• Home
 • »
 • News
 • »
 • state
 • »
 • Evening digest: ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ, ದಸರಾಕ್ಕೆ ಗಜಪಯಣ ಆರಂಭ; ಈ ದಿನದ ಸುದ್ದಿ ಸಾರಾಂಶ

Evening digest: ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ, ದಸರಾಕ್ಕೆ ಗಜಪಯಣ ಆರಂಭ; ಈ ದಿನದ ಸುದ್ದಿ ಸಾರಾಂಶ

evening digest

evening digest

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

 • Share this:

  ಆಸ್ಕರ್​ ಫರ್ನಾಂಡಿಸ್​ ಇನ್ನಿಲ್ಲ
  ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್​ ಫರ್ನಾಂಡಿಸ್ ಇಂದು ವಿಧಿವಶರಾಗಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಯೋಗ ಮಾಡುತ್ತಿದ್ದ ವೇಳೆ ಆಸ್ಕರ್​ ಫರ್ನಾಂಡಿಸ್​ ಜಾರಿ ಬಿದ್ದಿದ್ದರು. ಈ ವೇಳೆ ಅವರಿಗೆ ಯಾವುದೇ ಗಾಯಗಳಾಗಿರಲಿಲ್ಲ. ಡಯಾಲಿಸಿಸ್​ ವೇಳೆ ಅವರ ರಕ್ತ ಹೆಪ್ಪುಗಟ್ಟಿರುವದು ಪತ್ತೆಯಾಗಿದೆ. ಅವರ ಮೆದುಳಿಗೆ ಪೆಟ್ಟು ಬಿದ್ದ ಹಿನ್ನಲೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರು ಎಳೆದಿದ್ದಾರೆ. 80 ವರ್ಷದ ಆಸ್ಕರ್​ ಫರ್ನಾಂಡಿಸ್​ ಅಗಲಿಕೆಗೆ ಕಾಂಗ್ರೆಸ್​ ನಾಯಕರು ಕಂಬನಿ ಮಿಡಿದಿದ್ದಾರೆ.


  ಯಾದಗಿರಿ ಪ್ರಕರಣ ನಾಲ್ವರ ಆರೋಪಿಗಳ ಬಂಧನ
  ಶಹಾಪುರ ಹೊರವಯಲದಲ್ಲಿ ಸಂತ್ರಸ್ತೆ ಯುವತಿ ಬಸ್​ಗೆ ಕಾಯುತ್ತಿದ್ದಾಗ ಆಕೆಯನ್ನು ಅಪಹರಣ ಮಾಡಲಾಗಿದೆ. ಈ ವೇಳೆ ಆಕೆಯನ್ನು ನಗ್ನಗೊಳಿಸಿ ಕಬ್ಬಿನ ಜಲಲೆಯಿಂದ ಹಲ್ಲೆ ಮಾಡಲಾಗಿದೆ. ಬಳಿಕ ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಲಾಗಿದೆ. ಈ ವಿಡಿಯೋ ಇಂದು ವೈರಲ್​ ಆದ ಬಳಿಕ ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ. ಇದರಲ್ಲಿ ಒಬ್ಬಾತ ಪಿಎಸ್​ಐ ವಾಹನದ ಚಾಲಕಾನಾಗಿದ್ದ. ಕೆಲಸ ಬಿಟ್ಟಿದ್ದ ಆತನನ್ನು ಬಂಧಿಸಿದ ಪೊಲೀಸರು ಉಳಿದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.


  ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ
  ದಿಢೀರ್ ಬೆಳವಣಿಗೆಯಲ್ಲಿ ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಇದೇ ಮೊದಲ ಬಾರಿಗೆ (2017ರಲ್ಲಿ) ಶಾಸಕರಾಗಿ ಆಯ್ಕೆ ಆಗಿರುವ ಹಿರಿಯ ಶಾಸಕ ಭೂಪೇಂದ್ರ ಪಟೇಲ್ ಅವರನ್ನು ನಿನ್ನೆ (ಸೆಪ್ಟೆಂಬರ್ 12) ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು. ಆ ಮೂಲಕ ನೂತನ ಮುಖ್ಯಮಂತ್ರಿ ಎಂದು‌ ಘೋಷಣೆ ಮಾಡಲಾಗಿತ್ತು. ಇಂದು 59 ವರ್ಷದ ಭೂಪೇಂದ್ರ ಪಟೇಲ್ ಗುಜರಾತಿನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.


  ಬಿಜೆಪಿ ಸೇರಿದ ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್​ ಸಿಂಗ್​ ಮೊಮ್ಮಗ ಇಂದರ್‌ಜೀತ್ ಸಿಂಗ್
  ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಗ್ಯಾನಿ ಜೈಲ್ ಸಿಂಗ್ ಅವರ ಮೊಮ್ಮಗ ಇಂದರ್‌ಜೀತ್ ಸಿಂಗ್ ಅವರು ಸೋಮವಾರ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್​ ಸಿಂಗ್​ ಅವರ ಮೊಮ್ಮಗನನ್ನು ಸ್ವಾಗತಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಪಂಜಾಬ್ ಘಟಕದ ಉಸ್ತುವಾರಿ ದುಷ್ಯಂತ್ ಗೌತಮ್, ಇದು ಪಂಚ ನದಿಗಳ ನಾಡು ಪಂಜಾಬ್ ನ ಜನರ ಹೃದಯದಲ್ಲಿ ಪಕ್ಷಕ್ಕೆ ವಿಶೇಷ ಸ್ಥಾನವಿದೆ ಎಂಬುದನ್ನು ಇದು ತೋರಿಸುತ್ತದೆ, ಮಾಜಿ ರಾಷ್ಟ್ರಪತಿಗಳ ಮೊಮ್ಮಗನಿಗೆ ಬಿಜೆಪಿಯ ಮೇಲೆ ಹಾಗೂ ಅವರ ಸಮರ್ಥ ಆಡಳಿತದ ಮೇಲೆ ನಂಬಿಕೆ ಇರುವ ಕಾರಣಕ್ಕೆ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು.


  ದಸರಾ ಗಜಪಯಣ
  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2021ರ ಮೊದಲನೇ ಹಂತದ ಕಾರ್ಯಕ್ರಮ ಜಂಬೂ ಸವಾರಿ ಗಜಪಯಣ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಗಜಪಡೆಯನ್ನು ನಾಡಿಗೆ ಸ್ವಾಗತಿಸಲಾಯಿತು. ನಾಗರಹೊಳೆಯ ವೀರನಹೊಸಹಳ್ಳಿಯಿಂದ ಅಭಿಮನ್ಯು ನೇತೃತ್ವದ 8 ಆನೆಗಳ ತಂಡವನ್ನು ಸಾಂಸ್ಕೃತಿಗೆ ನಗರಿ ಮೈಸೂರಿಗೆ ಸ್ವಾಗತ ಮಾಡಲಾಯಿತು. ಗಣ್ಯರು ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಬೇವು-ಬೆಲ್ಲ ತಿನ್ನಿಸಿ ಶುಭ ಕೋರಿದರು. ಸಂಸದ ಪ್ರತಾಪ್ ಸಿಂಹ, ಶಾಸಕ ಎಚ್.ಪಿ ಮಂಜುನಾಥ್ , ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ ಪಿ ಆರ್.ಚೇತನ್ ಮೇಯರ್ ಸುನಂದಾ ಪಾಲನೇತ್ರ, ಡಿಸಿಎಫ್ ಕರಿಕಾಳನ್, ವಿವಿಧ ನಿಗಮ ಮಂಡಲಿಗಳ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.


  ಇಂದಿನಿಂದ ಅಧಿವೇಶನ


  ಇವತ್ತು ಆರಂಭಗೊಂಡಿರುವ ವಿಧಾನ ಮಂಡಲ ಅಧಿವೇಶನ ನಾನಾ ಕಾರಣಕ್ಕೆ ಗಮನ ಸೆಳೆದಿದೆ. ಹತ್ತು ದಿನಗಳ ಕಾಲ ನಡೆಯುವ ಅಧಿವೇಶನ ಬೃಹತ್ ಪ್ರತಿಭಟನೆಗಳ ನಡುವೆ ಪ್ರಾರಂಭವಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದಿಯಾಗಿ ಅನೇಕ ಕಾಂಗ್ರೆಸ್ ಸದಸ್ಯರು ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಿದರು. ಪೆಟ್ರೋಲ್ ಬೆಲೆ ಏರಿಕೆಯನ್ನ ಖಂಡಿಸಿ ಕಾಂಗ್ರೆಸ್ಸಿಗರು ನಡೆಸಿದ ಸಾಂಕೇತಿಕ ಪ್ರತಿಭಟನೆ ಇದಾಗಿದೆ. ಇವತ್ತು ಅಧಿವೇಶದಲ್ಲಿ ಯಡಿಯೂರಪ್ಪ ಸೇರಿ ಕೆಲ ಬಿಜೆಪಿಯ ಹಿರಿಯರು ಹಿಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದು ಗಮನ ಸೆಳೆಯಿತು. ಮೈತ್ರಿ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಕೂಡ ಇದೇ ಸಾಲಿನಲ್ಲಿ ಕುಳಿತದ್ದನ್ನು ನೆನಪಿಸುವಂತಿತ್ತು.


  ವಿಧಾನಸೌಧಕ್ಕೆ ಮುತ್ತಿಗೆ ಯತ್ನ
  ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಯನ್ನು ಸಂಸತ್​ನಲ್ಲಿ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆದು ಸೆ.17ಕ್ಕೆ ಒಂದು ವರ್ಷವಾಗಲಿದೆ. ಈ ಕಾಯ್ದೆಯ ವಿರುದ್ಧ ಕಳೆದ ಒಂದು ವರ್ಷದಿಂದ ದೇಶದಾದ್ಯಂತ ರೈತರು ಹೋರಾಟ  ನಡೆಸುತ್ತಲೇ ಇದ್ದಾರೆ. ಇನ್ನೂ ಹರಿಯಾಣ-ಪಂಜಾಬ್  ರೈತರ ಹೋರಾಟ ಸದ್ಯಕ್ಕಂತೂ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲೂ ಭಾರೀ ಹೋರಾಟ ನಡೆದಿತ್ತು. ಆದರೂ ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸದೆ ಒಪ್ಪಿಕೊಂಡಿದೆ. ಹೀಗಾಗಿ ಕೇಂದ್ರದ ಕೃಷಿನೀತಿ ವಿರುದ್ಧ ರಾಜ್ಯದ ರೈತರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯೂ ವರದಿಯಾಗಿದೆ.

  Published by:Seema R
  First published: