• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Evening Digest: ಶಿವಮೊಗ್ಗದಲ್ಲಿ ಚಾಕು ಇರಿತ, ಧ್ವಜಾರೋಹಣದ ವೇಳೆ ಸೈನಿಕ ಸಾವು! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

Evening Digest: ಶಿವಮೊಗ್ಗದಲ್ಲಿ ಚಾಕು ಇರಿತ, ಧ್ವಜಾರೋಹಣದ ವೇಳೆ ಸೈನಿಕ ಸಾವು! ಇಂದಿನ ಟಾಪ್ ನ್ಯೂಸ್ ಇಲ್ಲಿವೆ

ಸಂಜೆ ಸುದ್ದಿ

ಸಂಜೆ ಸುದ್ದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

  • Share this:

ಧ್ವಜಾರೋಹಣಕ್ಕೆ ತೆರಳಿದ್ದ ವೇಳೆ ಕಳ್ಳತನ, ಮತ್ತೊಂದೆಡೆ ಸೈನಿಕ ಸಾವು!


ದೇಶಾದ್ಯಂತ ಸ್ವಾಂತ್ರ್ಯದ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಹಳ್ಳಿಯಿಂದ ದಿಲ್ಲಿವರೆಗೂ, ಅಷ್ಟದಿಕ್ಕುಗಳಲ್ಲೂ ತ್ರಿವರ್ಣ ಪತಾಕೆ ರಾರಾಜಿಸುತ್ತಾ ಇತಿಹಾಸವನ್ನು ಮೆಲುಕು ಹಾಕಲಾಯಿತು. ಆದರೆ ಸ್ವಾತಂತ್ರ್ಯ ಬಂದ ಶುಭದಿನದಂದು ಕೂಡ ಹಲವೆಡೆ ಕುಕೃತ್ಯ ನಡೆದಿದೆ. ಗದಗದಲ್ಲಿ ಸ್ವಾತಂತ್ರ್ಯ ದಿನದಂದೇ ಕಳ್ಳರು ಕೈಚಳಕ ತೋರಿದ್ದಾರೆ. ನಗರದಲ್ಲಿ ಹಾಡಹಗಲೇ ಕಳ್ಳರು ಮನೆ ದೋಚಿದ್ದಾರೆ. ಮನೆಯ ದಂಪತಿ ಧ್ವಜಾರೋಹಣಕ್ಕೆ ಹೋಗಿದ್ದಾಗ ಕಳ್ಳರು ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಗದಗ ನಗರದ ಹುಡ್ಕೋ ಕಾಲೋನಿಯ ಸಿದ್ದಲಿಂಗ ನಗರದಲ್ಲಿ ಘಟನೆ ನಡೆದಿದೆ.


ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ


ಶಿವಮೊಗ್ಗ: ಮಲೆನಾಡು ಶಿವಮೊಗ್ಗದಲ್ಲಿ (Shivamogga) ವೀರ ಸಾವರ್ಕರ್ (Veera Savarkar) ಗಲಾಟೆಯ ಬೆನ್ನಲ್ಲೇ ಮತ್ತಷ್ಟು ಗಲಾಟೆ ನಡೆಯುತ್ತಿದೆ. ಶಿವಮೊಗ್ಗದ ಬಜಾರ್‌ನಲ್ಲಿ (Bazaar) ಓರ್ವನಿಗೆ ಚಾಕು (Knif) ಇರಿಯಲಾಗಿದೆ. ಅಮೃತ ಮಹೋತ್ಸವದ (Amrit Mahitsava) ಆಚರಣೆ ದಿನದಂದೇ ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಹಾಗೂ ಟಿಪ್ಪು ಸುಲ್ತಾನ್ (Tipu Sultan) ಭಾವಚಿತ್ರ ವಿವಾದ (Photo Controversy) ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಹಿಂದೂಪರ ಸಂಘಟನೆ ಕಾರ್ಯ ಕಾರ್ಯಕರ್ತರು ವೀರ ಸಾವರ್ಕರ್ ಭಾವಚಿತ್ರ ಹಾಕಿದ್ದರು. ಇದಕ್ಕೆ ವಿರೋಧವಾಗಿ ಮುಸ್ಲಿಂ ಸಮುದಾಯದವರು ಟಿಪ್ಪು ಭಾವಚಿತ್ರ ಹಾಕಿದ್ದರು. ಆಗ ಗಲಾಟೆ ಶುರುವಾಗಿತ್ತು. ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದೇ ಗಲಾಟೆಯ ಮುಂದುವರೆದ ಭಾಗವಾಗಿ ಮನೆ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿಯಲಾಗಿದೆ ಅಂತ ಹೇಳಲಾಗುತ್ತಿದೆ.


ಇದನ್ನೂ ಓದಿ: Shivamogga: ಮನೆಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ, ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ


Savarkar Photo: ಮಂಗಳೂರಲ್ಲೂ ಸಾವರ್ಕರ್ ಫೋಟೋ ವಿವಾದ, ಸ್ವಾತಂತ್ರ್ಯ ಸಂಭ್ರಮದ ನಡುವೆ ಪರ-ವಿರೋಧ!


ಮಂಗಳೂರು: ರಾಜ್ಯದಲ್ಲಿ ಮತ್ತೆ ಐತಿಹಾಸಿಕ ವ್ಯಕ್ತಿಗಳ (Historical Persons) ಪರ ವಿರುದ್ಧ ಘರ್ಷಣೆಗಳು (collision) ಜೋರಾಗುತ್ತಿವೆ. ಶಿವಮೊಗ್ಗದ (Shivamogga) ಮಾಲ್ (mall) ಒಂದರಲ್ಲಿ ಮೊನ್ನೆ ವಿನಾಯಕ ದಾಮೋದರ್ ಸಾವರ್ಕರ್ (Vinayak Damodar Savarkar) ಫೋಟೋ (Photo) ವಿಚಾರವಾಗಿ ಗಲಾಟೆ ನಡೆದಿತ್ತು. ಇದಾದ ಮೇಲೆ ಇಂದು ಶಿವಮೊಗ್ಗದಲ್ಲೇ ಟಿಪ್ಪು ಸುಲ್ತಾನ್ (Tipu Sultan) ಹಾಗೂ ಸಾವರ್ಕರ್ ವಿಚಾರಕ್ಕೆ ಗಲಾಟೆ ನಡೆದಿದ್ದು, ಓರ್ವ ಯುವಕನಿಗೆ ಚಾಕು (Knif) ಇರಿಯಲಾಗಿದೆ. ಇದೀಗ ಮಂಗಳೂರಲ್ಲೂ ಸಾವರ್ಕರ್ ಫೋಟೋ ವಿಚಾರಕ್ಕೆ ಕಿರಿಕ್ ನಡೆದಿರುವ ಬಗ್ಗೆ ವರದಿಯಾಗಿದೆ.


Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​


ನಿರ್ದೇಶಕ ಯೋಗರಾಜ್ ಭಟ್ (Director Yogaraj Bhat )​​ ಹಾಗೂ ಗೋಲ್ಡನ್​​ ಸ್ಟಾರ್ ಗಣೇಶ್ (Golden Star Ganesh) ಕಾಂಬಿನೇಷನ್​ ​ ತೆರೆ ಮೇಲೆ ಮತ್ತೆ ಮೋಡಿ ಮಾಡಿದೆ. ಆಗಸ್ಟ್​ 12 ರಂದು ಕರ್ನಾಟಕ ಸೇರಿದಂತೆ, ಹೊರ ರಾಜ್ಯ ಹಾಗೂ ದೇಶ ವಿದೇಶಗಳಲ್ಲೂ ಗಾಳಿಪಟ-2 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ (Box Office) ಗಾಳಿಪಟ-2 ಚಿತ್ರದ ಕಲೆಕ್ಷನ್​ ಸಖತ್ ಆಗಿಯೇ ಸದ್ದು ಮಾಡಿತ್ತು, ಇದೀಗ ಸಾಲು ಸಾಲು ರಜೆ ಹಿನ್ನೆಲೆ ಗಾಳಿಪಟ 2 (Gaalipata-2) ಸಿನಿಮಾ ಕಲೆಕ್ಷನ್ (Collection) ಡಬಲ್ ಆಗಿದೆ. ‘ಗಾಳಿಪಟ 2’ ಗಣೇಶ್‌ ಅವರ ಹಿಂದಿನ ಚಿತ್ರಗಳ ದಾಖಲೆಯನ್ನು ಮುರಿದಿದೆ.


ಇದನ್ನೂ ಓದಿ: Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​


Puneeth Rajkumar: ಇದಪ್ಪಾ ಪವರ್ ಸ್ಟಾರ್ ಪವರ್; ಇವ್ರಿಂದ ‘ಲಕ್ಕಿಮ್ಯಾನ್’ಗೆ ಸಿಕ್ಕಾಪಟ್ಟೆ ಲಕ್​


ಪವರ್​ಸ್ಟಾರ್​ ಪುನೀತ್ ರಾಜ್​ಕುಮಾರ್​ ​ ನಟನೆ  ಕೊನೆಯ ಸಿನಿಮಾ ಲಕ್ಕಿಮ್ಯಾನ್  ಮುಂದಿನ ತಿಂಗಳು ರಿಲೀಸ್ ಆಗಲಿದೆ. ಲವ್​ ಮಾಕ್ಟೇಲ್​’ (Love Mocktail) ಖ್ಯಾತಿಯ ಡಾರ್ಲಿಂಗ್​ ಕೃಷ್ಣ (Darling Krishna), ಸಂಗೀತಾ ಶೃಂಗೇರಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಲಕ್ಕಿಮ್ಯಾನ್​ (Luckyman)  ಟೀಸರ್ (Teaser) ಬಿಡುಗಡೆಯಾಗಿತ್ತು, ಮತ್ತೆ ಅಭಿಮಾನಿಗಳು ಅಪ್ಪು ಅವರನ್ನು ಟೀಸರ್​ನಲ್ಲಿ ಕಂಡು ಕಣ್ತುಂಬಿ ಕೊಂಡಿದ್ದಾರೆ. ಲಕ್ಕಿಮ್ಯಾನ್ ಚಿತ್ರ ಒಂದೊಂದೆ ದಾಖಲೆ ಬರೆಯುತ್ತಿದೆ.

First published: