Evening Digest: ಆತ್ಮಕಥೆಯಲ್ಲಿ ಸಿದ್ದು ವಿರುದ್ಧ ಮೋಟಮ್ಮ ಸಿಟ್ಟು: ದೇಶದಲ್ಲಿ ಕರೋನಾ ಮಹಾಸ್ಫೋಟ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಆತ್ಮಕಥೆಯಲ್ಲಿ ಸಿದ್ದು ವಿರುದ್ಧ ಮೋಟಮ್ಮ ಸಿಟ್ಟು : ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಮೋಟಮ್ಮ (Motamma) ಅವರ ಆತ್ಮಕಥೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೇರಿದಂತೆ ಕೆಲ ಕಾಂಗ್ರೆಸ್​ ನಾಯಕರ (Congress) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.  ಮಾಜಿ ಸಚಿವೆ ಮೋಟಮ್ಮ ಅವರು ಬರೆದಿರುವ ‘ಬಿದಿರು ನೀನ್ಯಾರಿಗಲ್ಲದವಳು’ ಹೆಸರಿನ ಆತ್ಮಕತೆ (Biography) ಲೋಕಾರ್ಪಣೆಗೊಂಡಿದೆ. ಇದರಲ್ಲಿ ಮಾಜಿ ಸಿಎಂ ಸೇರಿದಂತೆ ಹಲವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದೇಶದಲ್ಲಿ ಕರೋನಾ ಮಹಾಸ್ಫೋಟ

ಭಾರತದಲ್ಲಿ ಕರೋನಾ ವೈರಸ್ (Corona Virus) ಸಾಂಕ್ರಾಮಿಕ ಸೋಂಕಿನ ಹಾವಳಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. 3 ತಿಂಗಳ ನಂತರ ಕೋವಿಡ್ 19 ಪ್ರಕರಣಗಳ (Covid19 Case) ಸಂಖ್ಯೆಯಲ್ಲಿ ಸತತ 4ನೇ ದಿನವೂ ಹೆಚ್ಚಳವಾಗಿದ್ದು ಸೋಂಕಿತರ ಸಂಖ್ಯೆಯು 8,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 6,129 ಜನರಿಗೆ ಕರೋನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ (Medical Test) ಪತ್ತೆಯಾಗಿದೆ. ಇದೇ ಅವಧಿಯಲ್ಲಿ 10 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 4,216 ಗುಣಮುಖರಾಗಿದ್ದಾರೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಬೋರ್ ​​ವೆಲ್ ​​ನಲ್ಲಿ ಸಿಲುಕಿದ 10 ವರ್ಷದ ಬಾಲಕ

ಶುಕ್ರವಾರ (ಜೂನ್ 10) ಛತ್ತೀಸ್‌ಗಢದ (Chhattisgarh) ಜಂಜ್‌ಗಿರ್-ಚಂಪಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೋರ್‌ವೆಲ್‌ಗೆ (Borewell) ಬಿದ್ದ 10 ವರ್ಷದ ಮಾತು ಬರದ, ಕಿವಿ ಸರಿಯಾಗಿ ಕೇಳದ ಬಾಲಕನನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆಯು (Rescue operations) ಸಮೋರೋಪಾದಿಯಲ್ಲಿ ಮುಂದುವರೆದಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕಾರ್ಯಾಚರಣೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಗುಜರಾತ್‌ನಿಂದ ರಿಮೋಟ್-ಆಪರೇಟೆಡ್ ಬೋರ್‌ವೆಲ್ 'ರೆಸ್ಕ್ಯೂ ರೋಬೋಟ್' ಯಂತ್ರವನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಲಾಗಿದೆ. ಛತ್ತೀಸ್‌ಗಢದ ಮಲ್ಖರೋಡಾ ಡೆವಲಪ್‌ಮೆಂಟ್ ಬ್ಲಾಕ್‌ನಲ್ಲಿರುವ ಪಿಹ್ರಿದ್ ಗ್ರಾಮದ ತನ್ನ ಮನೆಯ ಹಿತ್ತಲಿನಲ್ಲಿದ್ದ 50 ಅಡಿ ಆಳದ ಬೋರ್‌ವೆಲ್‌ಗೆ ಮಗು ರಾಹುಲ್ ಸಾಹು ಬಿದ್ದಿದ್ದಾನೆ.

ರಾಹುಲ್ ಗಾಂಧಿಗೆ ಇಡಿ ವಿಚಾರಣೆ

ನ್ಯಾಷನಲ್ ಹೆರಾಲ್ಡ್ ಕೇಸ್​ಗೆ (National Herald Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಹಲವು ಬಾರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (Rahul Gandhi) ಅವರಿಗೆ ಸಮನ್ಸ್ ಕಳುಹಿಸಿದೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿದ್ದ ಕಾರಣ ಅವರು ಈ ಹಿಂದೆ ಇಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ಇನ್ನು ಸೋನಿಯಾ ಗಾಂಧಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟ ಕಾರಣ ಅನಿವಾರ್ಯವಾಗಿ ವಿಚಾರಣೆ ಮುಂದೂಡಲಾಗಿದೆ. ಇದೀಗ ರಾಹುಲ್ ಗಾಂಧಿ ಅವರು ಜೂ.13ರಂದು ಇಡಿ ವಿಚಾರಣೆಗೆ ಹಾಜರಾಗಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ (Congress Protest) ಯೋಜನೆ ಹಾಕಿಕೊಂಡಿದೆ.

ಚಾರ್ಲಿ ಅಬ್ಬರಕ್ಕೆ ಬಾಕ್ಸ್ ಆಫೀಸ್ ಶೇಕ್!

ರಕ್ಷಿತ್ ಶೆಟ್ಟಿ (Rakshit Shetty) ಅಭಿನಯದ 777 ಚಾರ್ಲಿ (777 Charlie) ಬಿಡುಗಡೆಯಾಗುವ ಮೊದಲಿನಿಂದಲೂ ಸುದ್ದಿಯಲ್ಲಿದ್ದು, ಬಿಡುಗಡೆಯಾದ ನಂತರ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೊದಲ ದಿನದಿಂದಲೇ ಉತ್ತಮ ಕಲೆಕ್ಷನ್ (collection) ಮಾಡುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ (Box Office) ಉತ್ತಮ ಆರಂಭವನ್ನು ಪಡೆದಿದೆ.  ವರದಿಗಳ ಪ್ರಕಾರ, 2 ನೇ ದಿನದಂದು ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡಿದ್ದು, ಎಷ್ಟಿದೆ ಕಲೆಕ್ಷನ್ ಇಲ್ಲಿದೆ ಮಾಹಿತಿ. ವಿಶಿಷ್ಟ ಸಿನಿಮಾಗಳನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ರಕ್ಷಿತ್ ಮತ್ತೊಮ್ಮೆ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಒಳಗೊಂಡಿರುವ ಹೊಸ ಪರಿಕಲ್ಪನೆಯ ಸಿನಿಮಾದೊಂದಿಗೆ ಬಂದಿದ್ದಾರೆ. ಈ ಚಿತ್ರವು ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತಿದೆ ಮತ್ತು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.
Published by:Kavya V
First published: