Top-5 News: RSS ಖಾಕಿ ಚಡ್ಡಿಗೆ ಕಾಂಗ್ರೆಸ್ ಬೆಂಕಿ, ​ಬೀಟ್ರೂಟ್ ಪಲ್ಯದಲ್ಲಿ ಸಿಕ್ಕಿತು ಸತ್ತ ಇಲಿ! ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಜ್ಞಾನವಾಪಿ ಮಸೀದಿಯಲ್ಲಿ ಪೂಜೆಯ ಹಕ್ಕು ಎತ್ತಿ ಹಿಡಿದ ವಾರಾಣಸಿ ಕೋರ್ಟ್​

ವಾರಾಣಸಿ(ಸೆ.12): ಜ್ಞಾನವಾಪಿ (Gyanvapi Masjid Case) ಶೃಂಗಾರ ಗೌರಿ ಪ್ರಕರಣದ ವಿಚಾರಣೆ ನಡೆಸಬಹುದೇ ಅಥವಾ ಇಲ್ಲವೇ ಎಂಬ ವಿಚಾರವಾಗಿ ಮಹತ್ವದ ತೀರ್ಪು ಪ್ರಕಟಿಸಿದ ವಾರಣಾಸಿ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ (Varanasi District Court) ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದೆ. ಕೋರ್ಟ್​ ಈ ತೀರ್ಪಿನಿಂದ ಮುಸ್ಲಿಂ ಪರ ವಕೀಲರಿಗೆ ತೀವ್ರ ಹಿನ್ನಡೆಯಾಗಿದೆ. ಈ ಮೊದಲು ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯಲ್ಲಿ ಎರಡೂ ಕಡೆಯವರು ತಮ್ಮ ವಾದ ಮಂಡಿಸಿದ್ದರು. ಒಂದೆಡೆ ವಿಷಯವನ್ನು ಉಳಿಸಿಕೊಳ್ಳಲು ಹಿಂದೂ ಪರವಾಗಿ ಹಲವಾರು ಪುರಾವೆಗಳನ್ನು ಪ್ರಸ್ತುತಪಡಿಸಿದ್ದಾರೆ. ಮತ್ತೊಂದೆಡೆ, ಈ ಪ್ರಕರಣವನ್ನು ವಜಾಗೊಳಿಸಲು ಮುಸ್ಲಿಂ ಕಡೆಯವರು ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ್ದರು.

ಬಿಜೆಪಿ ಕೆಣಕಲು RSS ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್​
ಕಾಂಗ್ರೆಸ್​ ಪಕ್ಷ ಭಾರತ್ ಜೋಡೋ ಯಾತ್ರೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಬಿಜೆಪಿ ಕೆಣಕಲು ಕಾಂಗ್ರೆಸ್​ ಮತ್ತೆ RSS ಖಾಕಿ ಚಡ್ಡಿಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. RSS​ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಹಂಚಿಕೊಂಡು ಬಿಜೆಪಿ ಮತ್ತು ಆರ್​ಎಸ್​ಎಸ್​ ಮಾಡಿದ ಹಾನಿಯನ್ನು ಸರಿಪಡಿಸಲು ಭಾರತ್ ಜೋಡೋ ಯಾತ್ರೆ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್​ ಹೇಳಿದೆ. ಆರ್​ಎಸ್​ಎಸ್​ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ಕಾಂಗ್ರೆಸ್, ದೇಶವನ್ನು ದ್ವೇಷದ ಸಂಕೋಲೆಯಿಂದ ಮುಕ್ತಗೊಳಿಸಲು ಮತ್ತು ಬಿಜೆಪಿ, ಆರ್​ಎಸ್​ಎಸ್​ ಮಾಡಿದ ಹಾನಿಯನ್ನು ಸರಿಪಡಿಸಲು ಹಂತ ಹಂತವಾಗಿ ನಾವು ನಮ್ಮ ಗುರಿಯನ್ನು ತಲುಪುತ್ತೇವೆ ಎಂದು ಹೇಳಿಕೊಂಡಿದೆ.


ಇದನ್ನೂ ಓದಿ: BJP ಕೆಣಕಲು RSS ಖಾಕಿ ಚಡ್ಡಿಗೆ ಬೆಂಕಿ ಹಚ್ಚಿದ ಕಾಂಗ್ರೆಸ್​! ಸಂಸದ ತೇಜಸ್ವಿ ಸೂರ್ಯ ಕೆಂಡಾಮಂಡಲ

ಬೀಟ್ರೂಟ್ ಪಲ್ಯದಲ್ಲಿ ಸಿಕ್ಕಿತು ಸತ್ತ ಇಲಿಯ ತಲೆ!
ತಮಿಳುನಾಡಿನ ತಿರುವಣಮಲೈ ಜಿಲ್ಲೆಯ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಇಂಥದ್ದೊಂದು ದೊಡ್ಡ ಪ್ರಮಾದ ನಡೆದಿದೆ. ಇಲ್ಲಿನ ಗಾಂಧಿನಗರದ ನಿವಾಸಿಯಾದ ಮುರಳಿ ಎಂಬುವರು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಬಾಲಾಜಿ ಭವನ ಎಂಬ ಸ್ಥಳದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಇದಕ್ಕೆ ನಗರದ ಪ್ರಸಿದ್ಧ ಹೋಟೆಲ್ ಒಂದರಿಂದ ಊಟ ತರಿಸಿದ್ದರು. ಆದರೆ ಊಟ ಮಾಡಿದ ಅತಿಥಿಗಳೆಲ್ಲ ಕಕ್ಕಾಬಿಕ್ಕಿಯಾಗಿದ್ದಾರೆ.

ಮರುಳಿಯವರು ತಮ್ಮ ಮನೆಯ ಕಾರ್ಯಕ್ರಮಕ್ಕೆ ಅರಣಿ ಹಳೆ ಬಸ್ ನಿಲ್ದಾಣದ ಸಮೀಪ ಇರುವ ಹೊಟೇಲ್ ಒಂದರಿಂದ ಆಹಾರವನ್ನು ತರಿಸಲಾಗಿತ್ತು. ಈ ಹೊಟೇಲ್‌ನಿಂದ ಕಳುಹಿಸಿದ್ದ ಆಹಾರವನ್ನು ಇವರ ಮನೆಗೆ ಬಂದಿದ್ದ 30ಕ್ಕೂ ಹೆಚ್ಚು ಜನ ಸೇವಿಸಿದ್ದರು. ಆದರೆ ಊಟ ಮಾಡುತ್ತಿದ್ದ ವೇಳೆ ಬಿಟ್‌ರೂಟ್ ಪಲ್ಯದಲ್ಲಿ ಸತ್ತ ಇಲಿಯ ತಲೆ ಸಿಕ್ಕಿದ್ಯಂತೆ.

ಕಿಡ್ನಿ ಕಸಿ ಕಳ್ಳಸಾಗಾಣಿಕೆ!

ದೆಹಲಿ: ಅಕ್ರಮ ಕಿಡ್ನಿ ಕಸಿ ಕಳ್ಳಸಾಗಾಣಿಕಾ ಜಾಲವೊಂದು ಬೆಳಕಿಗೆ ಬಂದಿದ್ದು ಇಡೀ ದೇಶವೇ ಬೆಚ್ಚಿ ಬೀಳುವಂತಹ ಮಾಹಿತಿಗಳು ಹೊರಬೀಳುತ್ತಿದೆ. ಅಲ್ಲದೇ ಇನ್ನೂ ಆಘಾತಕಾರಿ ಸುದ್ದಿಯೆಂದರೆ ಈ ಕಿಡ್ನಿ ಕಸಿ ಕಳ್ಳ ಸಾಗಾಣಿಕಾ ಜಾಲವು (Delhi Kidney Racket) 3 ಈಡಿಯಟ್ಸ್ ಸಿನಿಮಾದಿಂದ (3 Idiots) ಪ್ರೇರಣೆ ಹೊಂದಿದ್ದರು ಎಂದು ಪೊಲೀಸರು (Delhi Police) ತಿಳಿಸಿದ್ದಾರೆ. ಈ ಕಳ್ಳಸಾಗಾಣಿಕಾ ಜಾಲವು ಗುರುದ್ವಾರ, ಆಸ್ಪತ್ರೆಗಳ ಹೊರಗೆ ಮನೆಯಿಲ್ಲದ ಮತ್ತು ಬಡ ಯುವಕರನ್ನು ಗುರಿಯಾಗಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಿಡ್ನಿ ಕಸಿ ಕಳ್ಳ ಸಾಗಾಣಿಕಾ ಜಾಲದಲ್ಲಿ ಇಬ್ಬರು ವೈದ್ಯರೂ ಸಹ ಆರೋಪಿಗಳಾಗಿದ್ದಾರೆ ಎಂಬ ವಿಷಯ ಪೊಲೀಸರಲ್ಲೂ ದಿಗ್ಭ್ರಮೆ ಹುಟ್ಟಿಸಿದೆ.

ಇದನ್ನೂ ಓದಿ: Delhi Kidney Racket: 3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ ಪಡೆದು ಕಿಡ್ನಿ ಕಸಿ ಕಳ್ಳಸಾಗಾಣಿಕೆ!

ಪೌಷ್ಠಿಕ ಆಹಾರಕ್ಕಾಗಿ 7 ಕಿಮೀ ನಡೆಯುವ ಮಹಿಳೆ

ಕೊಡಗು: ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ  ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರವೇನೋ ಗರ್ಭಿಣಿ ಮಹಿಳೆಯರಿಗೆ (Pregnant lady) ಪೌಷ್ಟಿಕ ಆಹಾರ (Nutritious food) ಪೂರೈಕೆ ಮಾಡುತ್ತಿದೆ. ಆದರೆ ಇಲ್ಲೊಬ್ಬರು ಗರ್ಭಿಣಿ ಮಹಿಳೆ ಆ ಪೌಷ್ಟಿಕ ಆಹಾರ ಪಡೆದುಕೊಳ್ಳಲು ನಿತ್ಯ 7 ಕಿಲೋ ಮೀಟರ್ ದೂರ ಹೋಗಲಾದರೆ ಪರದಾಡುತ್ತಿದ್ದಾರೆ. ಇಂತಹ ಘಟನೆಗೆ ಸಾಕ್ಷಿಯಾಗಿರುವುದು ಕೊಡಗು ಜಿಲ್ಲೆ ಮಡಿಕೇರಿ (Madikeri) ತಾಲ್ಲೂಕಿನ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ 2ನೇ ಮೊಣ್ಣಂಗೇರಿ ಗ್ರಾಮ. ರಾಷ್ಟ್ರೀಯ ಹೆದ್ದಾರಿ 275ರಿಂದ (NH 275) ಈ ನಾಲ್ಕು ಕಿಲೋ ಮೀಟರ್ ದೂರದಲ್ಲಿದ್ದು, ಇಂದಿಗೂ ಕಾಲ್ನಡಿಗೆ ರಸ್ತೆ ಮೂಲಕವೇ ಗ್ರಾಮಕ್ಕೆ ಹೋಗಬೇಕು.
Published by:ಪಾವನ ಎಚ್ ಎಸ್
First published: