• Home
 • »
 • News
 • »
 • state
 • »
 • Evening Digest: ಸಿಎಂಗೆ ಎದುರಾದ ಮತ್ತೊಂದು ಸಂಕಷ್ಟದಿಂದ ಸಿಇಟಿ ನೋಂದಣಿವರೆಗೆ ಈ ದಿನದ ಓದಲೇಬೇಕಾದ ಸುದ್ದಿ

Evening Digest: ಸಿಎಂಗೆ ಎದುರಾದ ಮತ್ತೊಂದು ಸಂಕಷ್ಟದಿಂದ ಸಿಇಟಿ ನೋಂದಣಿವರೆಗೆ ಈ ದಿನದ ಓದಲೇಬೇಕಾದ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ, ದೇಶ -ವಿದೇಶದಲ್ಲಿ ಇಂದು ನಡೆದ ಘಟನಾವಳಿ ಕುರಿತಾದ ಮಾಹಿತಿ ಇಲ್ಲಿದೆ

 • Share this:

  ಸಿಎಂಗೆ ಮತ್ತೊಂದು ಸಂಕಷ್ಟ
  ಸಿಎಂ ಕುಟುಂಬದ ವಿರುದ್ಧ ಅಕ್ರಮ‌ ಹಣ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದೆ. ಈ ಸಂಬಂಧ ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದವರ ವಿರುದ್ಧ ಸಾಮಾಜಿಕ ಹೋರಾಟಗಾರ ಟಿ.ಜೆ. ಅಬ್ರಹಾಂ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ದೂರು ನೀಡಿದ್ದಾರೆ. ಇಂದು ನವದೆಹಲಿಯ ಇಡಿ ಕಚೇರಿಗೆ ತೆರಳಿರುವ ಟಿ.ಜೆ. ಅಬ್ರಹಾಂ, PMLA (ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್) ಅಡಿ ಪ್ರಕರಣ ದಾಖಲಿಸಿಕೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.


  ಲಸಿಕೆಯಿಂದ ವ್ಯಕ್ತಿ ಸಾವು; ಒಪ್ಪಿಕೊಂಡ ಕೇಂದ್ರ ಸರ್ಕಾರ
  ಕೋವಿಡ್​ ಲಸಿಕೆ ಪಡೆದ ಬಳಿಕ ದೇಶದಲ್ಲಿ ಇದುವರೆಗೂ ಸಾವನ್ನಪ್ಪಿದವರು ಕೇವಲ ಒಬ್ಬ ವ್ಯಕ್ತಿ ಮಾತ್ರ ಎಂದು ಸರ್ಕಾರದ ಸಮಿತಿ ದೃಢಪಡಿಸಿದೆ. ಲಸಿಕೆ ಅಡ್ಡಪರಿಣಾಮ ಕುರಿತು ಅಧ್ಯಯನ ನಡೆಸಿದ ಸರ್ಕಾರದ ಸಮಿತಿ ಈ ವರದಿ ಬಹಿರಂಗ ಪಡಿಸಿದೆ. ಲಸಿಕೆ ಪಡೆದ ಬಳಿಕ ಉಂಟಾಗುವ ಅಲರ್ಜಿಯಿಂದಾಗಿ 68 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಕಾರಣವೇ ಇವರು ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟ ಪಡಿಸಿದೆ. ಮಾರ್ಚ್​ 8 ರಂದು ಇವರು ​ ಲಸಿಕೆ ಪಡೆದಿದ್ದ ಇವರು ಮಾರ್ಚ್​ 31ರಂದು ಸಾವನ್ನಪ್ಪಿದರು ಎಂದು ಸಮಿತಿ ತಿಳಿಸಿದೆ. ​ಲಸಿಕೆ ಪ್ರತಿಕೂಲ ಪರಿಣಾಮ ಕುರಿತು ಎಇಎಫ್​ಐ ಸಮಿತಿ ಅಧ್ಯಯನ ನಡೆಸಿತು. ಈ ಸಮಿತಿಯಲ್ಲಿ ಕೋವಿಡ್​ ಲಸಿಕೆ ಪಡೆದ ಬಳಿಕ ಗಂಭೀರ ಪರಿಣಾಮ ಬೀರಿದ 31 ಪ್ರಕರಣಗಳನ್ನು ಅಧ್ಯಯನ ನಡೆಸಲಾಯಿತು. ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅನಾಫಿಲ್ಯಾಕ್ಸಿಸ್​ನಿಂದಾಗಿ ಸಾವನ್ನಪ್ಪಿದ್ದಾರೆ ಎಂಬುದು ದೃಢವಾಗಿದೆ.


  ಹುಟ್ಟೂರಲ್ಲಿ ಭೂ ತಾಯಿ ಮಡಿಲು ಸೇರಿದ ಸಂಚಾರಿ ವಿಜಯ್​
  ನಟ ಸಂಚಾರಿ ವಿಜಯ್ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರಾದ ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ನಡೆಯಿತು.ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಟ ಸಂಚಾರಿ ವಿಜಯ್​ ಅವರ ಅಂತ್ಯಸಂಸ್ಕಾರ ನಡೆಯಿತು. ವಿಜಯ್​ ಅವರ ಹುಟ್ಟೂರು ಪಂಚನಹಳ್ಳಿಯಲ್ಲಿರುವ ಸ್ನೇಹಿತ ರಘು ಅವರ ತೋಟದಲ್ಲಿ ವಿಧಿ ವಿಧಾನಗಳ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿತು.


  ಪಶ್ಚಿಮ ಬಂಗಾಳದಲ್ಲಿ ಘರ್​ ವಾಪ್ಸಿ
  ಶ್ಚಿಮ ಬಂಗಾಳದ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಚುನಾವಣಾ ಪೂರ್ವ ಕಾಲದಲ್ಲಿ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆ ಯಿಂದ ಬಿಜೆಪಿ ಹೈಕಮಾಂಡ್ ಅನೇಕ ಟಿಎಂಸಿ ನಾಯಕರನ್ನು ತನ್ನತ್ತ ಸೆಳೆದಿತ್ತು. ಪರಿಣಾಮ ಟಿಎಂಸಿ ಪಕ್ಷದ ಪ್ರಭಾವಿ ನಾಯಕ ಸುವೆಂದು ಅಧಿಕಾರಿ ಸೇರಿದಂತೆ ಹಿಂಡು ಹಿಂಡು ಟಿಎಂಸಿ ನಾಯಕರು ಹಾಗೂ ಶಾಸಕ-ಸಚಿವರುಗಳು ಬಿಜೆಪಿ ಪಾಲಾಗಿದ್ದರು. ಆದರೂ, ಚುನಾವಣೆಯಲ್ಲಿ ಬಿಜೆಪಿ ಮೂರಂಕಿ ದಾಟಿರಲಿಲ್ಲ. ಪರಿಣಾಮ ಅಭೂತಪೂರ್ವ ಗೆಲುವಿನೊಂದಿಗೆ ಸಿಎಂ ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಅಧಿಕಾರದ ಗದ್ದುಗೆ ಏರಿದ್ದು ಇದೀಗ ಹಳೆಯ ವಿಚಾರ. ಆದರೆ, ಬಂಗಾಳದಲ್ಲಿ ಪಕ್ಷಾಂತರ ಪರ್ವಕ್ಕೆ ನಾಂದಿ ಹಾಡಿದ್ದ ಬಿಜೆಪಿ ಪಕ್ಷಕ್ಕೆ ಇದೀಗ ಅದೇ ಪಕ್ಷಾಂತರ ಕುತ್ತಾಗಿ ಪರಿಣಮಿಸಿದೆ. 24ಕ್ಕೂ ಅಧಿಕ ಬಿಜೆಪಿ ಶಾಸಕರು ಟಿಎಂಸಿ ಪಕ್ಷಕ್ಕೆ ವಲಸೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂಬುದು ಪ್ರಸ್ತುತ ಹೊಸ ಸುದ್ದಿ. ಇದು ಬಿಜೆಪಿ ನಾಯಕರಲ್ಲಿ ತಲೆನೋವಿಗೆ ಕಾರಣವಾಗಿದೆ.


  ಕೆಸಿಇಟಿಗೆ ನೊಂದಾಣಿ ಪ್ರಾರಂಭ
  ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂದಿನಿಂದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ(ಕೆಸಿಇಟಿ-Karnataka Common Entrance Test -KCET)ಗೆ ನೊಂದಣಿ ಪ್ರಾರಂಭಿಸಿದೆ. ರಾಜ್ಯದ ಸಂಸ್ಥೆಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್​​ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಅಧಿಕೃತ ಪೋರ್ಟಲ್​​ನಲ್ಲಿ ಸಿಇಟಿಗೆ ಜೂನ್​ 15ರಿಂದ ಅರ್ಜಿ ಸಲ್ಲಿಸಬಹುದಾಗಿದೆ. 2021ರ ಸಿಇಟಿ​ ಪರೀಕ್ಷೆ ಆಗಸ್ಟ್​ 28 ಮತ್ತು 29ರಂದು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


  ಪಿಯು ವಿದ್ಯಾರ್ಥಿಗಳಿಗೆ ಮಲತಾಯಿ ಧೋರಣೆ ಹೈ ಕೋರ್ಟ್​ ಗರಂ
  ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸುವ ಸರ್ಕಾರಕ್ಕೆ ಹೈಕೋರ್ಟ್​ ಈಗ ಶಾಕ್ ನೀಡಿದೆ. ಕೇವಲ ಫ್ರೆಶರ್ಸ್​​ನ್ನು ಮಾತ್ರ ಪಾಸ್ ಮಾಡಿ ರಿಪೀಟರ್ಸ್​​ಗೆ ಮಾಮೂಲಿ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಬಳಿಕ ರಿಪೀಟರ್ಸ್​​ ತಮಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಕೋರ್ಟ್​ ಮೊರೆ ಹೋಗಿದ್ದರು. ಹೈಕೋರ್ಟ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸದ್ಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದೆ

  Published by:Seema R
  First published: