Evening Digest: ಮಕರ ಸಂಕ್ರಾಂತಿಯಂದೇ ಭೀಕರ ಅಪಘಾತ; ದಕ್ಷಿಣ ಆಫ್ರಿಕಾಕ್ಕೆ ಸರಣಿ ಜಯ: ಇಂದಿನ ಪ್ರಮುಖ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಹಬ್ಬದ ದಿನವೇ ಆಗಮಿಸಿದ ಜವರಾಯ
  ಸಂಕ್ರಾಂತಿ ಹಬ್ಬದಂದು ಜವರಾಯನ ಅಟ್ಟಹಾಸಕ್ಕೆ ಏಳು ಜನರ ಪ್ರಾಣಪಕ್ಷಿ ಹಾರಿ ಹೋಗಿದೆ. ಇಂದು ಬೆಳ್ಳಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲುಕಿನ ಕಾನನಕಟ್ಟೆ (NH 13) ಬಳಿ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಇಂಡಿಕಾ ಕಾರ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ. ಕಾರ್ ಚಾಲಕ ಮದ್ಯ ಸೇವನೆ ಮಾಡಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು SP ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

  ಗಂಡನ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ
  ಬೆಂಗಳೂರು ಹೊರವಲಯದಲ್ಲಿರುವ ಸೋಲದೇವನಹಳ್ಳಿಯ ಡಾಬಾಗೆ ಬೆಂಕಿ ಹೆಚ್ಚಿದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು, ಈ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಡಿಸೆಂಬರ್ 24, 2021ರಂದು ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅರ್ಪಿತ್ ಎಂಬವರಿಗೆ ಸೇರಿದ ಯು ಟರ್ನ್ ಹೆಸರಿನ ಡಾಬಾಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಡಾಬಾದಲ್ಲಿದ್ದ ಕೆಲಸಗಾರನ ಮೇಲೆಯೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೆಲಸಗಾರ ಸಹ ಸಾವನ್ನಪ್ಪಿದ್ದನು. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್‌ ಮಾಧ್ಯಮಗಳಿಗೆ ನೀಡಿದ್ದಾರೆ

  ದೆಹಲಿಯಲ್ಲಿ ಬಾಂಬ್ ಭೀತಿ
  ರಾಷ್ಟ್ರ ರಾಜಧಾನಿ ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರ್ಕೆಟ್​ನಲ್ಲಿ ಇಂದು ಅನುಮಾನಾಸ್ಪದವಾದ ಚೀಲವೊಂದು ಪತ್ತೆಯಾಗಿದ್ದು, ಆ ಚೀಲದಲ್ಲಿ ಬಾಂಬ್ ಇರಿಸಲಾಗಿತ್ತು. ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಇರಿಸಲಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಐಇಡಿ ಇರಿಸಲಾಗಿದ್ದ ಬ್ಯಾಗನ್ನು ವಶಕ್ಕೆ ಪಡೆದಿದ್ದರು. ಅಲ್ಲಿ ನೆರೆದಿದ್ದವರನ್ನೆಲ್ಲ ದೂರ ಕಳಸಿ, ಬಾಂಬ್​ ನಿಷ್ಕ್ರಿಯಗೊಳಿಸುವ ಕೆಲಸ ನಡೀತು. ಗಾಜಿಪುರ ಮಂಡಿಯಲ್ಲಿನ ಪತ್ತೆಯಾದ ಬಾಂಬ್​ ಸುಧಾರಿತ ಸ್ಫೋಟಕ ಸಾಧನ(ಐಇಡಿ)ಎಂದು ತಿಳಿದುಬಂದಿದೆ. ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  ಜ. 31ರಂದು ಕೇಂದ್ರ ಬಜೆಟ್​ ಅಧಿವೇಶನ
  ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಿಂದ ಪ್ರಾರಂಭವಾಗಲಿದೆ. ಫೆ. 1ರಂದು ಬಜೆಟ್ ಮಂಡನೆಯಾಗಲಿದ್ದು, ಫೆ. 11ರಂದು ಬಜೆಟ್​ ಅಧಿವೇಶನದ ಮೊದಲ ಭಾಗ ಮುಕ್ತಾಯಗೊಳ್ಳಲಿದೆ. ಬಳಿಕ ಬಜೆಟ್​ ಮೇಲಿನ ಚರ್ಚೆ ಅಧಿವೇಶ ಮಾರ್ಚ್​ 14ರಿಂದ ಆರಂಭವಾಗಲಿದ್ದು, ಏಪ್ರಿಲ್ 8ಕ್ಕೆ ಅಧಿವೇಶನ ಮುಕ್ತಾಯಗೊಳ್ಳಲಿದೆ. ಬಜೆಟ್​​ ಮೊದಲ ದಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳಾದ ರಮನಾಥ್ ಕೋವಿಂದ್​​ ಅವರು ಭಾಷಣ ಮಾಡಲಿದ್ದಾರೆ. ಫೆ. 1ರಂದು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್​ ಆಯವ್ಯಯ ಪತ್ರ ಮಂಡಿಸಲಿದ್ದಾರೆ.

  ಇದನ್ನು ಓದಿ: ಗಂಡನ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ನೀಡಿ ಅಮಾಯಕ ಜೀವ ಬಲಿ ಪಡೆದ ಪತ್ನಿ 

  ಸಮುದಾಯ ಆರೋಗ್ಯಾಧಿಕಾರಿಗಳ ಪ್ರತಿಭಟನೆ
  ಕೋವಿಡ್​​​ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಜೀವದ ಹಂಗು ತೊರೆದು ಕಾರ್ಯ ಮಾಡಲು ಮುಂದಾಗಿದ್ದಾರೆ. ಆದರೆ, ರೋಗಿಗಳ ಜೀವ ಉಳಿಸುವ ಕಾರ್ಯ ಮಾಡುವ ನೌಕರರ ಜೀವನ ನಡೆಸುವದು ಕಷ್ಟಕರವಾಗಿದೆ. ಯಾದಗಿರಿ ಜಿಲ್ಲಾದ್ಯಂತ ಸರಕಾರಿ ಆಸ್ಪತ್ರೆ(Hospitals)ಯಲ್ಲಿ 145 ಸಮುದಾಯ ಆರೋಗ್ಯಧಿಕಾರಿಗಳು ಕಮ್ಯೂನಿಟಿ ಹೆಲ್ತ್ ಆಫಿಸರ್ (ಸಿಎಚ್​ಒ) ಸೇವೆ ಮಾಡುತ್ತಿದ್ದಾರೆ. ಆದರೆ, ಸರಕಾರ ಸರಿಯಾಗಿ ವೇತನ ಹಾಗೂ ಪ್ರೋತ್ಸಾಹ ಧನ ಪಾವತಿ ಮಾಡುತ್ತಿಲ್ಲ. ಸರಕಾರದ ನಿಷ್ಕಾಳಜಿಗೆ ನೌಕರರು ನರಕಯಾತನೆ ಜೀವನ ನಡೆಸುವಂತಾಗಿದೆ.

  ಇದನ್ನು ಓದಿ: ಗವಿ ಗಂಗಾಧರೇಶ್ವರನಿಗೆ ಸೂರ್ಯಾಭಿಷೇಕ; ದೇಗುಲದಲ್ಲಿ ಮೊಳಗಿದ ಗಂಟಾಘೋಷ

  ಗವಿಗಂಗಾಧರರೇಶ್ವರನಿಗೆ ಸೂರ್ಯ ನಮಸ್ಕಾರ
  ಇಂದು ಸೂರ್ಯನು ದಕ್ಷಿಣಾಯನದಿಂದ ಪಥ ಬದಲಿಯಿಸಿ ಉತ್ತರಾಯಣ ಚಲನೆಗೆ ಆರಂಭ ಮಾಡುತ್ತಾನೆ. ಶಿವಲಿಂಗದ ಬಲಗಡೆಗೆ ಇರುವ ಪಾಣಿಪೀಠ ಶಕ್ತಿಗೆ ಪ್ರಾಧಾನ್ಯ ಪೀಠಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದೆ. ಈ ವೇಳೆ ಅರ್ಚಕರಿಂದ ಮಂತ್ರ ಘೋಷಣೆಗಳನ್ನು ಮೊಳಗಿಸಲಾಗಿದೆ. ಜೊತೆಗೆ ದೇವಾಲಯದಲ್ಲಿ ಡೊಳ್ಳು, ನಗಾರಿ, ಗಂಟೆಗಳ ನಾದ ಮೂಲಕ ಶಿವನಿಗೆ ವಿಶೇಷ ಪೂಜೆ ನಡೆಸಲಾಯಿತು. ಸೂರ್ಯನ ಕಿರಣಗಳು 2 ನಿಮಿಷ 13 ಸೆಕೆಂಡ್ ಕಾಲ ಲಿಂಗವನ್ನು ಸ್ಪರ್ಶಗೊಂಡಿದೆ ಎಂದು ದೇಗುಲದ ಅರ್ಚಕರು ಮಾಹಿತಿ ನೀಡಿದರು.

  ದಕ್ಷಿಣ ಆಫ್ರಿಕಾಗೆ ಸರಣಿ ಜಯ
  ಸೌತ್ ಆಫ್ರಿಕಾ ನೆಲದಲ್ಲಿ ಮೊದಲ ಬಾರಿಗೆ ಟೆಸ್ಟ್ ಸರಣಿ ಗೆಲ್ಲುವ ಅಪೂರ್ವ ಅವಕಾಶ ಭಾರತದ ಕೈತಪ್ಪಿದೆ. ಇಂದು ನಡೆದ ಟೆಸ್ಟ್ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯವನ್ನ ಸೌತ್ ಆಫ್ರಿಕಾ 7 ವಿಕೆಟ್​ಗಳಿಂದ ಗೆದ್ದಿತು. ಗೆಲುವಿಗೆ ಪಡೆದಿದ್ದ 212 ರನ್ ಗುರಿಯನ್ನ ಹರಿಣಗಳ ಪಡೆ ನಿರಾಯಸವಾಗಿ ಮುಟ್ಟಿ ವಿಜೃಂಬಿಸಿತು. ಕೀಗನ್ ಪೀಟರ್ಸನ್, ವಾನ್ ಡರ್ ಡುಸೆನ್ ಮತ್ತು ಟೆಂಬ ಬವುಮಾ ಅವರು ಭಾರತಕ್ಕೆ ಗೆಲುವು ಕೈಗೆಟುದಂತೆ ನೋಡಿಕೊಂಡರು. ಈ ಗೆಲುವಿನೊಂದಿಗೆ 3 ಪಂದ್ಯಗಳ ಟೆಸ್ಟ್ ಸರಣಿಯನ್ನ ಸೌತ್ ಆಫ್ರಿಕಾ 2-1ರಿಂದ ತನ್ನದಾಗಿಸಿಕೊಂಡಿತು.
  Published by:Seema R
  First published: