Evening Digest: ಯೂಟರ್ನ್​ ಹೊಡೆದ ವಿಎಸ್​​ ಉಗ್ರಪ್ಪ; ಗರ್ಭಪಾತದ ಅವಧಿ ವಿಸ್ತರಿಸಿದ ಕೇಂದ್ರ; ಈ ದಿನದ ಸುದ್ದಿ ಸಾರಾಂಶ

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ

evening digest

evening digest

 • Share this:
  ಯೂಟರ್ನ್​ ಹೊಡೆದ ಉಗ್ರಪ್ಪ
  ಉಗ್ರಪ್ಪ(Ugrappa) ಹಾಗೂ ಸಲೀಂ ನಡುವೆ ನಡೆದ ಸಂಭಾಷಣೆ ಕಾಂಗ್ರೆಸ್​ ಪಾಳಯದಲ್ಲಿ ಮುಜುಗರ ಉಂಟು ಮಾಡಿತ್ತು. ಆದರೆ ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿರುವ ಉಗ್ರಪ, ಸಡನ್​ ಆಗಿ ಯೂ ಟರ್ನ್ ಹೊಡೆದಿದ್ದಾರೆ. ಡಿ.ಕೆ.ಶಿವಕುಮಾರ್(D.K.Shivakumar) ಯಾವುದೇ ಭ್ರಷ್ಟಚಾರ ಮಾಡಿಲ್ಲ. ನಿನ್ನೆ ಸಲೀಂ ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರು ಕಿವಿಯಲ್ಲಿ ಹೇಳಿದ್ದನ್ನ ಕೇಳಿ ಸುಮ್ಮನಾಗಿದ್ದೆ. ಬೇರೆಯವರು ಹೀಗೆ ಡಿಕೆಶಿ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಸಲೀಂ ಅವರು ನನ್ನ ಬಳಿ ಬಂದು ಕಿವಿಯಲ್ಲಿ ಹೇಳಿದರು. ಇದ್ದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಉಗ್ರಪ್ಪ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ

  ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ವಾಗ್ದಾಳಿ
  ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘‘ಬಹಳ ಜನರನ್ನ ನೋಡಿದ್ದೇನೆ. ಇವರಿಗೆ ಹೆದರಬೇಕಾ‘‘ ಎಂದು ಹೇಳಿದ್ದಾರೆ. ನಾನು ಹೆದರಿ ಎಂದು ಹೇಳಿಲ್ಲ. ನಾನು ಎಂದೂ ಸಹ ಸಿದ್ದರಾಮಯ್ಯನವರ ನೆರಳಲ್ಲಿ ರಾಜಕೀಯ ಮಾಡಿಲ್ಲ ಎಂದು ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

  ಡಿಕೆಶಿಗೆ ಕುಟುಕಿದ ತೇಜಸ್ವಿನಿ
  ಮುಖ್ಯಮಂತ್ರಿಯಾಗ ಬೇಕು ಎನ್ನುವ ದುರಾಸೆ ಇಟ್ಟುಕೊಂಡು ಚಿಕ್ಕ ಮಕ್ಕಳಂತೆ ಹಠ ಮಾಡಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದರು. ಆದರೆ ಇವತ್ತು ಅವರ ಪಕ್ಷದವರೇ ಅವರ ಮುಖವಾಡವನ್ನು ಬಿಚ್ಚಿಟ್ಡಿದ್ದಾರೆ ಎಂದು ಬಿಜೆಪಿ ಮುಖಂಡೆ ತೇಜಸ್ವಿನಿಗೌಡ ವ್ಯಂಗ್ಯವಾಡಿದರು. ಮಾಜಿ ಸಂಸದ ಉಗ್ರಪ್ಪ ಕಮಿಷನ್ ಗಿರಾಕಿ ಎಂದು ಹೇಳಿದ್ದಾರೆ. ನೀವು ನಿಜವಾಗಿಯೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರೇ..? ನಿಮ್ಮ ಮೇಲಿನ ಭ್ರಷ್ಟಾಚಾರದ ಬಗ್ಗೆ ನಿಮ್ಮವರೇ ಹೇಳಿದ್ದಾರಲ್ಲ, ಅವರ ವಿರುದ್ದ ಯಾಕೆ ನೀವು ಕ್ರಮ ಕೈಗೊಂಡಿಲ್ಲ. ನೀವು ಬಿಜೆಪಿ ವಿರುದ್ಧ ಫೈಟ್ ಮಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಫೈಟ್ ಮಾಡಿ. ಡಿ.ಕೆ ಶಿವಕುಮಾರ್ ಅವರೇ ನಿಮ್ಮ ಬೇಜಬ್ದಾರಿ ಹೇಳಿಕೆ ವಾಪಸ್ ಪಡೆಯಿರಿ ಎಂದು ಕುಟುಕಿದರು.

  ಗರ್ಭಪಾತದ ಅವಧಿ ವಿಸ್ತರಣೆ
  ಭಾರತದಲ್ಲಿ ಗರ್ಭಪಾತ ಕಾನೂನು ವಿರೋಧ. ಆದರೆ, ಕೆಲವು ವರ್ಗದ ಮಹಿಳೆಯರಿಗೆ ಗರ್ಭಪಾತಕ್ಕೆ (Abortion) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಮೆಡಿಕಲ್​ ಟರ್ಮಿನೇಶನ್​​ ಆಫ್ ಪ್ರೆಗ್ನನ್ಸಿ ಕಾಯ್ದೆ 2021 ಅಡಿ (Medical Termination of Pregnancy (Amendment) Rules, 2021,) ಅಪ್ರಾಪ್ತರು, ಅತ್ಯಾಚಾರ ಸಂತ್ರಸ್ತರು, ವಿಧವೆಯರು, ವಿಚ್ಛೇದಿತರು, ವೈದ್ಯಕೀಯ ಸಮಸ್ಯೆ ಅನುಭವಿಸುತ್ತಿರುವವರಿಗೆ ಗರ್ಭಪಾತಕ್ಕೆ ಕಾನೂನಿನಲ್ಲಿ ಅವಕಾಶ ವಿದೆ. ಈ ವರ್ಗದ ಮಹಿಳೆಯರು ಗರ್ಭಪಾತಕ್ಕೆ ಮುಂದಾದರೂ ಅದು 20 ವಾರಗಳ ಒಳಗೆ ಮಾಡಿಸಬೇಕು ಎಂದು ಕಾನೂನಿತು. ಈ ಮೆಡಿಕಲ್​ ಟರ್ಮಿನೇಶನ್​ ಆಫ್​ ಪ್ರೆಗ್ನನ್ಸಿ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಈಗ ಈ ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ವಿಸ್ತರಣೆ ಮಾಡಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ.

  ಲಖೀಂಪುರ್ ಹಿಂಸಾಚಾರ ಮೌನ ಮುರಿದ ಕೇಂದ್ರ ಸಚಿವೆ
  ಲಖೀಂಪುರ ಖೇರಿಯ ಹಿಂಸಾಚಾರದಲ್ಲಿ ನಾಲ್ವರು ರೈತರು ಸಾವನ್ನಪ್ಪಿದ್ದು ಖಂಡನೀಯ. ಆದರೆ ದೇಶದ ಇತರೆ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಆ ಎಲ್ಲ ಘಟನೆಗಳ ಬಗ್ಗೆ ಅವರು ಮಾತನಾಡುತ್ತಿಲ್ಲ ಏಕೆ? ಆದ್ರೆ ಇಂತಹ ಘಟನೆಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇರೋದರಿಂದ ಮಾತ್ರ ಈ ಘಟನಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

  ಮೋದಿ ಪತ್ರ ಬರೆದು ಆತ್ಮಹತ್ಯೆ
  ಹದಿಹರೆಯದ ಯುವಕನೋರ್ವ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆ ಮಾಡಿದ್ದು, ಸಾಯುವುದಕ್ಕೂ ಮುನ್ನ ಯುವಕ ಪತ್ರವೊಂದನ್ನು ಬರೆದಿದ್ದಾನೆ. ಪತ್ರದಲ್ಲಿ ಖ್ಯಾತ ಹಾಡುಗಾರ ಅರ್ಜಿತ್​ ಸಿಂಗ್​ ಮತ್ತು ನೃತ್ಯಗಾರ ಸುಶಾಂತ್​ ಖಾತ್ರಿ ಅವರ ಹೆಸರನ್ನು ಬರೆಯುವ ಮೂಲಕ ತನ್ನ ಆಸೆಯೊಂದನ್ನು ಈಡೇರಿಸಿಕೊಡಬೇಕಾಗಿ ವಿನಂತಿಸಿಕೊಂಡಿದ್ದಾನೆ
  Published by:Seema R
  First published: