Evening Digest: ಧಾರವಾಡ ಎಮ್ಮೆ ತಳಿಗೆ ರಾಷ್ಟ್ರೀಯ ಮಾನ್ಯತೆ, ಭೂಪೇಂದ್ರ ಪಟೇಲ್​ ಗುಜರಾತ್ ನೂತನ ಸಿಎಂ: ಈ ದಿನದ ಸುದ್ದಿ ಸಾರಾಂಶ

ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

 • Share this:
  ಧಾರವಾಡ ಎಮ್ಮೆ ತಳಿಗೆ ರಾಷ್ಟ್ರೀಯ ಮಾನ್ಯತೆ
  ಧಾರವಾಡ ಪೇಡಾ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರು ಬರುತ್ತೆ. ಇದರಿಂದಲ್ಲದೇ ಇಂದು ಧಾರವಾಡ ಪೇಡಾದ ಖ್ಯಾತಿ ವಿಶ್ವಮಟ್ಟಕ್ಕೇರಿದೆ. ಈ ಪೇಡಾ ಸ್ವಾದಿಷ್ಟಕ್ಕೆ ಕಾರಣವೇ ಧಾರವಾಡದ ಎಮ್ಮೆಯ ಹಾಲು. ಧಾರವಾಡ ಪೇಡಾದಂತೆಯೇ ಧಾರವಾಡದ ಎಮ್ಮೆಗೂ ರಾಷ್ಟ್ರಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಹೌದು, ಇಷ್ಟು ದಿನ ಕೇವಲ ಧಾರವಾಡಕ್ಕೆ ಮಾತ್ರವೇ ಸೀಮಿತವಾಗಿದ್ದ ಧಾರವಾಡದ ಸ್ಥಳೀಯ ಎಮ್ಮೆ ತಳಿಗೆ ಈಗ ದೇಸಿ ತಳಿಯ ಸ್ಥಾನಮಾನ ನೀಡಲಾಗಿದೆ.

  ಪ್ಯಾರಾಲಂಪಿಕ್​ ಸ್ಪರ್ಧಿಗಳೊಂದಿಗೆ ಮೋದಿ ಸಂವಾದ
  ಟೋಕಿಯೋ ಪ್ಯಾರಾಲಂಪಿಕ್​ನಲ್ಲಿ ಅದ್ಭುತ ಸಾಧನೆ ತೋರಿದ ಕ್ರೀಡಾ ಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂವಾದ ನಡೆಸಿದರು. ಈ ವೇಳೆ ಕ್ರೀಡಾಪಟುಗಳನ್ನು ಶ್ಲಾಘಿಸಿದ ಪ್ರಧಾನಿ, ಪ್ಯಾರಾ ಒಲಂಪಿಕ್​ನಲ್ಲಿ ಭಾರತದ ಸಾಧನೆಗೆ ಕ್ರೀಡಾ ಸಮುದಾಯವನ್ನು ಉತ್ತೇಜಿಸುವ ಜೊತೆಗೆ ನಿಮ್ಮ ಪ್ರದರ್ಶನಗಳು ಅನೇಕರಿಗೆ ಸ್ಪೂರ್ತಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಪ್ಯಾರಲಿಂಪಿಕ್‍ನಲ್ಲಿ ಪ್ರತಿಯೊಬ್ಬ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ ಅವರ ಯಶಸ್ಸಿನ ಕುರಿತು ಚರ್ಚೆ ನಡೆಸಿದರು

  ಮೂರನೇ ಬಾರಿ ಸಂಚಾಲಕರಾಗಿ ಅರವಿಂದ್ ಕೇಜ್ರಿವಾಲ್​ ಆಯ್ಕೆ
  ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಆಮ್‌‌ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಮತ್ತೆ ಆಯ್ಕೆಯಾದರು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

  ಆರೋಗ್ಯ ವ್ಯವಸ್ಥೆ ಸರಿ ಇಲ್ಲ ಎಂದ ಸಿಎಂ
  ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸರಿಯಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಎದುರಲ್ಲೇ ಹೇಳಿರುವ ಘಟನೆ ಇಂದು ಗೋವಿಂದರಾಜನಗರದಲ್ಲಿ ನಡೆದಿದೆ. ಇದರಿಂದ ಆರೋಗ್ಯ ಸಚಿವ ಸುಧಾಕರ್ ತೀವ್ರ ಮುಜುಗರಕ್ಕೀಡಾಗಿದ್ದಾರೆ. ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ. ಬೆಂಗಳೂರಿಗೆ ತನ್ನದೇ ಆದ ಸ್ವತಂತ್ರ ಆರೋಗ್ಯ ವ್ಯವಸ್ಥೆ ಮಾಡಬೇಕು. ಇದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ತಿದ್ದೇವೆ. ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯತೆ ಇಲ್ಲ. ಅದನ್ನು ಸರಿದೂಗಿಸುವ ಕೆಲಸ ಖಂಡಿತಾ ಮಾಡ್ತೇನೆ. ಒಂದೇ ವ್ಯವಸ್ಥೆಯಲ್ಲಿ ಆರೋಗ್ಯ ವ್ಯವಸ್ಥೆ ತರುವ ಕೆಲಸ ಮಾಡ್ತೇನೆ. ಬೃಹತ್ ಬೆಂಗಳೂರನ್ನು ಅಂತರಾಷ್ಟ್ರೀಯ ಬೆಂಗಳೂರು ಮಾಡ್ತೇವೆ ಎಂದು ಹೇಳಿದರು.

  ಭೂಪೇಂದ್ರ ಪಟೇಲ್​ ಗುಜರಾತ್ ನೂತನ ಸಿಎಂ
  ವಿಜಯ್​ ರೂಪಾಣಿ ರಾಜೀನಾಮೆಯಿಂದ ತೆರವಾಗಿರುವ ಮುಖ್ಯಮಂತ್ರಿ ಸ್ಥಾನ ಯಾರ ಪಾಲಾಗುತ್ತದೆ ಎಂಬ ಕುತೂಹಲ ತೀವ್ರವಾಗಿತ್ತು. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿರಿಯ ಶಾಸಕ ಭೂಪೇಂದ್ರ ಪಟೇಲ್ ಅವರನ್ನು ನೂತನ ಮುಖ್ಯಮಂತ್ರಿ ಎಂದು‌ ಘೋಷಣೆ ಮಾಡಲಾಗಿದೆ. ಈ ಬೆಳವಣಿಗೆ ರಾಷ್ಟ್ರೀಯ ಮಟ್ಟದಲ್ಲೂ ಸಂಚಲನ ಮೂಡಿಸಿದೆ

  ಟಾಲಿವುಡ್​ ನಟನಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ
  ಅಪಘಾತಕ್ಕೀಡಾಗಿದ್ದ ಟಾಲಿವುಡ್ (Tollywood)ನಟ ಸಾಯಿ ಧರಮ್ ತೇಜ್ ,(sai Dharam Tej) ಆರೋಗ್ಯ ಸ್ಥಿರವಾಗಿದ್ದು, ಸುಧಾರಿಸುತ್ತಿದೆ ಎಂದು ಹೈದರಾಬಾದ್‌ನ ಅಪೋಲೋ(Apollo) ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ನಲ್ಲಿ ತಿಳಿಸಲಾಗಿದೆ. ಸಾಯಿ ಧರಂ ತೇಜ್ ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ. ಕಾಲರ್ ಮೂಳೆ ಮುರಿದಿದ್ದು, ಅದರ ಶಸ್ತ್ರ ಚಿಕಿತ್ಸೆಯನ್ನು ನಮ್ಮ ತಜ್ಞರ ತಂಡವು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರನ್ನು ಸಧ್ಯ ತೀವ್ರ ನಿಗಾಘಟಕದಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
  Published by:Seema R
  First published: