Evening Digest: ಕರ್ನಾಟಕದಲ್ಲಿ ಫೋಟೋ ವಿವಾದ, ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ- ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಫೋಟೋಗೆ ಕೊಕ್, ಕಾಂಗ್ರೆಸ್ ಆಕ್ರೋಶ

ದೇಶದ 75ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನ ನಡೀತಿದೆ. ಸ್ವಾತಂತ್ರ್ಯ ಅಮೃತ ಮಹೋತೋತ್ಸವ ಭಾಗವಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತು ಈಗ ವಿವಾದಕ್ಕೀಡಾಗಿದೆ. ಕ್ಯಾಂಪೇನ್ ಅಂಗವಾಗಿ ಕರ್ನಾಟಕದ ಬಸವರಾಜ ಬೊಮ್ಮಾಯಿ ಸರ್ಕಾರ ಬಿಡುಗಡೆ ಮಾಡಿರುವ ಜಾಹೀರಾತು ವಿವಾದದ ಕೇಂದ್ರ ಬಿಂದುವಾಗಿದೆ. ಸರ್ಕಾರಿ ಜಾಹೀರಾತಿನಲ್ಲಿ ಮುದ್ರಿಸಿರುವ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಫೋಟೋವನ್ನೇ ಸರ್ಕಾರ ಕೈ ಬಿಟ್ಟಿದೆ. ಇದನ್ನು  ಕಾಂಗ್ರೆಸ್ ನಾಯಕರು ಅತ್ಯುಗ್ರವಾಗಿ ಖಂಡಿಸಿದ್ದಾರೆ.

 ಬೆಂಗಳೂರಿನಲ್ಲಿ ಟಿಪ್ಪು ಫೋಟೋ ಕಿತ್ತೆಸೆದು ವಿವಾದ, ಮೂವರ ಬಂಧನ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊತ್ತಲ್ಲೇ ಫ್ಲೆಕ್ಸ್ ವಿವಾದ ಶುರುವಾಗಿದೆ. ಶಿವಮೊಗ್ಗದಲ್ಲಿ ನಿನ್ನೆಯಷ್ಟೇ ಛಾಯಾಚಿತ್ರ ಪ್ರದರ್ಶನ ವೇಳೆ ಎಸ್​ಡಿಪಿಐ ಕಾರ್ಯಕರ್ತರು ವಿವಾದ ಸೃಷ್ಟಿಸಿದ್ದರು. ವೀರ ಸಾವರ್ಕರ್ ಫೋಟೋ ತೆಗೆಯಬೇಕೆಂದು ಪಟ್ಟು ಹಿಡಿದಿದ್ದರು. ಈ ವಿವಾದ ಬೆಂಗಳೂರಿಗೂ ವ್ಯಾಪಿಸಿದೆ.  ಶಿವಮೊಗ್ಗದ ಘಟನೆಗೆ ಪ್ರತೀಕಾರವಾಗಿ ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಫೋಟೋವನ್ನು ಕಿತ್ತು ಹಾಕಲಾಗಿದೆ. ನಗರದ ಕೆ.ಆರ್ ಸರ್ಕಲ್ ಹಾಗೂ ಹಡ್ಸನ್ ಸರ್ಕಲ್​ನಲ್ಲಿ ಟಿಪ್ಪು ಭಾವಚಿತ್ರದ ಫ್ಲೆಕ್ಸ್​​ನ್ನು ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಹಾಗೂ ಅವರ ಜೊತೆಗಿದ್ದವರು ಹರಿದು ಹಾಕಿದ್ದಾರೆ. ಪ್ರಕರಣ ಸಂಬಂಧ ಈಗ ಪುನೀತ್ ಕೆರೆಹಳ್ಳಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಸನ್ಯಾಸತ್ವ ತ್ಯಜಿಸಿ ಯುವತಿ ಜೊತೆ ನಾಪತ್ತೆಯಾದ್ರಾ ಸ್ವಾಮೀಜಿ? ಮಠದಲ್ಲಿ ಸಿಕ್ಕಿದ ಪತ್ರದಲ್ಲಿದೆ ರಹಸ್ಯ!

ಯುವತಿ ಜೊತೆ ನಾಪತ್ತೆಯಾದ ಸ್ವಾಮೀಜಿ, ಪತ್ರ ನೋಡಿ ಶಾಕ್!

ಸನ್ಯಾಸಿ ಅಂದರೆ ಸಂಸಾರ ಸುಖ, ಭೋಗಗಳನ್ನು ತ್ಯಜಿಸಿ, ಮದ, ಮೋಹ, ಕಾಮ, ಕ್ರೋಧಗಳೆಂದ ಅರಿಷಡ್ವರ್ಗಗಳನ್ನು ಗೆದ್ದವನು. ಆದರೆ ರಾಮನಗರದ ಮಾಗಡಿ ತಾಲೂಕಿನ ಸೋಲೂರಿನ ಗದ್ದುಗೆ ಮಠದಲ್ಲಿ ಎಲ್ಲವೂ ಅಯೋಮಯವಾಗಿದೆ. ಈ ಮಠದ ಶಿವಮಹಂತ ಸ್ವಾಮೀಜಿಯವರು ಇದೀಗ ಸನ್ಯಾಸತ್ವ ತ್ಯಜಿಸಿ, ಮಠ ಬಿಟ್ಟು ಯುವತಿ ಜೊತೆ ನಾಪತ್ತೆಯಾಗಿದ್ದಾರೆ. ಜೊತೆಗೆ ಪತ್ರವೊಂದನ್ನು ಬರೆದಿಟ್ಟು, ತಾವು ಮಠ ಬಿಟ್ಟು ಹೋಗಲು ಕಾರಣವಾದ ವಿಚಾರವನ್ನು ತಿಳಿಸಿದ್ದಾರೆ. ಸ್ವಾಮೀಜಿ ನಾಪತ್ತೆಯಾಗಿರುವ ವಿಚಾರ ತಿಳಿದು ಮಠದ ಭಕ್ತರು, ಗ್ರಾಮಸ್ಥರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ನಾಳೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣ, ಬಂಪರ್ ಗಿಫ್ಟ್​ ನಿರೀಕ್ಷೆ

 ನಾಳೆ ಕೆಂಪುಕೋಟೆಯಲ್ಲಿ ಮೋದಿ ಧ್ವಜಾರೋಹಣ, ಭಾರೀ ಭದ್ರತೆ

ದೇಶದ ಮೂಲೆ ಮೂಲೆಯಲ್ಲೂ ಆಜಾದಿ ಕಾ ಅಮೃತ ಮಹೋತ್ಸವದ ಸಡಗರ ತುಂಬಿ ತುಳುಕುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಿರಂಗಾ ರಾರಾಜಿಸ್ತಿದೆ. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ನಾಳೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಕೆಂಪುಕೋಟೆಯಲ್ಲಿ ನಿಂತು 9ನೇ ಬಾರಿ ಧ್ವಜಾರೋಹಣ ಮಾಡುತ್ತಿರುವ ಪ್ರಧಾನಿ ಮೋದಿ ಭಾಷಣದ ಮೇಲೆ ಇಡೀ ದೇಶದ ಚಿತ್ತ ನೆಟ್ಟಿದೆ. ಅದರಲ್ಲೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ದೇಶವಾಸಿಗಳಿಗೆ ಭರ್ಜರಿ ಘೋಷಣೆ ಕೂಡ ಮಾಡಬಹುದು ಎನ್ನಲಾಗ್ತಿದೆ.

ಈದ್ಗಾ ಮೈದಾನದಲ್ಲಿ ನಾಳೆ ಧ್ವಜಾರೋಹಣ, ಭಾರೀ ಕಟ್ಟೆಚ್ಚರ

ದೇಶದ ಸ್ವಾತಂತ್ರ್ಯ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ರಾಜ್ಯದಲ್ಲಿ ಈ ಬಾರಿ ಎರಡು ಕಡೆ ಧ್ವಜಾರೋಹಣ ಹಿನ್ನಲೆ ಸಾಕಷ್ಟು ತಯಾರಿಯ ಜೊತೆಗೆ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚಾಮರಾಜಪೇಟೆ ಮೈದಾನ ಈಗ ಸಾಕಷ್ಟು ಮಹತ್ವವನ್ನ ಪಡೆದುಕೊಂಡಿದೆ. ಮೈದಾನದ ಸುತ್ತ ಬ್ಯಾರಿಕೇಡ್ ಹಾಗೂ ಕಬ್ಬಿಣದ ಗೇಟ್​ಗಳನ್ನ ಹಾಕಿ ಸಜ್ಜುಗೊಳಿಸಲಾಗಿದೆ. ಮಾಣೆಕ್​​ ಷಾ ಮೈದಾನದಲ್ಲೂ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
Published by:Thara Kemmara
First published: