Top-5 News: ನಡುರಸ್ತೆಯಲ್ಲಿ ಲೇಡೀಸ್ ಫೈಟ್, ಮುಸ್ಲಿಂ ಮನೆಯಲ್ಲಿ ಹಿಂದೂ ಕುರುಹು ಪತ್ತೆ! ಇಂದಿನ ಟಾಪ್‌-5 ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ...

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಮುಸ್ಲಿಂ ವ್ಯಕ್ತಿಯ ಮನೆ ಅಗೆದಾಗ ಶಂಖ-ತ್ರಿಶೂಲ, ಮೂಳೆ ಪತ್ತೆ

ಗೋರಖ್‌ಪುರದ ಗಗಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಸ್ಲಿಂ ಕುಟುಂಬವೊಂದು ತಂತ್ರಿಯೊಬ್ಬನ ಆದೇಶದ ಮೇರೆಗೆ ಮನೆಯನ್ನು ಅಗೆದಿದ್ದಾರೆ. ಉತ್ಖನನದ ವೇಳೆ ದೇವಸ್ಥಾನದ ಗಂಟೆ, ಶಂಖ, ತ್ರಿಶೂಲ, ಪಾತ್ರೆ ಸೇರಿದಂತೆ ಕಬ್ಬಿಣ ಮತ್ತು ಹಿತ್ತಾಳೆಯಿಂದ ಮಾಡಿದ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ. ದಪ್ಪ ಮೂಳೆಗಳೂ ಕಂಡುಬಂದಿವೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿದ್ದರಿಂದ ಆ ಪ್ರದೇಶದಲ್ಲಿ ಸಂಚಲನ ಉಂಟಾಗಿದೆ. ಎಲ್ಲ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ!

ನಾಸಿಕ್, ಮಹಾರಾಷ್ಟ್ರ: ಟೋಲ್ ಪ್ಲಾಜಾದಲ್ಲಿ (Toll Plaza) ಇಬ್ಬರು ಮಹಿಳೆಯರು (Two Ladies) ಸಾರ್ವಜನಿಕರ ಎದುರೇ ಪರಸ್ಪರ ಜುಟ್ಟು (Hair) ಹಿಡಿದುಕೊಂಡು ಹೊಡೆದಾಡಿದ್ದಾರೆ. ಜೊತೆಗಿದ್ದವರು ಜಗಳ (Fight) ತಪ್ಪಿಸೋದಕ್ಕೆ ಬಂದರೂ ಅವರ ಮಾತು ಕೇಳದ ಈ ನಾರಿಯರು, ಸುಮಾರು 2 ನಿಮಿಷ, 47 ಸೆಕೆಂಡ್ ಹೊಡೆದಾಡಿದ್ದಾರೆ. ಟೋಲ್ ಪ್ಲಾಜಾ ಅಂತಾನೂ ನೋಡದೇ ಒಬ್ಬರಿಗೊಬ್ಬರ ಜುಟ್ಟು ಹಿಡಿದುಕೊಂಡ ಮಹಿಳೆಯರು, ಬೈಯ್ದುಕೊಳ್ಳುತ್ತಾ, ಹೊಡೆದಾಡಿದ್ದಾರೆ. ಈ ಮಹಿಳೆಯರ ಫೈಟ್‌ನಿಂದ ಟೋಲ್‌ನಲ್ಲಿ ಟ್ರಾಫಿಕ್ ಜಾಮ್ (Traffic Jam) ಸಹ ಉಂಟಾಗಿದೆಯಂತೆ.

ಇದನ್ನೂ ಓದಿ: Ladies Fight Video: ಟೋಲ್‌ನಲ್ಲಿ ಮಹಿಳೆಯರ ಡಿಶ್ಯುಂ ಡಿಶ್ಯುಂ! ಕೆರಳಿದ ನಾರಿಯರ ಜಡೆಜಗಳದಿಂದ ಟ್ರಾಫಿಕ್ ಜಾಮ್!

ಅಪ್ಪು ಫೋಟೋ ಶೇರ್ ಮಾಡಿದ ಶಾಸಕ ಕುಮಾರ್​ ಬಂಗಾರಪ್ಪ ಹೇಳಿದ್ದಿಷ್ಟು!

ಕುಮಾರ್ ಬಂಗಾರಪ್ಪ ಅವರು ಪುನೀತ್ ರಾಜ್​ಕುಮಾರ್ ಅವರ ಥ್ರೋಬ್ಯಾಕ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶಾಸಕ ಕುಮಾರ್ ಬಂಗಾರಪ್ಪ ಅವರು ಸ್ಯಾಂಡಲ್​ವುಡ್ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ಫೋಟೋಗಳನ್ನು ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ. ಹಳೆಯ ಒಂದಷ್ಟು ಫೋಟೋಗಳನ್ನು ಜೊತೆಯಾಗಿ ಫೇಸ್​ಬುಕ್​ಗೆ ಅಪ್​ಲೋಡ್ ಮಾಡಿದ ಕುಮಾರ್ ಬಂಗಾರಪ್ಪ ಅವರು ಅಗಲಿದ ನಟನನ್ನು ನೆನಪಿಸಿಕೊಂಡಿದ್ದಾರೆ.

ಉತ್ತರ ಕನ್ನಡದ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಎಳ್ಳುನೀರು! 

ವಿಧಾನಸಭೆ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರ ಬಹುದಿನಗಳ ಕೂಗಿಗೆ ಮತ್ತೆ ರಾಜ್ಯ ಸರ್ಕಾರ (State Government) ಸ್ಪಂದನೆ ನೀಡದೇ ನಿರ್ಲಕ್ಷ್ಯ ತೋರಿದೆ. ಶೇಕಡಾ 70ರಷ್ಟು ಅರಣ್ಯ ಪ್ರದೇಶ (Forest Area) ಹೊಂದಿರುವ ಹಾಗೂ ವಿಸ್ತೀರ್ಣದಲ್ಲಿ ಅತೀ ದೊಡ್ಡದಾದ ಉತ್ತರ ಕನ್ನಡ ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಬೇಕು ಅಂತ ಈ ಹಿಂದಿನಿಂದಲೂ ಜನರು ಬೇಡಿಕೆ ಇಟ್ಟಿದ್ದರು. ಈ ಹಿಂದೆ ಹಲವಾರು ಭಾರೀ ಸಾಮಾಜಿಕ ಜಾಲತಾಣಗಳಲ್ಲೂ (Social Media) ಭಾರೀ ದೊಡ್ಡ ಮಟ್ಟದಲ್ಲಿ ಅಭಿಯಾನ (Campaign) ಶುರುವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಸಂಸದರು, ಶಾಸಕರು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯವರೇ ಆದ ವಿಧಾನಸಭಾ ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಜನರ ಆಕ್ರೋಶಕ್ಕೆ ಮಣಿದ ಜನಪ್ರತಿನಿಧಿಗಳು ಆಸ್ಪತ್ರೆ ಕಟ್ಟಿಸಿಕೊಡುವ ಭರವಸೆ ನೀಡಿದ್ರು. ಆದರೆ ಜನ ಪ್ರತಿನಿಧಿಗಳು ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ.

ಇದನ್ನೂ ಓದಿ: Multispeciality Hospital: ಉತ್ತರ ಕನ್ನಡದ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಎಳ್ಳುನೀರು! ಅನುಮೋದನೆಯನ್ನೇ ನೀಡದ ಆರ್ಥಿಕ ಇಲಾಖೆ!

ಸೈಮಾದಲ್ಲಿ ಮಿಂಚಿದ ಸ್ಯಾಂಡಲ್​ವುಡ್ ಸ್ಟಾರ್ ಜೋಡಿ! 

Yash - Radhika Pandit at SIIMA 2002: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸೈಮಾ ಅವಾರ್ಡ್ಸ್​​ನಲ್ಲಿ ಮಿಂಚಿದ್ದಾರೆ. ಈಗ ನಟಿ ರಾಧಿಕಾ ಅವರು ಕೆಲವು ಹೊಸ ಫೋಟೋಸ್ ಶೇರ್ ಮಾಡಿದ್ದಾರೆ. ಸೈಮಾ ಅವಾರ್ಡ್ಸ್​ 2022ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ಸ್ಯಾಂಡಲ್​ವುಡ್ ಜೋಡಿ ಸ್ಟೈಲಿಷ್ ಆಗಿ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ. ನಟಿ ರಾಧಿಕಾ ಪಂಡಿತ್ ಗ್ರೇ ಕಲರ್ ಸಿಂಪಲ್ ಸೀರೆಯನ್ನು ಉಟ್ಟು ಅದಕ್ಕೆ ತಕ್ಕುದಾದ ಚೋಕರ್ ಹಾಗೂ ಸ್ಟೈಲಿಷ್ ಝುಮುಕಿ ಧರಿಸಿದ್ದರು.
Published by:Annappa Achari
First published: