Top-5 News: ರಾಹುಲ್ ಗಾಂಧಿ ಮದ್ವೆ ಮಾತು, ರೋಹಿಣಿ ಸಿಂಧೂರಿ ವಿರುದ್ಧ ಕೇಸ್! ಇಲ್ಲಿವೆ ಭಾನುವಾರದ ಬಿಗ್ ನ್ಯೂಸ್

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ಪ್ರಸ್ತಾಪ!

ಕಾಂಗ್ರೆಸ್ ಹಮ್ಮಿಕೊಂಡಿರುವ 150 ದಿನಗಳ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಮದುವೆ ಬಗ್ಗೆ ಸುದ್ದಿಯಾಗಿದೆ. ಸದ್ಯ ತಮಿಳುನಾಡಿನಲ್ಲಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ (Congress MP Rahul Gandhi) ವಿವಿಧ ಸಮುದಾಯ, ವರ್ಗಗಳ ಜೊತೆ ಸಂವಾದ ನಡೆಸುತ್ತಿದ್ದಾರೆ. ಅದೇ ರೀತಿ ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಜೊತೆ ಸಂವಾದದ ವೇಳೆ ರಾಹುಲ್ ಗಾಂಧಿ ಮದುವೆ (Rahul Gandhi Marriage) ಕುರಿತು ಪ್ರಸ್ತಾಪ ಬಂದಿದೆ.

ರೋಹಿಣಿ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ

ಮೈಸೂರು: ಐಎಎಸ್ ಅಧಿಕಾರಿ (IAS Officer) ರೋಹಿಣಿ ಸಿಂಧೂರಿ (Rohini Sindhuri) ಹಾಗೂ ಮೈಸೂರಿನ (Mysuru) ಕೆಆರ್‌ ನಗರ (KR Nagar) ಕ್ಷೇತ್ರದ ಶಾಸಕ ಸಾರಾ ಮಹೇಶ್ (MLA Sara Mahesh) ನಡುವಿನ ಸಂಘರ್ಷ ಮತ್ತೊಂದು ತಿರುವು ಪಡೆದುಕೊಂಡಿದೆ. ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಮೈಸೂರು ಕೋರ್ಟ್‌ನಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ (defamation case) ದಾಖಲಿಸಿದ್ದಾರೆ.

ಇದನ್ನೂ ಓದಿ: Rohini Sindhuri: ರೋಹಿಣಿ ವಿರುದ್ಧ ಸಿಡಿದೆದ್ದ ಸಾರಾ ಮಹೇಶ್! 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ

ಕಾಫಿ ನಾಡು ಚಂದು ಇನ್​​ಸ್ಟಾಗ್ರಾಂ ಅಕೌಂಟ್ ಹ್ಯಾಕ್!

ಕಾಫಿ ನಾಡು ಚಂದು (Coffee Nadu chandu) ತಮ್ಮದೇ ಆದ ಶೈಲಿ, ಡಿಫರೆಂಟ್ ಕಾನ್ಸೆಪ್ಟ್ ಮೂಲಕ ನೆಟ್ಟಿಗರನ್ನು ರಂಜಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ  (Social Media) ಸ್ವಪ್ರತಿಭೆಯಿಂದ ಬೆಳೆದು ಬಂದ ಕಾಫಿ ನಾಡು ಚಂದು ಈಗ ಕರ್ನಾಟಕ (Karnataka) ಮಾತ್ರವಲ್ಲ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದ್ದಾರೆ. ನಾನು ಶಿವಣ್ಣ-ಪುನೀತಣ್ಣನ ಅಭಿಮಾನಿ ಎಂದು ವಿಡಿಯೋ ಶುರು ಮಾಡುವ ಕಾಫಿ ನಾಡು ಚಂದು ಈಗ ಸಖತ್ ವೈರಲ್ (Viral). ತನ್ನದೇ ಆದ ಸ್ಟೈಲ್​​ನಲ್ಲಿ ವಿಡಿಯೋಗಳನ್ನು (Videos) ಮಾಡಿ ರೀಲ್ಸ್​ಗಳನ್ನು ಶೇರ್ ಮಾಡುವ ಕಾಫಿ ನಾಡು ಚಂದು ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಕಷ್ಟಪಟ್ಟು ಬೆಳೆದ ಹಳ್ಳಿ ಪ್ರತಿಭೆಯ ಇನ್​ಸ್ಟಾಗ್ರಾಮ್ (Instagram) ಖಾತೆ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದ್ದು ಈಗ ಅವರ ಅಕೌಂಟ್ ಹ್ಯಾಕ್ ಮಾಡಲಾಗಿದೆ.

ಜೆಡಿಎಸ್‌ಗೆ ಇದೇ ಕೊನೆ ಎಲೆಕ್ಷನ್ನಾ? 

ಕುಣಿಗಲ್, ತುಮಕೂರು: ಕನ್ನಡ ಚಿತ್ರರಂಗದ ನಾಯಕನೂ (Kannada film industry hero) ಆಗಿರುವ ಜೆಡಿಎಸ್ ಯುವ ನಾಯಕ (JDS Youth Leader), ರಾಜಕಾರಣಿ (Politician) ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಶಾಂಕಿಂಗ್ ಹೇಳಿಕೆ ನೀಡಿದ್ದಾರೆ. ತುಮಕೂರು (Tumkur) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ಹುತ್ರಿದುರ್ಗ ಹೋಬಳಿ ಅಂಚೆಪಾಳ್ಯ ಕ್ರಾಸ್​ನಲ್ಲಿ ಜೆಡಿಎಸ್ ಕಾರ್ಯಕರ್ತರನ್ನು (JDS Workers) ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇದು ಜೆಡಿಎಸ್‌ ಪಾಲಿಗೆ ಕೊನೆಯ ಚುನಾವಣೆ (Last Election) ಆದರೂ ಆಗಬಹುದು ಎಂದಿದ್ದಾರೆ. ಜೆಡಿಎಸ್ ಯುವ ನಾಯಕನ ಮಾತು ಕೇಳಿ ಕಾರ್ಯಕರ್ತರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ

ಇದನ್ನೂ ಓದಿ: Nikhil Kumaraswamy: ಜೆಡಿಎಸ್‌ಗೆ ಇದೇ ಕೊನೆ ಎಲೆಕ್ಷನ್ನಾ? ನಿಖಿಲ್ ಕುಮಾರಸ್ವಾಮಿ ಮಾತಿನ ಅರ್ಥವೇನು?

Doctor: ಟ್ರಾಫಿಕ್‌ನಲ್ಲಿ ಕಾರು ಸಿಲುಕಿ ಪರದಾಟ, ರೋಗಿ ಉಳಿಸಲು ಆಸ್ಪತ್ರೆಗೆ ಓಡಿಕೊಂಡೇ ಬಂದ ಡಾಕ್ಟರ್!

ಬೆಂಗಳೂರು: ವೈದ್ಯರನ್ನು (Doctor) ನಾರಾಯಣ ಅಂತಾರೆ. ಅದರೆ ವೈದ್ಯರು ದೇವರಿಗೆ (God) ಸಮಾನ ಎನ್ನುವುದು ಹಿರಿಯರ ಮಾತು. ಆದರೆ ಕೆಲವು ವೈದ್ಯರು ಹಣ (Money) ಮಾಡುವ ದುರಾಸೆಗೆ ಬಿದ್ದು, ರೋಗಿಯ (patient) ಪ್ರಾಣದ ಜೊತೆ ಚೆಲ್ಲಾಟ ಆಡುತ್ತಾರೆ. ಇನ್ನು ಕೊರೋನಾ (Corona) ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾಗ ಪ್ರಪಂಚದಾದ್ಯಂತ ವೈದ್ಯರು, ನರ್ಸ್‌ಗಳು (Nurse), ಆಸ್ಪತ್ರೆ ಸಿಬ್ಬಂದಿ (Hospitals staff) ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ. ಈ ಮೂಲಕ ವೈದ್ಯಲೋಕದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆ ವೈದ್ಯರುಗಳಂತೆ ಇದೀಗ ಬೆಂಗಳೂರಿನ (Bengaluru) ಡಾಕ್ಟರ್ ಒಬ್ಬರು ತಮ್ಮ ಉತ್ತಮ ಕಾರ್ಯದಿಂದಾಗಿ ಸುದ್ದಿ ಮಾಡಿದ್ದಾರೆ.
Published by:Annappa Achari
First published: