Top-5 News: ಕಳ್ಳರಿಂದ ಶಾಸಕರ ತಾಯಿ ಕಿವಿ ಕಟ್, ಮೊಬೈಲ್‌ ಸ್ಫೋಟಕ್ಕೆ ಮಗು ಬಲಿ! ಇಂದಿನ ಟಾಪ್-5 ನ್ಯೂಸ್‌ಗಳು ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ವೇಶ್ಯಾವಾಟಿಕೆ ಪ್ರಕರಣದಲ್ಲಿ ಪ್ರಖ್ಯಾತ ನಟ ಪೊಲೀಸ್ ವಶಕ್ಕೆ

ಚೀನಾದ ಪ್ರಖ್ಯಾತ ನಟ ಲೀ ಯಿಫೆಂಗ್ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿ ಪಯೋನಿಯರ್, ಮಿಸ್ಟರ್ ಸಿಕ್ಸ್, ದಿ ಫೌಂಡಿಂಗ್ ಆಫ್ ಆನ್ ಆರ್ಮಿ ಮುಂತಾದ ಚಿತ್ರಗಳ ಮೂಲಕ ಹೆಸರುವಾಸಿಯಾಗಿರುವ ಚೀನಾದ ಪ್ರಮುಖ ನಟ ಲೀ ಯಿಫೆಂಗ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಚೀನಾ ಪೊಲೀಸರು ತಿಳಿಸಿದ್ದಾರೆ.

Ear Cut: ಶಾಸಕರ ತಾಯಿಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು! ಮನೆ ಮುಂದೆ ನಿಂತಿದ್ದವರ ಚಿನ್ನ ಕಸಿದು ಎಸ್ಕೇಪ್

ಉತ್ತರ ಪ್ರದೇಶ: ಚಿನ್ನ (Gold) ಕದಿಯಲು ಬಂದ ಕಳ್ಳರು (Thieves) ವೃದ್ಧೆ (Old Women) ಎನ್ನುವುದನ್ನೂ ನೋಡದೇ ಅಮಾನವೀಯತೆ ಮೆರೆದಿದ್ದಾರೆ. ಉತ್ತರ ಪ್ರದೇಶದ (Uttar Pradesh) ಬುಲಂದರ್‌ ಶಹರ್‌ (Bulandshahar) ಎಂಬಲ್ಲಿ 84 ವರ್ಷದ ವೃದ್ಧೆಯ ಎರಡೂ ಕಿವಿ (Ear) ಕತ್ತರಿಸಿ, ಆಕೆಯ ಕಿವಿಯಲ್ಲಿದ್ದ ಚಿನ್ನದ ಒಲೆಗಳನ್ನು ಕದ್ದೊಯ್ದಿದ್ದಾರೆ. 84 ವರ್ಷದ ವೃದ್ಧೆ ಬುಲಂದರ್‌ ಶಹರ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಚೌಧರಿ (MLA Pradeep Choudhari) ಅವರ ತಾಯಿಯಾಗಿದ್ದಾರೆ. ವೃದ್ಧೆಯ ಎರಡೂ ಕಿವಿಯನ್ನು ಕಳ್ಳರು ಕತ್ತರಿಸಿದ್ದು, ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: Ear Cut: ಶಾಸಕರ ತಾಯಿಯ ಕಿವಿ ಕತ್ತರಿಸಿದ ದುಷ್ಕರ್ಮಿಗಳು! ಮನೆ ಮುಂದೆ ನಿಂತಿದ್ದವರ ಚಿನ್ನ ಕಸಿದು ಎಸ್ಕೇಪ್

ಆಡಿಯೋ ಲೀಕ್​ ಬಳಿಕ ಉಲ್ಟಾ ಹೊಡೆದ ಪರಸಪ್ಪ

PSI ಅಕ್ರಮ ನೇಮಕಾತಿ (PSI Recruitment Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪರಸಪ್ಪ ಎಂಬುವವರು  ತಮ್ಮ ಮಗನಿಗೆ ಕೆಲಸ ಕೊಡಿಸುವಂತೆ ಬಿಜೆಪಿ ಶಾಸಕ (BJP MLA) ಬಸವರಾಜ ದಡೇಸುಗೂರ್‌ (Basavaraj Dadesugur) ಅವರಿಗೆ ಹಣ ನೀಡಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್​ ನಾಯಕರು (Congress Leaders) ಮಾಡಿದ್ರು. ಈ ಆರೋಪಕ್ಕೆ ಸಂಬಂಧಿಸಿದಂತೆ ಪರಸಪ್ಪ (Parasappa) ಅವ್ರೇ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ನಾಯಕರು ಮಾಡಿದ ಆರೋಪವನ್ನು ಅಲ್ಲಗೆಳೆದಿದ್ದಾರೆ. ಶಾಸಕ ಬಸವರಾಜ ದಡೇಸುಗೂರ್‌ ನಮ್ಮ ಕುಲಬಾಂಧದವರು, ಶಾಸಕರು ಅವರ ಸಂಬಂಧಿಕರಾದ ಆನಂದಪ್ಪ ಅವರ ಜೊತೆ ನಮಗೆ ಜಮೀನಿನ ವ್ಯವಹಾರವಿತ್ತು. ಇದರ ಬಗ್ಗೆ ಮಾತಾಡಲು ನಾವು ಶಾಸಕರ ಬಳಿ ಹೋಗಿದ್ವಿ ಅಷ್ಟೇ ಎಂದು ಪರಸಪ್ಪ ಹೇಳಿದ್ದಾರೆ.

ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿತು ಕಂದಮ್ಮ!

ಬರೇಲಿ, ಉತ್ತರ ಪ್ರದೇಶ: ಮೊಬೈಲ್‌ನಿಂದ (Mobile) ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೆಷ್ಟೋ ಬಾರಿ ಮೊಬೈಲ್‌ ಸ್ಪೋಟಗೊಂಡು (Mobile Blast) ಮೊಬೈಲ್ ಬಳಕೆದಾರರು (Mobile Users) ಗಾಯಗೊಂಡಿರುವ, ಅವರ ಜೀವಹಾನಿಯಾದ ಉದಾಹರಣೆಯೂ ಇದೆ. ಅದೆಷ್ಟೋ ಬಾರಿ ಮಾತನಾಡುವಾಗ, ಚಾರ್ಜ್‌ (Charge) ಹಾಕುವಾಗ ಸ್ಫೋಟಗೊಂಡ ಉದಾಹರಣೆಯೂ ಇದೆ. ಇದೀಗ ಉತ್ತರ ಪ್ರದೇಶದ (Uttara Pradesh) ಬರೇಲಿಯಲ್ಲಿ (Bareilly) ಸೋಲಾರ್ (Solar) ಪ್ಯಾನೆಲ್ ಮೂಲಕ ಚಾರ್ಜಿಂಗ್‌ನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್‌ನ ಬ್ಯಾಟರಿ (Battery) ಸ್ಫೋಟಗೊಂಡು (Blast) 8 ತಿಂಗಳ ಶಿಶುವೊಂದು (Child) ಸಾವನ್ನಪ್ಪಿದೆ. ನೇಹಾ ಎಂಬ ಎಂಟು ತಿಂಗಳ ಮಗು ಮಲಗಿದ್ದ ಮಂಚದ ಮೇಲೆ ಲಾವಾ ಕಂಪನಿಯ ಮೊಬೈಲ್ ಫೋನ್ (Lava Company mobile phone) ಸ್ಫೋಟಗೊಂಡು, ದುರಂತ ಸಂಭವಿಸಿದೆ.

ಇದನ್ನೂ ಓದಿ: Mobile Blast: ಮೊಬೈಲ್ ಚಾರ್ಜ್ ಹಾಕುವಾಗ ಹುಷಾರ್, ಬ್ಯಾಟರಿ ಸ್ಫೋಟಗೊಂಡು ಸಾವನ್ನಪ್ಪಿತು ಕಂದಮ್ಮ!

ಟಿ20 ವಿಶ್ವಕಪ್‌ಗೆ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

T20 ವಿಶ್ವಕಪ್ 2022ಗಾಗಿ (T20 World Cup 2022) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದ ಒಂದು ದಿನದ ನಂತರ, ಇದೀಗ BCCI ಕ್ರಿಕೆಟ್ ಅಭಿಮಾನಿಗಳಿಗೆ ಟೀಂ ಇಂಡಿಯಾದ (Team India) ಹೊಸ ಜೆರ್ಸಿ ಅನಾವರಣ ಗೊಳಿಸುವುದಾಗಿ ಅಧಿಕೃತವಾಗಿ ತಿಳಿಸಿದೆ. ಈ ಕುರಿತು ಭಾರತೀಯ ಕ್ರಿಕೆಟ್ ಮಂಡಳಿ (BCCI) ಸೋಮವಾರ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮತ್ತು ಎಂಪಿಎಲ್​ ಸ್ಪೋರ್ಟ್ಸ್ (MPL Sports) ಸಹ ಟ್ವಿಟರ್​ನಲ್ಲಿ ವೀಡಿಯೊವನ್ನು ಹಂಚಿಕೊಂಡಿದೆ. ಈ ಬಾರಿ ಟೀಂ ಇಂಡಿಯಾದ ಜೆರ್ಸಿಯ ಪ್ರಾಯೋಜಕತ್ವವನ್ನು  MPL ​ ತೆಗೆದುಕೊಂಡಿದೆ. ಬಿಡುಗಡೆ ಆದ ವಿಡಿಯೋದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) , ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಕಾಣಿಸಿಕೊಂಡಿದ್ದು, ಹೊಸ ಜೆರ್ಸಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
Published by:Annappa Achari
First published: