• Home
  • »
  • News
  • »
  • state
  • »
  • Evening Digest: ಮಳೆಗೆ ಇಬ್ಬರ ಸಾವು, ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಹಬ್ಬ! ಇಂದಿನ ಟಾಪ್‌ ಸುದ್ದಿಗಳು ಇಲ್ಲಿವೆ

Evening Digest: ಮಳೆಗೆ ಇಬ್ಬರ ಸಾವು, ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಹಬ್ಬ! ಇಂದಿನ ಟಾಪ್‌ ಸುದ್ದಿಗಳು ಇಲ್ಲಿವೆ

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

  • Share this:

ಮಹಾಮಳೆಗೆ ತತ್ತರಿಸಿದ ಸುಳ್ಯ, ಗೃಹಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆ ನೆಲಸಮ!


ಸುಳ್ಯ, ದಕ್ಷಿಣ ಕನ್ನಡ: ಇನ್ನೇನು ಮನೆಯ (House) ಎಲ್ಲಾ ಕೆಲಸ ಮುಗಿದು ಗೃಹ ಪ್ರವೇಶಕ್ಕೆ‌ (House Opening Ceremony) ಸಿದ್ಧಗೊಳ್ಳುತ್ತಿದ್ದ ಮನೆಯೊಂದು ಪ್ರಕೃತಿಯ ವಿಕೋಪಕ್ಕೆ ನೆಲಸಮವಾಗಿದೆ. ತಮ್ಮ ಮನೆ ಇತರ ಮನೆಗಳಿಗಿಂತ ಕೊಂಚ ಭಿನ್ನವಾಗಿರಬೇಕೆಂದು ಸಾಂಪ್ರದಾಯಿಕ ಶೈಲಿಯಲ್ಲಿ (Traditional) ನಿರ್ಮಿಸಿದ್ದ ಆ ಮನೆಯ ಅವಶೇಶವೂ ಸಿಗದ ರೀತಿಯಲ್ಲಿ ನಾಶವಾಗಿದೆ. ಹೌದು ಇಂಥಹ ಒಂದು ದುರಾದೃಷ್ಟಕರ ಘಟನೆಯೊಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ನಡೆದಿದೆ. ಕಳೆದ ಒಂದು ವಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಘಟ್ಟ ಪ್ರದೇಶಗಳಲ್ಲಿ ನಿರಂತರ ಎಡೆಬಿಡದೆ ಮಳೆಯಾಗುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ನದಿ (River), ಹಳ್ಳ, ತೊರೆಗಳು ತುಂಬಿ ತುಳುಕುತ್ತಿದೆ. ನದಿ, ತೋಡುಗಳಲ್ಲಿ ಮಾತ್ರವಲ್ಲದೆ ಬೆಟ್ಟ-ಗುಡ್ಡಗಳ ಸೆಲೆಯಿಂದಲೂ ಮಣ್ಣಿನೊಂದಿಗೆ ನೀರು ಹರಿಯುತ್ತಿದ್ದು, ಇದೇ ರೀತಿ ಗುಡ್ಡದೊಳಗಿಂದ ನೀರು ಹರಿದ ಪರಿಣಾಮ ಇಡೀ ಗುಡ್ಡದ ಮಣ್ಣು ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ಮೇಲೆ ಬಿದ್ದಿದೆ.


ಯಮರೂಪಿ ಮಳೆಗೆ ಬೆಂಗಳೂರಲ್ಲಿ ದುರಂತ


ಬೆಂಗಳೂರು: ರಾಜ್ಯಾದ್ಯಂತ ಭಾರೀ ಮಳೆ (Heavy Rain) ಅಬ್ಬರ ಮುಂದುವರೆದಿದೆ. ಕರಾವಳಿ (Coastal), ಮಲೆನಾಡು (Malenadu) ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕದ (North Karnataka) ಕೆಲವೆಡೆ ಪ್ರವಾಹ (Flood) ಪರಿಸ್ಥಿತಿ ಎದುರಾಗಿದೆ. ಇತ್ತ ರಾಜಧಾನಿ ಬೆಂಗಳೂರು (Bengaluru), ಮೈಸೂರು (Mysuru) ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯುತ್ತಿದೆ. ಇಂದು ಬೆಂಗಳೂರಲ್ಲಿ ಶಿಥಿಲಾವಸ್ಥೆಯಲ್ಲಿ ಇದ್ದ ಕಾಂಪೌಂಡ್ ಕುಸಿದು (Compound Collapse) ಇಬ್ಬರು ಸಾವನ್ನಪ್ಪಿದ್ದಾರೆ. ದೀಪಾಂಜಲಿ ನಗರದ (Deepanjali Nagar) ಕಿಮ್ಕೊ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. 30 ವರ್ಷದ ಬಾಲ ಹಾಗೂ 35 ವರ್ಷದ ರಾಜಮಣಿ ಎಂಬುವರು ಸಾವನ್ನಪ್ಪಿದ್ದಾರೆ. ಮೊದಲೇ ಶಿಥಿಲಾವಸ್ಥೆಯಲ್ಲಿ ಇದ್ದ ಕಾಂಪೌಂಡ್ ಸತತ ಮಳೆಯಿಂದಾಗಿ ಏಕಾಏಕಿ ಕುಸಿದಿದೆ. ಪರಿಣಾಮ ಅದರ ಅಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: Compound Collapse: ಯಮರೂಪಿ ಮಳೆಗೆ ಬೆಂಗಳೂರಲ್ಲಿ ದುರಂತ, ಶಿಥಿಲಾವಸ್ಥೆಯಲ್ಲಿದ್ದ ಕಾಂಪೌಂಡ್ ಕುಸಿದು ಇಬ್ಬರ ಸಾವು


PSI Recruitment Scam: ಮತ್ತೆ 3 ದಿನ ಸಿಐಡಿ ವಶಕ್ಕೆ ಅಮೃತ್ ಪೌಲ್


ಬೆಂಗಳೂರು (ಜು.13): ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ (PSI Recruitment Scam) ಉತ್ತರ ಪತ್ರಿಕೆ ತಿದ್ದಲು ಬೀಗದ ಕೀ ಕೊಟ್ಟು ಸಿಕ್ಕಿಬಿದ್ದಿದ್ದ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ (Amrit Paull) ಅವರನ್ನು ಇಂದು (ಬುಧವಾರ) 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ಮತ್ತೆ ಮೂರು ದಿನಗಳ ಕಾಲ ಸಿಐಡಿ (CID) ವಶಕ್ಕೆ ನೀಡಿ ಆದೇಶಿಸಿತು. ಆರೋಪಿ ಶಾಂತಕುಮಾರ  ಹಾಗೂ ಎಡಿಜಿಪಿ ಮಧ್ಯೆ 1.36 ಕೋಟಿ ಹಣ ವರ್ಗಾವಣೆ ಆಗಿದೆ. ಮೊಬೈಲ್‌ ಡಾಟಾ ಅಳಿಸಿ ಹಾಕಲಾಗಿದೆ. ಇನ್ನೂ ಐದು ದಿನ ವಶಕ್ಕೆ ನೀಡುವಂತೆ ಸಿಐಡಿ‌ ಪರ ವಕೀಲರು (Advocate For CID) ಕೋರಿದರು. ನ್ಯಾಯಾಲಯವು ಮೂರು ದಿನ ವಶಕ್ಕೆ ನೀಡಿ ಆದೇಶಿಸಿದೆ.


 ನದಿಯಲ್ಲಿ ಮುಳುಗುತ್ತಿದ್ದ ಮಾವುತನ ಪಾಲಿಗೆ ಹೀರೋ ಆದ ಆನೆ! 


ಮಾವುತ ಹಾಗೂ ಆನೆಗಳ ಸಂಬಂಧ (Relationship) ಊಹೆಗೂ ನಿಲುಕದ್ದು. ಇದೀಗ ಬಿಹಾರದ (Bihar) ಪಾಟ್ನಾದಲ್ಲಿ (Patna) ಆನೆಯೊಂದು ಗಂಗಾ ನದಿಯಲ್ಲಿ (Ganga River) ಕೊಚ್ಚಿಕೊಂಡು ಹೋಗುತ್ತಿದ್ದ ತನ್ನ ಮಾವುತನ ಪ್ರಾಣವನ್ನು ರಕ್ಷಿಸಿದೆ. ಈ ವಿಡಿಯೋ (Video) ಈಗ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ (Viral) ಆಗಿದ್ದು, ಆನೆಯ ಸಾಹಸಕ್ಕೆ, ಆನೆ ಮತ್ತು ಮಾವುತನ ನಡುವಿನ ಬಾಂಧವ್ಯಕ್ಕೆ ನೆಟ್ಟಿಗರು ಶಹಬ್ಬಾಶ್ ಎನ್ನುತ್ತಿದ್ದಾರೆ.


ಇದನ್ನೂ ಓದಿ: Elephant: ನದಿಯಲ್ಲಿ ಮುಳುಗುತ್ತಿದ್ದ ಮಾವುತನ ಪಾಲಿಗೆ ಹೀರೋ ಆದ ಆನೆ! ವೈರಲ್ ವಿಡಿಯೋ ಇಲ್ಲಿದೆ ನೋಡಿ


ಸ್ಯಾಂಡಲ್‌ವುಡ್‌ನಲ್ಲಿ ಆಷಾಢದಲ್ಲೇ ಶುರುವಾಯ್ತು ಸಿನಿ ಶ್ರಾವಣ! 


ಸ್ಯಾಂಡಲ್​ವುಡ್​ನಲ್ಲಿ ಈ ವಾರ ಸಾಲು ಸಾಲು ಸಿನಿಮಾಗಳು ತೆರೆಕಾಣುತ್ತಿವೆ. ಬರೋಬ್ಬರಿ 8 ಸಿನಿಮಾಗಳು ತೆರೆಕಾಣುತ್ತಿದ್ದು, ಇದರಲ್ಲಿ 6 ಕನ್ನಡದ ಚಿತ್ರಗಳಾದರೆ ಉಳಿದ 2 ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿವೆ. ಹೀಗಾಗಿ ಈ ವೀಕೆಂಡ್​ ನಲ್ಲಿ ಸಿನಿಪ್ರೇಮಿಗಳು ಅರಾಮವಾಗಿ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡಬಹುದಾಗಿದೆ.

Published by:Annappa Achari
First published: