Evening Digest: ಕಾಲೇಜು ವಿದ್ಯಾರ್ಥಿಯ ಬರ್ಬರ ಹತ್ಯೆ, ಕೆಪಿಟಿಸಿಎಲ್​ ಎಕ್ಸಾಂನಲ್ಲೂ ಅಕ್ರಮ- ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯ ಬರ್ಬರ ಹತ್ಯೆ

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬನ ಬರ್ಬರ ಹತ್ಯೆಯಾಗಿದೆ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ (Cultural Activity) ನಡೆದ ಕಿರಿಕ್​​ನಿಂದಾಗಿ ವಿದ್ಯಾರ್ಥಿಯ ಮರ್ಡರ್ ಆಗೋಗಿದೆ. ನಗರದ ಹೆಚ್ ಬಿಆರ್ ಲೇಔಟ್​​ನ ಪ್ರಾವಿನ್ಸ್ ಕಾಲೇಜು ಬಳಿ ಘಟನೆ ನಡೆದಿದ್ದು, ಆರ್ಬಾಝ್ ಕೊಲೆಯಾದ ವಿದ್ಯಾರ್ಥಿಯಾಗಿದ್ದಾನೆ. ಮಧ್ಯಾಹ್ನ 1.30ರ ಸುಮಾರಿಗೆ ಘಟನೆ ನಡೆದಿದೆ. ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಆರ್ಬಾಝ್ ಇತರ ಸ್ಟೂಡೆಂಟ್ಸ್​ ಜೊತೆ ಜಗಳ ಮಾಡಿಕೊಂಡಿದ್ದಾನೆ. ಇದು ಅತಿರೇಕಕ್ಕೆ ಹೋಗಿ ವಿದ್ಯಾರ್ಥಿಯನ್ನು ಕೊಲೆಗೈಯ್ಯಲಾಗಿದೆ.

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಉದ್ಯಮಿಯಿಂದ ದೌರ್ಜನ್ಯ

ಬೆಂಗಳೂರಿನ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಮಹಿಳೆಯೊಬ್ಬರ ಮೇಲೆ ಉದ್ಯಮಿ ದೌರ್ಜನ್ಯ ನಡೆಸಿರೋ ಆರೋಪ ಕೇಳಿಬಂದಿದೆ. ಅತ್ಯಾಧುನಿಕ ಹೋಟೆಲ್‌ವೊಂದರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೊಬ್ಬರು ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ತಮಿಳುನಾಡು ಮೂಲದವನಾಗಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯ ಬರ್ಬರ ಹತ್ಯೆ!

ಪಿಎಸ್​ಐ ಬಳಿಕ ಕೆಪಿಟಿಸಿಎಲ್​ ಎಕ್ಸಾಂನಲ್ಲೂ ಅಕ್ರಮ-ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರದ (State Government) ವಿರುದ್ಧ ಮಾಜಿ ಸಚಿವ ಹಾಗೂ ಹಾಲಿ ಕಲಬುರಗಿಯ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಗಂಭೀರ ಆರೋಪ ಮಾಡಿದ್ದಾರೆ. ಪಿಎಸ್ಐ ಪರೀಕ್ಷೆಯಂತೆಯೇ (PSI Exam) ಕಳೆದ 7ರಂದು ನಡೆದ ಕೆಪಿಟಿಸಿಎಲ್ ಪರೀಕ್ಷೆಯಲ್ಲಿಯೂ (KPTCL) ಭಾರೀ ಅಕ್ರಮ ನಡೆದಿದೆ ಅಂತ ಅವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ  ಗಂಭೀರ ಆರೋಪ ಮಾಡಿದ್ರು. “ಇದು ಲಂಚ, ಮಂಚದ ಸರ್ಕಾರ. ಯುವಕರಿಗೆ ನೌಕರಿ ಬೇಕು ಅಂದ್ರೆ ಅವರು ಲಂಚ ಕೊಡಬೇಕು. ಅದೇ ರೀತಿ ಯುವತಿಯರಿಗೆ ನೌಕರಿ ಬೇಕು ಅಂದ್ರೆ ಅವರು ಮಂಚ ಹತ್ತಬೇಕು” ಅಂತ ಆರೋಪಿಸಿದ್ರು. ಸರಕಾರ ಯುವಕರಿಗೆ ಉದ್ಯೋಗ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದ ಅವರು, ಯುವಕರ ಭವಿಷ್ಯದ ಜೊತೆಗೆ ಇವರು ಚೆಲ್ಲಾಟವಾಡುತ್ತಿದ್ದಾರೆ ಅಂತಾ ಕಿಡಿಕಾರಿದ್ರು.

ಇದನ್ನೂ ಓದಿ: ಮಹಾರಾಷ್ಟ್ರ ಬಿಜೆಪಿಗೆ ಹೊಸ ನಾಯಕ! ಒಬಿಸಿ ಲೀಡರ್ ಈಗ ಮಹಾ ಬಿಜೆಪಿ ಅಧ್ಯಕ್ಷ

ಕೊರೋನಾ ಹೆಚ್ಚಾಗ್ತಿದೆ- ಕೇಂದ್ರದಿಂದ ಸೂಚನೆ

ದೇಶದಲ್ಲಿ ಮತ್ತೆ ಕೊರೋನಾ ಕೇಸ್​ ಹೆಚ್ಚಳವಾಗ್ತಿದೆ. ಪ್ರತಿದಿನ ಸರಾಸರಿ 15,000 ಪ್ರಕರಣಗಳು ವರದಿ ಆಗುತ್ತಿರುವುದರಿಂದ, ಸ್ವಾತಂತ್ರ್ಯ ದಿನಾಚರಣೆಗೆ (Independence Day) ಯಾವುದೇ ದೊಡ್ಡ ಕಾರ್ಯಕ್ರಮಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರವು ರಾಜ್ಯಗಳನ್ನು ಕೇಳಿದೆ. ಪ್ರತಿಯೊಬ್ಬರೂ COVID-19 ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದೆ. ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಚ್ಛ ಭಾರತ ಅಭಿಯಾನವನ್ನು ನಡೆಸುವಂತೆ ಸೂಚಿಸಿದೆ. 1 ತಿಂಗಳ ಕಾಲ ಸ್ವಯಂಪ್ರೇರಿತ ನಾಗರಿಕರ ಭಾಗವಹಿಸುವಿಕೆಗೆ ತಿಳಿಸಿದೆ.

ಸಾವಿಗೂ ಮುನ್ನ ಕೊಟ್ಟ ಹೇಳಿಕೆ ಸಾಕ್ಷಿ- ಕೊಲ್ಕತ್ತಾ ಹೈಕೋರ್ಟ್​

ನ್ಯಾಯಮೂರ್ತಿ ದೇಬಂಗ್ಸು ಬಸಾಕ್ ಮತ್ತು ನ್ಯಾಯಮೂರ್ತಿ ಬಿಭಾಸ್ ರಂಜನ್ ಡೇ ಅವರನ್ನೊಳಗೊಂಡ ಕೊಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಸಾವಿಗೆ ಮುನ್ನ ನೀಡಿದ ಹೇಳಿಕೆಯು ಆರೋಪಿಯನ್ನು ಶಿಕ್ಷೆಗೆ ಒಳಪಡಿಸಬಹುದಾದ ನಿರ್ಣಾಯಕ ಸಾಕ್ಷಿಯಾಗಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆ. ಆದ್ದರಿಂದ, ಸಾವಿಗೆ ಮುನ್ನ ಯಾರಾದರೂ ಪ್ರಜ್ಞಾಪೂರ್ವಕವಾಗಿ ಹೇಳಿಕೆ ನೀಡಿದ್ದರೆ, ಅದನ್ನು ನಿರ್ಣಾಯಕ ಪುರಾವೆ ಎಂದು ಪರಿಗಣಿಸಲಾಗುತ್ತದೆ. ಮರಣಪೂರ್ವ ಹೇಳಿಕೆಯ ಆಧಾರದ ಮೇಲೆ ಮಾತ್ರ ಶಿಕ್ಷೆ ವಿಧಿಸಬಹುದು ಎಂದು ನ್ಯಾಯಾಲಯ ವಿವರಿಸಿದೆ. ಇತರ ಸಾಕ್ಷ್ಯಗಳ ಮೂಲಕ ಅದನ್ನು ದೃಢೀಕರಿಸುವುದು ಕಾನೂನಿನ ಸಂಪೂರ್ಣ ತತ್ವವಲ್ಲ, ಇದು ಕೇವಲ ಆತ್ಮಸಾಕ್ಷಿಯ ನಿಯಮವಾಗಿದೆ ಎಂದಿದೆ.
Published by:Thara Kemmara
First published: