಿನ್ನೆ ಸಾವನ್ನಪ್ಪಿದ ಪೈಲೆಟ್​ ವರಣ್​ ಸಿಂಗ್​ ಅವರ ಸಾವಿಗೆ ಸರ್ಕಾರ ಸಂತಾಪ ವ್ಯಕ್ತಪಡಿಸಿದೆ. ಇಂದು ವಿಧಾನಸಭೆಯಲ್ಲಿಂದು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬೆಳಗ್ಗೆ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ನಿರ್ಣಯವನ್ನು ಮಂಡಿಸಿದರು.

  ಸರ್ಕಾರಕ್ಕೆ ಇಬ್ರಾಹಿಂ ಸವಾಲ್​​
  ಪರ್ಸಂಟೇಜ್ ಪಡೆಯುವ ಬಗ್ಗೆ ನೋಂದಾಯಿತ ಗುತ್ತಿಗೆದಾರರ ಸಂಘ ಆರೋಪ ಮಾಡಿದ್ದು, ಅದು ಸುಳ್ಳಾಗಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಆರೋಪವನ್ನು ಒಪ್ಪಿಕೊಳ್ಳಲಿ ಎಂದು ಅವರು ಸಿಎಂಗೆ ಸವಾಲ್​ ಹಾಕಿದ್ದಾರೆ.

  ಸಕ್ರಿಯ ರಾಜಕಾರಣಕ್ಕೆ ಗುಡ್​ಬೈ ಹೇಳಿದ ಮೆಟ್ರೋ ಮ್ಯಾನ್​
  ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರ ಗಮನಸೆಳೆದಿದ್ದ ಮೆಟ್ರೋ ಮ್ಯಾನ್​ ಶ್ರೀಧರನ್ ​​ ಸೋಲು ಕಂಡಿದ್ದರು. ಇಳಿಯ ವಯಸ್ಸಿನಲ್ಲೂ ಬಿಜೆಪಿಯಿಂದ ಟಿಕೆಟ್​ ಗಿಟ್ಟಿಸಿಕೊಂಡು ಅದೃಷ್ಟ ಪರೀಕ್ಷೆ ನಡೆಸಿದ್ದ ಅವರಿಗೆ ಯಶಸ್ಸು ಕೈ ಹಿಡಿಯಲಿಲ್ಲ. ಚುನಾವಣಾ ಸೋಲಿನ ಎಂಟು ತಿಂಗಳ ಬಳಿಕ ಅವರು ರಾಜಕೀಯಕ್ಕೆ ವಿದಾಯ ಹಾಡಲು ಮುಂದಾಗಿದ್ದಾರೆ. ಈ ಕುರಿತು ಇಂದು ತಿಳಿಸಿರುವ ಅವರು ತಾವು ರಾಜಕೀಯ ತೊರೆಯುತ್ತಿಲ್ಲ. ಆದರೆ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದಿದ್ದಾರೆ.

  ವಿಜಯೋತ್ಸವ ಸಂಭ್ರಮ
  ಡಿಸೆಂಬರ್ 16 ಅನ್ನು ಯೋಧರ ಶೌರ್ಯ ಗೌರವಿಸಲು ಹಾಗೂ ಗುರುತಿಸಲು ದೇಶಾದ್ಯಂತ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಇದೇ ದಿನ 1971ರ ಯುದ್ಧದಲ್ಲಿ ಭಾರತವು ಪಾಕಿಸ್ತಾನದ ಎದುರು ವಿಜಯ ಸಾಧಿಸಿತ್ತು. ಈ ವರ್ಷ ಅದರ ಸುವರ್ಣ ಮಹೋತ್ಸವ. ಇಂದಿಗೂ ಕೂಡಾ ಈ ದಿನವನ್ನು ದೇಶಾದ್ಯಂತ ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ವಿಜಯ್ ದಿವಸ್ ಹಲವು ಕಾರಣಕ್ಕೆ ಅತ್ಯಂತ ಮಹತ್ವಪೂರ್ಣವಾಗಿದೆ.

  ಶೀನಾ ಬೋರಾ ಪ್ರಕರಣಕ್ಕೆ ತಿರುವು
  ಸರಿ ಸುಮಾರು ದಶಕಗಳ ಹಿಂದೆ ಮಹಾರಾಷ್ಟ್ರ ಮಾತ್ರವಲ್ಲದೇ, ದೇಶದಲ್ಲಿ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಸ್ವಂತ ಮಗಳು ಕೊಂದು ಜೈಲು ಶಿಕ್ಷೆ ಅನುಭವಿಸುತ್ತಿರುವ ಇಂದ್ರಾಣಿ ಮುಖರ್ಜಿ ಈಗ ದಶಕಗಳ ಬಳಿಕ ಶೀನಾ ಬೋರಾ ಬದುಕಿದ್ದಾಳೆ. ಆಕೆ ಕಾಶ್ಮೀರದಲ್ಲಿ ಇದ್ದು, ಆಕೆಯನ್ನು ಪತ್ತೆ ಮಾಡಬೇಕು ಎಂದು ಸಿಬಿಐಗೆ ಪತ್ರ ಬರೆದಿದ್ದಾಳೆ

  ಓಮೈಕ್ರಾನ್​ ಉಲ್ಬಣ
  ಜನವರಿ-ಫೆಬ್ರವರಿ ಅವಧಿಯಲ್ಲಿ ಭಾರತದಲ್ಲಿ ಓಮೈಕ್ರಾನ್‌ ಪ್ರಕರಣಗಳಲ್ಲಿ ಉಲ್ಬಣ ಕಾಣಬಹುದು. ಏಕೆಂದರೆ ರೂಪಾಂತರವು ಡೆಲ್ಟಾ ಸ್ಟ್ರೈನ್ (Delta strain) ಹರಡುವಿಕೆಯ ವೇಗವನ್ನು ಮೀರಿಸುತ್ತದೆ ಎಂದು ಅಧಿಕೃತ ಮೂಲವು ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದೆ. ಆದರೂ, ಓಮೈಕ್ರಾನ್‌ ಸೋಂಕುಗಳು ಸೌಮ್ಯವಾಗಿ ಉಳಿಯುವ ಸಾಧ್ಯತೆಯಿದೆ ಎಂದಿದ್ದಾರೆ

  ಮದುವೆ ವಯಸ್ಸು ಏರಿಕೆ
  ಪ್ರಧಾನಿ ನರೇಂದ್ರ ಮೋದಿಯವರು 2020 ರ ಸ್ವಾತಂತ್ರ್ಯ ಭಾಷಣದಲ್ಲಿ ಪುರುಷರಂತೆಯೇ ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾಪವನ್ನು ಘೋಷಿಸಿದ ಒಂದು ವರ್ಷದ ನಂತರ, ಕೇಂದ್ರ ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಅಂಗೀಕರಿಸಿದೆ.
  Published by:Seema R
  First published: