Evening Digest: ಓಮಿಕ್ರಾನ್​​ಗೆ ಮೊದಲ ಬಲಿ; ಆಪರೇಷನ್ JDSಗೆ ಇಳಿದಿದ್ದಾರಾ ಸಿದ್ದರಾಮಯ್ಯ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಓಮಿಕ್ರಾನ್​​ಗೆ ಮೊದಲ ಬಲಿ : ಕೊರೊನಾದ (Corona) ಹೊಸ ರೂಪಾಂತರ ಓಮಿಕ್ರಾಸ್​​ (Omicron) ವೈರಸ್​​ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿ ಆತಂಕ ಮೂಡಿಸಿರುವ ಬೆನ್ನಲ್ಲೇ, ಅಘಾತಕಾರಿ ಸುದ್ದಿ ಹೊರ ಬಿದ್ದಿದೆ. ಓಮಿಕ್ರಾನ್​​ಗೆ ಮೊದಲ ಬಲಿಯಾಗಿದೆ(Omicron first death). ಓಮಿಕ್ರಾನ್​​ ಸೋಂಕಿಗೆ ತುತ್ತಾಗಿದ್ದ ಬ್ರಿಟನ್​ನ(UK) ವ್ಯಕ್ತಿ ಮೃತಪಟ್ಟಿದ್ದಾರೆ. ಓಮಿಕ್ರಾನ್ ಸೋಂಕಿಗೆ ಒಳಗಾದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ (UK PM Boris Johnson) ಅವರೇ ದೃಢಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರೂಪಾಂತರದ ಓಮಿಕ್ರಾನ್​​ ವಿರುದ್ಧ ಮಹತ್ವಾಕಾಂಕ್ಷೆಯ ಬೂಸ್ಟರ್ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ ಎಂದೂ ಇದೇ ವೇಳೆ ಜಾನ್ಸನ್​ ಘೋಷಿಸಿದರು. ಭಾರತದಲ್ಲಿ ಈವರೆಗೆ 38 ಮಂದಿಯಲ್ಲಿ ಓಮಿಕ್ರಾನ್​ ರೂಪಾಂತರಿ ಇರುವುದು ದೃಢಪಟ್ಟಿದೆ.

ಆಪರೇಷನ್ JDSಗೆ ಇಳಿದಿದ್ದಾರಾ ಸಿದ್ದರಾಮಯ್ಯ?

ಜೆಡಿಎಸ್​ ನಾಯಕರು ಹಾಗೂ ಸಿದ್ದರಾಮಯ್ಯ ರಾಜಕೀಯ ವಿರೋಧಿಗಳು ಅಂತಲೇ ಬಿಂಬಿತವಾಗಿದೆ. ಸಾಕಷ್ಟು ವಾಕ್ಸಮರದಲ್ಲಿ ಖುದ್ದು ಮಾಜಿ ಪಿಎಂ ಎಚ್​.ಡಿ.ದೇವೇಗೌಡರೇ(H. D. Deve Gowda) ಹೇಳಿರುವಂತೆ, ಕೆಲವರು ನಮ್ಮ ಪಕ್ಷವನ್ನು ಮುಗಿಸಲು ಯತ್ನಿಸುತ್ತಿದ್ದಾರೆ, ಅದು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಮಾತಿನಲ್ಲೇ ತಿವಿದಿದ್ದಾರೆ. ಇನ್ನು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (H. D. Kumaraswamy) ಕೂಡ ಸಿದ್ದರಾಮಯ್ಯ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾರೆ. ಈ ಎಲ್ಲದರ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಆಪರೇಷನ್​ ಜೆಡಿಎಸ್​ಗೆ ಕೈ ಹಾಕಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಜೆಡಿಎಸ್​ನ ಮತ್ತೊಬ್ಬ ಮುಖಂಡನಿಗೆ ಸಿದ್ದರಾಮಯ್ಯ ಗಾಳ ಹಾಕಿ ಕಾಂಗ್ರೆಸ್​ಗೆ ಸೆಳೆದಿದ್ದಾರೆ. ಇದು ಸತ್ಯವೂ ಆಗಿದ್ದು ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ನವಲಗುಂದದ ಮಾಜಿ ಶಾಸಕ ಕೋನರೆಡ್ಡಿ, ಜೆಡಿಎಸ್​ ತೊರೆದು ನಾಳೆ ಅಧಿಕೃತವಾಗಿ ಕಾಂಗ್ರೆಸ್​​ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಬಗ್ಗೆ ಖುದ್ದು ಕೋನರೆಡ್ಡಿ ನ್ಯೂಸ್​18ಗೆ ದೃಢಪಡಿಸಿದ್ದಾರೆ.

ನಾನು ಯಾರ ಮನೆ ಬಾಗಿಲಿಗೆ ಹೋಗಿಲ್ಲ

ಸಮ್ಮಿಶ್ರ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂಬ, ಮಾಜಿ ಸಿಎಂ  ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಸರ್ಕಾರ ರಚನೆ ವೇಳೆಯಲ್ಲಿ ನಾನು ಕುಮಾರಸ್ವಾಮಿ ಮನೆ ಬಾಗಿಲಿಗೆ ಹೋಗಿಲ್ಲ,  "ಅವರ ಮನೆಗೆ ಹೋಗಿ, ಅಯ್ಯೋ ನೀವು ಬನ್ನಿ ಎಂದು ನಾನು ಕರೆದಿಲ್ಲ ಎಂದರು" ಬಿಜೆಪಿ ಜೊತೆಗೆ ಜೆಡಿಎಸ್ ಹೊಂದಾಣಿಕೆ ರಾಜಕೀಯಕ್ಕೆ ಉದಾಹರಣೆ ನೀಡಿದ ಸಿದ್ದರಾಮಯ್ಯ ಬಿಜೆಪಿಯ  ಗೋಹತ್ಯೆ ನಿಷೇಧ ಕಾನೂನಿಗೆ ಜೆಡಿಎಸ್ ಬೆಂಬಲ ನೀಡಿದೆ. ಕೆಲ‌ ರೈತ ವಿರೋಧಿ  ಮಸೂದೆಗಳಿಗೂ ಬಿಜೆಪಿಗೆ ಬೆಂಬಲ ನೀಡಿದೆ. ಜೆಡಿಎಸ್ ನವರು ಬಿಜೆಪಿಯ "ಬಿ" ಟೀಮ್ ಅಲ್ಲದೇ ಮತ್ತೇನು ಎಂದು ಸಿದ್ದರಾಮಯ್ಯ ಹೇಳಿದರು.

ಗೆಳತಿಯ ಮನೆಗೆ ಹೋಗಿದ್ದ ಬಾಲಕಿ ಕೆಲವೇ ದಿನಗಳಲ್ಲಿ ಗರ್ಭಿಣಿ

ಕೊರಟಗೆರೆ ಪಟ್ಟಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ ಎಂಬ ವಿಚಾರ ಗೊತ್ತಾಗುವ ಮೂಲಕ ಅತ್ಯಾಚಾರ ಪ್ರಕರಣ ಬಯಲಾಗಿದೆ. ಕಾಮುಕನ ಅನಾಚಾರ ಬೆಳಕಿಗೆ ಬಂದಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೆಲ ತಿಂಗಳುಗಳ ಹಿಂದೆ ಸಂತ್ರಸ್ತ ಬಾಲಕಿ ಗೆಳೆತಿಯ ಮನೆಗೆ ನೋಟ್ಸ್​ ತರಲು ಹೋಗಿದ್ದಳು. ಆಗ ಆರೋಪಿ ಬಾಲಕಿಗೆ ಕುಡಿಯಲು ನೀರು ಕೊಟ್ಟಿದ್ದಾನೆ. ನೀರಿನಲ್ಲಿ ಮತ್ತು ಬರುವ ವಸ್ತು ಬೆರೆಸಿದ್ದ ಎನ್ನಲಾಗುತ್ತಿದೆ. ಪ್ರಜ್ಞೆ ತಪ್ಪಿದ ಬಾಲಕಿ ಮೇಲೆ ಕಾಮುಕ ಎರಗಿದ್ದಾನೆ. ಅತ್ಯಾಚಾರ ಮಾಡಿ ಯಾರಿಗೂ ಈ ಬಗ್ಗೆ ಹೇಳದಂತೆ ಬಾಲಕಿಗೆ ಆರೋಪಿ ಕೊಲೆ ಬೆದರಿಕೆ ಹಾಕಿದ್ದಾನೆ. ಕರಾಳ ಅನುಭವದಿಂದ ನರಳಿದ್ದ ಬಾಲಕಿ ಏನನ್ನೂ ಬಾಯ್ಬಿಡದೆ ಮಂಕಾಗಿ ಬಿಟ್ಟಿದ್ದಾಳೆ. ನಂತರ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕಿ ಗರ್ಭವತಿಯಾಗಿರುವುದು ತಿಳಿದು ಬಂದಿದೆ. ಅಘಾತಕ್ಕೊಳಗಾದ ವೈದ್ಯರು-ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಕೊರಟಗೆರೆ ಪಟ್ಟಣ ಪೊಲೀಸರು ಆರೋಪಿಯನ್ನು ಬಂಧಿಸಿದ್ದು,  ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ದಿನಕ್ಕೆ 5GB ಡೇಟಾ, ಅನಿಯಮಿತ ಕರೆ ಸೌಲಭ್ಯ

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು Vi ತಮ್ಮ ಯೋಜನೆಗಳ ಬೆಲೆಯನ್ನು ಹೆಚ್ಚಿಸಿವೆ. ಸರ್ಕಾರಿ ಟೆಲಿಕಾಂ ಕಂಪನಿ BSNL ನ ಯೋಜನೆಗಳು ಹಳೆಯ ಬೆಲೆಯಲ್ಲಿ ಮಾತ್ರ ಲಭ್ಯವಿವೆ. ಅದರಂತೆ ಬಿಎಸ್​ಎನ್​ಎಲ್​ 599 ರೂ.ವಿನ ಪ್ಲಾನ್​​ ಬಹುಪ್ರಯೋಜನವನ್ನು ಒದಗಿಸುತ್ತದೆ. ವಿವಿಧ ಕಂಪನಿಗಳ ಪ್ಲಾನ್​ಗಳನ್ನು ಗಮನಿಸುದಾದರೆ ಈ ಪ್ಲಾನ್​ ದಿನಕ್ಕೆ 5ಜಿಬಿ ಡೇಟಾ ಒದಗಿಸುತ್ತದೆ. ಜೊತೆಗೆ ಹಲವಾರು ಪ್ರಯೋಜನ ಒದಗಿಸುವುಲ್ಲದೆ, ಬಳಕೆದಾರರಿಗೆ ಉಪಯುಕ್ತವೆನಿಸಲಿದೆ. BSNL ನ ರೂ 599 ಯೋಜನೆಯಲ್ಲಿ, ಬಳಕೆದಾರರು 84 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ, ಬಳಕೆದಾರರು ದಿನಕ್ಕೆ 5GB ಡೇಟಾವನ್ನು ಪಡೆಯುತ್ತಾರೆ. ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಬಳಸು ಸಿಗಲಿದೆ. ಹೆಚ್ಚುವರಿ ಪ್ರಯೋಜನಗಳ ಕುರಿತು ಮಾತನಾಡುವುದಾದರೆ, Zing ಅಪ್ಲಿಕೇಶನ್‌ನ ಚಂದಾದಾರಿಕೆ ಲಭ್ಯವಿದೆ.
Published by:Kavya V
First published: