Evening Digest: ಬೆಂಗಳೂರಲ್ಲಿ ಕೊರೊನಾ ಅಬ್ಬರ; ರಾಷ್ಟ್ರಪತಿ ಆಗ್ತಾರಾ ಶರದ್ ಪವಾರ್? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಬೆಂಗಳೂರಲ್ಲಿ ಕೊರೊನಾ ಅಬ್ಬರ

ಬೆಂಗಳೂರು (ಜೂ 13): ನಗರದಲ್ಲಿ ಕೋವಿಡ್ (Covid19) ಸೋಂಕು ಹೆಚ್ಚಾಗುತ್ತಿದ್ದು ಕಳೆದ ಹತ್ತು ದಿನದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ‌ ಹಿಂದೆ ಶೇ.1.1ರಷ್ಟಿದ್ದ ಪಾಸಿಟಿವಿಟಿ ದರ ಶೇ. 2.61ಕ್ಕೆ ತಲುಪಿದೆ ಎಂದು ಪಾಲಿಕೆಯ ದಾಖಲೆಗಳು ಹೇಳುತ್ತವೆ. ಬಿಬಿಎಂಪಿ (BBMP) ಕೋವಿಡ್ ವರದಿಯ ಪ್ರಕಾರ, ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನದಲ್ಲಿ 429 ಜನರಿಗೆ ಸೋಂಕು ತಗುಲಿದೆ.  ಕೋವಿಡ್ 4ನೇ ಅಲೆಯನ್ನು (4th Wave) ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ( Minister Sudhakar)​ ಸಭೆ ನಡೆಸಿದ್ರು. ನಮ್ಮ ದೇಶದಲ್ಲಿ ದೆಹಲಿ, ಮಹಾರಾಷ್ಟ್ರದಲ್ಲಿ ಏರಿಕೆ ಕಂಡಿದೆ. ಬೆಂಗಳೂರಲ್ಲೂ ಸ್ವಲ್ಪ ಹೆಚ್ಚಾಗಿದ್ದು, ಜಿನೋಮಿಕ್ ಸೀಕ್ವೆನ್ಸಿಂಗ್​ ವ್ಯವಸ್ಥೆ ಮಾಡಲಾಗಿದೆ ಎಂದ್ರು.

ರಾಷ್ಟ್ರಪತಿ ಆಗ್ತಾರಾ ಶರದ್ ಪವಾರ್?

ಭಾರತಕ್ಕೆ ಹೊಸ ರಾಷ್ಟ್ರಪತಿ ಆಯ್ಕೆಯಾಗುವ ಕಾಲ ಬಂದೇಬಿಟ್ಟಿದೆ. ಹೊಸ ರಾಷ್ಟ್ರಪತಿ ಯಾರಾಗಲಿದ್ದಾರೆ (President Polls) ಎಂಬ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಂಡಿದೆ. ಬಿಜೆಪಿ ಎನ್​ಡಿಎ ಮೈತ್ರಿಕೂಟದಿಂದ (NDA) ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ? ಕಾಂಗ್ರೆಸ್ ಯಾರಿಗೆ (Congress President Candidate) ಮಣೆ ಹಾಕಲಿದೆ? ಇತರ ಪಕ್ಷಗಳಿಂದ ಯಾರಾದರೂ ಸ್ಪರ್ಧಿಸಲಿದ್ದಾರಾ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿವೆ.  ಈ ನಡುವೆಯ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಯಾದವ್ (Sharad Pawar) ಹೆಸರು ಕೇಳಿಬಂದಿದೆ. ರಾಷ್ಟ್ರಪತಿ ಹುದ್ದೆಗೆ ಶರದ್ ಪವಾರ್ ಸ್ಪರ್ಧೆಗೆ ಕಾಂಗ್ರೆಸ್ ತನ್ನ ಬೆಂಬಲವನ್ನು ನೀಡಿದೆ ಎಂದು ವರದಿಯಾಗಿದೆ.

ಪೊಲೀಸರನ್ನು ನೋಡಿ ಎದ್ದೂ ಬಿದ್ದು ಓಡಿದ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ!

ಬೆಂಗಳೂರು: ನ್ಯಾಷನಲ್ ಹೆರಾಲ್ಡ್‌ ಕೇಸ್‌ನಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ  ನೋಟಿಸ್ ಕೊಟ್ಟಿದ್ದಕ್ಕೆ ಕಾಂಗ್ರೆಸ್‌ ಕೆಂಡಾಮಂಡಲವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ (New Delhi), ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ (Protest) ನಡೆಸಿದ್ರು. ಬೆಂಗಳೂರಲ್ಲೂ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್, ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಹೋರಾಟ ಮಾಡಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಅರೆಸ್ಟ್ ಮಾಡಲು ಯತ್ನಿಸಿದರು. ಆಗ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ (Youth Congress National President) ಬಿ.ವಿ. ಶ್ರೀನಿವಾಸ್ (B.V. Srinivas) ಎದ್ದೆನೋ, ಬಿದ್ದೆನೋ ಅಂತ ಓಡಿ ಹೋದ ಪ್ರಸಂಗ ಕೂಡ ಜರುಗಿತು.

ಒಂದೆಡೆ ಕೋವಿಡ್ ಅಬ್ಬರ, ಮತ್ತೊಂಡೆದೆ ಡೆಂಗ್ಯೂ ಜ್ವರ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ (Covid) ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದೆ. ಅದರಲ್ಲೂ ಬೆಂಗಳೂರಿಗೆ ಅಗ್ರಪಾಲು ಇದೆ. ಕಳೆದ 10 ದಿನದಲ್ಲಿ ಸೋಂಕಿನ ಪ್ರಮಾಣ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೇ ಕಳೆದ ಏಳು ದಿನಗಳಲ್ಲಿ‌ ಒಟ್ಟು 2,845 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೊರೋನಾ (Corona) ಅಬ್ಬರದ ನಡುವೆಯೇ ಡೆಂಗ್ಯೂ (Dengue) ಕೂಡ ಜಾಸ್ತಿಯಾಗುತ್ತಿದೆ. ರಾಜ್ಯ ಆರೋಗ್ಯ ಇಲಾಖೆಯ  ಅಂಕಿ-ಅಂಶಗಳ ಪ್ರಕಾರ ಈ ತಿಂಗಳ 10ರವರೆಗೆ ರಾಜ್ಯದಲ್ಲಿ 1,838 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಪ್ರಕರಣ ಶೇಕಡಾ 50ರಷ್ಟು ಏರಿಕೆಯಾಗಿದೆ.

ದೇಶದಲ್ಲಿ ಹಳೆಯ, ಮಾಲಿನ್ಯಕಾರಕ ವಾಹನ ನಿಷೇಧ

ತನ್ನ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಹಳೆಯ ಮಾಲಿನ್ಯಕಾರಕ ವಾಹನಗಳನ್ನು ರಸ್ತೆಗೆ ಇಳಿಯದಂತೆ ಮಾಡುವ ಭಾರತದ ಯೋಜನೆಯು ಬಹುಷಃ ಹಲವಾರು ಸವಾಲುಗಳನ್ನು ಎದುರಿಸಬೇಕಿದೆ ಎಂದು ತೋರುತ್ತಿದೆ. ಏಕೆದಂರೆ, ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿರುವ ಪ್ರಕಾರ, ಹಳೆಯ ಕಾರುಗಳನ್ನು ಹೊಂದಿರುವ ಬಹುಪಾಲು ಮಂದಿಗೆ, ತಮ್ಮ ಕಾರುಗಳನ್ನು ಮಾರಲು ಯಾವುದೇ ಆಸಕ್ತಿ ಇಲ್ಲ ಎಂದಿದೆ. ಲೋಕಲ್ ಸರ್ಕಲ್ ನಡೆಸಿದ ಸಮೀಕ್ಷೆಯಲ್ಲಿ, 10,543 ಮಂದಿ ವಾಹನ ಮಾಲೀಕರಲ್ಲಿ ಶೇಕಡಾ 57 ರಷ್ಟು ಮಂದಿ ಕಾರುಗಳ ಬಳಕೆಯನ್ನು ನಿಲ್ಲಿಸಬೇಕೇ ಬೇಡವೇ ಎಂಬುವುದರ ಬಗ್ಗೆ ಯೋಚಿಸುತ್ತಿದ್ದರೆ, ಕಾರುಗಳು ಎಷ್ಟು ಹಳೆಯದು ಎಂಬುದಕ್ಕಿಂತಲೂ, ಓಡೋಮೀಟರ್ ನಲ್ಲಿನ ಮೈಲುಗಳ ಮೇಲೆ ಅವಲಂಬಿತವಾಗಿದೆ ಎನ್ನುತ್ತಾರೆ ಕೆಲವರು. ಕಳೆದ ವರ್ಷ ಸರಕಾರ 20 ವರ್ಷಕ್ಕಿಂತ ಹಳೆಯ ವೈಯುಕ್ತಿಕ ವಾಹನ ಮತ್ತು 15 ವರ್ಷಕ್ಕಿಂತ ಹಳೆಯ ವಾಣಿಜ್ಯ ವಾಹನಗಳು ಫಿಟ್‍ನೆಟ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಆದೇಶಿಸಿತ್ತು.
Published by:Pavana HS
First published: