Evening Digest: ಮುಂದಿನ ತಿಂಗಳಿಂದ ಮಕ್ಕಳಿಗೆ ವ್ಯಾಕ್ಸಿನ್; ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು; ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಮುಂದಿನ ತಿಂಗಳಿಂದ ಮಕ್ಕಳಿಗೆ ವ್ಯಾಕ್ಸಿನ್ : Coronavirus ಸದ್ಯ ದೇಶದಲ್ಲಿ ಕಡಿಮೆಯಾಗಿದೆ. ಇದಕ್ಕೆ ದೇಶದ ವಯಸ್ಕ ಜನಸಂಖ್ಯೆಯಲ್ಲಿ ಬಹುಪಾಲು ಕನಿಷ್ಠ ಒಂಡು ಡೋಸ್‌ ಲಸಿಕೆಯನ್ನಾದರೂ ಪಡೆದುಕೊಂಡಿದ್ದಾರೆ. ಸದ್ಯ, ಎರಡನೇ ಡೋಸ್‌ ಲಸಿಕೆ ಪಡೆಯುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, COVID-19 ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೋವಿಡ್‌ ಆತಂಕವಿದೆ. ಅದು ಮಕ್ಕಳನ್ನೇ ಹೆಚ್ಚಾಗಿ ಗುರಿಯಾಗಿಸುತ್ತೆ ಅಂತ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ರು. ಈ ಹಿನ್ನೆಲೆ, ಶಾಲೆ, ಕಾಲೇಜುಗಳು ಆರಂಭ ಮಾಡುತ್ತಿರುವುದಕ್ಕೆ ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಹಲವರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸೋದೇ ಇಲ್ಲ ಎಂದೂ ಹೇಳುತ್ತಿದ್ದರು. ಆದರೀಗ, ಆ ಸಮಸ್ಯೆಯೂ ನಿವಾರಣೆ ಆಗುತ್ತಿದ್ದು, ದೇಶದಲ್ಲೂ ಮಕ್ಕಳಿಗೆ ಶೀಘ್ರದಲ್ಲೇ ಕೋವಿಡ್‌ - 19 ವಿರುದ್ಧ ಲಸಿಕೆ ನೀಡುವುದು ಆರಂಭವಾಗಲಿದೆ. ಭಾರತ ನಿರ್ಮಿತ ಕೋವ್ಯಾಕ್ಸಿನ್‌ ಲಸಿಕೆಯನ್ನು 2 - 18 ವರ್ಷದ ಕೆಳಗಿನ ಮಕ್ಕಳಿಗೆ ನವೆಂಬರ್‌ನಿಂದಲೇ ನೀಡಲಾಗುವುದು ಎಂದು ತಿಳಿದುಬಂದಿದೆ.

ಕ್ರೈಸ್ತ ಮಿಷನರಿಗಳ ಸಮೀಕ್ಷೆ

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು(Backward Classes and Minorities Welfare Department ) ತನ್ನ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಮತ್ತು ಅಧಿಕೃತವಲ್ಲದ ಕ್ರಿಶ್ಚಿಯನ್ ಮಿಷನರಿಗಳನ್ನು ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ. ರಾಜ್ಯದಲ್ಲಿ ಪ್ರಚಲಿತದಲ್ಲಿರುವ ಧಾರ್ಮಿಕ ಮತಾಂತರದ ಚರ್ಚೆಗಳ ಮಧ್ಯೆ ಈ ಆದೇಶವನ್ನು ಹೊರಡಿಸಿರುವುದು ಸಾಕಷ್ಟ ಮಹತ್ವ ಪಡೆದುಕೊಂಡಿದೆ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ವಿಕಾಸ ಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಪ್ರಕಾರ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಕಡಾ 40 ರಷ್ಟು ಚರ್ಚುಗಳಿಗೆ ಅಧಿಕೃತ ಮಾನ್ಯತೆ ಇಲ್ಲ. "ಈ ನಿಟ್ಟಿನಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಮಿಷನರಿಗಳ ಬಗ್ಗೆ ಸಮಿತಿಯು ಚರ್ಚಿಸಿದೆ" ಎಂದು ಅವರು ಹೇಳಿದರು.

ವಿದ್ಯಾರ್ಥಿಗಳನ್ನ ಪಾಸ್ ಮಾಡುತ್ತಾರಾ?

SSLC ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳನ್ನು ಶಿಕ್ಷಣ ಇಲಾಖೆ ಗ್ರೇಸ್ ಮಾರ್ಕ್ಸ್ ನೀಡಿ ಪಾಸ್ ಮಾಡಿತ್ತು.  ಸರ್ಕಾರದ ಸಾಮೂಹಿಕ ಜಸ್ಟ್​​ ಪಾಸನ ಒಪ್ಪದ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಆ ರೀತಿ ಪರೀಕ್ಷೆ ತೆಗೆದುಕೊಂಡವರಲ್ಲಿ ಕೆಲವರು ಅನುತ್ತೀರ್ಣರಾಗಿದ್ದರು. ಅದರೀಗ ಪೂರಕ ಪರೀಕ್ಷೆಯಲ್ಲಿ ಫೇಲ್ ಆಗಿರುವ ವಿದ್ಯಾರ್ಥಿಗಳನ್ನೂ ಪಾಸ್ ಮಾಡುವಂತೆ ಒತ್ತಾಸೆ ಕೇಳಿ ಬರುತ್ತಿದೆ. ಆದರೆ SSLC ಬೋರ್ಡ್ ನಿರ್ದೇಶಕಿ ಸುಮಗಂಲ ಮಾತ್ರ ಇಲಾಖೆಯ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮೊದಲ ಪರೀಕ್ಷೆ  ಬರೆದಿದ್ದವರಿಗೆ ಅಷ್ಟೇ ಪಾಸ್ ಆಗಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಆ ಅವಕಾಶ ಉಪಯೋಗಿಸಿಕೊಳ್ಳುವುದು, ಬಿಡುವುದು ವಿದ್ಯಾರ್ಥಿಗಳಿಗೆ ಬಿಟ್ಟಿದ್ದು. ಯಾರು ಅವಕಾಶ ಉಪಯೋಗಿಸಿಕೊಂಡಿಲ್ಲ, ಅವರಿಗೆ ಮುಂದಿನ ಪರೀಕ್ಷೆ ಬರೆಯಲು ಅವಕಾಶ ಕೊಡುವುದಾಗಿ ಹೇಳಿದ್ದೇವೆ ಹೊರತು, ಎಲ್ಲರನ್ನೂ ಪಾಸ್ ಮಾಡ್ತಿವಿ ಅಂತ ಹೇಳಿಲ್ಲ ಅಂತಿದ್ದಾರೆ.

ಹಿಂದೂ ದೇಗುಲದ ಮೇಲೆ ದಾಳಿ

ನೆರೆಯ ಬಾಂಗ್ಲಾದೇಶ(Bangladesh)ದಲ್ಲಿ ಮತ್ತೆ ಹಿಂದೂ ದೇವಾಲಯದ ಮೇಲಿನ ದಾಳಿ ಪ್ರಕರಣ ಮತ್ತೊಂದು ವರದಿಯಾಗಿದೆ. ಬಾಂಗ್ಲಾದೇಶದ ಪೊಲೀಸರ ಪ್ರಕಾರ, ದುರ್ಗಾ ಪೂಜೆ (Durga Puja) ಹಿನ್ನೆಲೆ ಚಾಂದಪುರ ಜಿಲ್ಲೆಯ ಹಾಜಿಗಂಜ್ ಉಪ ಜಿಲ್ಲೆಯ ಕುಮಿಲ್ಲಾ ದೇವಾಲಯದಲ್ಲಿ ಭಕ್ತರು (Hindu Temple) ಸೇರಿದ್ದರು. ಈ ಸಮಯದಲ್ಲಿಯೇ ಗುಂಡಿನ ದಾಳಿ ನಡೆಸಿ ಮೂವರನ್ನು ಕೊಲೆ ಮಾಡಲಾಗಿದೆ. ಬಾಂಗ್ಲಾದೇಶದ ಹಲವು ಭಾಗಗಳಲ್ಲಿ ಇದೇ ಮಾದರಿಯ ಪ್ರಕರಣಗಳು ವರದಿಯಾಗುತ್ತಿವೆ. ಸುಮಾರು 22 ಜಿಲ್ಲೆಗಳ ದೇವಾಲಯಗಳ ಮೇಲೆ ಅಪರಿಚಿತರು ದಾಳಿ ನಡೆಸಿ, ದೇಗುಲಗಳನ್ನು ಧ್ವಂಸಗೊಳಿಸುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಬಿತ್ತರಿಸುತ್ತಿವೆ.

ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು

ತಾಂತ್ರಿಕ ಸಮಸ್ಯೆಯಿಂದಾಗಿ ಕಿಚ್ಚ ಸುದೀಪ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಇಂದು ತೆರೆ ಕಾಣಲಿಲ್ಲ. ಆಯುಧಪೂಜೆ ಪ್ರಯುಕ್ತ ಬೆಳ್ಳಿತೆರೆಗೆ ಗ್ರ್ಯಾಂಡ್​ ಎಂಟ್ರಿ ಕೊಡಲು ತಯಾರಿ ನಡೆಸಿಕೊಂಡಿದ್ದ ಕೋಟಿಗೊಬ್ಬ 3 ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಎಲ್ಲ ಸರಿಯಾಗಿ ಇದ್ದಿದ್ದರೆ ಇಂದು ಬೆಳಗಿನಿಂದ ಸುದೀಪ್​ ಅಭಿಮಾನಿಗಳು ಸಂಭ್ರಮದಿಂದ ಚಿತ್ರಮಂದಿರಗಳಲ್ಲಿ ಹಬ್ಬ ಆಚರಿಸಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದಾಗಿ ಸಿನಿಮಾ ಇವತ್ತು ರಿಲೀಸ್  ಆಗಿಲ್ಲ. ಇನ್ನು ಬೆಳಗಿನಿಂದ ಚಿತ್ರಮಂದಿರಗಳ ಬಳಿ ಬಂದು ಸಿನಿಮಾ ನೋಡಲು ಕಾಯುತ್ತಿರುವ ಸಿನಿಪ್ರಿಯರು ಬೇಸದಿಂದ ಮನೆಯತ್ತ ಮರಳುತ್ತಿದ್ದಾರೆ. ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಸಿನಿಮಾ ಪ್ರದರ್ಶನ ಈಗ ಆರಂಭವಾಗಲಿದೆ, ಆಗ ಶುರುವಾಗಲಿದೆ ಎಂದು ಕಾಯುತ್ತಿದ್ದವರು ನಿರಾಸೆಯಿಂದ ಮನೆಯತ್ತ ಮರಳುತ್ತಿದ್ದಾರೆ. ಇನ್ನು, ಕಾರಣಾಂತರದಿಂದಾಗಿ 'ಕೋಟಿಗೊಬ್ಬ 3' ಚಿತ್ರ ರಿಲೀಸ್​ ಆಗದೇ ಇರುವುದಕ್ಕೆ ನಟ ಕಿಚ್ಚ ಸುದೀಪ್​ ಕ್ಷಮೆ ಯಾಚಿಸಿದ್ದಾರೆ. ಟ್ವೀಟ್​ ಮಾಡುವ ಮೂಲಕ ಆಗಿರುವ ಸಮಸ್ಯೆಗೆ ಕ್ಷಮಿಸಿ ಎಂದು ಮನವಿ ಮಾಡಿದ್ದಾರೆ.
Published by:Kavya V
First published: