Evening Digest: ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ಚಿದ ಆಕ್ರೋಶ, ಸ್ಯಾಂಡಲ್​ವುಡ್​ ಯುವನಟನ ಬಂಧನ- ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಲಂಚ-ಮಂಚದ ಹೇಳಿಕೆ ಕೊಟ್ಟ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ

ಲಂಚ- ಮಂಚದ ಹೇಳಿಕೆ ಕೊಟ್ಟ ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಕೂಡ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದೆ. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉದ್ಯೋಗ ಪಡೆಯಬೇಕು ಎಂದರೆ ಯುವತಿಯರು ಮಂಚ ಹತ್ತಬೇಕಾಗಿದೆ ಅಂತಾ ನಿನ್ನೆ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಆಕ್ರೋಶ ಹೊರಹಾಕಿದೆ. ಮಾಜಿ ಸಿಎಂ ಯಡಿಯೂರಪ್ಪ, ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಆದರೆ ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಹನಿಟ್ರ್ಯಾಪ್ ಕೇಸ್, ಸ್ಯಾಂಡಲ್​​ವುಡ್​ ಯುವನಟನ ಬಂಧನ

ಹನಿಟ್ರ್ಯಾಪ್ ಮಾಡಿ ಉದ್ಯಮಿಯನ್ನು ವಂಚಿಸಿದ ಆರೋಪದ ಮೇಲೆ ಸ್ಯಾಂಡಲ್​ವುಡ್​ನ ಯುವ ನಟ ಯುವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ ಯುವ ನಟ, ಹುಡುಗಿಯರ ಹೆಸರಲ್ಲಿ ಅವರನ್ನು ಖೆಡ್ಡಾಕ್ಕೆ ಕೆಡವಿದ್ದ. ಬಳಿಕ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದ. ಯುವತಿ ಕಳುಹಿಸಿದ ಮೆಸೇಜ್​ಗಳಿಗೆ ಪ್ರತಿಕ್ರಿಯಿಸಿದ್ದಲ್ಲದೆ ಆಕೆ ಕಳುಹಿಸಿದ್ದ 'ಹಾಟ್' ಫೋಟೋಗಳಿಗೆ ಉದ್ಯಮಿ ಪ್ರತಿಕ್ರಿಯಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮ, ಪೊಲೀಸರ ಸೋಗಿನಲ್ಲಿ ಉದ್ಯಮಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದಾನೆ. ತನಿಖೆ ಆರಂಭಿಸಿದ ಪೊಲೀಸರು ಕನ್ನಡ ಚಿತ್ರರಂಗದ ಯುವ ನಟನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ತಾನು ಹುಡುಗಿ ಅಂತ ನಂಬಿಸಿ ಉದ್ಯಮಿಗೆ ಮೋಸ, ಬಯಲಾಯ್ತು ನವನಟನ ನವರಂಗಿ ಆಟ!

ಬಿಹಾರದಲ್ಲಿ NDAಗೆ ಮತ್ತೊಂದು ಶಾಕ್ ಸಾಧ್ಯತೆ

ಬಿಹಾರದ ರಾಜಕೀಯ ಗದ್ದಲ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು ಬಿಹಾರದಲ್ಲಿ RJDಯೊಂದಿಗೆ ಸರ್ಕಾರ ರಚಿಸಿದ್ದಾರೆ. ಲಾಲು ಅವರ ಪುತ್ರ ತೇಜಸ್ವಿ ಯಾದವ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಆದರೆ ಈ ವಿಷಯ ಇಲ್ಲಿಗೇ ಮುಗಿದಿಲ್ಲ, ಇದೀಗ ಬಿಹಾರದಲ್ಲಿಯೂ ಹೊಸ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಹಗ್ಗಜಗ್ಗಾಟ ನಡೆಯುತ್ತಿದೆ. ಹಾಗಾಗಿ ಶೀಘ್ರದಲ್ಲೇ NDAಗೆ ಮತ್ತೊಂದು ಹಿನ್ನಡೆಯಾಗುವ ಮಾತು ಕೇಳಿಬರುತ್ತಿದೆ. ನಿತೀಶ್-ತೇಜಸ್ವಿ ಜತೆ ಇನ್ನೂ ಮೂವರು ಸಂಸದರು ಕೂಡ ಸೇರಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚೆನ್ನೈ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಬ್ಯಾಂಕಾಕ್​ ವ್ಯಕ್ತಿ, ಬ್ಯಾಗ್ ಓಪನ್​ ಮಾಡಿದ ಅಧಿಕಾರಿಗಳಿಗೆ ಶಾಕ್!

ಕಾಫಿನಾಡಲ್ಲಿ ಮುಂದುವರಿದ ಮಳೆ ಅವಾಂತರಗಳು

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅವಾಂತರ ನಿಂತಿಲ್ಲ. ಮೂಡಿಗೆರೆ ತಾಲೂಕಿನ ಬಗ್ಗಸಗೂಡು ಗ್ರಾಮದಲ್ಲಿ ಭೂಮಿಯ ತೇವಾಂಶ ಹೆಚ್ಚಾಗಿ ಮನೆ ಮುಂದಿನ ತೋಟವೇ ಕುಸಿದಿದೆ. ರವಿಗೌಡ ಎಂಬುವರಿಗೆ ಸೇರಿದ ಮನೆ ಇದಾಗಿದೆ. ಭೂಮಿ ಕುಸಿದ ಹಿನ್ನೆಲೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಮನೆ ಬೀಳಬಹುದೆಂಬ ಆತಂಕದಿಂದ ಕುಟುಂಬಸ್ಥರು ಸಂಬಂಧಿಕರ ಮನೆಗೆ ತೆರಳಿದ್ದಾರೆ. ಮಣ್ಣು ಕುಸಿದು ತೋಟದಲ್ಲಿದ್ದ ಬಾವಿಯೂ ಕೂಡ ಮುಚ್ಚಿ ಹೋಗಿದೆ. ಮೂಡಿಗೆರೆ ತಾಲೂಕಿನ ಕಡಿದಾಳು ಗ್ರಾಮದಲ್ಲಿ ಶಾಲೆ ಗೋಡೆ ಕುಸಿತವಾಗಿದೆ. 15 ದಿನಗಳ ನಿರಂತರ ಮಳೆಗೆ ಮಲೆನಾಡಿಗರು ಹೈರಾಣಾಗಿದ್ದಾರೆ.

ಸಮೀರ್ ವಾಂಖೆಡೆ ಬಿಗ್ರಿಲೀಫ್, ಜಾತಿ ಕೇಸಲ್ಲಿ ಕ್ಲೀನ್ಚಿಟ್

NCB ಮಾಜಿ ಝೋನಲ್ ಡೈರೆಕ್ಟರ್ ಸಮೀರ್ ವಾಂಖೆಡೆ ಜಾತಿಗೆ (caste certificate case) ಸಂಬಂಧಿಸಿದಂತೆ ವರ್ಷವಿಡೀ ಇದ್ದ ವಿವಾದಕ್ಕೆ ತೆರೆ ಬಿದ್ದಿದೆ. ಜಾತಿ ಪರಿಶೀಲನಾ ಸಮಿತಿ (Cast Scrutiny Committee ) ವಾಂಖೆಡೆಗೆ ಕ್ಲೀನ್ ಚಿಟ್ ನೀಡಿದೆ. ಸಮಿತಿಯು ಸಮೀರ್ ವಾಂಖೆಡೆ ಅವರ ಜಾತಿ ಪ್ರಮಾಣ ಪತ್ರವನ್ನು ಎತ್ತಿ ಹಿಡಿದಿದೆ. ಜಾತಿ ಪರಿಶೀಲನಾ ಸಮಿತಿಯು 91 ಪುಟಗಳ ಆದೇಶದಲ್ಲಿ ವಾಂಖೆಡೆ ಹುಟ್ಟಿನಿಂದ ಮುಸ್ಲಿಂ ಎಂಬ ವಾದವನ್ನು ತಿರಸ್ಕರಿಸಿದೆ.
Published by:Thara Kemmara
First published: