Evening Digest: ಕೈ ನಾಯಕರ ಒಗ್ಗಟ್ಟಿನ ಪ್ರದರ್ಶನ; ರಮ್ಯಾ ಮಾತಿನಿಂದ ಖುಷಿ ಆಯ್ತು; ಈ ದಿನದ ಸುದ್ದಿಗಳಿವು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಕೈ ನಾಯಕರ ಒಗ್ಗಟ್ಟಿನ ಪ್ರದರ್ಶನ
  ಉದಯಪುರದಲ್ಲಿ ಕಾಂಗ್ರೆಸ್​ ಸಮಾವೇಶದಲ್ಲಿ ಭಾಗಿಯಾಗಿರುವ ಕಾಂಗ್ರೆಸ್​ ನಾಯಕರು ಒಟ್ಟಿಗೆ ಫೋಟೋಗೆ ಫೋಸ್​ ನೀಡುವ ಮೂಲಕ ಒಗ್ಗಟ್ಟಿನ ಪ್ರದರ್ಶನ ನಡೆಸಿದ್ದಾರೆ. ಎಂಬಿ ಪಾಟಿಲ್​ ಮತ್ತು ಡಿಕೆ ಶಿವಕುಮಾರ್​ ಸಮಾವೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಇಬ್ಬರು ಪರಸ್ಪರ ಮಾತುಕತೆ ನಡೆಸಿ, ಸಿದ್ದರಾಮಯ್ಯ ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ. ಈ ಮೂಲಕ ರಮ್ಯ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

  ಜೆಡಿಎಸ್ ಸಮಾವೇಶ
  ನೆಲಮಂಗಲದಲ್ಲಿ ಜೆಡಿಎಸ್‌ನ ಮಹತ್ವಾಕಾಂಕ್ಷಿ ಜನತಾ ಜಲಧಾರೆ ಸಮಾರೋಪ ಸಮಾರಂಭ ನಡೆಯುತ್ತಿದೆ. ಜನತಾ ಜಲಧಾರೆ ಸಮಾರಂಭದಲ್ಲಿ ಭಾಗಿಯಾಗಲು ರಾಜ್ಯದ ಮೂಲೆ ಮೂಲೆಗಳಿಂದ ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದಾರೆ. ಹಾಸನದಿಂದ ಅತಿ ಹೆಚ್ಚು ಕಾರ್ಯಕರ್ತಯರು ಆಗಮಿಸುತ್ತಿದ್ದು, ಸಾರಿಗೆ ಬಸ್​ 547 ಹಾಗೂ 600 ಖಾಸಗಿ ವಾಹನಗಳಲ್ಲಿ ಕಾರ್ಯಕರ್ತರ ದಂಡೇ ಹರಿದು ಬಂದಿದೆ. ಕಾರ್ಯಕ್ರಮಕ್ಕೆ ಬರುವುದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ತಂದೆ-ತಾಯಿಯ ಆಶೀರ್ವಾದ ಪಡೆದಿದ್ದಾರೆ.

  ರಮ್ಯಾ ಮಾತಿನಿಂದ ನನಗೆ ಖುಷಿ
  ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಅಶ್ವತ್ಥ ನಾರಾಯಣ ನಡುವಿನ ವಾಕ್​ ಸಮರ ಮುಂದುವರಿದೆ. PSI ನೇಮಕಾತಿ ವಿಚಾರದಲ್ಲಿ ಆರಂಭವಾದ ಯುದ್ಧ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಸಚಿವ ಅಶ್ವತ್ಥ ನಾರಾಯಣ, ಕಾಂಗ್ರೆಸ್​ ನಾಯಕ ಎಂ.ಬಿ ಪಾಟೀಲ್​ರನ್ನು ಭೇಟಿಯಾದ ಬಳಿಕ ನಟಿ ರಮ್ಯಾ ಮಾಡಿದ ಟ್ವೀಟ್ ಬಿಜೆಪಿಗೆ ನಾಯಕರಿಗೆ ವರವಾಗಿದೆ. ಡಿಕೆಶಿ ವಿರುದ್ಧ ಟ್ವೀಟ್​ ಮಾಡಿದ ರಮ್ಯಾ ಅಭಿಪ್ರಾಯಕ್ಕೆ ಸಚಿವ ಅಶ್ವತ್ಥ ನಾರಾಯಣ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಕುರಿತ ರಮ್ಯಾ ಮಾತಿಂದ ನನಗೆ ಸಂತೋಷ ಆಗ್ತಿದೆ ಎಂದ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

  ಕಾಂಗ್ರೆಸ್​ ಚಿಂತನಾ ಶಿಬಿರ
  ಉದಯಪುರದಲ್ಲಿ ಕಾಂಗ್ರೆಸ್​ ಚಿಂತನಾ ಶಿಬಿರ ನಡೆಸಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರಉದ್ಘಾಟಿಸಿ ಮಾತನಾಡಿದ ಸೋನಿಯಾ ಗಾಂಧಿ , ಕಾಂಗ್ರೆಸ್ ಪಕ್ಷ ಸುಧಾರಣೆಯ ಅವಶ್ಯಕತೆಯಿದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ಸುಧಾರಣೆ ಸಾಧ್ಯ. ಕಾಂಗ್ರೆಸ್ ಪಕ್ಷ ನಮಗೆಲ್ಲರಿಗೂ ಸಾಕಷ್ಟು ನೀಡಿದೆ. ಈಗ ಪಕ್ಷದ ಋಣ ತೀರಿಸುವ ಸಮಯ ಬಂದಿದೆ. ಚುನಾವಣಾ ವೈಫಲ್ಯವನ್ನು ನಾವು ಮರೆಯಬಾರದು. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದ್ದು, ಇದೊಂದು ಉತ್ತಮ ಅವಕಾಶ ಆಗಿದೆ ಎಂದರು

  ಹಿಂದಿ ಮಾತನಾಡುವವರು ಪಾನಿಪೂರಿ ಮಾರುತ್ತಾರೆ
  ಭಾಷೆ ವಿಚಾರದಲ್ಲಿ ಹಿಂದಿಗಿಂತ ಇಂಗ್ಲಿಷ್ ಹೆಚ್ಚು ಮೌಲ್ಯಯುತವಾಗಿದೆ. ನಮ್ಮೂರಿನ ಕೊಯಮತ್ತೂರಿನಲ್ಲಿ ಪಾನಿ ಪೂರಿ ಮಾತನಾಡುವವರು ಹಿಂದಿಯವರು ಎಂದು ತಮಿಳುನಾಡು ಉನ್ನತ ಶಿಕ್ಷಣ ಸಚಿವ ಪೊನ್ಮುಡಿ ತಿಳಿಸಿದ್ದಾರೆ. ಕೊಯಮತ್ತೂರಿನ ಭಾರತಿಯಾರ್ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಹಿಂದಿ ಹೇರಿಕೆ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ

  ಕಾಶ್ಮೀರಿ ಪಂಡಿತನ ಹತ್ಯೆ

  ಶ್ರೀನಗರ(ಮೇ.13): ಸಮುದಾಯದ 36 ವರ್ಷದ ಸರ್ಕಾರಿ ನೌಕರನ  ಹತ್ಯೆಯ ಹಿನ್ನೆಲೆಯಲ್ಲಿ ಕಾಶ್ಮೀರಿ ಪಂಡಿತರು  ಸುರಕ್ಷತೆಗೆ ಆಗ್ರಹಿಸಿ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗ ಗಳಲ್ಲಿ ನಿನ್ನೆ ಸಂಜೆಯಿಂದ ಪ್ರತಿಭಟನೆಗಳು ನಡೆಯುತ್ತಿವೆ. ಸಮುದಾಯದ ಸದಸ್ಯರು ತಮ್ಮ ಸಾರಿಗೆ ಶಿಬಿರಗಳನ್ನು ತೊರೆದರು. ರಸ್ತೆಗಳನ್ನು ತಡೆದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅವರು ಅದನ್ನು ವಿಫಲಗೊಳಿಸಿದ್ದಾರೆ ಎಂದು ಹೇಳಿದ್ದಾರೆ. 2010 ರಲ್ಲಿ ಬಿಡುಗಡೆಯಾದ ವಿಶೇಷ ಉದ್ಯೋಗ ಪ್ಯಾಕೇಜ್  ಯಲ್ಲಿ ಸರ್ಕಾರಿ ಉದ್ಯೋಗಗಳನ್ನು ನೀಡಿದ ನಂತರ ನಾಲ್ಕು ಸಾವಿರಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಾಶ್ಮೀರದ ವಿವಿಧ ಭಾಗಗಳಲ್ಲಿ ಟ್ರಾನ್ಸಿಟ್ ಕ್ಯಾಂಪ್‌ಗಳಲ್ಲಿ ವಾಸಿಸುತ್ತಿದ್ದಾರೆ.
  Published by:Seema R
  First published: