Evening Digest: ಮಕ್ಕಳಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ; Gmail ತಾತ್ಕಾಲಿಕ ಸ್ಥಗಿತ: ಇಂದಿನ ಪ್ರಮುಖ ಸುದ್ದಿಗಳು

Kannada news Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

evening digest

evening digest

  • Share this:
ಮಕ್ಕಳ ಕೋವ್ಯಾಕ್ಸಿನ್ ಲಸಿಕೆಗೆ ಗ್ರೀನ್ ಸಿಗ್ನಲ್ : ಶಾಲೆಗಳತ್ತ ಮಕ್ಕಳು ಮುಖ ಮಾಡಿರುವ ಈ ಸಮಯದಲ್ಲಿ ಮಕ್ಕಳ ಕೊರೊನಾ ಲಸಿಕೆ ಸಂಬಂಧ ಮಹತ್ವದ ಸುದ್ದಿ ಹೊರ ಬಿದ್ದಿದೆ. ZyCoV-D ಬಳಿಕ ಮತ್ತೊಂದು ಮಕ್ಕಳ ಲಸಿಕೆಗೆ ಅನುಮತಿ ಸಿಕ್ಕಿದೆ. ಔಷಧ ನಿಯಂತ್ರಕದ ವಿಷಯ ತಜ್ಞರ ಸಮಿತಿಯು (SEC) 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್‌ ಸಂಸ್ಥೆಯ ಕೊವಾಕ್ಸಿನ್‌ ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡುವಂತೆ ಶಿಫಾರಸು ಮಾಡಿದೆ. ಅಂತಿಮ ಅನುಮೋದನೆಗಾಗಿ ಎಸ್ ಇಸಿ ತನ್ನ ಶಿಫಾರಸನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗೆ ಸಲ್ಲಿಸಿದೆ. ವಿವರವಾದ ಚರ್ಚೆಯ ನಂತರ, ತುರ್ತು ಪರಿಸ್ಥಿತಿಯಲ್ಲಿ ಬಳಕೆಗಾಗಿ ಲಸಿಕೆಯ ಮಾರುಕಟ್ಟೆ ಅನುಮೋದನೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ ಎಂದು ತಜ್ಞರ ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ತುರ್ತು ಬಳಕೆಯ ಅಧಿಕಾರವು ನಾಲ್ಕು ಷರತ್ತುಗಳನ್ನು ಒಳಗೊಂಡಿದೆ.

ಭಾರತದಲ್ಲಿ ಜಿಮೇಲ್ ಸೇವೆಗಳು ಡೌನ್

ಬಳಕೆದಾರರು ಇಮೇಲ್‌ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ, Google ಇಮೇಲ್ ಸೇವೆ Gmail ಭಾರತದ ಕೆಲವು ಭಾಗಗಳಲ್ಲಿ ಸ್ಥಗಿತಗೊಂಡಿದೆ. ಶೇ.68ರಷ್ಟು ಬಳಕೆದಾರರು ವೆಬ್‌ಸೈಟ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಆಗಿದೆ. ಶೇ.18ರಷ್ಟು ಸರ್ವರ್ ಡೌನ್​​ ಆಗಿದೆ. ಶೇ.14 ಪ್ರತಿಶತದಷ್ಟು ಜನರು ಲಾಗಿನ್ ಸಮಸ್ಯೆಯ ಬಗ್ಗೆ ಉಲ್ಲೇಖಿಸಿದ್ದಾರೆ.  ಈ ಬಗ್ಗೆ ಗೂಗಲ್ ಇನ್ನೂ ಹೇಳಿಕೆಯನ್ನು ನೀಡಿಲ್ಲ. ಕಳೆದ ವಾರ  ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸುಮಾರು 6 ಗಂಟೆಗಳ ಸ್ಥಗಿತಗೊಂಡಿದ್ದವು. ಭಾರತದ ಅನೇಕ ಭಾಗಗಳಲ್ಲಿ ಇಂದು ಜಿಮೇಲ್​ ಸೇವೆಯಲ್ಲಿ ವ್ಯತ್ಯಯ ಕಂಡು ಬಂದಿದೆ. ಬಹುತೇಕ ಜಿ ಮೇಲ್​ ಬಳಕೆದಾರರು ಇಂದು ಮೇಲ್​ ಕಳುಹಿಸಲು ಹಾಗೂ ಸ್ವೀಕರಿಸುವಲ್ಲಿ ಅಡಚಣೆಯನ್ನು ಕಂಡಿದ್ದಾರೆ.ಭಾರತದ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳ ಜಿ ಮೇಲ್​ ಬಳಕೆದಾರರು ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವ ಬಗ್ಗೆ ಇತರೆ ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ವರದಿ ಮಾಡಿದ್ದಾರೆ.

ವಿಪಕ್ಷ ನಾಯಕನಾಗಲು ಮೈತ್ರಿ ಸರ್ಕಾರನ ಉರುಳಿಸಿದರು

ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಪತ್ನಿ ಸಮೇತರಾಗಿ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah )ವಿರುದ್ಧ  ನಡೆಸುತ್ತಿರುವ ವಾಗ್ದಾಳಿಯನ್ನು ಮುಂದುವರೆಸಿದರು. ಪುಟ್ಕೋಸಿ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾಗಿ ಮೈತ್ರಿ ಸರ್ಕಾರವನ್ನು ತೆಗೆದ ಮಹಾನ್ ನಾಯಕ ನೀನು. ನೀವು ನನ್ನ ಬಗ್ಗೆ ಮಾತನಾಡಬೇಡಿ ಎಂದು ಆಕ್ರೋಶಭರಿತವಾಗಿ ಮಾತನಾಡಿದರು. ಗೂಟದ ಕಾರಿಗಾಗಿ, ನಿಮ್ಮ ಪಕ್ಷದ 23 ಜನ ನಿಮ್ಮ ಪಕ್ಷದ ಸಚಿವರನ್ನು ಬೀದಿಗೆ ತಂದವರು ನೀವು. ಯಡಿಯೂರಪ್ಪ ಸರ್ಕಾರ ಬರಲು ನಿಮ್ಮ ಪಾತ್ರ ಎಷ್ಟಿದೆ ಅನ್ನೋದು ನನಗೆ ಗೊತ್ತಿದೆ. ಅಧಿಕಾರಕ್ಕಾಗಿ ನೀವು ಎಷ್ಟೆಷ್ಟು ಕುತಂತ್ರ ಮಾಡುತ್ತೀರಾ ಅನ್ನೋದು ನನಗೆ ಗೊತ್ತಿದೆ ಎಂದು ಎಚ್​ಡಿಕೆ ಅಬ್ಬರಿಸಿದರು.

ರೈತ ಸಮೂಹದಿಂದ ಅಂತಿಮ ನಮನ

ಅಕ್ಟೋಬರ್​ 03 ರಂದು ಉತ್ತರ ಪ್ರದೇಶದ ಲಖೀಂಪುರ್‌ ಖೇರಿಯಲ್ಲಿ ನಡೆದ ಹತ್ಯಾಕಾಂಡದಲ್ಲಿ (Lakhimpur Kheri Massacre) 4 ಜನ ರೈತರು ಮೃತಪಟ್ಟಿದ್ದರು. ಕೇಂದ್ರ ಸಚಿವ ಅಜಯ್​ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Asish Mishra) ಕಾರು ಹತ್ತಿಸಿ 4 ರೈತರನ್ನು ಕೊಂದು ಪರಾರಿಯಾಗಿದ್ದರು ಎನ್ನಲಾಗಿದೆ. ಈ ಘಟನೆ ನಂತರ ಲಖೀಂಪುರ್​ನಲ್ಲಿ ದೊಡ್ಡ ಮಟ್ಟದ ಉದ್ವಿಗ್ನತೆ ಮತ್ತು ಗಲಭೆಗೆ ಕಾರಣವಾಗಿತ್ತು. ಈ ಕೃತ್ಯವನ್ನು ಇಡೀ ದೇಶ ಖಂಡಿಸಿತ್ತು. ಅಲ್ಲದೆ, ಇಂದು ಇಡೀ ದೇಶದ ರೈತ ಸಮೂಹ ಗಲಭೆಯಲ್ಲಿ ಹುತಾತ್ಮರಾದ ರೈತರು ಮತ್ತು ಪತ್ರಕರ್ತರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹತ್ಯೆ ನಡೆದ ಟಿಕುನಿಯಾದಲ್ಲಿ ಸಮಾವೇಶ ನಡೆಯುತ್ತಿದೆ. ಉತ್ತರ ಪ್ರದೇಶದ ಹಲವು ನಗರಗಳಲ್ಲಿ ಅಂತಿಮ ನಮನ (Antim ardaas) ಕಾರ್ಯಕ್ರಮ ಆಯೋಜಿಸಲಾಗಿದೆ.

ಇವತ್ತಿನಿಂದ 16 ಅಭ್ಯಾಸ ಪಂದ್ಯಗಳು

ಐಸಿಸಿ ಟಿ20 ವರ್ಲ್ಡ್​ಕಪ್​ಗೆ (ICC T20 World Cup 2021) ಇನ್ನು ಕೆಲವೇ ದಿನಗಳು ಬಾಕಿ ಇವೆ. ಇವತ್ತಿನಿಂದ ಅಭ್ಯಾಸ ಪಂದ್ಯಗಳು (Warm-up matches) ಚಾಲನೆಗೊಂಡಿವೆ. ಇವತ್ತು ಒಂದು ದಿನದಲ್ಲಿ 4 ವಾರ್ಮಪ್ ಮ್ಯಾಚ್​ಗಳು ನಡೆಯುತ್ತಿವೆ. ಅ. 12, 14, 18 ಮತ್ತು 22ರಂದು ಈ ನಾಲ್ಕು ದಿನದಲ್ಲಿ ಒಟ್ಟು 16 ಅಭ್ಯಾಸ ಪಂದ್ಯಗಳು ನಡೆಯಲಿವೆ. ವಿಶ್ವಕಪ್​ನಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ 16 ತಂಡಗಳಿಗೂ ಎರಡೆರಡು ವಾರ್ಮಪ್ ಮ್ಯಾಚ್​ಗಳ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಂದು ತಂಡವೂ ಕೂಡ ವಿಶ್ವಕಪ್​ನಲ್ಲಿ ತಾವಿರದ ಗುಂಪಿನಲ್ಲಿ ತಂಡಗಳೊಂದಿಗೆ ಅಭ್ಯಾಸ ಪಂದ್ಯದಲ್ಲಿ ಆಡಲಿದೆ.
Published by:Kavya V
First published: