Evening Digest: ಗಾಳಿಪಟ 2 ಕಲೆಕ್ಷನ್ ಎಷ್ಟು? ಜಗ್ಗೇಶ್‌ಗೆ ಮೋದಿ ಮೆಚ್ಚುಗೆ! ಈ ಹೊತ್ತಿನ ಟಾಪ್ ನ್ಯೂಸ್‌ಗಳು ಇಲ್ಲಿವೆ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
Gaalipata 2: ಗೋಲ್ಡನ್ ಗಾಳಿಪಟ 2ಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡು; 4ನೇ ದಿನವೂ ಭರ್ಜರಿ ಕಲೆಕ್ಷನ್​

ನಿರ್ದೇಶಕ ಯೋಗರಾಜ್ ಭಟ್ (Director Yogaraj Bhat )​​ ಹಾಗೂ ಗೋಲ್ಡನ್​​ ಸ್ಟಾರ್ ಗಣೇಶ್ (Golden Star Ganesh) ಕಾಂಬಿನೇಷನ್​ ​ ತೆರೆ ಮೇಲೆ ಮತ್ತೆ ಮೋಡಿ ಮಾಡಿದೆ. ಆಗಸ್ಟ್​ 12 ರಂದು ಕರ್ನಾಟಕ ಸೇರಿದಂತೆ, ಹೊರ ರಾಜ್ಯ ಹಾಗೂ ದೇಶ ವಿದೇಶಗಳಲ್ಲೂ ಗಾಳಿಪಟ-2 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ (Box Office) ಗಾಳಿಪಟ-2 ಚಿತ್ರದ ಕಲೆಕ್ಷನ್​ ಸಖತ್ ಆಗಿಯೇ ಸದ್ದು ಮಾಡಿತ್ತು, ಇದೀಗ ಸಾಲು ಸಾಲು ರಜೆ ಹಿನ್ನೆಲೆ ಗಾಳಿಪಟ 2 (Gaalipata-2) ಸಿನಿಮಾ ಕಲೆಕ್ಷನ್ (Collection) ಡಬಲ್ ಆಗಿದೆ.  ‘ಗಾಳಿಪಟ 2’ ಗಣೇಶ್‌ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ.

ಜಗ್ಗೇಶ್ ನಿರ್ಮಾಣದ ವಿಡಿಯೋಗೆ ಮೋದಿ ಶ್ಲಾಘನೆ

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ (75th Independence Day) ಸಂಭ್ರಮ ಇನ್ನೂ ಮುಗಿದಿಲ್ಲ. ನಿನ್ನೆಯಷ್ಟೇ ಇಡೀ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು (Azadika Amrit Mahotsav) ಆಚರಿಸಲಾಗಿತ್ತು. ಈ ವೇಳೆ ಸೋಶಿಯಲ್ ಮೀಡಿಯಾಗಳಲ್ಲಿ (Social media) ಎಲ್ಲರ ಡಿಪಿ (DP), ಸ್ಟೇಟಸ್ (Status) ಎಲ್ಲವೂ ತಿರಂಗಾ (Tri-Colors) ಮಯವಾಗಿತ್ತು. ಇನ್ನು ಅನೇಕರು ವಂದೇ ಮಾತರಂ (Vande Mataram) ಸೇರಿದಂತೆ ರಾಷ್ಟ್ರಭಕ್ತಿಯನ್ನು ಸಾರುವ ವಿಡಿಯೋಗಳನ್ನು (Video) ಮಾಡಿದ್ದರು. ಈ ಪೈಕಿ ಕರ್ನಾಟಕದಲ್ಲಿ (Karnataka) ಸದ್ದು ಮಾಡಿದ್ದು ವಂದೇ ಮಾತರಂ ವಿಡಿಯೋ. ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ನಿರ್ಮಾಣ ಮಾಡಿದ ಈ ಮ್ಯೂಸಿಕಲ್ ವಿಡಿಯೋ (Musical Video) ಭಾರೀ ಸದ್ದು ಮಾಡುತ್ತಿದೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ (Vijay Prakash) ಹಾಡಿದ್ದ ಈ ಮ್ಯೂಸಿಕಲ್ ವಿಡಿಯೋದಲ್ಲಿ ಖುದ್ದು ಜಗ್ಗೇಶ್ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಶ್ರೀಮುರಳಿ, ಅನಂತನಾಗ್, ರವಿಚಂದ್ರನ್ ಸೇರಿದಂತೆ ಹಿರಿ-ಕಿರಿಯ ನಟರು ಅಭಿನಯಿಸಿದ್ದರು. ರಾಷ್ಟ್ರಭಕ್ತಿಯನ್ನು ಸಾರಿದ್ದ ಈ ಮ್ಯೂಸಿಕಲ್ ವಿಡಿಯೋಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ (PM Narendra Modi) ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Jaggesh: ಸೋಶಿಯಲ್ ಮೀಡಿಯಾದಲ್ಲಿ ವಂದೇ ಮಾತರಂ ಹವಾ, ಜಗ್ಗೇಶ್ ನಿರ್ಮಾಣದ ವಿಡಿಯೋಗೆ ಮೋದಿ ಶ್ಲಾಘನೆ

ಸಾಧನೆ ಶಿಖರ ಏರಿದ್ದರೂ ಹುಟ್ಟೂರು ಮರೆಯದ ಪ್ರಶಾಂತ್ ನೀಲ್

ಕೆಜಿಎಫ್ ಸಿನಿಮಾ ಮೂಲಕ ಪ್ರಶಾಂತ್ ನೀಲ್ ಸೌತ್ ಸಿನಿ ಇಂಡಸ್ಟ್ರಿಯಲ್ಲೇ ಸ್ಟಾರ್ ನಿರ್ದೇಶಕರಾಗಿದ್ದಾರೆ. ಪ್ರಶಾಂತ್ ನೀಲ್ ಮೂಲತಃ ಆಂಧ್ರಪ್ರದೇಶದವರಾಗಿದ್ದಾರೆ. ಇತ್ತೀಚಿಗೆ ಅವರು ಆಸ್ಪತ್ರೆಗೆ ಭಾರೀ ಮೊತ್ತದ ದೇಣಿಗೆ ನೀಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಚಿತ್ರ 1300 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಅದ್ಭುತ ಸಕ್ಸಸ್ ಕಂಡಿದೆ. ಪ್ರಶಾಂತ್ ನೀಲ್ ಕನ್ನಡದ ಖ್ಯಾತ ನಿರ್ದೇಶಕರಾಗಿ ಸೂಪರ್ ಸಕ್ಸಸ್ ಆದರು. ಈಗ ಚಿತ್ರರಂಗದಲ್ಲೆಡೆ ಪ್ರಶಾಂತ್ ನೀಲ್ ಹೆಸರು ಕೇಳಿ ಬರುತ್ತಿದೆ. ಗೂಗಲ್ ಸರ್ಚ್ ನಲ್ಲಿ ಪ್ರಶಾಂತ್ ನೀಲ್ ಬಗ್ಗೆಯೂ ಹೆಚ್ಚು ಚರ್ಚೆ ನಡೆಯುತ್ತಿದೆ.

ಜಗತ್ತಿನ ಶಾಂತಿ ಕಾಪಾಡಲು ಮೋದಿಯಿಂದಷ್ಟೇ ಸಾಧ್ಯ! 

ಮೆಕ್ಸಿಕೋ: ಜಗತ್ತಿನಲ್ಲಿ ಶಾಂತಿ (peace) ನೆಲೆಸಬೇಕು ಅಂದರೆ ಭಾರತ (India) ಸಾರಥ್ಯ ವಹಿಸಬೇಕು ಅಂತ ಮೆಕ್ಸಿಕೋ ಅಧ್ಯಕ್ಷ (President of Mexico) ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ (Andrés Manuel López Obrador) ಹೇಳಿದ್ದಾರೆ. ಜಗತ್ತಿನಲ್ಲಿ ಶಾಂತಿ ಹದಗೆಟ್ಟಿದೆ. ಹೀಗಾಗಿ ಶಾಂತಿ ನೆಲೆಸುವಂತೆ ಮಾಡಲು ಒಂದು ಸಮಿತಿ (committee) ರಚಿಸಬೇಕು. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi), ಕ್ರಿಶ್ಚಿಯನ್ (Christian) ಪರಮೋಚ್ಛ ಧರ್ಮಗುರು ಪೋಪ್ ಫ್ರಾನ್ಸಿಸ್ (Pope Francis) ಹಾಗೂ ಯುಎನ್ ಸೆಕ್ರೆಟರಿ ಜನರಲ್ (UN Secretary General) ಆಂಟೋನಿಯೊ ಗುಟೆರೆಸ್ (Antonio Guterres) ಅವರನ್ನು ಒಳಗೊಂಡಿರಬೇಕು ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ಈ ಕುರಿತಂತೆ ವಿಶ್ವಸಂಸ್ಥೆಗೆ (United Nations) ಅವರು ಪತ್ರವನ್ನೂ ಬರೆದಿದ್ದಾರೆ.

ಇದನ್ನೂ ಓದಿ: Narendra Modi: ಜಗತ್ತಿನ ಶಾಂತಿ ಕಾಪಾಡಲು ಮೋದಿಯಿಂದಷ್ಟೇ ಸಾಧ್ಯ! ಭಾರತದ ಸಾರಥ್ಯಕ್ಕೆ ಮೆಕ್ಸಿಕೋ ಪ್ರಧಾನಿ ಮನವಿ

ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ RCB ಆಟಗಾರ

ಭಾರತ ತಂಡ ಸದ್ಯ ಬಿಡುವಿಲ್ಲದೇ ಸರಣಿಗಳಲ್ಲಿ ಆಟವಾಡುತ್ತಿದೆ. ಒಂದರ ಹಿಂದೆ ಒಂದರಂತೆ ಸರಣಿಗಳಲ್ಲಿ ತೊಡಗಿಕೊಳ್ಳುತ್ತಿರುವ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸಕ್ಕೆ ಹೋಗಿದೆ. ಈಗಾಗಲೇ ಟೀಂ ಇಂಡಿಯಾವನ್ನು (Team India) ಜಿಂಬಾಬ್ವೆಗೆ ತಲುಪಿದೆ. ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಘೋಷಿಸಿದ್ದು, ಕೆಎಲ್​ ರಾಹುಲ್​ (KL Rahul) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ರಾಹುಲ್​ ನಾಯಕತ್ವದಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಆದರೆ ಇದೀಗ ಸರಣಿಗೂ ಮುನ್ನ ಭಾರತ ತಂಡಕ್ಕೆ ಬಿಗ್​ ಶಾಕ್ ಆಗಿದ್ದು, ಟೀಂ ಇಂಡಿಯಾದಿಂದ ವಾಷಿಂಗ್ಟನ್ ಸುಂದರ್ ಹೊರನಡೆದಿದ್ದಾರೆ. ಆದರೆ ಸುಂದರ್​ ಬದಲಾಗಿ ಆರ್​ಸಿಬಿ ತಂಡದ ಆಟಗಾರ ಒಬ್ಬ ಆಯ್ಕೆ ಆಗಿದ್ದಾನೆ.
Published by:Annappa Achari
First published: