ನವದೆಹಲಿಯಲ್ಲಿ ಜೋರಾಯ್ತು ಕೈ ಪ್ರೊಟೆಸ್ಟ್, ಸಂಸದ ಡಿಕೆ ಸುರೇಶ್‌ರನ್ನು ವ್ಯಾನ್‌ಗೆ ತಳ್ಳಿದ ಪೊಲೀಸ್!
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ (National Herald Case) ಜಾರಿ ನಿರ್ದೇಶನಾಲಯ (ED) ಕಾಂಗ್ರೆಸ್ ನಾಯಕ (Congress Leader) ರಾಹುಲ್ ಗಾಂಧಿ (Rahul Gandhi) ಅವರನ್ನು ವಿಚಾರಣೆಗೆ (Enquiry) ಒಳಪಡಿಸಿರೋದಕ್ಕೆ ಕಾಂಗ್ರೆಸ್ (Congress) ಕೆಂಡಾಮಂಡಲವಾಗಿದೆ. ನಿನ್ನೆ ದೆಹಲಿ (Delhi), ಬೆಂಗಳೂರು (Bengaluru) ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿದ್ದರು. ಇಂದೂ ಕೂಡ ದೆಹಲಿ ಸೇರಿದಂತೆ ಹಲವೆಡೆ ಪ್ರತಿಭಟನೆ ಮುಂದುವರೆದಿದೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯದ ಹಲವು ನಾಯಕರು ಭಾಗಿಯಾಗಿದ್ದಾರೆ. ದಿನೇಶ್ ಗುಂಡೂರಾವ್ (Dinesh Gundurao), ಡಿಕೆ ಸುರೇಶ್ (DK Suresh) ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಪೊಲೀಸರು (Police) ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
Youth Congress ರಾಷ್ಟ್ರೀಯ ಅಧ್ಯಕ್ಷರಿಗೆ ಒಳ್ಳೆ ಭವಿಷ್ಯವಿದೆ; ರಾಜಕೀಯದಲ್ಲಲ್ಲ, ರನ್ನಿಂಗ್‌ನಲ್ಲಿ! ಶ್ರೀನಿವಾಸ್ ವಿರುದ್ಧ ಸಿಟಿ ರವಿ ವ್ಯಂಗ್ಯ
ಬೆಂಗಳೂರು: ನಿನ್ನೆ ನವದೆಹಲಿಯಲ್ಲಿ (New Delhi) ಇಡಿ (ED) ವಿರುದ್ಧ ಕಾಂಗ್ರೆಸ್ ನಾಯಕರು (Congress Leaders), ಕಾರ್ಯಕರ್ತರು ನಿನ್ನೆಯಿಂದ ಪ್ರತಿಭಟನೆ (Protest) ನಡೆಸುತ್ತಿದ್ದಾರೆ. ನಿನ್ನೆ ದೆಹಲಿಯಲ್ಲಿ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ (Youth Congress National President) ಬಿವಿ ಶ್ರೀನಿವಾಸ್ (BV Srinivas) ಪೊಲೀಸರು (Police) ವಶಕ್ಕೆ ಪಡೆಯಲು ಬಂದಾಗ, ಎದ್ದೆನೋ ಬಿದ್ದೆನೋ ಅಂತ ಓಡಿ ಹೋಗಿದ್ದರು. ಶ್ರೀನಿವಾಸ್ ಎಸ್ಕೇಪ್ ಆಗುತ್ತಿರುವ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ಫುಲ್ ವೈರಲ್ (Viral) ಆಗಿತ್ತು. ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP national general secretary) ಸಿ.ಟಿ. ರವಿ (C.T. Ravi) ವ್ಯಂಗ್ಯವಾಡಿದ್ದಾರೆ.
“ಮೇವು ತಿಂದವರು ಜೈಲಿನಲ್ಲಿದ್ದಾರೆ. ಈಗ ಪೇಪರ್ ತಿಂದವರು ಜೈಲಿಗೆ ಹೋಗ್ತಾರೆ ಎಂದು ಹೇಳಿದ್ದಾರೆ. ಇ.ಡಿ ವಿರುದ್ಧ ಕಾಂಗ್ರೆಸ್ ಹೋರಾಟವನ್ನು ಟೀಕಿಸಿದ ಅವರು, ಕಾಂಗ್ರೆಸ್ ನಾಯಕರು ಸಂವಿಧಾನಕ್ಕಿಂತ ಮೇಲಿನವರಾ? ನಿಮಗೆ ಯಾಕೆ ಭಯ? ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎನ್ನುವಂತೆ ಭ್ರಷ್ಟಾಚಾರ ನಡೆಸಿದವರಿಗೆ ಭ್ರಷ್ಟಾಚಾರ ನಡೆಸುವವರಿಗೆ ಕಾಂಗ್ರೆಸ್ ಬೆಂಬಲ ಕೊಡ್ತಿದೆ ಎಂದು ಆರೋಪಿಸಿದ್ದಾರೆ.
ಅಗ್ನಿಪಥ ಯೋಜನೆಗೆ ಕೇಂದ್ರ ಅನುಮೋದನೆ, ಐತಿಹಾಸಿಕ ನಿರ್ಧಾರ ತೆಗೆದುಕೊಂಡ ರಾಜ್ನಾಥ್ ಸಿಂಗ್
ನವದೆಹಲಿ (ಜೂನ್ 14): ಇಂದು ಕೇಂದ್ರ ಸರ್ಕಾರ ಸೇನಾ ನೇಮಕಾತಿಯಲ್ಲಿ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದೆ. ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಗ್ನಿಪಥ ಯೋಜನೆಗೆ ಕೇಂದ್ರದ ಸಂಪುಟ ಸಮಿತಿಯಲ್ಲಿ ಇಂದು ಅನುಮೋದನೆ ದೊರಕಿದೆ. ಈ ಯೋಜನೆಯು ಒಂದು ಯತಿಹಾಸಿಕ ಯೋಜನೆ ಆಗಿದ್ದು, ಈ ಮೂಲಕ 4 ವರ್ಷಗಳ, ಕಾಲ ಸೇನೆಯಲ್ಲಿ ಉತ್ಸಾಹಿ ಯುವಕರನ್ನು ನೇಮಿಸಿಕೊಳ್ಳಲಾಗುವುದು ಎಂದು ಕೆಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಭಾರತೀಯ ಸೇನೆಯು ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಯೋಜನೆಯ ಮೂಲಕ ಕೆಲಸವನ್ನು ತೊರೆಯುವಾಗ ಅವರುಗಳಿಗೆ ಸೇವಾ ನಿಧಿ ಪ್ಯಾಕೇಜ್ ಗಳನ್ನೂ ಸಹ ನೀಡಲಾಗುತ್ತದೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ.
ಮಳಲಿ ಮಸೀದಿ ವಿವಾದ; ಯಾವುದೇ ಆದೇಶ ಹೊರಡಿಸದಂತೆ ಮಂಗಳೂರು ಕೋರ್ಟ್‌ಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಳಲಿ ಮಸೀದಿಯಲ್ಲಿ (Malali Mosque) ದೇವಾಲಯ ಮಾದರಿಯ ರಚನೆ ಪತ್ತೆಯಾಗಿದೆ ಅನ್ನೋ ವಿಚಾರ ಭಾರೀ ಸದ್ದು ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವ ಕುರಿತು ಯಾವುದೇ ಆದೇಶ (Order) ಹೊರಡಿಸದಂತೆ ಹೈಕೋರ್ಟ್ (High Court) ಮಂಗಳೂರಿನ ಸಿವಿಲ್ ಕೋರ್ಟ್‌ಗೆ (Civil Court) ಇಂದು (ಜೂನ್ 14) ನಿರ್ದೇಶನ ನೀಡಿದೆ. ಮಂಗಳೂರಿನ ತೆಂಕಳೈಪಡಿ ಗ್ರಾಮದ ಧನಂಜಯ್ ಹಾಗೂ ಬಡುಗಳೈಪಡಿ ಗ್ರಾಮದ ಮನೋಜ್ ಕುಮಾರ್ (Manoj Kumar) ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಇದನ್ನೂ ಓದಿ: Malali Mosque: ಮಳಲಿ ಮಸೀದಿ ವಿವಾದ; ಯಾವುದೇ ಆದೇಶ ಹೊರಡಿಸದಂತೆ ಮಂಗಳೂರು ಕೋರ್ಟ್‌ಗೆ ಹೈಕೋರ್ಟ್ ಸೂಚನೆ
Harikathe Alla Girikathe: ಹರಿ ಕಥೆ ಅಲ್ಲ, ಗಿರಿ ಕಥೆ ಸಿನಿಮಾದ ಟ್ರೈಲರ್ ರಿಲೀಸ್, ಈ ಬಾರಿ ಭಯಂಕರ ನಗಿಸ್ತಾರಂತೆ ಶೆಟ್ರು!
ಸ್ಯಾಂಡಲ್ವುಡ್ನ (Sandalwood) ಖ್ಯಾತ ನಟ ಹಾಗೂ ನಿರ್ದೇಶಕ ರಿಷಭ್ ಶೆಟ್ಟಿ (Rishab Shetty) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಅದರಲ್ಲಿಯೂ ಹೊಂಬಾಳೆ ಫಿಲ್ಮ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಂತಾರ (Kantara) ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿ ಆಗಿರುವ ರಿಷಭ್, ಇದೀಗ ಕಾಂತಾರ ಚಿತ್ರದ ಬಿಡುಗಡೆ ದಿನಾಂಕವನ್ನೂ ಘೋಷಸಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದರ ನಡುವೆ ರಿಷಭ್ ಅವರ ಇನ್ನೊಂದು ನಿರೀಕ್ಷಿತ ಸಿನಿಮಾ ಸಂದೇಶ್ ನಾಗರಾಜ್ ಅವರ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಹರಿಕಥೆ ಅಲ್ಲ ಗಿರಿಕಥೆ (Harikathe Alla Girikathe) ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಇಬ್ಬರು ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಶೈಲಿಯಲ್ಲಿ ಮೂಡಿಬಂದಿರುವ ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ