ಮೇಕೆದಾಟು ಪಾದಯಾತ್ರೆ ಸಂಬಂಧ ಹೈಕೋರ್ಟ್ ತರಾಟೆ : ರಾಜ್ಯದಲ್ಲಿ ದಿನೇ ದಿನೇ ಕೊರೊನಾ (Corona) ಹೆಚ್ಚಾಗುತ್ತಿರುವ ಸಂದರ್ಭದಲ್ಲೂ ಕಾಂಗ್ರೆಸ್ (Congress) ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ಸಲ್ಲಿಸಿದ್ದ PIL ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್(High Court), ರಾಜ್ಯ ಬಿಜೆಪಿ ಸರ್ಕಾರಕ್ಕೆ (Karnataka Govt) ಚಾಟಿ ಬೀಸಿದೆ. ಕೋವಿಡ್ ಹೆಚ್ಚುತ್ತಿರುವ ವೇಳೆ ರ್ಯಾಲಿ ನಡೆಸಿದ್ದೀರಾ, ರ್ಯಾಲಿಗೆ ಮುನ್ನ ನೀವು ಅನುಮತಿ ಪಡೆದಿದ್ದೀರಾ ಎಂದು ಕೆಪಿಸಿಸಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದೆ. ಈ ಬಗ್ಗೆ ಉತ್ತರಿಸಲು ನಾಳೆವರೆಗೆ ಕಾಲಾವಕಾಶವನ್ನು ಕೋರ್ಟ್ ನೀಡಿದೆ. ಈಗಾಗಲೇ ಪಾದಯಾತ್ರೆ ನಡೆಸುವವರ ಮೇಲೆ ಮೂರು ಎಫ್ಐಆರ್ ದಾಖಲಿಸಿರುವುದಾಗಿ ಕೋರ್ಟ್ಗೆ ಎಎಜಿ ಮಾಹಿತಿ ನೀಡಿದರು. ಸರ್ಕಾರ ರ್ಯಾಲಿ ತಡೆಯಲು ಅಸಮರ್ಥವಾಗಿದೆಯೇ. ಅನುಮತಿ ಕೊಟ್ಟಿಲ್ಲವಾದರೆ ಪಾದಯಾತ್ರೆ ತಡೆಯಲು ಯಾರಿಗಾಗಿ ಕಾಯುತ್ತಿದ್ದೀರಿ. ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ ಎಂದು ರಾಜ್ಯ ಸರ್ಕಾರವನ್ನೂ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಅಣ್ಣನ ಮೃತದೇಹ ಕಂಡು ತಂಗಿ ಸಾವು
ಹುಣಸೂರಿನಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಅಣ್ಣನ ಮೃತದೇಹ ಕಂಡು ತೀವ್ರ ಆಘಾತಕ್ಕೊಳಗಾದ ತಂಗಿಯೂ ಮೃತಪಟ್ಟಿದ್ದಾಳೆ. ಸಾವಿನಲ್ಲಿ ಅಣ್ಣನಿಗೆ ತಂಗಿಯೂ ಜೊತೆಯಾಗಿದ್ದು ಅವರ ಕುಟುಂಬಕ್ಕೆ ದೊಡ್ಡ ಅಘಾತ ನೀಡಿದೆ. ಕೀರ್ತಿ(28) ಎಂಬಾತ ಅಪಘಾತದಲ್ಲಿ ಮೃತ ಪಟ್ಟಿದನು. ಈತನ ಅಂತ್ಯಕ್ರಿಗೆ ಆಗಮಿಸಿದ ದೊಡ್ಡಪ್ಪನ ಮಗಳು ರಶ್ಮಿ(21), ಮೃತದೇಹ ನೋಡುತ್ತಲೇ ಕುಸಿದು ಬಿದ್ದಿದ್ದಾಳೆ. ತಕ್ಷಣ ರಶ್ಮಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ರಶ್ಮಿ ಪ್ರಾಣಬಿಟ್ಟಿದ್ದಾಳೆ.
ಇಂದಿನಿಂದ ಈ ಎಲ್ಲಾ ರೂಲ್ಸ್ ಜಾರಿ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೆ ದಿನೇ ಕೊರೊನಾ ಪ್ರಕರಣಗಳು(Corona Cases) ಹೆಚ್ಚಾಗುತ್ತಲೇ ಇವೆ. ಕಳೆದೆರೆಡು ದಿನಗಳಿಂದ ನಿತ್ಯ 10 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ. ಬೆಂಗಳೂರು ನಗರವನ್ನು ಒಂದು ರಾಜ್ಯಕ್ಕೆ (State) ಸಮನಾಗಿ ಪರಿಗಣಿಸಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ (Karnataka Health Minister Dr K Sudhakar) ಈಗಾಗಲೇ ಹೇಳಿದ್ದಾರೆ. ಬಿಬಿಎಂಪಿ (BBMP) ಕೂಡ ಸೋಂಕಿನ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ನಿನ್ನೆಯಷ್ಟೇ ಸಿಎಂ ನೇತೃತ್ವದ ನಡೆದ ಸಭೆಯಲ್ಲಿ ಜನವರಿ 31ರವರೆಗೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕೋವಿಡ್ ಚಿಕಿತ್ಸೆ ದರವನ್ನೂ ನಿಗದಿ ಮಾಡಲಾಗಿದೆ. ಇಂದು ನಗರದ ದೊಡ್ಡ ಮಾರುಕಟ್ಟೆಗಳ ಸ್ಥಳಾಂತರ ಹಾಗೂ ಚಿತಾಗಾರಗಳನ್ನು ವಿಂಗಡನೆ ಮಾಡಲಾಗಿದೆ.
1KG ಆಲೂಗಡ್ಡೆಯ ಬೆಲೆ 200 ರೂ, ಮೆಣಸಿನಕಾಯಿ ಬೆಲೆ 710 ರೂ..
ಭಾರತದ (India) ನೆರೆಯ ರಾಷ್ಟ್ರ ಶ್ರೀಲಂಕಾ (Sri Lanka) ಪ್ರಸ್ತುತ ಆಳವಾದ ಆರ್ಥಿಕ (Economy) ಮತ್ತು ಮಾನವೀಯ ಬಿಕ್ಕಟ್ಟನ್ನು (The humanitarian crisis) ಎದುರಿಸುತ್ತಿದೆ. ಶ್ರೀಲಂಕಾ ಬಹುತೇಕ ದಿವಾಳಿತನದ (Insolvency) ಅಂಚಿನಲ್ಲಿದೆ. ಸದ್ಯದ ಪರಿಸ್ಥಿತಿಯ ಬಗ್ಗೆ ಗಮನಹರಿಸಿದಾಗ ಹಣದುಬ್ಬರವು ದಾಖಲೆಯ ಶೇಕಡಾ 11.1 ತಲುಪಿದೆ. ಅಡ್ವೊಕಾಟಾ ಇನ್ಸ್ಟಿಟ್ಯೂಟ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ನವೆಂಬರ್ 2021 ಮತ್ತು ಡಿಸೆಂಬರ್ 2021 ರ ನಡುವೆ ಶ್ರೀಲಂಕಾದಲ್ಲಿ ಆಹಾರ ಹಣದುಬ್ಬರವು ಶೇಕಡಾ 15 ರಷ್ಟು ಹೆಚ್ಚಾಗಿದೆ. ಶ್ರೀಲಂಕಾದಲ್ಲಿ 100 ಗ್ರಾಂ ಮೆಣಸಿನಕಾಯಿ ಬೆಲೆ 18 ರೂ ಆಗಿದ್ದರೆ, ಈಗ 71 ರೂ.ಗೆ ಏರಿಕೆಯಾಗಿದೆ. ಅಂದರೆ, ಒಂದು ಕೆಜಿ ಮೆಣಸಿನಕಾಯಿ ಬೆಲೆ 710 ರೂ. ಇದು ಒಂದೇ ತಿಂಗಳೊಳಗೆ ಇಷ್ಟೊಂದು ಬದಲಾವಣೆಗೆ ಕಂಡಿದೆ.
ನಿವೇದಿತಾ ಗೌಡ ರೀಲ್ಸ್ ಸಿಕ್ಕಾಪಟ್ಟೆ ಟ್ರೋಲ್!
ಪ್ರ್ಯಾಂಕ್ ವಿಡಿಯೋ ಮಾಡುವುದು ಸಾಮನ್ಯವಾಗಿ ಬಿಟ್ಟಿದೆ. ಅದನ್ನೇ ಇಲ್ಲಿ ನಿವೇದಿತಾ ಗೌಡ ಮಾಡಿದ್ದಾರೆ. ಗಂಡ ಚಂದನ್ ಶೆಟ್ಟಿ ಮುಂದೆ ಪ್ರ್ಯಾಂಕ್ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಾತ್ರ ಶಾಕ್ ಆಗಿದ್ದಾರೆ. ಇದೇನು ಈ ರೀತಿ ಮಾಡಿದ್ದಾರೆ. ಚೂರು ಬುದ್ದಿ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಚಂದನ್ ಮುಂದೆ ಟವಲ್ ತೆಗೆದು ಪ್ರ್ಯಾಂಕ್ ಮಾಡಿದ್ದಾರೆ.ನಿವೇದಿತಾ ಗೌಡ ಒಳಗೆ ಉಡುಪನ್ನು ಧರಿಸಿ, ಅದರ ಮೇಲೆ ಟವಲ್ ಉಟ್ಟಿದ್ದಾರೆ. ಬಳಿಕ ಅದನ್ನು ತೆಗೆಯುವಂತೆ ಮಾಡಿದ್ದಾರೆ. ಇದನ್ನು ಕಂಡ ಚಂದನ್ ಶೆಟ್ಟಿ ಕೂತಿದ್ದವರು, ಕೂಡಲೇ ಎದ್ದು ಅವರನ್ನು ಹಿಡಿದುಕೊಂಡಿದ್ದಾರೆ. ಈ ರೀತಿ ಮಾಡುವುದು ಎಷ್ಟು ಸರಿ. ಇದರಿಂದ ಏನು ಹೇಳಲು ಹೊರಟ್ಟಿದ್ದೀರ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ