Evening Digest: ರಾಜೀನಾಮೆ ಕೊಡಲ್ಲ ಎಂದ ಸಚಿವ ಈಶ್ವರಪ್ಪ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜೀನಾಮೆ ಕೊಡಲ್ಲ ಎಂದ ಸಚಿವ ಈಶ್ವರಪ್ಪ : ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ ಪ್ರಕರಣ ಸಚಿವ ಈಶ್ವರಪ್ಪ ತಲೆದಂಡಕ್ಕೆ ಕಾರಣವಾಗಿದೆ. ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಈಶ್ವರಪ್ಪ ಅವರೇ ತಮ್ಮ ಸಾವಿಗೆ ನೇರ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆ ಈಗಾಗಲೇ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ, ಕಾಂಗ್ರೆಸ್, ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇತ್ತ ತಮಗೆ ಸಂತೋಷ್ ಯಾರೆಂಬುದೇ ಗೊತ್ತಿಲ್ಲ ಎಂದಿದ್ದ ಸಚಿವ ಕೆ ಎಸ್ ಈಶ್ವರಪ್ಪ ಇದೀಗ ಮುಖ್ಯಮಂತ್ರಿಗಳು ರಾಜೀನಾಮೆ ಕೇಳಿದರೆ ಕೊಡಬೇಕಾಗುತ್ತದೆ ಎಂದಿದ್ದ ಅವರು, ಇದೀಗ ರಾಜೀನಾಮೆ ನೀಡುವ ಪ್ರಶ್ನೇಯೇ ಇಲ್ಲ ಎಂದಿದ್ದಾರೆ

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Santosh Patil Suicide Case: ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ; KS Eshwarappa

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ
ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಜನರಿಗೆ ಇಂದು ವರುಣ ದೇವ ತಂಪೆರೆದಿದ್ದಾನೆ. ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಬಿಸಿಲಿನ ಝಳಕ್ಕೆ ಜನರು ತತ್ತರಿಸಿದ್ದರು. ಇಂದು ಸಂಜೆ ವೇಳೆ ಸುರಿದ ಮಳೆ ಸಿಂಚನ ಮುದ ನೀಡಿದೆ. ಬೆಂಗಳೂರು ಮಾತ್ರವಲ್ಲದೇ ಮಂಡ್ಯ, ಚಾಮರಾಜನಗರ, ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ವರುಣ ಆರ್ಭಟಿಸಿದ್ದಾನೆ. ಮಂಡ್ಯ, ಹಾಸನದಲ್ಲಿ ಒಂದುಗಂಟೆಗಳ ಕಾಲ ಸಿಡಿಲು ಗುಡುಗಿನ ಮಳೆ ಸುರಿದಿದೆ. ಬೆಂಗಳೂರಿನ ಶಾಂತಿನಗರ, ಮೆಜೆಸ್ಟಿಕ್, ವಿಲ್ಸನ್ ಗಾರ್ಡನ್ ಸೇರಿದಂತೆ ಹಲವೆಡೆ ಮಳೆ ಬಂದಿದೆ. ಅಚಾನಕ್ ಆಗಿ ಸಂಜೆ ಸುರಿದ ಮಳೆಯಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸಿದರು.

ಸಂಸದ ತೇಜಸ್ವಿ ಸೂರ್ಯ ಬಂಧನ
ರಾಜಸ್ಥಾನದ ಹಿಂಸಾಚಾರ ಪೀಡಿತ ಕರೌಲಿಗೆ (Karauli) ಭೇಟಿ ನೀಡಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಸಂಸದ ತೇಜಸ್ವಿ ಸೂರ್ಯ (MP Tejasvi Surya) ಅವರನ್ನು ಇತರ ಬಿಜೆಪಿ ನಾಯಕರೊಂದಿಗೆ ಬಂಧಿಸಲಾಗಿದೆ. ರಾಜ್ಯ ಪೊಲೀಸರು ದೌಸಾ ಗಡಿಯಲ್ಲಿ (Dausa Border) ತೇಜಸ್ವಿ ಸೂರ್ಯರನ್ನು ತಡೆದಾಗ ಸತೀಶ್ ಪೂನಿಯಾ ಮತ್ತು ಹಲವಾರು ಬೆಂಬಲಿಗರೊಂದಿಗೆ ಇದ್ದರು. ಇದಕ್ಕೂ ಮೊದಲು ತೇಜಸ್ವಿ ಸೂರ್ಯ ತಮ್ಮ ಭೇಟಿಯ ಬಗ್ಗೆ ಚಿತ್ರವನ್ನು ಟ್ವೀಟ್ ಮಾಡಿದ್ದರು, ಜನರು ಅಲ್ಲಿಗೆ ತಲುಪಲು ಕರೆ ನೀಡಿದ್ದರು. ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ರಾಷ್ಟ್ರಕ್ಕಾಗಿ ಹೋರಾಡಲು ಸಿದ್ಧರಿದ್ದೀರಾ ಎಂದು ಹೇಳಿದರು. ಇದಕ್ಕೆ ಬೆಂಬಲಿಗರು "ಹೌದು" ಎಂದು ಉತ್ತರಿಸಿದರು. "ಯಾವುದೇ ಪರಿಸ್ಥಿತಿಯಲ್ಲಿ ನಾವು ಕರೌಲಿಗೆ ಹೋಗುತ್ತೇವೆ. ನಾವು ಶಾಂತಿಯುತವಾಗಿ ಹೋಗಲು ಪ್ರಯತ್ನಿಸುತ್ತೇವೆ. ಪೊಲೀಸರು ನಮ್ಮನ್ನು ತಡೆಯಲು ಪ್ರಯತ್ನಿಸಿದರೆ, ನಾವು ಸಾಮೂಹಿಕ ಬಂಧನದಲ್ಲಿರುತ್ತೇವೆ" ಎಂದು ಅವರು ನೆರೆದಿದ್ದವರನ್ನು ಉದ್ದೇಶಿಸಿ ಹೇಳಿದರು.

ಚೀನಾದಲ್ಲಿ ಕರೋನಾ 4ನೇ ಅಲೆ ಭೀಕರತೆ
ಕರೋನಾದ (Corona) ಹೊಸ ರೂಪಾಂತರಗಳ (New Variant) ಆಗಮನದೊಂದಿಗೆ, ಜನರು (People) ನಾಲ್ಕನೇ ಅಲೆಯ (Fourth Variant) ಭಯ ಎದುರಿಸುವಂತಾಗಿದೆ. ಕರೋನದ ಹೊಸ ರೂಪಾಂತರ XE ಭಾರತದ (India) 2 ರಾಜ್ಯಗಳಲ್ಲಿ ಸಹ ಕಂಡು ಬಂದಿವೆ. ಭಾರತದಲ್ಲಿ ಈ ರೂಪಾಂತರವನ್ನು ತಪ್ಪಿಸಲು ಸರ್ಕಾರಗಳು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿವೆ. ಪ್ರಪಂಚದ ಹಲವು ದೇಶಗಳಲ್ಲಿ ಕರೋನಾ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಆರೋಗ್ಯ ಸಂಸ್ಥೆಯ ಕಳವಳ ಹೆಚ್ಚಾಗಿದೆ. ಕರೋನಾ ಮೂಲ ಚೀನಾದಿಂದ ಬಂದಿದೆ ಎಂದು ನಂಬಲಾಗಿದೆ. ಈಗ ಚೀನಾದಲ್ಲಿ (China) ಕರೋನಾದಿಂದಾಗಿ ತುಂಬಾ ಕೆಟ್ಟ ಪರಿಸ್ಥಿತಿ ಉಂಟಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:COVID-19 XE Variant: ಕರೋನಾ 4ನೇ ಅಲೆ ಭೀಕರತೆ: ಚೀನಾದಲ್ಲಿ 'ಆ' ಹಾಹಾಕಾರ ಶುರು!

KGF 2: ತೂಫಾನ್ ನಂತರ ಸುಲ್ತಾನ್ ಅಬ್ಬರ
ಕೆಜಿಎಫ್ 2 (KGF Chapter 2) ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಕೆಜಿಎಫ್ 1ರಂತೆ ಇದು ಸಹ ಅದ್ಭುತವಾಗಿರಲಿದೆ ಎಂದು ಈ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಇತ್ತೀಚೆಗಷ್ಟೇ ಈ ಚಿತ್ರದ ತೂಫಾನ್, ಗಗನೀ ಹಾಡು ಹಾಗೂ ಟ್ರೈಲರ್ ಬಿಡುಗಡೆಯಾಗಿ ಧೂಳೆಬ್ಬಿಸಿದೆ. ಇದೀಗ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಈ ಸಿನಿಮಾದ ಮೂರನೇ ಹಾಡು ರಿಲೀಸ್ ಆಗಿದ್ದು, ಸುಲ್ತಾನ ಲಿರಿಕಲ್ ಹಾಡು (Sultan lyrical song) ಬಿಡುಗಡೆಯಾಗಿದೆ. ಈ ಹಾಡು ಈಗಾಗಲೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಜನರು ಹಾಡನ್ನು ನೋಡಿ ಇಷ್ಟಪಟ್ಟಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳಂತೆ ಇದು ಸಹ ಧೂಳೆಬ್ಬಿಸಲಿದೆ ಎಂಬುದು ಯಶ್ (Rocking Star Yash) ಅಭಿಮಾನಿಗಳ ಅಂಬೋಣ.
Published by:Kavya V
First published: