Evening Digest: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ; ವಾರದೊಳಗೆ ಲಂಕಾಗೆ ಹೊಸ ಅಧ್ಯಕ್ಷ; ಇಂದಿನ ಟಾಪ್‌ ಸುದ್ದಿಗಳು ಇಲ್ಲಿವೆ

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ

ಬೆಂಗಳೂರು (ಜು.15): ದ್ವಿತೀಯ ಪಿಯುಸಿ (2nd PUC)  ಪೂರಕ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟಗೊಂಡಿದೆ. ಆಗಸ್ಟ್ 12 ರಿಂದ 25ರ ವರೆಗೆ ಪೂರಕ ಪರೀಕ್ಷೆ (Supplementary Exam) ನಡೆಯಲಿದೆ. ಈ ಕುರಿತು  ಶಿಕ್ಷಣ ಇಲಾಖೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದೆ.  ಆಗಸ್ಟ್ 12 ರಂದು ಕನ್ನಡ, ಅರೇಬಿಕ್ ಭಾಷೆಗೆ ಪರೀಕ್ಷೆ ಇರಲಿದೆ, ಆಗಸ್ಟ್ 13   ರಂದು ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ ವಿಷಯಕ್ಕೆ ಪರೀಕ್ಷೆ,  ಆಗಸ್ಟ್ 16ಕ್ಕೆ  ಹಿಂದಿ, ಮಲಯಾಳಂ, ತಮಿಳು, ತೆಲುಗು, ಮರಾಠಿ, ಸಂಸ್ಕೃತ, ಫ್ರೆಂಚ್ ಭಾಷೆಗೆ ಪರೀಕ್ಷೆ ನಡೆಯಲಿದೆ. 17 ರಂದು ಐಚ್ಛಿಕ ಕನ್ನಡ, ರಸಾಯನ ಶಾಸ್ತ್ರ, ಮೂಲ‌ ಗಣಿತ ವಿಷಯಕ್ಕೆ ಪರೀಕ್ಷೆ ನಡೆಯಲಿದೆ. ಕೊನೆ ದಿನ ಆಗಸ್ಟ್ 25 ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ ವಿಷಯಕ್ಕೆ ಪರೀಕ್ಷೆ ನಡೆಯಲಿದೆ.

ಎಡಿಜಿಪಿ ಅಮೃತ್ ಪೌಲ್​ಗೆ ನ್ಯಾಯಾಂಗ ಬಂಧನ

ಬೆಂಗಳೂರು : PSI ನೇಮಕಾತಿ ಪ್ರಕರಣದಲ್ಲಿ (PSI Recruitment Scam) ಬಂಧಿತರಾಗಿರೋ ನೇಮಕಾತಿ ಇಲಾಖೆ ಎಡಿಜಿಪಿ ಆಗಿದ್ದ ಅಮೃತ್ ​ ಪೌಲ್​ (Amrit Paul) ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಿಐಡಿ ಕಸ್ಟಡಿ (Custody of CID) ಅಂತ್ಯ ಹಿನ್ನೆಲೆ ಇಂದು ಎಡಿಜಿಪಿ ಅಮೃತ್​ ಪೌಲ್​ ಅವರನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು. ವಿಚಾರಣೆ ಬಳಿಕ ನ್ಯಾಯಾಲಯ ಅಮೃತ್ ಪೌಲ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ. ನಾಳೆ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಲಯ (Court) ಸೂಚನೆ ನೀಡಿದೆ.

ಇದನ್ನೂ ಓದಿ: PSI Recruitment Scam: ಎಡಿಜಿಪಿ ಅಮೃತ್ ಪೌಲ್​ಗೆ ನ್ಯಾಯಾಂಗ ಬಂಧನ

ಮುಂದಿನ ವಾರದೊಳಗೆ ಲಂಕಾಕ್ಕೆ ಹೊಸ ಅಧ್ಯಕ್ಷರ ಆಯ್ಕೆ

ಶ್ರೀಲಂಕಾ: ಶ್ರೀಲಂಕಾದಲ್ಲಿ (Sri Lanka) ಆರ್ಥಿಕ ಬಿಕ್ಕಟ್ಟಿನ (Economic Crisis) ಜೊತೆಗೆ ರಾಜಕೀಯ ಬಿಕ್ಕಟ್ಟು (Political Crisis) ಸಹ ಮುಂದುವರೆದಿದೆ. ಜನರ ದಂಗೆಗೆ (revolt) ಹೆದರಿ ದೇಶವನ್ನು ತೊರೆದು, ಹೆಂಡತಿ (Wife) ಜೊತೆ ರಾತ್ರೋರಾತ್ರಿ ದೇಶ ಬಿಟ್ಟು ಓಡಿ ಹೋಗಿದ್ದ ಶ್ರೀಲಂಕಾ ಅಧ್ಯಕ್ಷ (Sri Lanka Preseident) ಗೋತಬಯ ರಾಜಪಕ್ಸ (Gotabaya Rajapaksa) ತಮ್ಮ ಸ್ಥಾನಕ್ಕೆ ರಾಜೀನಾಮೆ (Resign) ನೀಡಿದ್ದಾರೆ. ಸದ್ಯ ಅವರು ಸಿಂಗಾಪುರದಲ್ಲಿ (Singapore) ಆಶ್ರಯ ಪಡೆದ್ದಾರೆ ಎನ್ನಲಾಗಿದ್ದು, ಅಲ್ಲಿಂದಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಅವರ ರಾಜೀನಾಮೆಯನ್ನು ಶ್ರೀಲಂಕಾ ಸಂಸತ್ ಸ್ಪೀಕರ್ (Parliament Speaker) ಮಹಿಂದಾ ಯಾಪಾ ಅಬೇವರ್ದನ (Mahinda Yapa Abeywardena) ಸ್ವೀಕರಿಸಿದ್ದಾರೆ. ಜೊತೆಗೆ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

ಮಕ್ಕಳೇ ಬೆಳಗ್ಗೆ 7ಕ್ಕೆ ಶಾಲೆಗೆ ಹೋಗ್ತಾರೆ, 9 ಗಂಟೆಗೆ ಕೋರ್ಟ್​ ತೆರೆಯಲ್ಲ

ದೆಹಲಿ: ಸರ್ಕಾರಿ ಕಚೇರಿಗಳು ಸೇವಾ ಅವಧಿಯ ಬಗ್ಗೆ ಸಾರ್ವಜನಿಕರಲ್ಲಿ ಕೊಂಚ ಅಸಮಾಧಾನವಿದೆ. ಬೆಳಗ್ಗೆ ಬೇಗ ಬಂದರೂ ಇನ್ನೂ ಆಫೀಸ್ ಬಾಗಿಲನ್ನೇ ತೆಗೆದಿಲ್ಲ ಎಂದು ನೀವೂ ಬೈದುಕೊಂಡಿರಬಹುದು. ಇದೇ ವಿಚಾರ ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಸಹ ಸದ್ದು ಮಾಡಿದೆ. ಅಲ್ಲದೇ ಸುಪ್ರೀಂ ಕೋರ್ಟ್ (Supreme Court) ಪ್ರಕರಣದ ವಿಚಾರಣೆ ನಡೆಸುವುದನ್ನು ಸಹ ಬೇಗನೆ ಶುರು ಮಾಡುವ ಕುರಿತು ಮಹತ್ವದ ಸೂಚನೆ ಹೊರಬಿದ್ದಿದೆ. ಮಕ್ಕಳು ಬೆಳಿಗ್ಗೆ 7 ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಾಧೀಶರು ಮತ್ತು ವಕೀಲರು ತಮ್ಮ ದಿನವನ್ನು 9 ಗಂಟೆಗೆ ಏಕೆ ಪ್ರಾರಂಭಿಸಬಾರದು?  ಎಂದು ಸುಪ್ರೀಂ ಕೋರ್ಟ್​ನ ಮುಂದಿನ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ (Supreme Court Next Chief Justice UU Lalit) ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Justice UU Lalit: ಮಕ್ಕಳೇ ಬೆಳಗ್ಗೆ 7ಕ್ಕೆ ಶಾಲೆಗೆ ಹೋಗ್ತಾರೆ, 9 ಗಂಟೆಗೂ ಕೋರ್ಟ್ ತೆರೆಯಲ್ಲ ಏಕೆ?

ಬದಲಾಗಿದೆ ಬಿಬಿಎಂಪಿಯ 24 ವಾರ್ಡ್​ಗಳ ಹೆಸರು

ಬೆಂಗಳೂರು (ಜು 15) : ಬಿಬಿಎಂಪಿ ಎಲೆಕ್ಷನ್​ ನಡೆಸಲು ಸಜ್ಜಾಗುತ್ತಿರೋ ಸರ್ಕಾರ, ನಿನ್ನೆ (ಜುಲೈ 14) ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು (Ward) ಡಿ ಲಿಮಿಟೇಷನ್ (Delimitation) ಮಾಡಿ‌ 243 ವಾರ್ಡ್​ಗಳಾಗಿ ವಿಂಗಡಿಸಿದೆ. ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್​ (Puneeth Rajkumar) ಅವರಿಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ.  ಬಿಬಿಎಂಪಿ ವಾರ್ಡ್​ಗಳ ಮರು ವಿಂಗಡಣೆ ಮಾಡಿ, ವಾರ್ಡ್​ ನಂಬರ್​ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ
Published by:Pavana HS
First published: