Evening Digest: ಕೊರೊನಾ ಮಧ್ಯೆಯೂ ಬನಶಂಕರಿ ಭಕ್ತರ ಪಾದಯಾತ್ರೆ: ನೆಲಕಚ್ಚಿದ ನಟಿ ರಚಿತಾರ ತೆಲುಗು ಸಿನಿಮಾ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕೊರೊನಾ ಮಧ್ಯೆಯೂ ಬನಶಂಕರಿ ಭಕ್ತರ ಪಾದಯಾತ್ರೆ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ(Weekend Curfew) ಜಾರಿಯಲ್ಲಿದ್ದರೂ ಕೂಡ ಯಾವುದನ್ನೂ ಕೇರ್ ಮಾಡದೆ ಬನಶಂಕರಿ ದೇವಿಯ ಭಕ್ತರು ಪಾದಯಾತ್ರೆ (Banashankari devotees padayatra) ಮೂಲಕ ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣ ಸೇರಿದಂತೆ ಕೊಪ್ಪಳ, ರಾಯಚೂರು ಜಿಲ್ಲೆಗಳಿಂದ ಬಾದಾಮಿಯ ಐತಿಹಾಸಿಕ ಬನಶಂಕರಿ ದೇವಸ್ಥಾನದವರೆಗೆ ಭಕ್ತರು ಮಾಸ್ಕ್(Mask), ಸಾಮಾಜಿಕ ಅಂತರ(Social Distancing), ಸಾನಿಟೈಜಿಂಗ್ ಯಾವುದೂ ಇಲ್ಲದೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ. ಪಾದಯಾತ್ರೆಯಲ್ಲಿ ಮಕ್ಕಳಿಂದ ವೃದ್ದರವರೆಗೂ ಸಾವಿರಾರು ಜನರು ಭಾಗಿಯಾಗಿದ್ದಾರೆ. ಇಳಕಲ್ ನಗರದಿಂದ ಹೂಲಗೇರಿ, ಬಂಡರಗಲ್, ಕಾಟಾಪೂರ, ದಮ್ಮೂರು, ಗುಡೂರು, ಪಟ್ಟದಕಲ್, ಶಿವಯೋಗ ಮಂದಿರ, ಬನಶಂಕರಿ ವರೆಗೂ ಪಾದಯಾತ್ರೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bagalkote: ಕೊರೊನಾ ಮಧ್ಯೆಯೇ ಮತ್ತೊಂದು ಪಾದಯಾತ್ರೆ: ಬನಶಂಕರಿ ಭಕ್ತರ ನಡಿಗೆಗೆ ಇಲ್ಲವೇ ಬ್ರೇಕ್?

ಟಾಪ್ 20 ಡೇಂಜರ್ ಹಳ್ಳಿಗಳ ಪಟ್ಟಿ ಇಲ್ಲಿದೆ
ರಾಜ್ಯಕ್ಕೆ ವೇಗವಾಗಿ ಕೊರೋನಾ ಸೋಂಕು ಹರಡ್ತಿದೆ. ಈಗಾಗ್ಲೇ ರಾಜ್ಯದಲ್ಲಿ ನಿತ್ಯ 20 ಸಾವಿರ ಪಾಸಿಟಿವ್ ಕೇಸ್ಗಳು ಬರ್ತಿದ್ದು, ಕೆಲವೊಂದು ನಗರ ಪಟ್ಟಣಗಳ ಜೊತೆ ಹಲವು ಹಳ್ಳಿಗಳೂ ಇದೀಗ ಡೇಂಜರ್ ಆಗ್ತಿವೆ. ಈ ಅಪಾಯಕಾರಿ ಅಂಶವನ್ನು ಆರೋಗ್ಯ ಇಲಾಖೆ (Health Department) ಬಿಚ್ಚಿಟ್ಟಿದೆ. ಆರೋಗ್ಯ ಇಲಾಖೆಯ ಈ ರಿಪೋರ್ಟ್ ಪ್ರಕಾರ ರಾಜ್ಯದ 30 ಜಿಲ್ಲೆಗಳ ಪೈಕಿ ಸುಮಾರು 282 ಹಳ್ಳಿಗಳಲ್ಲಿ ನಿತ್ಯ ಸೋಂಕು ಹೆಚ್ಚಳವಾಗ್ತಿದೆ. ಕಳೆದ ನಾಲ್ಕು ವಾರಗಳಿಂದ ಸೋಂಕಿತರ ಸಂಖ್ಯೆ ನಿರಂತರ ಏರಿಕೆ ಕಂಡು ಬಂದಿದ್ದು, ರಾಜ್ಯದಲ್ಲಿ 274 ನಗರ-ಪಟ್ಟಣಗಳಿದ್ದು 148 ನಗರ ಪಟ್ಟಣಗಳಲ್ಲಿ ಸೋಂಕು ಏರಿಕೆಯಾಗಿದೆ. 282 ಹಳ್ಳಿಗಳು ಹಾಗೂ 148 ನಗರ ಪಟ್ಟಣಗಳಲ್ಲಿ ಹೆಚ್ಚಿದ ಸೋಂಕಿನ ಆರ್ಭಟಕ್ಕೆ ತತ್ತರಿಸಿ ಹೋಗ್ತಿವೆ. ಇವುಗಳ ಪೈಕಿ ಟಾಪ್ 20 ಹಳ್ಳಿಗಳ ಲಿಸ್ಟ್ ಮಾಡಿದ್ದು ಇವುಗಳು ಡೇಂಜರ್ ಹಂತದಲ್ಲಿವೆ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: COVID-19 Karnataka: ಗ್ರಾಮಗಳಲ್ಲಿ ವೇಗವಾಗಿ ಹರಡ್ತಿದೆ ಕೊರೋನಾ 3ನೇ ಅಲೆ! ಟಾಪ್ 20 ಡೇಂಜರ್ ಹಳ್ಳಿಗಳ ಪಟ್ಟಿ ಇಲ್ಲಿದೆ

ಐದು ರಾಜ್ಯಗಳಲ್ಲಿ ಜ. 22ರವೆಗೂ ಚುನಾವಣಾ ಸಮಾವೇಶಗಳಿಗೆ ನಿಷೇಧ
ಪಂಚ ರಾಜ್ಯಗಳಲ್ಲಿ ಈಗಾಗಲೇ ಚುನಾವಣಾ ದಿನಾಂಕ ಪ್ರಕಟಿಸಿ ಆಯೋಗ (Election Commission) ಘೋಷಣೆ ಹೊರಡಿಸಿದೆ. ಈ ಬೆನ್ನಲ್ಲೇ ಉತ್ತರಖಂಡ, ಗೋವಾ, ಪಂಜಾಬ್, ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ರಾಜಕೀಯ ಚುಟುವಟಿಕೆಗಳು ಗರಿಗೆದರಿದೆ. ಚುನಾವಣೆಗೆ ಇನ್ನೇನು ತಿಂಗಳು ಬಾಕಿ ಇರುವ ಹಿನ್ನಲೆ ಪಂಚ ರಾಜ್ಯಗಳಲ್ಲಿ (Five State Election) ಅಭ್ಯರ್ಥಿಗಳ ಪಟ್ಟಿಯನ್ನು ಅನೇಕ ಪಕ್ಷಗಳು ಹೊರಡಿಸಿದೆ. ಮತದಾರರ ಸೆಳೆಯಲು ಮುಂದಾಗಿರುವ ಅಭ್ಯರ್ಥಿಗಳಿಗೆ ಇದೀಗ ಚುನಾವಣಾ ಆಯೋಗ ಬಿಗ್ ಶಾಕ್ ನೀಡಿದೆ. ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಚುನಾವಣಾ ಸಮಾವೇಶ, ರೋಡ್ ಶೋ ಮೇಲೆ ನಿಷೇಧ ವಿಧಿಸಿ ಚುನಾವಣಾ ಆಯೋಗ ಘೋಷಣೆ ಹೊರಡಿಸಿದೆ.

ಮೇಕೆದಾಟು ಯೋಜನೆಗೆ ಬದ್ಧ ಎಂದ ಡಿಕೆಶಿ
ಮೇಕೆದಾಟು ಯೋಜನೆ (Mekedatu Project) ಬೇಡ, ಅರಣ್ಯ(Forest) ನಾಶ ಆಗುತ್ತದೆ ಎಂಬ ಹೋರಾಟಗಾರ್ತಿ ಮೇದಾ ಪಾಟ್ಕರ್ (Medha Patkar) ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಆ ಹೆಣ್ಣುಮಗಳು ಅವರದ್ದೇ ಆದ ಹೋರಾಟ ಮಾಡುತ್ತಿದ್ದಾರೆ. ನಾವು ಜನರಿಗೆ ಹೋರಾಟ ಮಾಡುತ್ತಿದ್ದೇವೆ, ಜನರ ಬದುಕಿಗಾಗಿ ಮಾಡುತ್ತಿದ್ದೇವೆ. ಅವರ ಅಭಿಪ್ರಾಯ ಅವರಿಗೆ, ಮೇದಾಪಾಟ್ಕರ್ ಏನಾದ್ರು ಮಾಡ್ಕೊಳ್ಳಿ. ಸರ್ಕಾರದವರು ಅದಕ್ಕೆ ಉತ್ತರ ಕೊಡಲಿ. ಈ ಪ್ರೊಜೆಕ್ಟ್ ನಿಂದ ನಮ್ಮ ತಾಲೂಕಿಗೆ ಎಷ್ಟು ಲಾಸ್ ಆಗ್ತಿದೆ ಗೊತ್ತಾ. ನಮ್ಮ ಜಮೀನು ಕಳೆದುಕೊಳ್ತೀವಿ, ದಮ್ ಕಟ್ಟಕೊಂಡು ಸುಮ್ಮನಿದ್ದೇವೆ. ನನ್ನ ಕ್ಷೇತ್ರದ ಜನರ ಭೂಮಿ ಕಳೆದುಕೊಳ್ಳುತ್ತಾರೆ. ಆದರೆ ಕುಡಿಯುವ ನೀರು ಬೇಕು. ನನ್ನ ಕ್ಷೇತ್ರದ ಜನರಿಗೆ ಆ ಮೇಲೆ ಹಣ ಕೊಡಿಸೋ ಪ್ರಯತ್ನ ಮಾಡ್ತೇವೆ ಎಂದರು.

ನೆಲಕಚ್ಚಿದ ರಚ್ಚು ಮೊದಲ ತೆಲುಗು ಚಿತ್ರ ‘ಸೂಪರ್ ಮಚ್ಚಿ’
ಸದ್ಯ ಸ್ಯಾಂಡಲ್ವುಡ್(Sandalwood)ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್(Dimple Queen Rachita Ram) ಅವರದ್ದೇ ಸುದ್ದಿ. ಸದ್ಯಕ್ಕೆ ರಚ್ಚು ಟಾಕ್ ಆಫ್ ದಿ ಟೌನ್(Talk of The Town) ಆಗಿದ್ದಾರೆ. ಸಂಕ್ರಾಂತಿಗೆ ರಚಿತಾ ಅವರ ತೆಲುಗು(Telugu) ಸಿನಿಮಾ ರಿಲೀಸ್ ಆಗಿದೆ, ‘ಸೂಪರ್ ಮಚ್ಚಿ’ (Super Machi) ಹೆಸರಿನ ಸಿನಿಮಾ ಜನವರಿ 14 ರಂದು ಬಿಡುಗಡೆಯಾಗಿದೆ. ಆದರೆ, ರಚಿತಾ ರಾಮ್ ಅವರ ತೆಲುಗಿನ ಮೊದಲ ಸಿನಿಮಾ ನೆಲಕಚ್ಚಿದೆ. ಈ ಹಿಂದೆ ಟಾಲಿವುಡ್(Tollywood) ಎಂಟ್ರಿಯಾಗಿರುವ ಖುಷಿಯನ್ನು ರಚಿತಾ ರಾಮ್ ಹಂಚಿಕೊಂಡಿದ್ದರು. ರಚ್ಚು ಅಭಿಮಾನಿಗಳಲ್ಲೂ ಕೂಡ ಈ ವಿಚಾರ ಸಂತಸ ತಂದಿತ್ತು. ಕನ್ನಡದ ಬಹುತೇಕ ನಟಿಯರು ತೆಲುಗಿನಲ್ಲಿ ಸಕ್ಸಸ್ ಕಂಡಿದ್ದಾರೆ. ರಚಿತಾ ರಾಮ್ ಸಿನಿಮಾ ಮೇಲಿದ್ದ ನಿರೀಕ್ಷೆಗಳು ಇದೀಗ ಮಣ್ಣು ಪಾಲಾಗಿದೆ. ಈ ಚಿತ್ರ ಬಾಕ್ಸಾಫೀಸ್(Box-Office)ನಲ್ಲಿ ಮಾಡಿರುವ ಹಣ ಕೇಳಿದರೆ ನೀವು ಶಾಕ್(Shock) ಆಗುತ್ತಿರ. ದೊಡ್ಡ ಮನೆಯ ಮಗನ ಸಿನಿಮಾಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
Published by:Kavya V
First published: