Evening Digest: MLC ಚುನಾವಣೆಯಲ್ಲಿ ಗೆದ್ದಿದ್ಯಾರು, ಸೋತಿದ್ಯಾರು; 3 ಮತಗಳಿಂದ ಕಾಂಗ್ರೆಸ್​​ಗೆ ಸೋಲು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
MLC Election Results: 75 ಸ್ಥಾನಗಳಿರುವ ಕರ್ನಾಟಕ ವಿಧಾನ ಪರಿಷತ್​ (Karnataka Legislative Council) ಮೂರನೇ ಒಂದು ಭಾಗದಷ್ಟಾದ 25 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಫಲಿಯಾಂಶ (Election Results) ಇಂದು ಹೊರ ಬಿದ್ದಿದೆ. ಬಿಜೆಪಿ-12, ಕಾಂಗ್ರೆಸ್​​-11, ಜೆಡಿಎಸ್​ ಒಂದು ಸ್ಥಾನವನ್ನು ಹಾಗೂ ಒಬ್ಬ ಪಕ್ಷೇತರ ಸದಸ್ಯ ಗೆಲುವು ಸಾಧಿಸಿದ್ದಾರೆ. 25 ಸದಸ್ಯರ 6 ವರ್ಷಗಳ ಅವಧಿಯು ಜನವರಿ 5, 2022 ರಂದು ಕೊನೆಗೊಳ್ಳುವ ಕಾರಣ ವಿಧಾನ ಪರಿಷತ್ತಿನ ಚುನಾವಣೆಯನ್ನು ನಡೆಸಲಾಯಿತು. ಜನವರಿ 5 ರಂದು ಅಧಿಕಾರಾವಧಿ ಮುಕ್ತಾಯ ಆಗುವ ಸದಸ್ಯರಲ್ಲಿ ಕಾಂಗ್ರೆಸ್ 15, ಬಿಜೆಪಿ 6 ಮತ್ತು JD(S)ನ 4 ಸದಸ್ಯರಿದ್ದಾರೆ. ಕಾಂಗ್ರೆಸ್​​ 15 ಸದಸ್ಯರಿಂದ 11ಕ್ಕೆ ಕುಸಿದಿದೆ, ಆಡಳಿತರೂಢ ಬಿಜೆಪಿ 6 ಸದಸ್ಯರ ಜಾಗದಲ್ಲಿ ದುಪ್ಪಟ್ಟು ಮಂದಿಯನ್ನು ಮೇಲ್ಮನೆ ಕಳುಹಿಸಿದೆ. ತಮ್ಮ 4 ಸದಸ್ಯರ ಜಾಗಕ್ಕೆ ಕೇವಲ ಒಬ್ಬರನ್ನು ಕಳುಹಿಸುವಲ್ಲಿ ಮಾತ್ರ ಜೆಡಿಎಸ್​ಗೆ ಸಾಧ್ಯವಾಗಿದೆ. ಯಾವ ಪಕ್ಷದ ಯಾರೆಲ್ಲಾ ಸದಸ್ಯರು ಗೆಲುವು ಸಾಧಿಸಿದ್ದಾರೆ ಅಂತ ನೋಡುವುದಾದರೆ.

ಗೆದ್ದ ಕಮಲದ ಕಲಿಗಳು

ಪರಿಚತ್​ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಗೆದ್ದುಗೊಂಡಿದೆ. ಬೆಂಗಳೂರು ನಗರ - ಗೋಪಿನಾಥ ರೆಡ್ಡಿ, ಮಡಿಕೇರಿ - ಸುಜಾ ಕುಶಾಲಪ್ಪ, ಶಿವಮೊಗ್ಗ - ಡಿ.ಎಸ್.ಅರುಣ್ , ಚಿತ್ರದುರ್ಗ - ಕೆಎಸ್ ನವೀನ್, ಬಳ್ಳಾರಿ - ವೈಎಂ ಸತೀಶ್ , ಉತ್ತರ ಕನ್ನಡ - ಗಣಪತಿ ಉಳ್ವೇಕರ್,   ಚಿಕ್ಕಮಗಳೂರು - ಎಂ.ಕೆ.ಪ್ರಾಣೇಶ್ , ಉಡುಪಿ-ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ , ಕಲಬುರಗಿ - ಯಾದಗಿರಿ - ಬಿ ಜಿ ಪಾಟೀಲ್, ಹುಬ್ಬಳ್ಳಿ - ಧಾರವಾಡ - ಪ್ರದೀಪ್ ಶೆಟ್ಟರ್ , ವಿಜಯಪುರ-ಬಾಗಲಕೋಟೆ - ಪಿ ಎಚ್ ಪೂಜಾರ್, ಮೈಸೂರು-ಚಾಮರಾಜನಗರ - ರಘು ಕೌಟಿಲ್ಯ ಗೆದ್ದಿದ್ದಾರೆ.

ಮತದಾರರು ‘ಕೈ’ ಹಿಡಿದ ಅಭ್ಯರ್ಥಿಗಳು

ಪರಿಚತ್​ ಚುನಾವಣೆಯಲ್ಲಿ ಕಾಂಗ್ರೆಸ್  11 ಸ್ಥಾನಗಳನ್ನು ಗೆದ್ದುಗೊಂಡಿದೆ. ಬೀದರ್ - ಭೀಮರಾವ್ ಬಿ ಪಾಟೀಲ್ ,ತುಮಕೂರು- ರಾಜೇಂದ್ರ, ಕೋಲಾರ - ಎಂ.ಎಲ್. ಅನಿಲ್ ಕುಮಾರ್ , ವಿಜಯಪುರ-ಬಾಗಲಕೋಟೆ - ಸುನೀಲ್ ಗೌಡ ಪಾಟೀಲ್ , ಹುಬ್ಬಳ್ಳಿ - ಧಾರವಾಡ - ಸಲೀಂ ಅಹ್ಮದ್ , ರಾಯಚೂರು-ಕೊಪ್ಪಳ - ಶರಣಗೌಡ ಪಾಟೀಲ್ ಬಯ್ಯಾಪುರ, ಮಂಡ್ಯ - ದಿನೇಶ್ ಗೂಳಿಗೌಡ , ಮೈಸೂರು - ಚಾಮರಾಜನಗರ - ಡಿ. ತಿಮ್ಮಯ್ಯ, ಉಡುಪಿ-ದಕ್ಷಿಣ ಕನ್ನಡ - ಮಂಜುನಾಥ್ ಭಂಡಾರಿ, ಬೆಳಗಾವಿ-ಚಿಕ್ಕೋಡಿ ಚನ್ನರಾಜು, ಬೆಂಗಳೂರು ಗ್ರಾಮಾಂತರ - ಎಸ್.ರವಿ

ಜೆಡಿಎಸ್ -1, ಪಕ್ಷೇತರ - 1

ಹಾಸನದಿಂದ ಜೆಡಿಎಸ್​ ಅಭ್ಯರ್ಥಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದಾರೆ. ಬೆಳಗಾವಿ-ಚಿಕ್ಕೋಡಿಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಜಯ ಗಳಿಸಿದ್ದಾರೆ.

3 ಮತಗಳಿಂದ ಕಾಂಗ್ರೆಸ್​ಗೆ ಸೋಲು

ಚಿಕ್ಕಮಗಳೂರಿನಲ್ಲಿ (Chikkamagaluru) ಬಿಜೆಪಿ ಆಭ್ಯರ್ಥಿ ಎಂ.ಕೆ.ಪ್ರಾಣೇಶ್ (NJP Candidate M K Pranesh) ಕೇವಲ 3 ಮತಗಳಿಂದ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಾಯಿತ್ರಿ ಶಾಂತೇಗೌಡ (Congress Candidate Gayitri Shantegowda) 1,182 ಮತ ಪಡೆದ್ರೆ, ಎಂ.ಕೆ,ಪ್ರಾಣೇಶ್ ಅವರಿಗೆ 1,188 ಮತಗಳು ಬಂದಿವೆ. ಅಲ್ಪ ಮತಗಳಿಂದ ಗೆಲುವು ಕಂಡ ಹಿನ್ನೆಲೆ ಕಾಂಗ್ರೆಸ್ ಮರು ಎಣಿಕೆಗೆ (Re Counting) ಒತ್ತಾಯಿಸುತ್ತಿದೆ. ಒಂದೆಡೆ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡಿದ್ರೆ ಮತ ಎಣಿಕೆ ಕೇಂದ್ರದ ಮುಂದೆ ಕಾಂಗ್ರೆಸ್ ಪ್ರತಿಭಟನೆ (Congress Protest) ನಡೆಸುತ್ತಿದೆ. ಚಲಾವಣೆಯಾದ ಮತಗಳಲ್ಲಿ 39 ಮತಗಳು ಅಸಿಂಧುವಾಗಿದ್ದು, ಇದೇ ಕಾಂಗ್ರೆಸ್ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿದೆ.

 ಪ್ರಾಣಾಪಾಯದಿಂದ ಪಾರಾದ ನಟಿ, ಶಾಸಕಿ ರೋಜಾ

ನಟಿ, ಶಾಸಕಿ ರೋಜಾ (MLA Roja) ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರೀ ಅಪಘಾತವೊಂದು ತಪ್ಪಿದೆ. ಪ್ರಯಾಣಿಸುತ್ತಿದ್ದ ಅವರ ವಿಮಾನದಲ್ಲಿ (Technical Problem in Flight) ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು, ಇದರಿಂದ ವಿಮಾನ ಇಳಿಯಲು ಸಾಧ್ಯವಾಗಿಲ್ಲ ಬಳಿಕ ವಿಮಾನವನ್ನು ಸುರಕ್ಷಿತವಾಗಿ ಪೈಲಟ್​ ಬೆಂಗಳೂರಿನಲ್ಲಿ ಇಳಿಸಿದ್ದಾರೆ. ಶಾಸಕಿ ರೋಜಾ ಮತ್ತು ಟಿಡಿಪಿ ಮುಖಂಡ, ಮಾಜಿ ಸಚಿವ ಯನಮ ರಾಮಕೃಷ್ಣುಡು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಲ್ಯಾಂಡಿಂಗ್​ ಸಮಸ್ಯೆ ಕಾಣಿಸಿಕೊಂಡಿದೆ. ತಿರುಪತಿಯಲ್ಲಿ ಇಳಿಯಬೇಕಾದ ವಿಮಾನ ಕಡೆಗೆ ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್​ ಆಗಿದೆ.

ಸೋಂಕಿತನಿಗೆ ದೇಶದಿಂದ ಪರಾರಿಯಾಗಲು ಸಹಕರಿಸಿದ್ದ ನಾಲ್ವರ ಬಂಧನ!

ದೇಶದಾದ್ಯಂತ ಓಮಿಕ್ರಾನ್(Omicron) ಪ್ರಕರಣಗಳು ಹೆಚ್ಚುತ್ತಿದ್ದಂತೆ, ಕೋವಿಡ್ ನಿಯಮಗಳನ್ನು(Covid rules) ಕೂಡ ಇನ್ನಷ್ಟು ಬಿಗಿಗೊಳಿಸಲಾಗುತ್ತಿದೆ. ಆದರೆ , ಆ ನಿಯಮಗಳನ್ನು ಉಲ್ಲಂಘಿಸುವ ಘಟನೆಗಳು ಕೂಡ ನಡೆಯುತ್ತಿವೆ. ಬೆಂಗಳೂರಿನಲ್ಲಿ (Bengaluru) ಕಳೆದ ತಿಂಗಳು , ದಕ್ಷಿಣ ಆಫ್ರಿಕಾದ (South Africa) 66 ವರ್ಷ ವಯಸ್ಸಿನ ಓಮಿಕ್ರಾನ್ ಪೀಡಿತ ವ್ಯಕಿಯೊಬ್ಬ ನಕಲಿ ಕೋವಿಡ್ ನೆಗೆಟಿವ್ (Negative report) ವರದಿಯನ್ನು ತೋರಿಸಿ, ಹೊಟೇಲೊಂದರಿಂದ ಪರಾರಿ ಆಗಿದ್ದ. ಈ ಪ್ರಕರಣದ ಕುರಿತು ತನಿಖೆ (Investigating) ನಡೆಸುತ್ತಿದ್ದ ಪೊಲೀಸರು, ಇದೀಗ ಅದಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು(Arrested) ಬಂಧಿಸಿದ್ದಾರೆ.
Published by:Kavya V
First published: