Evening Digest: ಇಂಗ್ಲಿಷ್ ಸಿನಿಮಾದಂತೆ ಶಿವಮೊಗ್ಗದಲ್ಲಿ ಸ್ಮಗ್ಲಿಂಗ್; ಇಲ್ಲಿ ವರನಿಗೂ ಮಾಂಗಲ್ಯಧಾರಣೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

Evening digest

Evening digest

  • Share this:
ಇಂಗ್ಲಿಷ್​ ಸಿನಿಮಾದಂತೆ ಶಿವಮೊಗ್ಗದಲ್ಲಿ ಸ್ಮಗ್ಲಿಂಗ್ :  ಇದು ಯಾವುದೋ ಡ್ರಗ್ಸ್​​ ಸ್ಮಗ್ಲಿಂಗ್​ ಇಂಗ್ಲಿಷ್​ ಸಿನಿಮಾ ಅಲ್ಲ, ಬದಲಿಗೆ ನಮ್ಮ ನಿಮ್ಮ ಶಿವಮೊಗ್ಗದಲ್ಲಿ ಕಂಡ ದೃಶ್ಯ. ಥೇಟ್​ ಸಿನಿಮಾ ಸ್ಟೈಲ್​​ ನಲ್ಲಿ ಇಂಟರ್​ ನ್ಯಾಷನಲ್​ ಮಟ್ಟದಲ್ಲಿ ಖದೀಮರು ಡ್ರಗ್ಸ್​​ ನ ಸಾಗಿಸಲು ಮುಂದಾಗಿ ಸಿಕ್ಕಿ ಬಿದ್ದಿದ್ದಾರೆ. ಶಿವಮೊಗ್ಗದ ತುಂಗಾನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್​ ಸಾಗಾಣೆ ಜಾಲವನ್ನು ಭೇದಿಸಿದ್ದಾರೆ. ಮೆಕ್ಸಿಕೋ ಮಾದರಿ ತಂತ್ರ ಅನುಸರಿಸಿ ಗಾಂಜಾ ಸಾಗಿಸುತ್ತಿದ್ದ ನಾಲ್ವವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನ ಡೋರ್, ಸ್ಟೆಪ್ನೀ ಟೈರ್, ಸೀಟ್ ಸೇರಿದಂತೆ ಹಲವೆಡೆ ಗಾಂಜಾ ಇಟ್ಟು ಸಾಗಿಸಲಾಗುತ್ತಿತ್ತು. ಆಂಧ್ರಪ್ರದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನೋಡಲು ಸಾಮಾನ್ಯವಾಗಿ ಕಾಣುತ್ತಿದ್ದ ಕಾರಿನ ಒಳಗೆ ಸುಮಾರು 21 ಕೆಜಿ 315 ಗ್ರಾಂ ಗಾಂಜಾವನ್ನು ಪೊಲೀಸರು ಹೊರ ತೆಗೆದಿದ್ದಾರೆ. ಶಿವಮೊಗ್ಗದ ಲಕ್ಕಿನಕೊಪ್ಪ ಕ್ರಾಸ್ ಮತ್ತು ಹಾಲ್ ಲಕ್ಕವಳ್ಳಿ ಗ್ರಾಮದ ನಡುವೆ ಪೊಲೀಸರ ಕಾರ್ಯಾಚರಣೆ ನಡೆಸಿ ಗಾಂಜಾ ವಕ್ಕೆ ಪಡೆದುಕೊಂಡಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ  6.35 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ 9 ಲಕ್ಷ ಮೌಲ್ಯದ ಇನ್ನೋವಾ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ರಾಜ್ಯದಲ್ಲಿ ಮತ್ತೊಂದು ಒಮೈಕ್ರಾನ್ ಕೇಸ್ ಪತ್ತೆ

ರಾಜ್ಯದಲ್ಲಿ ಮತ್ತೊಂದು ಓಮೈಕ್ರಾನ್ ಪ್ರಕರಣ ಪತ್ತೆಯಾಗಿರುವ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಮೂರು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಮೂರನೇ ಕೇಸ್ ಕೂಡ ಬೆಂಗಳೂರಿನಲ್ಲೇ ಪತ್ತೆಯಾಗಿರೋದು ರಾಜಧಾನಿ ಜನರನ್ನು ಬೆಚ್ಚಿಬೀಳಿಸಿದೆ. ಸೌತ್ ಆಫ್ರಿಕಾ ದಿಂದ ಬಂದ ಪ್ರಯಾಣಿಕನಿಗೆ ಒಮೈಕ್ರಾನ್ ಪಾಸಿಟಿವ್ ಕಂಡು ಬಂದಿದೆ. ಓಮೈಕ್ರಾನ್ ಸೋಂಕಿತನ ಸಂಪರ್ಕದಲ್ಲಿ 5 ಪ್ರಾಥಮಿಕ, 15 ದ್ವಿತೀಯ ಸಂಪರ್ಕಿತರಿದ್ದು. ಎಲ್ಲರನ್ನು ಟ್ರೇಸ್ ಮಾಡಲಾಗಿದೆ. ಎಲ್ಲ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ.

ವರನಿಗೂ ಮಾಂಗಲ್ಯಧಾರಣೆ

ಗಡಿ ಜಿಲ್ಲೆಯಲ್ಲೊಂದು ಅಪರೂಪದ ವಿವಾಹ (Different Marriage) ನೆರವೇರಿದೆ. ಎಲ್ಲಾ ಶಾಸ್ತ್ರ ಗಳು, ಆಚರಣೆಗಳು,  ಕಂದಾಚಾರಗಳಿಗೆ ತಿಲಾಂಜಲಿ ನೀಡಿ ಕೇವಲ ವಚನಗಳ ಮೂಲಕವೇ ವಿವಾಹ ಮಹೋತ್ಸವ ನೆರವೇರಿಸಲಾಗಿದೆ.  ಮದುವೆ ಎಂದರೆ  ನೀರು ಹಾಕುವ ಶಾಸ್ತ್ರ, ಅರಿಶಿನ ಶಾಸ್ತ್ರ, ಧಾರಾಮಹೋತ್ಸವ, ಮಂಗಳ ವಾದ್ಯ  ಹೀಗೆ ನಾನಾ ರೀತಿಯ  ಶಾಸ್ತ್ರ ಸಂಪ್ರದಾಯಗಳು ಆಚರಣೆಗಳಿರುತ್ತವೆ. ಆದರೆ ಚಾಮರಾಜನಗರದಲ್ಲಿ ಇದಕ್ಕೆಲ್ಲ ತಿಲಾಂಜಲಿ ನೀಡಿ ಕೇವಲ ವಚನಗಳ ಮೂಲಕವೇ ವಿವಾಹ ನೆರವೇರಿಸಲಾಗಿದೆ. ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಸಮಾಧಿ ಇರುವ ಚಾಮರಾಜನಗರ ತಾಲೋಕಿನ ಅಮೃತಭೂಮಿಯಲ್ಲಿ ಈ ಅಪರೂಪದ ಈ ವಚನ ಕಲ್ಯಾಣ ಮಹೋತ್ಸವ ನಡೆಯಿತು. ಚಾಮರಾಜನಗರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಮ್ಮ ಮಗಳು ಶೋಭಾಳನ್ನು ಚಾಮರಾಜನಗರ ತಾಲೋಕಿನ ಮೂಕಹಳ್ಳಿಯ ಪೃಥ್ವಿ ಎಂಬ ಯುವ ರೈತನಿಗೆ ಕೊಟ್ಟು ವಚನ ಕಲ್ಯಾಣ ಮಾಡಿದ್ದಾರೆ. ಸಮಾನತೆಯ ಪ್ರತೀಕವಾಗಿ ವಧುನಿಂದ ವರನ ಕೊರಳಿಗೆ ರುದ್ರಾಕ್ಷಿ ಮಾಂಗಲ್ಯ ಧಾರಣೆ ಮಾಡಿಸಲಾಯ್ತು.

ನಾನು ಹಿಂದೂ, ಹಿಂದುತ್ವವಾದಿ ಅಲ್ಲ

ಭಾರತವು ಹಿಂದೂಗಳ (Hindus)ದೇಶವೇ ಹೊರತು ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರದಲ್ಲಿರಲು ಬಯಸುವ ಹಿಂದುತ್ವವಾದಿಗಳದ್ದಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಭಾನುವಾರ ಹೇಳಿದ್ದಾರೆ. ಅಲ್ಲದೆ ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ದೇಶದಲ್ಲಿ ಹಣದುಬ್ಬರ ಸೃಷ್ಠಿಸಿದ್ದಾರೆ. ಇದರಿಂದ ದೇಶವಾಸಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Prime Minister Narendara Modi) ನೇತೃತ್ವದ ಕೇಂದ್ರ ಸರ್ಕಾರವನ್ನು (Union Government) ತರಾಟೆಗೆ ತೆಗೆದುಕೊಂಡಿದ್ದಾರೆ. ಪೆಟ್ರೋಲ್-ಡೀಸೆಲ್ (Petrol-Desel) ಬೆಲೆ ಏರಿಕೆ, ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಮತ್ತಿತರ ಸಮಸ್ಯೆಗಳನ್ನು ವಿರೋಧಿಸಿ ರಾಜಸ್ಥಾನದ (Rajasthan) ಜೈಪುರದಲ್ಲಿ‌ ಕಾಂಗ್ರೆಸ್ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರು, 'ಇದು ಹಿಂದೂಗಳ ದೇಶ, ಹಿಂದುವಾದಿಗಳಲ್ಲ. ದೇಶದಲ್ಲಿ ಹಣದುಬ್ಬರವಿದ್ದರೆ, ಸಂಕಟವಿದ್ದರೆ ಇದನ್ನು ಹಿಂದುವಾದಿಗಳು ಮಾಡಿದ್ದಾರೆ. ಹಿಂದುವಾದಿಗಳು ಯಾವುದೇ ಪರಿಸ್ಥಿತಿಯಲ್ಲಿ ಅಧಿಕಾರವನ್ನು ಬಯಸುತ್ತಾರೆ.  ಪ್ರಧಾನಿ ನರೇಂದ್ರ ಮೋದಿ ಮತ್ತವರ ಸ್ನೇಹಿತರು ದೇಶವನ್ನು ಹಾಳು ಮಾಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಪ್ರಮೋದ ಮುತಾಲಿಕ್ ಎಚ್ಚರಿಕೆ

ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ ಗಳಿಗೆ ಸ್ವಾಮೀಜಿಗಳೊಂದಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ನಾನು ಬಿಜೆಪಿಯವರಿಗೆ ಹೇಳಲು ಬಯಸುತ್ತೇನೆ. ಇದರಲ್ಲಿ ಯಾವುದೇ ನಾಟಕವನ್ನು ಮಾಡಬೇಡಿ. ಇದೇ ಅಧಿವೇಶನದಲ್ಲಿ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ಥಾಯಿಸಿದರು. ಯಾಕೆ ಪಾದ್ರಿಗಳು ಕ್ರಿಶ್ಚಿಯನ್ನರು ಕಾನೂನು ಜಾರಿಗೆ ತರಬಾರದು ಅಂತಿದ್ದಾರೆ? ಇದರಿಂದ ಅವರ ಅಂಗಡಿ ವ್ಯಾಪಾರ ಬಂದ್ ಆಗುತ್ತೆ. ಅವರ ಉದ್ಯೋಗ ಬಂದ್ ಆಗುತ್ತೆ. ದೇಶದ್ರೋಹಿ ಚಟುವಟಿಕೆಗಳನ್ನು ನಿಲ್ಲಿಸುವಗೋಸ್ಕರವಾದರೂ ಕಾನೂನನ್ನು ಜಾರಿಗೆ ತರಲೇ ಬೇಕು ಎಂದು ಆಗ್ರಹಿಸಿದ ಪ್ರಮೋದ್ ಮುತಾಲಿಕ್, ಒಂದು ವೇಳೆ ಕಾಯ್ದೆ ಜಾರಿಗೆ ತರದಿದ್ದರೆ ಸಾವಿರಾರು ಜನ ಸ್ವಾಮೀಜಿಗಳ ಸಮ್ಮುಖದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಗೃಹಮಂತ್ರಿಗೆ ಘೇರಾವ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
Published by:Kavya V
First published: