Evening Digest: ರಾಜ್ಯದಲ್ಲೂ ನಿಫಾ ಸೋಂಕು ಶಂಕೆ, ಯೋಗಿ ಆಡಳಿತಕ್ಕೆ ಪ್ರಧಾನಿ ಮೆಚ್ಚುಗೆ: ಈ ದಿನದ ಸುದ್ದು ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

 • Share this:
  ರಾಜ್ಯದಲ್ಲೂ ನಿಫಾ ಸೋಂಕು ಶಂಕೆ
  ಕೇರಳದಲ್ಲಿ ನಿಫಾ ಸೋಂಕು (Nipah Virus) ಕಾಣಿಸಿಕೊಳ್ಳುತ್ತಿದ್ದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿತ್ತು. ಈ ನಡುವೆಯೂ ದಕ್ಷಿಣ ಕನ್ನಡ ಯುವಕನೋರ್ವನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ನಿಫಾ ವೈರಸ್ ಟೆಸ್ಟಿಂಗ್ ಮಾಡುವ ಇಕ್ವಿಪ್‌ಮೆಂಟ್ ಕಿಟ್ ತಯಾರಿಸುತ್ತಿದ್ದ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದದ ಯುವಕನಿಗೆ ಈ ಭಯ ಕಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಯುವಕನಿಗೆ ನಿಫಾ ಟೆಸ್ಟ್ ಮಾಡಿದ್ದು ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.

  ರಾಜಧಾನಿಯಲ್ಲಿ ಹೆಚ್ಚಾದ ಕೊರೋನಾ ಭೀತಿ
  ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ಅದರಲ್ಲೂ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆ, ಆತಂಕ ಶುರುವಾಗಿದೆ. ಹೀಗಾಗಿ ನಾಳೆ ಬಿಬಿಎಂಪಿ ವತಿಯಿಂದ ಕೋವಿಡ್ ಟೆಕ್ನಿಕಲ್ ಸಭೆ ನಡೆಯಲಿದೆ. ಶಾಲಾ-ಕಾಲೇಜು ಆರಂಭವಾಗಿರುವ ಹಿನ್ನೆಲೆ, ಹಬ್ಬಗಳನ್ನು ಆಚರಣೆ ಮಾಡಿದ ಹಿನ್ನೆಲೆ, ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಜೊತೆಗೆ ಮತ್ತಷ್ಟು ಟಫ್​ ರೂಲ್ಸ್​ ಜಾರಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.

  ಬಸ್​ ದರ ಹೆಚ್ಚಳವಿಲ್ಲ
  ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ದಿನೇ ದಿನೇ ಹೆಚ್ಚಾಗ್ತಿದೆ. ಕೊರೋನಾ ಜೊತೆಗೆ ದುಬಾರಿ ಬದುಕಿಗೆ ಬಡಜನತೆ ಕಂಗಾಲಾಗುತ್ತಿದ್ದಾರೆ. ಈ ನಡುವೆ ರಾಜ್ಯದ ಪ್ರಯಾಣಿಕರಿಗೆ ಬಸ್​ ಟಿಕೆಟ್​​ ಬೆಲೆ ಏರಿಕೆ‌ ಆತಂಕವಿತ್ತು. ಆದರೆ ಈ ಆತಂಕವನ್ನು‌ ಸದ್ಯಕ್ಕೆ ಸರ್ಕಾರ ದೂರ ಮಾಡಿದೆ. ಕೊರೋನಾದಿಂದ ಇರುವ ಕೆಲಸ ಹೋಗಿ, ವ್ಯಾಪಾರವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಮೂರನೇ ಅಲೆ ಆತಂಕದ ನಡುವೆ ಪೆಟ್ರೋಲ್, ಡೀಸೆಲ್, ಮನೆ ಅಡುಗೆಯ ಗ್ಯಾಸ್ ಬೆಲೆ ದಿನೇ ದಿನೇ‌ ಹೆಚ್ಚಾಗುತ್ತಿದೆ. ದಿನ‌ಬಳಕೆಯ ವಸ್ತುಗಳ ಬೆಲೆಯೂ ಏರುತ್ತಿದೆ. ಇದರಿಂದ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಿ ಎಂದು ಬಿಎಂಟಿಸಿ ಸೇರಿದಂತೆ ವಿವಿಧ ಸಾರಿಗೆ ನಿಗಮಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು

  ಯೋಗಿ ಆಡಳಿತಕ್ಕೆ ಪ್ರಧಾನಿ ಮೆಚ್ಚುಗೆ
  ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ ಮಹೇಂದ್ರ ಪ್ರತಾಪಸಿಂಹ ರಾಜ್ಯ ವಿಶ್ವವಿದ್ಯಾನಿಲಯ ಹಾಗೂ ಅಲಿಘಡ್​​ ನೋಡ್ ಆಫ್ ಡಿಫೆನ್ಸ್ ಕಾರಿಡಾರ್​ಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಆಡಳಿತವನ್ನು ಶ್ಲಾಘಿಸಿದ ಅವರು ಇಂದು ಪ್ರಮುಖ ದಿನ ಎಂದು ಬಣ್ಣಿಸಿದರು. ರಾಧಾ ಅಷ್ಟಮಿಯ ಈ ದಿನ ಈ ಕಾರ್ಯಕ್ಕೆ ಅಡಿಗಲ್ಲು ಹಾಕುವ ಮೂಲಕ ಇನ್ನುಷ್ಟು ಪ್ರವಿತ್ರಗೊಳಿಸಲಾಗಿದೆ . ರಾಜ ಮಹೇಂದ್ರ ಪ್ರತಾಪಸಿಂಹ ವಿಶ್ವವಿದ್ಯಾನಿಲಯದ ಅಭಿವೃದ್ಧಿಯಿಂದ ಸಂತೋಷವಾಗಲಿದೆ. ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣ ತಜ್ಞ ಮತ್ತು ಸಮಾಜ ಸುಧಾರಕರಾದ ರಾಜ ಮಹೇಂದ್ರ ಪ್ರತಾಪ ಸಿಂಹ ಅವರ ಸ್ಮರಣೆ ಮತ್ತು ಗೌರವಾರ್ಥವಾಗಿ ರಾಜ್ಯ ಸರ್ಕಾರವು ವಿವಿ ಸ್ಥಾಪಿಸಿದೆ ಎಂದರು

  ಜೊಮಾಟೊ ಸಹಸಂಸ್ಥಾಪಕ ಗೌರವ್ ಗುಪ್ತಾ ರಾಜೀನಾಮೆ
  ಭಾರತದ ನಂಬರ್ ಒನ್ ಆನ್​ಲೈನ್ ಫೂಡ್ ಡೆಲಿವರಿ ಕಂಪನಿ ಎನಿಸಿರುವ ಜೊಮಾಟೋದ ಚೀಫ್ ಆಫರೇಟಿಂಗ್ ಆಫೀಸರ್ ಗೌರವ್ ಗುಪ್ತಾ ಅವರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಮನಿ ಕಂಟ್ರೋಲ್ ವೆಬ್ ಸೈಟ್ ತನ್ನ ಮೂಲಗಳನ್ನ ಉಲ್ಲೇಖಿಸಿ ವರದಿ ಮಾಡಿದೆ. ಜೊಮಾಟೋದ ಸಹ ಸಂಸ್ಥಾಪಕರೂ ಆಗಿರುವ ಗೌರವ್ ಗುಪ್ತಾ 2015ರಿಂದಲೂ ಕಂಪನಿ ಜೊತೆಗಿದ್ದು ಅದರ ಏರಿಳಿತಗಳ ಹಾದಿಯನ್ನ ಕಂಡಿದ್ದಾರೆ. ಇವರು ಮಾಡಿದ ಕೆಲ ಪ್ರಯೋಗಗಳು ನಿರೀಕ್ಷಿತ ಫಲ ಕೊಟ್ಟಿಲ್ಲ. ಇದು ಇವರ ರಾಜೀನಾಮೆಗೆ ಕಾರಣವಾಗಿರುವ ಸಾಧ್ಯತೆ ಇದೆ. ಗೌರವ್ ಗುಪ್ತ ಅವರು ಜೊಮಾಟೋದಿಂದ ಹೊರಬಂದು ಪರ್ಯಾಯ ವ್ಯವಹಾರ ಶುರು ಮಾಡುವ ನಿರೀಕ್ಷೆ ಇದೆ. ಅದನ್ನ ಗುಪ್ತಾ ಅವರು ಆಂತರಿಕ ಪತ್ರದಲ್ಲಿ (Internal E-mail) ಬರೆದಿರುವುದು ಮನಿ ಕಂಟ್ರೋಲ್​ಗೆ ಮಾಹಿತಿ ಸಿಕ್ಕಿದೆ.

  ಟಿಎಂಸಿ ಸಂಸದನ ಮನೆ ಮೇಲೆ ಬಾಂಬ್​ ದಾಳಿ
  ಕೋಲ್ಕತಾ ಬಳಿಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ ನಿವಾಸದ ಮೇಲೆ ಮತ್ತೊಮ್ಮೆ ಮಂಗಳವಾರ ಬಾಂಬ್ ದಾಳಿ ನಡೆಸಲಾಗಿದೆ, ಮೊದಲ ಘಟನೆ ವರದಿಯಾದ ಒಂದು ವಾರದ ನಂತರ ಮತ್ತೆ ಈ ಘಟನೆ ನಡೆದಿದ್ದು ಬಿಜೆಪಿ ಮುಖಂಡರು ಇದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಗ್ಗೆ 8: 30 ರ ಸುಮಾರಿಗೆ ಅವರ ಮನೆಯ ಹಿಂಭಾಗದಲ್ಲಿ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  Published by:Seema R
  First published: